'ಕರ್ಮಯೋಗಿ ಸಪ್ತಾಹ' - ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿ
October 19th, 06:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 'ಕರ್ಮಯೋಗಿ ಸಪ್ತಾಹ' – ರಾಷ್ಟ್ರೀಯ ಕಲಿಕಾ ಸಪ್ತಾಹಕ್ಕೆ ಚಾಲನೆ ನೀಡಿದರು.2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ
November 17th, 04:03 pm
140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲೀಷ್ ಅವತರಣಿಕೆ.
June 20th, 02:46 pm
ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗೆ ಸಂಬಂಧಿಸಿ ಡಬಲ್ ಇಂಜಿನ್ ಸರ್ಕಾರವು ನಿಮಗೆ ನೀಡಿದ ನಂಬಿಕೆ, ವಿಶ್ವಾಸವನ್ನು ಇಂದು ನಾವೆಲ್ಲರೂ ಮತ್ತೊಮ್ಮೆ ಸಾಕ್ಷೀಕರಿಸುತ್ತಿದ್ದೇವೆ. ಇಂದು 27,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳು ಒಂದೋ ಉದ್ಘಾಟನೆಯಾಗುತ್ತಿವೆ ಅಥವಾ ಅವುಗಳಿಗೆ ಶಿಲಾನ್ಯಾಸ ಮಾಡಲಾಗುತ್ತಿದೆ. ಈ ಬಹು ಆಯಾಮದ ಯೋಜನೆಗಳು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸಂಪರ್ಕದಲ್ಲಿ ನಿಮಗೆ ಸೇವೆಯನ್ನು ಒದಗಿಸಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವನ ಮತ್ತು ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವುದು ಮತ್ತು ಅದನ್ನು ಸುಲಭಗೊಳಿಸುವುದು ಈ ಯೋಜನೆಗಳ ಪ್ರಮುಖ ಆದ್ಯತೆಯಾಗಿದೆ.PM inaugurates and lays the foundation stone of multiple rail and road infrastructure projects worth over Rs 27000 crore in Bengaluru
June 20th, 02:45 pm
The Prime Minister, Shri Narendra Modi inaugurated and laid the foundation stone of multiple rail and road infrastructure projects worth over Rs 27000 crore in Bengaluru today. Earlier, the Prime Minister inaugurated the Centre for Brain Research and laid the foundation Stone for Bagchi Parthasarathy Multispeciality Hospital at IISc Bengaluru.ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಕುರಿತ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
March 02nd, 10:49 am
ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ನಮ್ಮ ಸರಕಾರಕ್ಕೆ ಪ್ರತ್ಯೇಕವಾದ ವಲಯವಾಗಿ ಉಳಿದಿಲ್ಲ. ಇಂದು ಆರ್ಥಿಕ ವಲಯದಲ್ಲಿ ನಮ್ಮ ಚಿಂತನೆ ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ನಂತಹ ಮೂಲ ತಳಹದಿಯ ಸಂಗತಿಗಳಿಗೆ ಸಂಬಂಧಿಸಿದುದಾಗಿದೆ. ಮೂಲ ಸೌಕರ್ಯಗಳಲ್ಲಿ ನಮ್ಮ ಅಭಿವೃದ್ಧಿ ಚಿಂತನೆ ಆಧುನಿಕ ತಂತ್ರಜ್ಞಾನವನ್ನು ಆಧರಿಸಿದೆ. ಸಾರ್ವಜನಿಕ ಸೇವೆಗಳು ಮತ್ತು ಕಟ್ಟ ಕಡೆಯ ಹಂತದವರೆಗೂ ಸೇವಾ ಒದಗಣೆ ಈಗ ದತ್ತಾಂಶಗಳ ಮೂಲಕ ಡಿಜಿಟಲ್ ವೇದಿಕೆಗಳಿಗೆ ಜೋಡಿಸಲ್ಪಟ್ಟಿದೆ. ತಂತ್ರಜ್ಞಾನ ನಮಗೆ ದೇಶದ ಜನ ಸಾಮಾನ್ಯರನ್ನು ಸಶಕ್ತೀಕರಣಗೊಳಿಸಲು ಇರುವ ಪ್ರಮುಖ ಶಕ್ತಿಶಾಲೀ ಮಾಧ್ಯಮ. ನಮಗೆ ತಂತ್ರಜ್ಞಾನ ಎನ್ನುವುದು ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ತಳಹದಿ ಮತ್ತು ನಾನು ಭಾರತದ ಸ್ವಾವಲಂಬನೆ ಬಗ್ಗೆ ಮಾತನಾಡುವಾಗ, ನೀವು ಇಂದು ಬೆಳಗ್ಗೆ ಅಮೆರಿಕಾ ಅಧ್ಯಕ್ಷ ಬೈಡನ್ ಅವರ ಮಾತುಗಳನ್ನು ಕೇಳಿರಬಹುದು. ಅವರು ಕೂಡಾ ಅಮೆರಿಕಾವನ್ನು ಸ್ವಾವಲಂಬಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಅವರು ಕೂಡಾ ಇಂದು ’ಅಮೆರಿಕಾ ನಿರ್ಮಿತ” ಕ್ಕೆ ಬಹಳ ಒತ್ತು ಕೊಟ್ಟಿದ್ದಾರೆ. ಮತ್ತು ಹಾಗಾಗಿ ವಿಶ್ವದಲ್ಲಿ ಹೊಸ ವ್ಯವಸ್ಥೆಯೊಂದು ಜಾರಿಗೆ ಬರುವ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದುದರಿಂದ ಸ್ವಾವಲಂಬನೆಯೊಂದಿಗೆ ಮುಂದುವರಿಯುವುದು ನಮಗೆ ಬಹಳ ಮುಖ್ಯ ಮತ್ತು ಅದು ಉತ್ತಮ ಕೂಡಾ. ಮತ್ತು ನೀವು ಕೂಡಾ ಇಂತಹ ಸಂಗತಿಗಳಿಗೆ ಬಜೆಟಿನಲ್ಲಿ ಹೆಚ್ಚು ಒತ್ತು ನೀಡಿರುವುದನ್ನು ಗಮನಿಸಿರಬಹುದು.'ತಂತ್ರಜ್ಞಾನ ಆಧರಿತ ಅಭಿವೃದ್ಧಿ' ಕುರಿತು ವೆಬಿನಾರ್ ಉದ್ದೇಶಿಸಿ ಪ್ರಧಾನಿ ಭಾಷಣ
March 02nd, 10:32 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಏಳನೇ ವೆಬಿನಾರ್ ಉದ್ದೇಶಿಸಿ ಇಂದು ಮಾತನಾಡಿದರು. ಬಜೆಟ್‌ನ ಪ್ರಸ್ತಾಪಗಳನ್ನು ಕಾಲಮಿತಿಯೊಳಗೆ ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ನಡೆಸುವುದು ಮತ್ತು ಅವರನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವುದು ಈ ಸರಣಿಯ ಉದ್ದೇಶವಾಗಿದೆ. ಬಜೆಟ್‌ಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ನಾವು ತ್ವರಿತವಾಗಿ, ತಡೆರಹಿತವಾಗಿ ಮತ್ತು ಸೂಕ್ತ ಫಲಿತಾಂಶದೊಂದಿಗೆ ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಇದೊಂದು ಸಹಯೋಗದ ಪ್ರಯತ್ನ,” ಎಂದು ಈ ವೆಬಿನಾರ್‌ಗಳ ಹಿಂದಿನ ತಾರ್ಕಿಕತೆಯನ್ನು ಅವರು ವಿವರಿಸಿದರು.Double engine government knows how to set big goals and achieve them: PM Modi
December 28th, 01:49 pm
PM Narendra Modi inaugurated Kanpur Metro Rail Project and Bina-Panki Multiproduct Pipeline Project. Commenting on the work culture of adhering to deadlines, the Prime Minister said that double engine government works day and night to complete the initiatives for which the foundation stones have been laid.ಕಾನ್ಪುರ ಮೆಟ್ರೋ ರೈಲು ಯೋಜನೆ ಪ್ರಧಾನ ಮಂತ್ರಿ ಅವರಿಂದ ಉದ್ಘಾಟನೆ
December 28th, 01:46 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕಾನ್ಪುರ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಅವರು ಕಾನ್ಪುರ ಮೆಟ್ರೋ ರೈಲ್ ಯೋಜನೆಯನ್ನು ಪರಿಶೀಲಿಸಿದರು ಮತ್ತು ಐ.ಐ.ಟಿ. ಮೆಟ್ರೋ ನಿಲ್ದಾಣದಿಂದ ಗೀತಾ ನಗರಕ್ಕೆ ಮೆಟ್ರೋ ರೈಲಿನಲ್ಲಿ ಸಂಚರಿಸಿದರು. ಅವರು ಬಿನಾ-ಪಾನಕಿ ಬಹು ಉತ್ಪಾದನಾ ಕೊಳವೆ ಮಾರ್ಗ ಯೋಜನೆಯನ್ನೂ ಉದ್ಘಾಟಿಸಿದರು. ಈ ಕೊಳವೆ ಮಾರ್ಗ ಮಧ್ಯಪ್ರದೇಶದ ಬಿನಾ ತೈಲ ಶುದ್ದೀಕರಣಾಗಾರದಿಂದ ಕಾನ್ಪುರದ ಪಾನಕಿವರೆಗೆ ವಿಸ್ತರಿಸಲ್ಪಟ್ಟಿದೆ. ಮತ್ತು ಅದು ಈ ವಲಯಕ್ಕೆ ಬಿನಾ ತೈಲ ಶುದ್ದೀಕರಣಾಗಾರದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಪಡೆಯಲು ಸಹಾಯ ಮಾಡಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ಶ್ರೀ ಹರದೀಪ್ ಪುರಿ ಈ ಸಂದರ್ಭದಲ್ಲಿ ಹಾಜರಿದ್ದರು.ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಗಳು
November 03rd, 01:49 pm
ಇಟಲಿ ಮತ್ತು ಗ್ಲಾಸ್ಗೋ ಪ್ರವಾಸದಿಂದ ಹಿಂದಿರುಗಿದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಕಡಿಮೆ ವ್ಯಾಕ್ಸಿನೇಷನ್ ವ್ಯಾಪ್ತಿಯ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಸಂವಾದದ ಸಮಯದಲ್ಲಿ, ಈ ಜಿಲ್ಲೆಗಳಲ್ಲಿ 100% ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಕಾರ್ಯಗತಗೊಳಿಸಬಹುದಾದ ವ್ಯಾಪಕವಾದ ಆಲೋಚನೆಗಳ ಕುರಿತು ಪ್ರಧಾನಮಂತ್ರಿ ಚರ್ಚಿಸಿದರು.ಕಡಿಮೆ ಲಸಿಕೆ ವ್ಯಾಪ್ತಿ ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ
November 03rd, 01:30 pm
ಇಟಲಿ ಮತ್ತು ಗ್ಲ್ಯಾಸ್ಗೋ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಕೋವಿಡ್ ಲಸಿಕೆಯ ಮೊದಲ ಡೋಸ್‌ನ ವ್ಯಾಪ್ತಿ 50% ಕ್ಕಿಂತ ಕಡಿಮೆ ಇರುವ ಹಾಗೂ ಎರಡನೇ ಡೋಸ್‌ನ ವ್ಯಾಪ್ತಿಯೂ ತೀರಾ ಕಡಿಮೆ ಇರುವ ಜಿಲ್ಲೆಗಳು ಈ ಸಭೆಯಲ್ಲಿ ಭಾಗಿಯಾದವು. ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಇತರ ರಾಜ್ಯಗಳ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.ನಾಸ್ಕಾಂ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
February 17th, 12:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.ನ್ಯಾಸ್ ಕಾಮ್ ನ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ ಉದ್ದೇಶಿಸಿ ಪ್ರಧಾನಿ ಭಾಷಣ
February 17th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಸ್ ಕಾಮ್ ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ( ಎನ್ ಟ ಎಲ್ ಎಫ್ ) ಉದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಕೊರೊನಾದ ಸಂಕಷ್ಟದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ತೋರಿದ ಐ.ಟಿ. ಉದ್ಯಮವನ್ನು ಶ್ಲಾಘಿಸಿದರು. “ಚಿಪ್ ಗಳು ಕಾರ್ಯನಿರ್ವಹಿಸುವುದು ಕುಸಿದಾಗ, ನಿಮ್ಮ ಸಂಕೇತ(ಕೋಡ್) ಕೆಲಸ ಮಾಡುತ್ತದೆ’’ಎಂದು ಪ್ರಧಾನಮಂತ್ರಿ ಹೇಳಿದರು. ಈ ವಲಯದಲ್ಲಿ ಶೇ.2ರಷ್ಟು ಬೆಳವಣಿಗೆಯಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಅಭಿವೃದ್ಧಿ ಕುಂಠಿತವಾಗುತ್ತದೆ ಎನ್ನುವ ಭಯದ ನಡುವೆಯೇ ಹೆಚ್ಚವರಿಯಾಗಿ 4 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ ಎಂದು ಹೇಳಿದರು.ಎನ್.ಇ.ಪಿ.2020 ಅಡಿ “21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ’’ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ರೂಪಾಂತರ
September 11th, 11:01 am
ನನ್ನ ಸಂಪುಟದ ಸಹೋದ್ಯೋಗಿಗಳೇ, ರಾಷ್ಟ್ರದ ಶಿಕ್ಷಣ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೇ, ಶ್ರೀ ಸಂಜಯ್ ಧೋತ್ರೆ ಅವರೇ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ರಚನಾ ಸಮಿತಿ ಅಧ್ಯಕ್ಷರಾದ ಡಾ. ಕಸ್ತೂರಿ ರಂಗನ್ ಅವರೇ, ಅವರ ತಂಡದ ಗೌರವಾನ್ವಿತ ಸದಸ್ಯರೇ, ವಿದ್ವಾಂಸರೇ, ಪ್ರಾಂಶುಪಾಲರೇ, ಶಿಕ್ಷಕರೇ, ಎಲ್ಲ ರಾಜ್ಯಗಳಿಂದ ಈ ವಿಶೇಷ ಸಮಾವೇಶದಲ್ಲಿ ಭಾಗಿಯಾಗಿರುವ ಮಾನ್ಯರೇ ಮತ್ತು ಮಹಿಳೆಯರೇ, ಇಂದು ನಾವೆಲ್ಲರೂ ನಮ್ಮ ದೇಶದ ಭವಿಷ್ಯ ನಿರ್ಮಾಣಕ್ಕೆ ಬುನಾದಿ ಹಾಕುವ ಕ್ಷಣದಲ್ಲಿ ಭಾಗಿಯಾಗಿದ್ದೇವೆ. ಹೊಸ ಯುಗದ ಬೀಜಗಳನ್ನು ಬಿತ್ತಿದ ಕ್ಷಣ ಇದು. ರಾಷ್ಟ್ರೀಯ ಶಿಕ್ಷಣ ನೀತಿ 21 ನೇ ಶತಮಾನದ ಭಾರತಕ್ಕೆ ಹೊಸ ದಿಶೆ ನೀಡಲಿದೆ.ರಾಷ್ಟ್ರೀಯ ಶಿಕ್ಷಣ ನೀತಿ 2020: “21ನೇ ಶತಮಾನದಲ್ಲಿ ಶಾಲಾ ಶಿಕ್ಷಣ” ಸಮಾವೇಶದಲ್ಲಿ ಪ್ರಧಾನಿ ಭಾಷಣ
September 11th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅಡಿಯಲ್ಲಿ “21ನೇ ಶತಮಾನದ ಶಾಲಾ ಶಿಕ್ಷಣ’ ಸಮಾವೇಶ ಉದ್ದಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು.PM interacts with key stakeholders from Electronic Media
March 23rd, 02:57 pm
Prime Minister Shri Narendra Modi today interacted with key stakeholders from Electronic Media Channels through video conference to discuss the emerging challenges in light of the spread of COVID-19.ಮ್ಯಾನ್ಮಾರ್ ಅಧ್ಯಕ್ಷರ ಅಧಿಕೃತ ಭೇಟಿಯಲ್ಲಿ ವಿನಿಮಯವಾದ ತಿಳಿವಳಿಕೆ ಒಪ್ಪಂದಗಳು
February 27th, 03:23 pm
ಮ್ಯಾನ್ಮಾರ್ ಅಧ್ಯಕ್ಷರ ಅಧಿಕೃತ ಭೇಟಿಯಲ್ಲಿ ವಿನಿಮಯವಾದ ತಿಳಿವಳಿಕೆ ಒಪ್ಪಂದಗಳು‘Chennai Connect’ begins a New Era of Cooperation in India-China relations says Prime Minister Narendra Modi
October 12th, 03:09 pm
Prime Minister Narendra Modi termed that 2nd Informal Summit at Mamallapuram, Chennai, Tamil Nadu has begun a “New Era of Cooperation” between India and China.New India is about the voice of each and every of the 130 crore Indians: PM Modi
August 30th, 10:01 am
At the Malayala Manorama News Conclave, PM Narendra Modi pitched for using language as a tool to unite India. He also asked the media to play the role of a bridge to bring people speaking different languages closer.ಮಲಯಾಳಂ ಮನೋರಮಾ ಸಮಾವೇಶ 2019 ಉದ್ದೇಶಿಸಿ ಪ್ರಧಾನಮಂತ್ರಿ. ಭಾಷಣ
August 30th, 10:00 am
ಕೇರಳದ ಜನತೆಯನ್ನು ಹೆಚ್ಚು ಜಾಗೃತಗೊಳಿಸುವ ನಿಟ್ಟನಲ್ಲಿ ಕೊಡುಗೆ ನೀಡಿರುವ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮ ಬೆಂಬಲಿಸಿ ಅದು ನಿರ್ವಹಿಸಿದ ಪಾತ್ರಕ್ಕೆ ಮಲಯಾಳಂ ಮನೋರಮಾವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.' ಮನ್ ಕಿ ಬಾತ್ ' ಸರ್ಕಾರದ ಬಗ್ಗೆ ಅಲ್ಲ , ನಮ್ಮ ಸಮಾಜ ಮತ್ತು ಮಹತ್ವಾಕಾಂಕ್ಷಿ ಭಾರತದ ಬಗ್ಗೆ ಆಗಿದೆ : ಪ್ರಧಾನಿ ಮೋದಿ
November 25th, 11:35 am
'ಮನ್ ಕಿ ಬಾತ್' ನ 50 ನೇ ವಿಶೇಷ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದರು ಮತ್ತು ಪ್ರತಿ ಸಂಚಿಕೆಗೆ ಅವ್ರು ಹೇಗೆ ಸಿದ್ಧಪಡಿಸುತ್ತಾನೆಂದು ಬಹಿರಂಗಪಡಿಸಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ಸಂವಿಧಾನದ ಅಮೂಲ್ಯ ಕೊಡುಗೆಗಳನ್ನು ಮೋದಿ ನೆನಪಿಸಿಕೊಂಡಿದ್ದಾರೆ. ಗುರು ನಾನಕ್ ದೇವ್ ಜಿ ಅವರ ಬೋಧನೆಗಳ ಬಗ್ಗೆ ಮತ್ತು ಸಮಾಜದ ಕಡೆಗೆ ಸತ್ಯ, ಕರ್ತವ್ಯ, ಸೇವೆ, ಸಹಾನುಭೂತಿ ಮತ್ತು ಸಾಮರಸ್ಯದ ಮಾರ್ಗವನ್ನು ಅವರು ತೋರಿಸಿದರು ಎಂದೂ ಅವರು ಹೇಳಿದರು .