ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ದಾಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಖಂಡನೆ
November 04th, 08:34 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ನಡೆದ ದಾಳಿ ಹಾಗೂ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ದೃಢ ಸಂಕಲ್ಪವನ್ನು ಒತ್ತಿಹೇಳುತ್ತಾ, ಕೆನಡಾದ ಸರ್ಕಾರವು ನ್ಯಾಯ ದೊರಕಿಸಲಿ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯಲಿ ಎಂದು ಕರೆ ನೀಡಿದ್ದಾರೆ.ಅಮೆರಿಕ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮೇಲೆ ದಾಳಿ: ಪ್ರಧಾನಮಂತ್ರಿ ಖಂಡನೆ
July 14th, 09:15 am
ಅಮೆರಿಕಾದ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಮೇಲಿನ ದಾಳಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.ತುರ್ತು ಪರಿಸ್ಥಿತಿಯನ್ನು ಖಂಡಿಸಿದ ಲೋಕಸಭಾ ಸ್ಪೀಕರ್ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ
June 26th, 02:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತುರ್ತು ಪರಿಸ್ಥಿತಿ ಮತ್ತು ತದನಂತರದ ಅತಿರೇಕ ಪರಿಣಾಮಗಳನ್ನು ಬಲವಾಗಿ ಖಂಡಿಸಿದ ಗೌರವಾನ್ವಿತ ಲೋಕಸಭಾ ಸ್ಪೀಕರ್ ಅವರನ್ನು ಶ್ಲಾಘಿಸಿದರು.ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಪ್ರೊ.ರಾಮ್ ಯತ್ನ ಶುಕ್ಲಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
September 20th, 10:45 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಪ್ರೊ. ರಾಮ್ ಯತ್ನ ಶುಕ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರೊ. ಶುಕ್ಲಾ ಅವರ ನಿಧನವು ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ತುಂಬಲಾರದ ನಷ್ಟ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.ಮಧ್ಯಪ್ರದೇಶದ ಜಬಲ್ಪುರ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡದಿಂದಾದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
August 01st, 08:36 pm
ಮಧ್ಯಪ್ರದೇಶದ ಜಬಲ್ಪುರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡದಿಂದ ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.PM Modi's telephonic conversation with Secretary General of the United Nations
July 29th, 10:17 pm
Prime Minister Shri Narendra Modi had a telephone conversation today with the United Nations Secretary-General (UNSG), His Excellency António Guterres.PM condemns the the attack on the Assam Rifles convoy in Manipur
November 13th, 07:15 pm
The Prime Minister, Shri Narendra Modi has condemned the attack on the Assam Rifles convoy in Manipur. He paid homage to those soldiers and family members who have been martyred today.PM strongly condemns terrorist attacks inside a church in Nice, France
October 29th, 07:58 pm
The Prime Minister, Shri Narendra Modi has strongly condemned the recent terrorist attacks in France, including today's heinous attack in Nice inside a church.PM condemns the Maoist attack in Sukma, Chhattisgarh
March 22nd, 10:23 pm
Prime Minister Shri Narendra Modi strongly condemned the Maoist attack in Sukma, Chhattisgarh. He paid tribute to the security personnel martyred in the attack and in a tweet he wrote, “Condolences to the bereaved families. I pray for a quick recovery of those injured.”ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದನೆಯ ದಾಳಿಕೋರರನ್ನು ನಾವು ಬಿಡುವುದಿಲ್ಲ : ಪ್ರಧಾನಿ ಮೋದಿ
February 15th, 10:52 am
ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಚಾಲನೆ ನೀಡಿದರು . ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾದಲ್ಲಿ ಸಿ.ಆರ್.ಪಿ.ಎಫ್. ಸಿಬ್ಬಂದಿ ಮೇಲೆ ನಡೆದ ಭೀಕರವಾದ ದಾಳಿಯನ್ನು ಖಂಡಿಸಿದರು ಮತ್ತು ಅವರ ಅತ್ಯುನ್ನತ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡಿದರು. ದಾಳಿಯ ಅಪರಾಧಕರ್ತರನ್ನು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದರು."ವಂದೇ ಭಾರತ್ ಎಕ್ಸ್ ಪ್ರೆಸ್’ಗೆ ಚಾಲನೆ ನೀಡಿದ ಪ್ರಧಾನಮಂತ್ರಿ "
February 15th, 10:52 am
ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಚಾಲನೆ ನೀಡಿದರು . ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪುಲ್ವಾಮಾದಲ್ಲಿ ಸಿ.ಆರ್.ಪಿ.ಎಫ್. ಸಿಬ್ಬಂದಿ ಮೇಲೆ ನಡೆದ ಭೀಕರವಾದ ದಾಳಿಯನ್ನು ಖಂಡಿಸಿದರು ಮತ್ತು ಅವರ ಅತ್ಯುನ್ನತ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡಿದರು. ದಾಳಿಯ ಅಪರಾಧಕರ್ತರನ್ನು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದರು.ಈಜಿಪ್ಟ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ಪ್ರಧಾನಿ
November 24th, 10:50 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಜಿಪ್ಟ್ ನ ಪ್ರಾರ್ಥನಾ ಸ್ಥಳದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಈ ದಾಳಿ ಅನಾಗರಿಕವಾದದ್ದು ಎಂದಿರುವ ಪ್ರಧಾನಿ, ಮುಗ್ಧ ಜೀವಗಳ ಹಾನಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ ಮತ್ತು ಭಯೋತ್ಪಾದನೆಯ ಎಲ್ಲ ಸ್ವರೂಪದ ವಿರುದ್ಧ ಹೋರಾಟ ನಡೆಸಲು ಈಜಿಪ್ಟ್ ಗೆ ಭಾರತದ ಅಚಲ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ ಆಗಿರುವ ಜೀವ ಹಾನಿಗೆ ದುಃಖ ವ್ಯಕ್ತಪಡಿಸಿದ ಪ್ರಧಾನಿ
November 13th, 10:01 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ ಸಂಭವಿಸಿರುವ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.ನ್ಯೂಯಾರ್ಕ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಪ್ರಧಾನಿ
November 01st, 09:27 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನ್ಯೂಯಾರ್ಕ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.ಹರಿಯಾಣ ಮತ್ತು ಪಂಜಾಬ್ ನಲ್ಲಿ ನಡೆದ ಹಿಂಸಾಚಾರ ಘಟನೆಗಳನ್ನು ಖಂಡಿಸಿದ ಪ್ರಧಾನಿ
August 25th, 09:03 pm
ಇಂದು ನಡೆದ ಹಿಂಸಾಚಾರ ಘಟನೆಗಳು ತೀವ್ರ ನೋವು ತಂದಿವೆ. ನಾನು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಶಾಂತಿ ಕಾಪಾಡುವಂತೆ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಾನು ಎನ್.ಎಸ್.ಎ. ಮತ್ತು ಗೃಹ ಕಾರ್ಯದರ್ಶಿಯವರೊಂದಿಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದೇನೆ.ಪ್ರಧಾನಿ ಕಾಬುಲ್ ನಲ್ಲಿ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ
July 24th, 04:19 pm
ಕಾಬೂಲ್ ನಲ್ಲಿ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ .. ನಾವು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಫ್ಘಾನಿಸ್ತಾನದ ಜನರ ಮತ್ತು ಸರ್ಕಾರದೊಂದಿಗೆ ಐಕಮತ್ಯದಲ್ಲಿ ನಿಲ್ಲುತ್ತೇವೆ. - ಪ್ರಧಾನಿ ಮಂತ್ರಿಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲಿನ ದಾಳಿಯನ್ನು ಖಂಡಿಸಿದ ಪ್ರಧಾನಿ; ಜೆ ಮತ್ತು ಕೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮತ್ತು ಎಲ್ಲ ಅಗತ್ಯ ನೆರವಿನ ಭರವಸೆ
July 10th, 11:09 pm
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರಿಕರ ಮೇಲೆ ನಡೆದಿರುವ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಶ್ರೀ. ಎನ್.ಎಸ್. ವೋರಾ ಮತ್ತು ಮುಖ್ಯಮಂತ್ರಿ ಶ್ರೀಮತಿ ಮೆಹಬೂಬಾ ಮುಫ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.ಲಂಡನ್ ದಾಳಿಗೆ ಪ್ರಧಾನಿ ತೀವ್ರ ಖಂಡನೆ
June 04th, 10:13 am
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಲಂಡನ್ ದಾಳಿಯನ್ನು ಖಂಡಿಸಿದ್ದಾರೆ. ಈ ದಾಳಿ ದುಃಖಕರ ಹಾಗೂ ಆಘಾತಕಾರಿ ಎಂದು ತಿಳಿಸಿದ್ದಾರೆ. “ಲಂಡನ್ ದಾಳಿಗಳು ಆಘಾತಕಾರಿ ಮತ್ತು ದುಃಖಕರ. ಅದನ್ನು ನಾವು ಖಂಡಿಸುತ್ತೇವೆ. ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬದೊಂದಿಗೆ ನನ್ನ ಸಂವೇದನೆ ಹಾಗೂ ಗಾಯಾಳುಗಳೊಂದಿಗೆ ಪ್ರಾರ್ಥನೆ ಇದೆ.” ಎಂದು ಪ್ರಧಾನಿ ತಿಳಿಸಿದ್ದಾರೆ."ಪ್ರಧಾನಿ ಕಾಬುಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ "
May 31st, 12:48 pm
ಪ್ರಧಾನಿ ನರೇಂದ್ರ ಮೋದಿ ಕಾಬುಲ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾವು ಕಾಬುಲ್ ನಲ್ಲಿ ಭಯೋತ್ಪಾದಕ ಸ್ಫೋಟವನ್ನು ತೀವ್ರವಾಗಿ ಖಂಡಿಸುತ್ತೇವೆ, ಮೃತಪಟ್ಟವರ ಕುಟುಂಬದೊಂದಿಗೆ ನನ್ನ ಸಂವೇದನೆ ಮತ್ತು ಗಾಯಾಳುಗಳೊಂದಿಗೆ ನಮ್ಮ ಪ್ರಾರ್ಥನೆ ಇದೆ.ಎಲ್ಲಾ ವಿಧದ ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತವು ಅಫ್ಘಾನಿಸ್ತಾನದೊಂದಿಗೆ ನಿಲ್ಲುತ್ತಿದೆ . ಭಯೋತ್ಪಾದನೆಯನ್ನು ಬೆಂಬಲಿಸುವ ಪಡೆಗಳನ್ನು ವಿಫಲಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು."ಸ್ವಚ್ಛ ಭಾರತದ ಸಾಮಾಜಿಕ ಉದ್ದೇಶವನ್ನು ಸಮರ್ಥಿಸಿಕೊಂಡು ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಇ-ರಿಕ್ಷಾ ಚಾಲಕನ ಹತ್ತಿರದ ಬಂಧುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಪ್ರಧಾನಮಂತ್ರಿ "
May 29th, 10:00 pm
ವಿದೇಶ ಪ್ರಯಾಣದಲ್ಲಿರುವ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನವದೆಹಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ವಿರೋಧಿಸಿದ ಕಾರಣಕ್ಕೆ ಥಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ಇ-ರಿಕ್ಷಾ ಚಾಲಕ ರವೀಂದ್ರ ಕುಮಾರ್ ನ ಹತ್ತಿರದ ಬಂಧುಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಪ್ರಧಾನಿ, ಇಂಥ ಅಮಾನವೀಯ ಕೃತ್ಯವೆಸಗಿದವರ ವಿರುದ್ಧ ಪ್ರಕರಣ ದಾಖಲಿಸಿ, ತಕ್ಕಶಾಸ್ತಿ ಮಾಡುವಂತೆ ಪ್ರಾಧಿಕಾರಗಳಿಗೆ ಸೂಚಿಸಿದ್ದಾರೆ.