
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಅನುವಾದ
March 10th, 12:50 pm
ಮೊದಲಿಗೆ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ಆಲ್ಬನೀಸ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ ವರ್ಷ ಉಭಯ ದೇಶಗಳು ಪ್ರಧಾನಮಂತ್ರಿಗಳ ಮಟ್ಟದ ವಾರ್ಷಿಕ ಶೃಂಗಸಭೆಯನ್ನು ನಡೆಸಲು ನಿರ್ಧರಿಸಿದ್ದವು. ಇದೀಗ ಪ್ರಧಾನಮಂತ್ರಿ ಆಲ್ಬನೀಸ್ ಅವರ ಈ ಭೇಟಿಯಿಂದಾಗಿ ಆ ಸರಣಿ ಇದೀಗ ಆರಂಭವಾಗುತ್ತಿದೆ. ಅವರು ಹೋಲಿ ಹಬ್ಬದ ದಿನ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಆನಂತರ ನಾವು ಕೆಲ ಹೊತ್ತು ಕ್ರಿಕೆಟ್ ಮೈದಾನಕ್ಕೆ ಜತೆಯಾಗಿ ತೆರಳಿದ್ದೆವು. ಈ ಬಣ್ಣಗಳು, ಸಂಸ್ಕೃತಿ ಮತ್ತು ಕ್ರಿಕೆಟ್ ನ ಅಚರಣೆಯು ಒಂದು ರೀತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹದ ಉತ್ಸಾಹ ಮತ್ತು ಉಲ್ಲಾಸದ ಪರಿಪೂರ್ಣ ಸಂಕೇತವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತಕ್ಕಾಗಿ ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ವಿಶೇಷ ವ್ಯಾಪಾರ ರಾಯಭಾರಿ ಗೌರವಾನ್ವಿತ ಟೋನಿ ಅಬಾಟ್ ನಡುವೆ ಸಭೆ
August 05th, 06:19 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2021ರ ಆಗಸ್ಟ್ 2ರಿಂದ 6ರವರೆಗೆ ಭಾರತ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಗೌರವಾನ್ವಿತ ಟೋನಿ ಅಬಾಟ್ ಅವರನ್ನು ಭೇಟಿ ಮಾಡಿದ್ದರು. ಅವರು ಭಾರತಕ್ಕಾಗಿ ಆಸ್ಟ್ರೇಲಿಯಾ ಪ್ರಧಾನಮಂತ್ರಿಯವರ ವಿಶೇಷ ವ್ಯಾಪಾರ ರಾಯಭಾರಿಯಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.