ಪ್ರಧಾನಿ ಮೋದಿಯವರ ಗ್ರೀನ್ ಎನರ್ಜಿ ವಿಷನ್ ಭಾರತಕ್ಕೆ ಗೇಮ್ ಚೇಂಜರ್ ಆಗಿದೆ. ಅಂಕಿಅಂಶಗಳು ಏನು ಮಾತನಾಡುತ್ತವೆ ಎಂಬುದು ಇಲ್ಲಿದೆ
December 13th, 01:58 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪರಿವರ್ತಕ ತಳ್ಳುವಿಕೆಯನ್ನು ಮುನ್ನಡೆಸಿದ್ದಾರೆ, ಸುಸ್ಥಿರ ಇಂಧನ ಉಪಕ್ರಮಗಳಲ್ಲಿ ರಾಷ್ಟ್ರವನ್ನು ಜಾಗತಿಕ ನಾಯಕನನ್ನಾಗಿ ಮಾಡಿದ್ದಾರೆ.ಭೂತಾನ್‌ನ ದೊರೆ ಮತ್ತು ರಾಣಿಯನ್ನು ಬರಮಾಡಿಕೊಂಡ ಪ್ರಧಾನಮಂತ್ರಿ
December 05th, 03:42 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭೂತಾನ್ ದೊರೆ ಘನತೆವೆತ್ತ ಜಿಗ್ಮೆ ಖೇಸರ್ ನಮ್ಗಯೆಲ್ ವಾಂಗ್ ಚುಕ್ ಮತ್ತು ಭೂತಾನ್ ರಾಣಿ ಘನತೆವೆತ್ತ ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ಬರಮಾಡಿಕೊಂಡರು. ಪ್ರಧಾನಮಂತ್ರಿಯವರು ಘನತೆವೆತ್ತರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು 2024ರ ಮಾರ್ಚ್ ನಲ್ಲಿ ತಾವು ಭೂತಾನ್‌ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಅಲ್ಲಿನ ಜನರು ನೀಡಿದ ಅಸಾಧಾರಣ ಆತ್ಮೀಯ ಆತಿಥ್ಯವನ್ನು ಪ್ರೀತಿಯಿಂದ ಸ್ಮರಿಸಿದರು.ಇಟಲಿಯ ಮಂತ್ರಿಗಳ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
November 19th, 08:34 am
ರಿಯೊ ಡಿ ಜನೈರೊದಲ್ಲಿ ನಡೆಯುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಾಲಿಯನ್ ಗಣರಾಜ್ಯದ ಮಂತ್ರಿಗಳ ಪರಿಷತ್ತಿನ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಭೇಟಿಯಾದರು. ಕಳೆದ ಎರಡು ವರ್ಷಗಳಲ್ಲಿ ಉಭಯ ಪ್ರಧಾನಮಂತ್ರಿಗಳ ನಡುವಿನ ಐದನೇ ಭೇಟಿ ಇದಾಗಿದೆ. ಜೂನ್ 2024 ರಲ್ಲಿ ಇಟಲಿಯ ಪುಗ್ಲಿಯಾದಲ್ಲಿ ಪ್ರಧಾನ ಮಂತ್ರಿ ಮೆಲೋ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರ ಅಧ್ಯಕ್ಷತೆಯಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ಸವಾಲಿನ ಈ ಸಂದರ್ಭದದಲ್ಲಿ ಜಿ7 ಅನ್ನು ಮುನ್ನಡೆಸಿದ್ದಕ್ಕಾಗಿ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.ನವೆಂಬರ್ 13ರಂದು ಬಿಹಾರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
November 12th, 08:26 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ದರ್ಭಾಂಗಕ್ಕೆ ಪ್ರಯಾಣಿಸಲಿದ್ದು, ಬೆಳಗ್ಗೆ 10:45 ಕ್ಕೆ ಅವರು ಬಿಹಾರದಲ್ಲಿ ಸುಮಾರು 12,100 ಕೋಟಿ ರೂ.ಗಳ ಅನೇಕ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದು, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.ಸ್ವಚ್ಛ ಇಂಧನ ಇಂದಿನ ಅಗತ್ಯವಾಗಿದೆ: ಪ್ರಧಾನಮಂತ್ರಿ
October 21st, 05:20 pm
ಸ್ವಚ್ಛ ಇಂಧನ ಇಂದಿನ ಅತ್ಯಗತ್ಯ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತಮ ನಾಳೆಗಾಗಿ ಸರ್ಕಾರದ ಬದ್ಧತೆ ಅತ್ಯಂತ ಮಹತ್ವದ್ದಾಗಿದೆ. ಇದು ತಮ್ಮ ಸರ್ಕಾರದ ಕೆಲಸದಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದ್ದಾರೆ.ಫ್ಯಾಕ್ಟ್ ಶೀಟ್: 2024 ಕ್ವಾಡ್ ಲೀಡರ್ಸ್ ಶೃಂಗಸಭೆ
September 22nd, 12:06 pm
ಸೆಪ್ಟೆಂಬರ್ 21, 2024 ರಂದು, ಅಧ್ಯಕ್ಷ ಶ್ರೀ ಜೋಸೆಫ್ ಆರ್. ಬೈಡನ್, ಜೂನಿಯರ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್, ಜಪಾನ್ ನ ಪ್ರಧಾನಮಂತ್ರಿ ಶ್ರೀ ಕಿಶಿದಾ ಫ್ಯೂಮಿಯೊ ಮತ್ತು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್ನ ವಿಲ್ಮಿಂಗ್ಟನ್ನಲ್ಲಿ ನಾಲ್ಕನೇ ಕ್ವಾಡ್ ನಾಯಕರುಗಳ ಶೃಂಗಸಭೆಗಾಗಿ ಸಭೆಸೇರಿದರು.ಜಂಟಿ ವಸ್ತುಸ್ಥಿತಿ ಪತ್ರ: ಸಮಗ್ರ ಮತ್ತು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ವಿಸ್ತರಿಸುವುದನ್ನು ಅಮೆರಿಕ ಮತ್ತು ಭಾರತ ಮುಂದುವರಿಸುತ್ತವೆ
September 22nd, 12:00 pm
21 ನೇ ಶತಮಾನದ ನಿರ್ಣಾಯಕ ಪಾಲುದಾರಿಕೆಯನ್ನು ವ್ಯಾಖ್ಯಾನಿಸುವ ಯುಎಸ್-ಭಾರತ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ನಿರ್ಣಾಯಕವಾಗಿ ತಲುಪಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ದೃಢಪಡಿಸಿದರು. ಅಮೆರಿಕ ಮತ್ತು ಭಾರತ ನಡುವೆ ಅಭೂತಪೂರ್ವ ಮಟ್ಟದ ವಿಶ್ವಾಸ ಮತ್ತು ಸಹಯೋಗ ಬೆಳೆದ ಐತಿಹಾಸಿಕ ಅವಧಿಯ ಬಗ್ಗೆ ನಾಯಕರು ಉಲ್ಲೇಖಿಸಿದರು. ನಮ್ಮ ದೇಶಗಳು ಹೆಚ್ಚು ಪರಿಪೂರ್ಣ ಒಕ್ಕೂಟಗಳಾಗಲು ಮತ್ತು ನಮ್ಮ ಹಂಚಿಕೆಯ ಭವಿಷ್ಯವನ್ನು ತಲುಪಲು ಪ್ರಯತ್ನಿಸುತ್ತಿರುವುದರಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನಿನ ನಿಯಮ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಎತ್ತಿಹಿಡಿಯುವಲ್ಲಿ ಯುಎಸ್-ಭಾರತ ಪಾಲುದಾರಿಕೆಯು ಆಧಾರವಾಗಿರಬೇಕು ಎಂದು ನಾಯಕರು ದೃಢಪಡಿಸಿದರು. ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಜಾಗತಿಕ ಭದ್ರತೆ ಮತ್ತು ಶಾಂತಿಯ ಆಧಾರಸ್ತಂಭವನ್ನಾಗಿ ಮಾಡಿದ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು, ಕಾರ್ಯಾಚರಣೆಯಲ್ಲಿ ಸಮನ್ವಯದ ಹೆಚ್ಚಳ, ಮಾಹಿತಿ ಹಂಚಿಕೆ ಮತ್ತು ರಕ್ಷಣಾ ಕೈಗಾರಿಕಾ ನಾವೀನ್ಯತೆಯ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ನಮ್ಮ ಜನರು, ನಮ್ಮ ನಾಗರಿಕ ಮತ್ತು ಖಾಸಗಿ ವಲಯಗಳು ಮತ್ತು ಆಳವಾದ ಬಂಧಗಳನ್ನು ರೂಪಿಸಲು ತಮ್ಮ ಸರ್ಕಾರಗಳ ದಣಿವರಿಯದ ಪ್ರಯತ್ನಗಳು ಮುಂಬರುವ ದಶಕಗಳಲ್ಲಿ ಯುಎಸ್-ಭಾರತ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬ ಬಗ್ಗೆ ನಿರಂತರ ಆಶಾವಾದ ಮತ್ತು ಅತ್ಯಂತ ವಿಶ್ವಾಸವನ್ನು ವ್ಯಕ್ತಪಡಿಸಿದರು.ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ನಾಯಕರಿಂದ ವಿಲ್ಮಿಂಗ್ಟನ್ ಘೋಷಣೆ ಜಂಟಿ ಹೇಳಿಕೆ
September 22nd, 11:51 am
ಇಂದು, ನಾವು-ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಕಿಶಿದಾ ಫ್ಯೂಮಿಯೊ ಮತ್ತು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬಿಡೆನ್, ಅವರು ನಾಲ್ಕನೇ ಕ್ವಾಡ್ ನಾಯಕರ ಶೃಂಗಸಭೆ ಸಂದರ್ಭದಲ್ಲಿ ಭೇಟಿಯಾದರು. ವಿಲ್ಮಿಂಗ್ಟನ್‌ನ ಡೆಲವೇರ್‌ನಲ್ಲಿ ಅಧ್ಯಕ್ಷ ಬಿಡೆನ್ ಈ ಸಭೆಯನ್ನು ಆಯೋಜಿಸಿದ್ದರು.ಸುರಕ್ಷಿತ ಮತ್ತು ಸುಭದ್ರ ಜಾಗತಿಕ ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಯುಎಸ್-ಭಾರತ ಉಪಕ್ರಮದ ಮಾರ್ಗಸೂಚಿ
September 22nd, 11:44 am
ಪರಸ್ಪರ ಹಂಚಿಕೆಯ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತೆಯ ವಿಷಯಗಳಲ್ಲಿ ನಮ್ಮ ಸಹಯೋಗವನ್ನು ಬಲಪಡಿಸಲು/ಆಳಗೊಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಶಾಶ್ವತ ಬದ್ಧತೆಯನ್ನು ಹಂಚಿಕೊಂಡಿವೆ. ನಮ್ಮ ಆರ್ಥಿಕ ಬೆಳವಣಿಗೆಯ ಕಾರ್ಯಸೂಚಿಗಳ ಪ್ರಮುಖ ಅಂಶವಾಗಿ, ನಮ್ಮ ಜನಸಂಖ್ಯೆಗೆ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು, ಜಾಗತಿಕವಾಗಿ ಶುದ್ಧ ಇಂಧನ ನಿಯೋಜನೆಯನ್ನು ತ್ವರಿತಗೊಳಿಸುವುದು ಮತ್ತು ಜಾಗತಿಕ ಹವಾಮಾನ ಗುರಿಗಳ ಈಡೇರಿಕೆ ಸೇರಿದಂತೆ ಶುದ್ಧ ಇಂಧನ ಪರಿವರ್ತನೆಯ ಪ್ರಯೋಜನಗಳನ್ನು ಪಡೆಯಲು ನಾವು ಒಟ್ಟಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ.ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ವೀಡಿಯೊ ಸಂದೇಶ
September 11th, 10:40 am
ಸ್ನೇಹಿತರೆ, ಇಡೀ ಜಗತ್ತೇ ನಿರ್ಣಾಯಕ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ಹವಾಮಾನ ಬದಲಾವಣೆಯು ಭವಿಷ್ಯದ ವಿಷಯವಲ್ಲ ಎಂಬ ಅರಿವು ನಮ್ಮೆಲ್ಲರಲ್ಲೂ ಬೆಳೆಯುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮವು ನೇರವಾಗಿ ಇಲ್ಲಿ ಮತ್ತು ಈಗ ಅನುಭವವಾಗುತ್ತಿದೆ. ಹಾಗಾಗಿ, ಇದರ ಪರಿಣಾಮಗಳನ್ನು ತಡೆಯುವ ಕ್ರಿಯೆಯ ಸಮಯವೂ ಇಲ್ಲಿದೆ ಮತ್ತು ನಮ್ಮ ಮುಂದೆಯೇ ಬಂದಿದೆ. ಇಂಧನ ಪರಿವರ್ತನೆ ಮತ್ತು ಸುಸ್ಥಿರತೆಯು ಜಾಗತಿಕ ನೀತಿ ರೂಪಿಸುವ ಸಂವಾದಕ್ಕೆ ಕೇಂದ್ರಬಿಂದುವಾಗಿದೆ.ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
September 11th, 10:20 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೊ ಸಂದೇಶದ ಮೂಲಕ “ಹಸಿರು ಹೈಡ್ರೋಜನ್ ಅಂತಾರಾಷ್ಟ್ರೀಯ ಸಮ್ಮೇಳನ” ಉದ್ದೇಶಿಸಿ ಭಾಷಣ ಮಾಡಿದರು.ಭಾರತ-ಪೋಲೆಂಡ್ ನಡುವೆ ಕಾರ್ಯತಂತ್ರ ಸಹಭಾಗಿತ್ವದ ಅನುಷ್ಠಾನಕ್ಕಾಗಿ ಕ್ರಿಯಾಯೋಜನೆ (2024-2028)
August 22nd, 08:22 pm
ಪೋಲೆಂಡ್ ನ ವಾರ್ಸಾದಲ್ಲಿ 2024 ಆಗಸ್ಟ್ 22ರಂದು ಭಾರತ ಮತ್ತು ಪೋಲೆಂಡ್ ಪ್ರಧಾನ ಮಂತ್ರಿಗಳು ನಡೆಸಿದ ಮಾತುಕತೆ ವೇಳೆ ಸಾಧಿಸಿದ ಒಮ್ಮತಾಭಿಪ್ರಾಯದ ಮೇಲೆ ಕಾರ್ಯತಂತ್ರ ಸಹಭಾಗಿತ್ವ ಸ್ಥಾಪನೆಯಿಂದ ಉಂಟಾದ ದ್ವಿಪಕ್ಷೀಯ ಸಹಕಾರದ ಆವೇಗ ಗುರುತಿಸಿ, ಉಭಯ ನಾಯಕರು 5 ವರ್ಷಗಳ ಕ್ರಿಯಾಯೋಜನೆ(2024-2028) ರೂಪಿಸಲು ಮತ್ತು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಕ್ರಿಯಾಯೋಜನೆಯು 5 ವರ್ಷಗಳ ದ್ವಿಪಕ್ಷೀಯ ಸಹಭಾಗಿತ್ವವನ್ನು ಈ ಕೆಳಗಿನ ವಲಯಗಳಲ್ಲಿ ಆದ್ಯತೆಯಾಗಿ ರೂಪಿಸಲು ಮಾರ್ಗದರ್ಶನ ಮಾಡುತ್ತದೆ:"ಕಾರ್ಯತಂತ್ರ ಸಹಭಾಗಿತ್ವದ ಸ್ಥಾಪನೆ" ಕುರಿತು ಭಾರತ-ಪೋಲೆಂಡ್ ಜಂಟಿ ಹೇಳಿಕೆ
August 22nd, 08:21 pm
ಪೋಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಡೊನಾಲ್ಡ್ ಟಸ್ಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ಆಗಸ್ಟ್ 21-22ರಂದು ಪೋಲೆಂಡ್‌ಗೆ ಅಧಿಕೃತ ಭೇಟಿ ನೀಡಿದರು. ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳ 70ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ಈ ಐತಿಹಾಸಿಕ ಭೇಟಿ ನೀಡಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪೋಲೆಂಡ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯ ಕನ್ನಡ ಅನುವಾದ
August 22nd, 03:00 pm
ಘನತೆವೆತ್ತ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ಅವರೇ, ಎರಡೂ ದೇಶಗಳ ಪ್ರತಿನಿಧಿಗಳೇ, ಮಾಧ್ಯಮ ಮಿತ್ರರೇ,ಜಪಾನಿನ ಸ್ಪೀಕರ್ ಮತ್ತು ಅವರ ನಿಯೋಗವನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿ
August 01st, 09:55 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಸ್ಪೀಕರ್ ಶ್ರೀ ನುಕಾಗಾ ಫುಕುಶಿರೊ ಮತ್ತು ಜಪಾನಿನ ಸಂಸತ್ತಿನ ಸದಸ್ಯರು ಹಾಗು ಜಪಾನಿನ ಪ್ರಮುಖ ಕಂಪನಿಗಳನ್ನು ಪ್ರತಿನಿಧಿಸುವ ವಾಣಿಜ್ಯ ಮುಖಂಡರು ಸೇರಿದಂತೆ ಅವರ ನಿಯೋಗವನ್ನು ಸ್ವಾಗತಿಸಿದರು. ಇವರ ಸಭೆ ದೃಢವಾದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಒತ್ತಿಹೇಳಿತು, ಜನರ ನಡುವಿನ ಸಹಕಾರವನ್ನು ಕೇಂದ್ರೀಕರಿಸಿ ಸಹಯೋಗ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿತು. ಜೊತೆಗೆ ಭಾರತ ಮತ್ತು ಜಪಾನ್ ನಡುವಿನ ಸಂಸದೀಯ ವಿನಿಮಯದ ಮಹತ್ವವನ್ನು ಪುನರುಚ್ಚರಿಸಿತು.I consider industry, and also the private sector of India, as a powerful medium to build a Viksit Bharat: PM Modi at CII Conference
July 30th, 03:44 pm
Prime Minister Narendra Modi attended the CII Post-Budget Conference in Delhi, emphasizing the government's commitment to economic reforms and inclusive growth. The PM highlighted various budget provisions aimed at fostering investment, boosting infrastructure, and supporting startups. He underscored the importance of a self-reliant India and the role of industry in achieving this vision, encouraging collaboration between the government and private sector to drive economic progress.ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು
July 30th, 01:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಮತ್ತು ಕೈಗಾರಿಕೆಗಳ ಪಾತ್ರದ ಬಗ್ಗೆ ಸರ್ಕಾರದ ರೂಪುರೇಷೆ ರೂಪಿಸುವುದು ಸಮ್ಮೇಳನದ ಉದ್ದೇಶವಾಗಿದೆ .ಕೈಗಾರಿಕೆಗಳು, ಸರ್ಕಾರ, ರಾಜತಾಂತ್ರಿಕ ಸಮುದಾಯ, ಚಿಂತಕರ ಚಾವಡಿ ಮೊದಲಾದ ಸಾವಿರಕ್ಕೂಕ್ಕೂ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ದೇಶ ಮತ್ತು ವಿದೇಶದ ವಿವಿಧ ಸಿಐಐ ಕೇಂದ್ರಗಳಿಂದ ಅನೇಕ ಜನರು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.India is the Future: PM Modi
February 26th, 08:55 pm
Prime Minister Narendra Modi addressed the News 9 Global Summit in New Delhi today. The theme of the Summit is ‘India: Poised for the Big Leap’. Addressing the gathering, the Prime Minister said TV 9’s reporting team represents the persity of India. Their multi-language news platforms made TV 9 a representative of India's vibrant democracy, the Prime Minister said. The Prime Minister threw light on the theme of the Summit - ‘India: Poised for the Big Leap’, and underlined that a big leap can be taken only when one is filled with passion and enthusiasm.ನ್ಯೂಸ್ 9 ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
February 26th, 07:50 pm
ಟಿವಿ 9 ವರದಿ ಮಾಡುವ ತಂಡವು ಭಾರತದ ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದೆ. ಅವರ ಬಹು-ಭಾಷಾ ಸುದ್ದಿ ವೇದಿಕೆಗಳು ಟಿವಿ 9 ಅನ್ನು ಭಾರತದ ರೋಮಾಂಚಕ ಪ್ರಜಾಪ್ರಭುತ್ವದ ಪ್ರತಿನಿಧಿಯನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು.There is continuous progress in bilateral trade, investment between India and Kenya: PM Modi
December 05th, 01:33 pm
Addressing the event during the visit of the President of Kenya to India, PM Modi said, Africa has always been given high priority in India's foreign policy. Over the past decade, we have strengthened our collaboration with Africa in mission mode. I am confident that President Ruto's visit will not only enhance our bilateral relations but also provide new impetus to our engagement with the entire African continent.