ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ "ಆದಿ ಮಹೋತ್ಸವ" ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 16th, 10:31 am

ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಶ್ರೀ ಅರ್ಜುನ್ ಮುಂಡಾ ಜೀ, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಜೀ, ಶ್ರೀಮತಿ ರೇಣುಕಾ ಸಿಂಗ್ ಜೀ, ಡಾ. ಭಾರತಿ ಪವಾರ್ ಜೀ, ಶ್ರೀ ಬಿಶೇಶ್ವರ್ ಟುಡು ಜೀ, ಇತರ ಗಣ್ಯರೇ ಮತ್ತು ದೇಶದ ವಿವಿಧ ರಾಜ್ಯಗಳ ನನ್ನ ಎಲ್ಲ ಬುಡಕಟ್ಟು ಸಹೋದರ ಸಹೋದರಿಯರೇ! ನಿಮ್ಮೆಲ್ಲರಿಗೂ ಆದಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

​​​​​​​ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆದಿ ಮಹೋತ್ಸವವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

February 16th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬೃಹತ್ ರಾಷ್ಟ್ರೀಯ ಬುಡಕಟ್ಟು ಉತ್ಸವವಾದ ಆದಿ ಮಹೋತ್ಸವವನ್ನು ಉದ್ಘಾಟಿಸಿದರು. ಆದಿ ಮಹೋತ್ಸವವು ಬುಡಕಟ್ಟು ಸಂಸ್ಕೃತಿಯನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸುವ ಪ್ರಯತ್ನವಾಗಿದೆ ಮತ್ತು ಇದು ಬುಡಕಟ್ಟು ಸಂಸ್ಕೃತಿ, ಕರಕುಶಲತೆ, ಪಾಕಪದ್ಧತಿ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆಯ ಹುಮ್ಮಸ್ಸನ್ನು ಆಚರಿಸುತ್ತದೆ. ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ ಲಿಮಿಟೆಡ್ (TRIFED) ನ ವಾರ್ಷಿಕ ಕಾರ್ಯಕ್ರಮವಾಗಿದೆ.

ಸೌರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಭಾರತದ ಅದ್ಭುತಗಳಿಂದ ಜಗತ್ತು ಬೆರಗುಗೊಂಡಿದೆ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

October 30th, 11:30 am

ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ಪವಿತ್ರ ಛಠ್ ಪೂಜೆಯ ಬಗ್ಗೆ ಮಾತನಾಡಿದೆವು, ಭಗವಾನ್ ಸೂರ್ಯನ ಆರಾಧನೆ ಬಗ್ಗೆ ಮಾತನಾಡಿದೆವು. ಹಾಗಾದರೆ ಇಂದು ಸೂರ್ಯನನ್ನು ಪೂಜಿಸುವ ಜೊತೆಗೆ ಅವನು ನೀಡಿದ ವರದ ಬಗ್ಗೆಯೂ ಚರ್ಚಿಸೋಣ. 'ಸೌರಶಕ್ತಿ' ಸೂರ್ಯದೇವನ ವರದಾನ. ಸೌರಶಕ್ತಿ ಇಡೀ ಜಗತ್ತು ತನ್ನ ಭವಿಷ್ಯವನ್ನು ಅದರಲ್ಲಿ ಕಾಣುವಂತಹ ಒಂದು ವಿಷಯವಾಗಿದೆ ಮತ್ತು ಭಾರತಕ್ಕಾಗಿ, ಸೂರ್ಯ ದೇವ ಶತಮಾನಗಳಿಂದ ಕೇವಲ ಪೂಜಿತನಲ್ಲ, ಜೀವನ ವಿಧಾನದ ಕೇಂದ್ರವಾಗಿ ಮಿಳಿತವಾಗಿದ್ದಾನೆ. ಭಾರತವು ಇಂದು ತನ್ನ ಸಾಂಪ್ರದಾಯಿಕ ಅನುಭವಗಳನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುತ್ತಿದೆ, ಅದಕ್ಕಾಗಿಯೇ, ಇಂದು ನಾವು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಅತಿದೊಡ್ಡ ದೇಶಗಳಲ್ಲಿ ಒಂದೆನಿಸಿದ್ದೇವೆ. ಸೌರಶಕ್ತಿಯು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದೂ ಅಧ್ಯಯನದ ವಿಷಯವಾಗಿದೆ.

ಸಣ್ಣ ಆನ್‌ಲೈನ್ ಪಾವತಿಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುತ್ತವೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

April 24th, 11:30 am

ಹೊಸ ವಿಷಯಗಳೊಂದಿಗೆ, ಹೊಸದಾದ ಪ್ರೇರಣಾದಾಯಕ ಉದಾಹರಣೆಗಳೊಂದಿಗೆ, ಹೊಸ ಹೊಸ ಸಂದೇಶಗಳನ್ನು ಹೊತ್ತು ಮತ್ತೊಮ್ಮೆ ನಾನು ತಮ್ಮೊಂದಿಗೆ 'ಮನದ ಮಾತು' ಆಡಲು ಬಂದಿರುವೆ. ನಿಮಗೆ ಗೊತ್ತಾ ಈ ಸಲ ನನಗೆ ಅತಿ ಹೆಚ್ಚು ಪತ್ರಗಳು ಸಂದೇಶಗಳು ಯಾವ ವಿಷಯದ ಬಗ್ಗೆ ಬಂದಿವೆ? ಅಂತ ಆ ವಿಷಯ ಹೇಗಿದೆಯೆಂದರೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಮೂರಕ್ಕೂ ಅನ್ವಯವಾಗುತ್ತದೆ. ನಾನಿಂದು ಮಾತನಾಡುತ್ತಿರುವುದು ರಾಷ್ಟ್ರಕ್ಕೆ ದೊರಕಿದ ದೇಶದ ಪ್ರಧಾನ ಮಂತ್ರಿಗಳ ಸಂಗ್ರಹಾಲಯದ ಬಗ್ಗೆ. ಇದೇ ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಇದನ್ನು ದೇಶದ ನಾಗರಿಕರಿಗಾಗಿ ತೆರೆದಿಡಲಾಗಿದೆ. ನಮ್ಮ ಕೇಳುಗರೊಬ್ಬರು ಅವರ ಹೆಸರು ಸಾರ್ಥಕ್, ಸಾರ್ಥಕ್ ಅವರು ಗುರು ಗ್ರಾಮದಲ್ಲಿ ವಾಸಿಸುತ್ತಾರೆ. ಮೊದಲ ಅವಕಾಶ ಸಿಗುತ್ತಲೇ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರು. ಸಾರ್ಥಕ್ ಅವರು ನಮೋ ಆಪ್ ನಲ್ಲಿ ಏನು ಬರೆದುಕೊಂಡಿದ್ದಾರೆ, ಅದನ್ನು ನೋಡಿ, ನನಗೆ ಬಹಳ ಕುತೂಹಲ ಮೂಡಿಸಿತು.

ಮೇಘಾಲಯದ 50ನೇ ರಾಜ್ಯೋತ್ಸವ(ರಾಜ್ಯೋದಯ) ದಿನಾಚರಣೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

January 21st, 01:09 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇಘಾಲಯದ 50 ನೇ ರಾಜ್ಯೋತ್ಸವ ದಿನದಂದು ಮೇಘಾಲಯದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾದ ನಂತರ ಈಶಾನ್ಯ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. 3-4 ದಶಕಗಳ ನಂತರ ಯಾವುದೇ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ಮೊದಲ ಭೇಟಿ ಇದಾಗಿದೆ. ನಿಸರ್ಗಕ್ಕೆ ಹತ್ತಿರವಾದ ಜನರು ಎಂಬ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ರಾಜ್ಯದ ಜನತೆಗೆ ಪೂರಕವಾಗಿದೆ. ಮೇಘಾಲಯವು ಜಗತ್ತಿಗೆ ಪ್ರಕೃತಿ, ಪ್ರಗತಿ, ಸಂರಕ್ಷಣೆ ಮತ್ತು ಪರಿಸರ-ಸುಸ್ಥಿರತೆಯ ಸಂದೇಶವನ್ನು ನೀಡಿದೆ ಎಂದು ಶ್ರೀ ಮೋದಿ ಅವರು ಹೇಳಿದರು.

ಮೇಘಾಲಯದ 50ನೇ ರಾಜ್ಯೋತ್ಸವ ದಿನದಂದು ಪ್ರಧಾನ ಮಂತ್ರಿಯವರ ಭಾಷಣ

January 21st, 01:08 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇಘಾಲಯದ 50 ನೇ ರಾಜ್ಯೋತ್ಸವ ದಿನದಂದು ಮೇಘಾಲಯದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ರಾಜ್ಯದ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾದ ನಂತರ ಈಶಾನ್ಯ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. 3-4 ದಶಕಗಳ ನಂತರ ಯಾವುದೇ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡಿದ ಮೊದಲ ಭೇಟಿ ಇದಾಗಿದೆ. ನಿಸರ್ಗಕ್ಕೆ ಹತ್ತಿರವಾದ ಜನರು ಎಂಬ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ರಾಜ್ಯದ ಜನತೆಗೆ ಪೂರಕವಾಗಿದೆ. ಮೇಘಾಲಯವು ಜಗತ್ತಿಗೆ ಪ್ರಕೃತಿ, ಪ್ರಗತಿ, ಸಂರಕ್ಷಣೆ ಮತ್ತು ಪರಿಸರ-ಸುಸ್ಥಿರತೆಯ ಸಂದೇಶವನ್ನು ನೀಡಿದೆ ಎಂದು ಶ್ರೀ ಮೋದಿ ಅವರು ಹೇಳಿದರು.

75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು.

August 15th, 03:02 pm

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪವಿತ್ರ ದಿನವಾದ ಇಂದು, ದೇಶವು ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ವೀರರಿಗೆ ತಲೆಬಾಗಿ ನಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ ಪೂಜ್ಯ ಬಾಪು, ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಖುಲ್ಲಾ ಖಾನ್ ರಂತಹ ಮಹಾನ್ ಕ್ರಾಂತಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನೂ ದೇಶವು ಸ್ಮರಿಸಿಕೊಳ್ಳುತ್ತಿದೆ; ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ರಾಣಿ ಗಾಯಿಡಿನ್ಲಿಯು ಅಥವಾ ಮಾತಂಗಿನಿಹಜ್ರಾ ಅವರ ಶೌರ್ಯ; ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ, ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತದ ಭವಿಷ್ಯಕ್ಕೆ ದಿಕ್ಕು ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್. ಈ ಎಲ್ಲ ಮಹಾನ್ ವ್ಯಕ್ತಿಗಳಿಗೆ ದೇಶ ಚಿರಋಣಿಯಾಗಿದೆ.

ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ

August 15th, 07:38 am

ನಿಮ್ಮೆಲ್ಲರಿಗೂ ಶುಭಾಶಯಗಳು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ವಿಶ್ವದೆಲ್ಲೆಡೆ ಇರುವ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳನ್ನು ಅರ್ಪಿಸುತ್ತೇನೆ.

ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ

August 15th, 07:37 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಭಾಷಣದ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು ಮತ್ತು ಭವಿಷ್ಯದ ಯೋಜನೆಗಳನ್ನು ಹಾಕಿದರು. ಅವರು ತಮ್ಮ ಜನಪ್ರಿಯ ಘೋಷಣೆಯಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಅನ್ನು ಸೇರಿಸಿದರು. ಈ ಗುಂಪಿಗೆ ಇತ್ತೀಚಿನ ಪ್ರವೇಶವು ಸಬ್ಕಾ ಪ್ರಯಾಸ್ ಆಗಿದೆ.

ಯುಎನ್ ಎಸ್ ಸಿ ಹೈ ಲೆವೆಲ್ ಓಪನ್ ಡಿಬೇಟ್ ನಲ್ಲಿ ಪ್ರಧಾನ ಮಂತ್ರಿಗಳ ಹೇಳಿಕೆ "ಸಮುದ್ರ ಭದ್ರತೆಯನ್ನು ವಿಸ್ತರಿಸುವುದು : ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ಪ್ರಕರಣ"

August 09th, 05:41 pm

ಉನ್ನತ ಮಟ್ಟದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿ, ಪ್ರಧಾನಿ ನರೇಂದ್ರ ಮೋದಿಯವರು ಐದು ತತ್ವಗಳನ್ನು ಮಂಡಿಸಿದರು, ಕಡಲ ವ್ಯಾಪಾರಕ್ಕೆ ಅಡೆತಡೆಗಳನ್ನು ತೆಗೆದುಹಾಕುವುದು ಮತ್ತು ವಿವಾದಗಳ ಶಾಂತಿಯುತ ಇತ್ಯರ್ಥ ಸೇರಿದಂತೆ, ಕಡಲ ಭದ್ರತಾ ಸಹಕಾರಕ್ಕಾಗಿ ಜಾಗತಿಕ ಮಾರ್ಗಸೂಚಿಯನ್ನು ತಯಾರಿಸಬಹುದು.

ಚೆನ್ನೈಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ/ ಹಸ್ತಾಂತರ/ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ

February 14th, 11:31 am

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ತಮಿಳುನಾಡಿನಲ್ಲಿ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ಹಾಗು ಉದ್ಘಾಟನೆ

February 14th, 11:30 am

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ ಈ ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ” 630 ಕಿಲೋಮೀಟರ್ ಅನಿಕಟ್ ಕಾಲುವೆ ವ್ಯವಸ್ಥೆಯ ಆಧುನೀಕರಣಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇದರಿಂದ ತಂಜಾವೂರು ಮತ್ತು ಪುದುಕೊಟ್ಟಾಯ್ ಭಾಗಕ್ಕೆ ಹೆಚ್ಚಿನ ರೀತಿಯಲ್ಲಿ ನೆರವು ದೊರೆಯಲಿದೆ. ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಅತ್ಯಂತ ದೊಡ್ಡದಾಗಿರಲಿದೆ. ಇದರಿಂದ 2.27 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ವಿಸ್ತರಿಸಲಿದೆ ಎಂದು ಹೇಳಿದರು.

ಹುನಾರ್ ಹಾಟ್ ದೇಶದ ಕುಶಲಕರ್ಮಿಗಳಿಗೆ ಅತ್ಯುತ್ತಮ ಅವಕಾಶವನ್ನು ನೀಡಿದೆ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಲ್ಲಿ ತಿಳಿಸಿದರು.

February 23rd, 11:30 am

ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ, ಕಛ್ ನಿಂದ ಕೊಹಿಮಾವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದೇಶದ ಸಮಸ್ತ ನಾಗರಿಕರಿಗೆ ಮತ್ತೊಮ್ಮೆ ನಮಸ್ಕಾರ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ತಮ್ಮೆಲ್ಲರಿಗೂ ನಮಸ್ಕಾರ. ನಮ್ಮ ದೇಶದ ವೈಶಾಲ್ಯತೆ ಮತ್ತು ವೈವಿಧ್ಯತೆಯನ್ನು ನೆನೆಯುವುದು, ಅದಕ್ಕೆ ತಲೆ ಬಾಗುವುದು, ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ ಮತ್ತು ಈ ವೈವಿಧ್ಯತೆಯ ಅನುಭವದ ಅವಕಾಶ ಹೊಸ ಅನುಭೂತಿ ನೀಡುವ, ಆನಂದವನ್ನು ತುಂಬುವ ಹಾಗೂ ಒಂದು ಬಗೆಯ ಪ್ರೇರಣೆಯ ಪುಷ್ಪದಂತಿದೆ.

ಗುಜರಾತ್‌ನ ಗಾಂಧಿನಗರದಲ್ಲಿ ಜರುಗಿದ ವಲಸೆ ಪ್ರಭೇದಗಳ ಸಮಾವೇಶ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು 13 ನೇ ಆಡಳಿತ ಮಂಡಳಿ (ಸಿಒಪಿ) ಯ ಉದ್ಘಾಟನ ಭಾಷಣ

February 17th, 01:37 pm

ಮಹಾತ್ಮ ಗಾಂಧಿಯವರ ಭೂಮಿಯಾದ ಗಾಂಧಿನಗರದಲ್ಲಿ ವಲಸೆ ಪ್ರಭೇದಗಳ ಸಮಾವೇಶದ 13 ನೇ ಆಡಳಿತ ಮಂಡಳಿಯ ಸಮ್ಮೇಳನಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ.

ಗಾಂಧಿನಗರದಲ್ಲಿ ವಲಸೆ ಪ್ರಭೇದದ ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತ ಸಮಾವೇಶದ 13 ನೇ ಆಡಳಿತ ಮಂಡಳಿ (ಸಿಒಪಿ)ಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು

February 17th, 12:09 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಗಾಂಧಿನಗರದಲ್ಲಿ ವಲಸೆ ಪ್ರಭೇದದ ವನ್ಯಜೀವಿಗಳ ಸಂರಕ್ಷಣೆ ಕುರಿತ ಸಮಾವೇಶದ 13 ನೇ ಆಡಳಿತ ಮಂಡಳಿ (ಸಿಒಪಿ)ಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

Join PM Modi on a journey of conserving and protecting the environment!

August 12th, 09:35 pm

Join PM Modi on a journey of conserving and protecting the environment. Share your ideas with the PM on ways to conserve environment, nature and the Planet.

The 'remote control' Congress government never paid attention to Madhya Pradesh's needs: PM Modi

November 20th, 04:17 pm

Prime Minister Narendra Modi today addressed two huge public meeting in Jhabua and Rewa in Madhya Pradesh. These public meetings come amid a series of similar public meetings addressed by PM Modi in the election-bound state of Madhya Pradesh.

Corruption had ruined the nation when Congress was in power: PM Modi in Jhabua, Madhya Pradesh

November 20th, 11:45 am

Prime Minister Narendra Modi today addressed two huge public meeting in Jhabua and Rewa in Madhya Pradesh. These public meetings come amid a series of similar public meetings addressed by PM Modi in the election-bound state of Madhya Pradesh.

ಕಾಂಗ್ರೆಸ್ ಸ್ವಜನಪಕ್ಷಪಾತ, ವಿಭಜನೆ ಮತ್ತು ವಂಶವಾದಿ ರಾಜಕೀಯವನ್ನು ಪ್ರತಿನಿಧಿಸುತ್ತದೆ: ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ

November 20th, 11:44 am

ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಝಾಬುವಾದಲ್ಲಿ ಭಾರೀ ಸಾರ್ವಜನಿಕ ಸಭೆ ನಡೆಸಿದ್ದಾರೆ. ಮಧ್ಯಪ್ರದೇಶದ ಚುನಾವಣಾ-ಪ್ರಾಂತ್ಯದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ನಡೆಸಿದ ಇದೇ ರೀತಿಯ ಸಾರ್ವಜನಿಕ ಸಭೆಗಳ ಸರಣಿಯಲ್ಲಿ ಈ ಸಾರ್ವಜನಿಕ ಸಭೆಯು ಒಂದು .

ನವದೆಹಲಿಯಲ್ಲಿ ನಡೆದ ಬುದ್ಧಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ

April 30th, 03:55 pm

ಬುದ್ಧ ಜಯಂತಿ ಅಂಗವಾಗಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.