ಮೈಸೂರಿನಲ್ಲಿ ನಡೆದ ʻಹುಲಿ ಯೋಜನೆಯ 50ನೇ ವರ್ಷಾಚರಣೆʼ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
April 09th, 01:00 pm
ಮೊದಲಿಗೆ, ನಾನು ಒಂದು ಗಂಟೆ ತಡವಾಗಿ ಬಂದಿದ್ದಕ್ಕಾಗಿ ನಿಮ್ಮೆಲ್ಲರ ಬಳಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ಬೆಳಗ್ಗೆ ಆರು ಗಂಟೆಗೆ ಹೊರಟೆ; ಕಾಡಿಗೆ ಭೇಟಿ ನೀಡಿದ ನಂತರ ಸಮಯಕ್ಕೆ ಸರಿಯಾಗಿ ಹಿಂತಿರುಗುತ್ತೇನೆ ಎಂದು ನಾನು ಭಾವಿಸಿದ್ದೆ. ನಿಮ್ಮೆಲ್ಲರನ್ನೂ ಕಾಯುವಂತೆ ಮಾಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಹುಲಿಗಳ ಸಂಖ್ಯೆ ಏರಿಕೆ ದೃಷ್ಟಿಯಿಂದ ಇದು ಹೆಮ್ಮೆಯ ಕ್ಷಣವಾಗಿದೆ; ಈ ಕುಟುಂಬವು ವಿಸ್ತರಿಸುತ್ತಿದೆ. ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಹುಲಿಗೆ ಗೌರವ ತೋರುವಂತೆ ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಧನ್ಯವಾದಗಳು!ಕರ್ನಾಟಕದ ಮೈಸೂರಿನಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ
April 09th, 12:37 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 'ಹುಲಿ ಯೋಜನೆಯ 50ನೇ ವರ್ಷಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ʻಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಮೈತ್ರಿಕೂಟಕ್ಕೆ(ಐಬಿಸಿಎ) ಚಾಲನೆ ನೀಡಿದರು. ʻಹುಲಿ ಸಂರಕ್ಷಣೆಗೆ ಅಮೃತ ಕಾಲದ ದೃಷ್ಟಿಕೋನʼ ಶೀರ್ಷಿಕೆಯ ಹುಲಿ ಮೀಸಲು ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವ ಮೌಲ್ಯಮಾಪನದ 5ನೇ ಸುತ್ತಿನ ಸಾರಾಂಶ ವರದಿಯನ್ನು ಅವರು ಬಿಡುಗಡೆ ಮಾಡಿದರು. ದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಘೋಷಿಸಿದರು. ಜೊತೆಗೆ ʻಅಖಿಲ ಭಾರತ ಹುಲಿ ಅಂದಾಜುʼ(5 ನೇ ಸುತ್ತು) ಸಾರಾಂಶ ವರದಿಯನ್ನು ಬಿಡುಗಡೆ ಮಾಡಿದರು. ಹುಲಿ ಯೋಜನೆ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯವನ್ನೂ ಅವರು ಬಿಡುಗಡೆ ಮಾಡಿದರು.ಗುಜರಾತ್ ನ ಗಾಂಧಿನಗರದಲ್ಲಿ ಭಾರತದ ಸುಜುಕಿಯ 40ನೇ ವರ್ಷದ ಸ್ಮರಣಾರ್ಥವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
August 28th, 08:06 pm
ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಜೀ, ಉಪ ಮುಖ್ಯಮಂತ್ರಿ ಶ್ರೀ ಕೃಷ್ಣ ಚೌಟಾಲಾ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಸಿ.ಆರ್. ಪಾಟೀಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳೇ, ಭಾರತದಲ್ಲಿನ ಜಪಾನ್ ರಾಯಭಾರಿಯವರೇ, ಮಾರುತಿ-ಸುಜುಕಿಯ ಹಿರಿಯ ಅಧಿಕಾರಿಗಳೇ, ಇತರ ಎಲ್ಲ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿಂದು ಭಾರತದಲ್ಲಿ ಸುಜುಕಿಯ 40ನೇ ವರ್ಷಗಳ ಕಾರ್ಯಾಚರಣೆ, ಸ್ಮರಣಾರ್ಥ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ
August 28th, 05:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತದಲ್ಲಿ ಸುಜುಕಿಯ 40 ವರ್ಷಗಳ ಕಾರ್ಯಾಚರಣೆ ಅಂಗವಾಗಿ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಭಾರತದಲ್ಲಿನ ಜಪಾನ್ ರಾಯಭಾರಿ ಮಾನ್ಯ ಶ್ರೀ ಸತೋಶಿ ಸುಜುಕಿ, ಗುಜರಾತ್ ಮುಖ್ಯಮಂತ್ರಿ ಮಾನ್ಯ ಶ್ರೀ ಭೂಪೇಂದ್ರ ಪಟೇಲ್, ಸಂಸದ ಶ್ರೀ ಸಿ.ಆರ್.ಪಾಟೀಲ್, ರಾಜ್ಯ ಸಚಿವ ಶ್ರೀ ಜಗದೀಶ್ ಪಾಂಚಾಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷರಾದ ಶ್ರೀ ಒ. ಸುಜುಕಿ, ಸುಜುಕಿ ಮೋಟಾರ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀ ಟಿ. ಸುಜುಕಿ ಮತ್ತು ಮಾರುತಿ-ಸುಜುಕಿಯ ಅಧ್ಯಕ್ಷ ಶ್ರೀ ಆರ್.ಸಿ ಭಾರ್ಗವ ಉಪಸ್ಥಿತರಿದ್ದರು. ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು ಮತ್ತು ಜಪಾನಿನ ಪ್ರಧಾನ ಮಂತ್ರಿ ಮಾನ್ಯ ಶ್ರೀ ಫುಮಿಯೋ ಕಿಶಿದಾ ಅವರ ವೀಡಿಯೊ ಸಂದೇಶವನ್ನು ಸಹ ಪ್ರದರ್ಶಿಸಲಾಯಿತು.ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣ
June 05th, 09:46 pm
ಪ್ರಪಂಚದಾದ್ಯಂತದ ರೋಟರಿಯನ್ನರ ದೊಡ್ಡ ಕುಟುಂಬದವರೇ, ಆತ್ಮೀಯ ಸ್ನೇಹಿತರೇ, ನಮಸ್ತೆ! ರೋಟರಿ ಅಂತರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ, ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. ಆದರೂ, ನೀವು ಕೇವಲ ಕೆಲಸಗಳನ್ನು ಮಾಡಲು ನಿಮ್ಮನ್ನು ಸೀಮಿತಗೊಳಿಸಿಲ್ಲ. ನಮ್ಮ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಮ್ಮ ಬಯಕೆಯು ನಿಮ್ಮೆಲ್ಲರನ್ನು ಈ ವೇದಿಕೆಯಲ್ಲಿ ಒಟ್ಟಿಗೆ ತಂದಿದೆ. ಇದು ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣವಾಗಿದೆ.ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣ
June 05th, 09:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ರೋಟರಿಯನ್ನರನ್ನು ‘ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣ’ ಎಂದು ಕರೆದ ಪ್ರಧಾನಮಂತ್ರಿಯವರು ”ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. ಎಂದು ಹೇಳಿದರು.LIFE ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಪಠ್ಯ
June 05th, 07:42 pm
ಯುಎನ್ಇಪಿ ಜಾಗತಿಕ ಮುಖ್ಯಸ್ಥ ಮಾನ್ಯ ಇಂಗರ್ ಆಂಡರ್ಸನ್, ಯುಎನ್.ಡಿ.ಪಿ ಜಾಗತಿಕ ಮುಖ್ಯಸ್ಥ ಮಾನ್ಯ ಅಚಿಮ್ ಸ್ಟೈನರ್, ನನ್ನ ಸ್ನೇಹಿತರಾದ ವಿಶ್ವಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಲ್ಪಾಸ್, ಲಾರ್ಡ್ ನಿಕೋಲಸ್ ಸ್ಟರ್ನ್, ಶ್ರೀ ಕ್ಯಾಸ್ ಸನ್ ಸ್ಟೈನ್, ನನ್ನ ಸ್ನೇಹಿತರಾದ ಶ್ರೀ ಬಿಲ್ ಗೇಟ್ಸ್, ಶ್ರೀ ಅನಿಲ್ ದಾಸ್ ಗುಪ್ತಾ, ಭಾರತದ ಪರಿಸರ ಸಚಿವ ಶ್ರೀ ಭೂಪೇಂದರ್ ಯಾದವ್ ಅವರೇ,PM launches global initiative ‘Lifestyle for the Environment- LiFE Movement’
June 05th, 07:41 pm
Prime Minister Narendra Modi launched a global initiative ‘Lifestyle for the Environment - LiFE Movement’. He said that the vision of LiFE was to live a lifestyle in tune with our planet and which does not harm it.ಪ್ರಧಾನಮಂತ್ರಿಯವರು ಜೂನ್ 5 ರಂದು ಜಾಗತಿಕ ಉಪಕ್ರಮ ‘ಲೈಫ್ ಮೂವ್‌ಮೆಂಟ್’ ಅನ್ನು ಪ್ರಾರಂಭಿಸಲಿದ್ದಾರೆ
June 04th, 02:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5 ಜೂನ್ 2022 ರಂದು ಸಂಜೆ 6 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಪರಿಸರಕ್ಕಾಗಿ ಜೀವನಶೈಲಿ (ಲೈಫ್) ಆಂದೋಲನ' ಎಂಬ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ. ಈ ಕಾರ್ಯಕ್ರಮವು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತದ ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ಪ್ರಭಾವಿಸಲು ಮತ್ತು ಮನವೊಲಿಸಲು ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸುವ 'ಲೈಫ್ ಗ್ಲೋಬಲ್ ಕಾಲ್ ಫಾರ್ ಪೇಪರ್ಸ್' ಅನ್ನು ಪ್ರಾರಂಭಿಸುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮುಖ್ಯ ಭಾಷಣವನ್ನೂ ಮಾಡಲಿದ್ದಾರೆ.ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನಾ ಅಧಿವೇಶನದಲ್ಲಿಪ್ರಧಾನ ಮಂತ್ರಿ ಅವರ ಭಾಷಣದ ಪಠ್ಯ
May 04th, 12:15 pm
ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿಯಲ್ಲಿನಿಮ್ಮೊಂದಿಗೆ ಜತೆಯಾಗಲು ನಾನು ಸಂತೋಷಪಡುತ್ತೇನೆ. ಪ್ರಾರಂಭದಲ್ಲಿಸುಸ್ಥಿರ ಅಭಿವೃದ್ಧಿ ಗುರಿಗಳ ಗಂಭೀರ ವಾಗ್ದಾನವು ಯಾರನ್ನೂ ಹಿಂದೆ ಬಿಡಬಾರದು ಎಂದು ನಾವು ನಮ್ಮನ್ನು ನಾವು ನೆನಪಿಸಿಕೊಳ್ಳಬೇಕು. ಅದಕ್ಕಾಗಿಯೇ, ಅವರ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ಕಡುಬಡವರು ಮತ್ತು ಅತ್ಯಂತ ದುರ್ಬಲರ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಮತ್ತು ಮೂಲಸೌಕರ್ಯವು ಕೇವಲ ಬಂಡವಾಳ ಸ್ವತ್ತುಗಳನ್ನು ಸೃಷ್ಟಿಸುವುದು ಮತ್ತು ಹೂಡಿಕೆಯ ಮೇಲೆ ದೀರ್ಘಕಾಲೀನ ಆದಾಯವನ್ನು ಉತ್ಪಾದಿಸುವುದು ಮಾತ್ರವಲ್ಲ, ಇದು ಸಂಖ್ಯೆಗಳ ಬಗ್ಗೆಯೂ ಅಲ್ಲ.ನೈಸರ್ಗಿಕ ವಿಪತ್ತು ತಾಳಿಕೊಳ್ಳುವಂತಹ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ 4ನೇ ಆವೃತ್ತಿಯ ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಪ್ರಧಾನಿ ಭಾಷಣ
May 04th, 10:29 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಪತ್ತು ತಾಳಿಕೊಳ್ಳುವಂತಹ ಮೂಲಸೌಕರ್ಯ ಕುರಿತ ಅಂತರಾಷ್ಟ್ರೀಯ ಸಮ್ಮೇಳನದ ನಾಲ್ಕನೇ ಆವೃತ್ತಿಯ ಉದ್ಘಾಟನಾ ಗೋಷ್ಠಿಯನ್ನು ಉದ್ದೇಶಿಸಿ ವಿಡಿಯೋ ಮೂಲಕ ಮಾತನಾಡಿದರು. ಅಧಿವೇಶನವನ್ನು ಉದ್ದೇಶಿಸಿ ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಸ್ಕಾಟ್ ಮಾರಿಸನ್, ಘಾನಾದ ಅಧ್ಯಕ್ಷ ಗೌರವಾನ್ವಿತ ನಾನಾ ಅಡ್ಡೋ ಡಂಕ್ವಾ ಅಕುಫೋ ಅಡ್ಡೋ, ಜಪಾನ್ ಪ್ರಧಾನಿ ಗೌರವಾನ್ವಿತ ಫ್ಯೂಮಿಯೊ ಕಿಶಿಡಾ ಮತ್ತು ಮಡಗಾಸ್ಕರ್ ಅಧ್ಯಕ್ಷ ಗೌರವಾನ್ವಿತ ಆಂಡ್ರಿ ನಿರಿನಾ ರಾಜೋಲಿನಾ ಮತ್ತಿತರ ಗಣ್ಯರು ಭಾಷಣ ಮಾಡಿದರು.ಡೆನ್ಮಾರ್ಕಿನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಇಂಗ್ಲೀಷ್ ಭಾಷಾಂತರ.
May 03rd, 07:11 pm
ಗೌರವಾನ್ವಿತ ಪ್ರಧಾನ ಮಂತ್ರಿ ಅವರೇ ಅದ್ಭುತ ಸ್ವಾಗತ ನೀಡಿದುದಕ್ಕಾಗಿ ಮತ್ತು ನನಗೆ ಹಾಗು ನನ್ನ ನಿಯೋಗಕ್ಕೆ ಡೆನ್ಮಾರ್ಕಿನಲ್ಲಿ ಆತಿಥ್ಯ ಒದಗಿಸಿದುದಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು. ನಿಮ್ಮ ಸುಂದರ ದೇಶಕ್ಕೆ ಇದು ನನ್ನ ಮೊದಲ ಭೇಟಿ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನನಗೆ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ಅವಕಾಶ ದೊರಕಿತ್ತು. ಈ ಎರಡು ಭೇಟಿಗಳ ಮೂಲಕ ನಮಗೆ ನಮ್ಮ ಬಾಂಧವ್ಯಗಳಲ್ಲಿ ನಿಕಟತೆ ಮತ್ತು ಚಲನಶೀಲತೆಯನ್ನು ತರಲು ಸಾಧ್ಯವಾಗಿದೆ. ನಮ್ಮೆರಡು ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ಮಾತ್ರವೇ ಹಂಚಿಕೊಳ್ಳುತ್ತಿರುವುದಲ್ಲ ಕಾನೂನಿನ ಆಡಳಿತದ ಜೊತೆ ಉಭಯ ಕಡೆಗಳಲ್ಲು ಪರಸ್ಪರ ಪೂರಕವಾದಂತಹ ಶಕ್ತಿಗಳಿವೆ.ಜಂಟಿ ಹೇಳಿಕೆ: 6ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಗಳು
May 02nd, 08:28 pm
ಇಂದು ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಮತ್ತು ಭಾರತ ಗಣರಾಜ್ಯದ ಸರ್ಕಾರಗಳು, ಫೆಡರಲ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಹ-ಅಧ್ಯಕ್ಷತೆಯಲ್ಲಿ ಆರನೇ ಸುತ್ತಿನ ಅಂತರ-ಸರ್ಕಾರಿ ಸಮಾಲೋಚನೆಗಳನ್ನು ನಡೆಸಿದವು. ಈ ಇಬ್ಬರು ನಾಯಕರಲ್ಲದೆ, ಎರಡೂ ನಿಯೋಗಗಳಲ್ಲಿ ಮಂತ್ರಿಗಳು ಮತ್ತು ಅನುಬಂಧದಲ್ಲಿ ಉಲ್ಲೇಖಿಸಲಾದ ಸಾಲು-ಸಚಿವಾಲಯಗಳ ಇತರ ಉನ್ನತ ಪ್ರತಿನಿಧಿಗಳು ಇದ್ದರು.ಬ್ರಿಟನ್ ಪ್ರಧಾನಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಪಠ್ಯ
April 22nd, 12:22 pm
ಪ್ರಧಾನ ಮಂತ್ರಿಯಾಗಿ ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿರಬಹುದು, ಆದರೆ ಭಾರತದ ಹಳೆಯ ಮಿತ್ರನಾಗಿ ಅವರು ಭಾರತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ ಮತ್ತು ಅರ್ಥಮಾಡಿಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ, ಭಾರತ ಮತ್ತು ಯುಕೆ(ಬ್ರಿಟನ್) ನಡುವಿನ ಸಂಬಂಧ ಬಲವರ್ಧನೆಯಲ್ಲಿ ಪ್ರಧಾನ ಮಂತ್ರಿ ಜಾನ್ಸನ್ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಮಾ.21ರಂದು 2ನೇ ಭಾರತ – ಆಸ್ಚ್ರೇಲಿಯಾ ವರ್ಚುವಲ್ ಸಮಾವೇಶ
March 17th, 08:30 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು 2022 ಮಾ.21ರಂದು ಎರಡನೇ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ. 2020 ಜೂನ್ 4ರಂದು ಉಭಯ ರಾಷ್ಟ್ರಗಳ ನಡುವೆ ಜರುಗಿದ ಚೊಚ್ಚಲ ವರ್ಚುವಲ್ ಶೃಂಗಸಭೆಯಲ್ಲಿ ಎರಡೂ ರಾಷ್ಟ್ರಗಳ ಸಂಬಂಧವನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತೀಕರಿಸಲಾಗಿತ್ತು. ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವ ಭಾಗವಾಗಿ, ಮತ್ತಷ್ಟು ಹೆಚ್ಚಿಸುವ ಸಲುವಾಗಿ 2ನೇ ಶೃಂಗಸಭೆ ಜರುಗುತ್ತಿದೆ.“ಸುಸ್ಥಿರ ಅಭಿವೃದ್ಧಿಗಾಗಿ ಇಂಧನ”ಕುರಿತು ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನ ಮಂತ್ರಿಯವರ ಭಾಷಣ
March 04th, 11:05 am
'ಎನರ್ಜಿ ಫಾರ್ ಸಸ್ಟೈನಬಲ್ ಗ್ರೋತ್' - 'ಸುಸ್ಥಿರ ಅಭಿವೃದ್ಧಿಗಾಗಿ ಇಂಧನ' ನಮ್ಮ ಪ್ರಾಚೀನ ಸಂಪ್ರದಾಯಗಳಿಂದ ಪ್ರೇರಿತವಾಗಿದೆ ಮತ್ತು ಭವಿಷ್ಯದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಸಾಧನವಾಗಿದೆ. ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎನ್ನುವ ಸ್ಪಷ್ಟ ದೃಷ್ಟಿಯನ್ನು ಭಾರತ ಹೊಂದಿದೆ. ಗ್ಲ್ಯಾಸ್ಗೋದಲ್ಲಿ, ನಾವು 2070ರ ವೇಳೆಗೆ ನಿವ್ವಳ ಶೂನ್ಯವನ್ನು (ಉತ್ಸರ್ಜನೆ) ತಲುಪುತ್ತೇವೆ ಎಂದು ಭರವಸೆ ನೀಡಿದ್ದೇವೆ.'ಸುಸ್ಥಿರ ಬೆಳವಣಿಗೆಗಾಗಿ ಇಂಧನ' ಕುರಿತು ವೆಬಿನಾರ್ ಉದ್ದೇಶಿಸಿ ಪ್ರಧಾನಿ ಭಾಷಣ
March 04th, 11:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಸುಸ್ಥಿರ ಬೆಳವಣಿಗೆಗಾಗಿ ಇಂಧನ' ಕುರಿತ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಪ್ರಧಾನಮಂತ್ರಿಯವರು ಭಾಷಣ ಮಾಡಿದ ಬಜೆಟ್ ನಂತರದ ವೆಬಿನಾರ್ ಗಳ ಸರಣಿಯಲ್ಲಿ ಇದು ಒಂಬತ್ತನೇ ವೆಬಿನಾರ್ ಆಗಿದೆ.ವಿವಿಧ ಕೈಗಾರಿಕಾ ವಲಯದ ಕಂಪನಿಗಳ ಸಿಇಒಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
December 20th, 09:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದಲ್ಲಿಂದು ವಿವಿಧ ಕೈಗಾರಿಕಾ ವಲಯದ ಸಿಇಒಗಳೊಂದಿಗೆ ಸಂವಾದ ನಡೆಸಿದರು. ಮುಂದಿನ ಆಯವ್ಯಯ ಪೂರ್ವದಲ್ಲಿ ಉದ್ಯಮ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಎರಡನೇ ಸಂವಾದ ಇದಾಗಿದೆ.ಗ್ಲಾಸ್ಗೋದಲ್ಲಿ ಏರ್ಪಟ್ಟ ಸಿ.ಒ.ಪಿ.26 ಶೃಂಗದಲ್ಲಿ “ಸ್ವಚ್ಛ ತಂತ್ರಜ್ಞಾನ ಅನ್ವೇಷಣೆಯ ವೇಗವರ್ಧನೆ ಮತ್ತು ಅಭಿವೃದ್ಧಿ” ಕುರಿತ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆಯ ಕನ್ನಡ ಭಾಷಾಂತರ
November 02nd, 07:45 pm
ಇಂದು ನೀವು “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ಆರಂಭಕ್ಕೆ ಸ್ವಾಗತಿಸಲ್ಪಡುತ್ತಿದ್ದೀರಿ. ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಮತ್ತು ಯು.ಕೆ.ಯ ಹಸಿರು ಜಾಲ ಉಪಕ್ರಮಗಳಿಂದ ಆಯೋಜನೆಯಾಗಿರುವ, ನನ್ನ ಹಲವು ವರ್ಷಗಳ ಹಳೆಯ ಕನಸಾದ “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ಯೋಜನೆಗೆ ದೃಢವಾದ ರೂಪವಿಂದು ಲಭಿಸಿದೆ. ಗೌರವಾನ್ವಿತರೇ, ಕೈಗಾರಿಕಾ ಕ್ರಾಂತಿಗೆ ಶಕ್ತಿ ತುಂಬಿದ್ದು ಪಳೆಯುಳಿಕೆ ಇಂಧನಗಳು. ಹಲವು ದೇಶಗಳು ಈ ಪಳೆಯುಳಿಕೆ ಇಂಧನ ಬಳಕೆಯಿಂದ ಸಮೃದ್ಧಿ ಸಾಧಿಸಿದವು. ಆದರೆ ನಮ್ಮ ಭೂಮಿ, ನಮ್ಮ ಪರಿಸರ ಮಾತ್ರ ಬಡವಾಯಿತು. ಪಳೆಯುಳಿಕೆ ಇಂಧನಕ್ಕಾಗಿ ಓಟ, ಸ್ಪರ್ಧೆ ಭೂ-ರಾಜಕೀಯ ಉದ್ವಿಗ್ನತೆಗಳನ್ನು ಉಂಟು ಮಾಡಿತು. ಆದರೆ ಇಂದು ತಂತ್ರಜ್ಞಾನ ನಮಗೆ ಬಹಳ ದೊಡ್ಡ ಪರ್ಯಾಯವನ್ನು ಒದಗಿಸಿಕೊಟ್ಟಿದೆ.ಯುನೈಟೆಡ್ ಕಿಂಗ್ ಡಮ್ ನ ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆ ನೇಪಥ್ಯದಲ್ಲಿ ಇಸ್ರೇಲ್ ಪ್ರಧಾನಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 02nd, 07:16 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ನವೆಂಬರ್ 2ರಂದು ಯುನೈಟೆಡ್ ಕಿಂಗ್ ಡಮ್ ನ ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆಯ ಸಂದರ್ಭದಲ್ಲಿ ಇಸ್ರೇಲ್ ನ ಪ್ರಧಾನಿ ಗೌರವಾನ್ವಿತ ಶ್ರೀ ನಫ್ತಾಲಿ ಬೆನೆಟ್ ಅವರನ್ನು ಭೇಟಿ ಮಾಡಿದರು.