ಭಾಷಾ ಗೌರವ ಸಪ್ತಾಹದ ಅಂಗವಾಗಿ ಶುಭ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 03rd, 06:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾಷಾ ಗೌರವ ಸಪ್ತಾಹದ #BhashaGauravSaptah ಅಂಗವಾಗಿ ಅಸ್ಸಾಂನ ಜನತೆಗೆ ಶುಭ ಕೋರಿದ್ದಾರೆ ಮತ್ತು ಅದರ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಅವರು ಇತ್ತೀಚೆಗೆ ಅಸ್ಸಾಮಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಿರುವ ಕುರಿತು ಸಂಭ್ರಮವನ್ನು ಹಂಚಿಕೊಂಡರು. ಇದು ಆ ಪ್ರದೇಶದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗೆ ದೊರೆತ ಪ್ರಮುಖ ಮನ್ನಣೆಯಾಗಿದೆ ಎಂದು ಹೇಳಿದ್ದಾರೆ.ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರವು ಭಗವಾನ್ ಬುದ್ಧನ ಚಿಂತನೆಗಳನ್ನು ಪಾಲಿಸುವವರಲ್ಲಿ ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ: ಪ್ರಧಾನಮಂತ್ರಿ
October 24th, 10:43 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು. ಭಗವಾನ್ ಬುದ್ಧನ ಚಿಂತನೆಗಳನ್ನು ನಂಬುವವರಲ್ಲಿ ಇದು ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ಕೊಲಂಬೋದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಆಯೋಜಿಸಿದ್ದ 'ಪಾಲಿ ಒಂದು ಶಾಸ್ತ್ರೀಯ ಭಾಷೆ' ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ ವಿವಿಧ ರಾಷ್ಟ್ರಗಳ ವಿದ್ವಾಂಸರು ಮತ್ತು ಸನ್ಯಾಸಿಗಳಿಗೆ ಶ್ರೀ ಮೋದಿಯವರು ಧನ್ಯವಾದ ಅರ್ಪಿಸಿದರು.ಅಂತಾರಾಷ್ಟ್ರೀಯ ಅಭಿಧಮ್ಮ ದಿನ ಉದ್ಘಾಟಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ
October 17th, 10:05 am
ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ, ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರೆನ್ ರಿಜಿಜು ಜೀ, ಬಂದಂತ್ ರಾಹುಲ್ ಬೊಧಿ ಮಹಥೆರೋ ಜೀ, ವೆನವರಬಲ್ ಜುಂಗ್ ಚುಪ್ ಚೋಡೆನ್ ಜೀ, ಮಹಾಸಂಘದ ಎಲ್ಲಾ ಗಣ್ಯ ಸದಸ್ಯರೇ, ರಾಯಭಾರಿ ಸಮುದಾಯದ ಸದಸ್ಯರೇ,. ಬೌದ್ಧ ಚಿಂತಕರೇ, ಬೌದ್ಧ ಧರ್ಮದ ಅನುಯಾಯಿಗಳೇ, ಮಹಿಳೆಯರೇ ಮತ್ತು ಮಹನೀಯರೇ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು
October 17th, 10:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು. ಅಭಿಧಮ್ಮ ದಿನವನ್ನು ಅಭಿಧಮ್ಮನಿಗೆ ಕಲಿಸಿದ ನಂತರ ಭಗವಾನ್ ಬುದ್ಧನು ಆಕಾಶಲೋಕದಿಂದ ಇಳಿದದ್ದನ್ನು ಸ್ಮರಿಸಲಾಗುತ್ತದೆ. ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಇತ್ತೀಚೆಗೆ ಗುರುತಿಸಿರುವುದು ಈ ವರ್ಷದ ಅಭಿಧಮ್ಮ ದಿವಸ್ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ, ಏಕೆಂದರೆ ಭಗವಾನ್ ಬುದ್ಧನ ಅಭಿಧಮ್ಮದ ಬೋಧನೆಗಳು ಮೂಲತಃ ಪಾಲಿ ಭಾಷೆಯಲ್ಲಿ ಲಭ್ಯವಿದೆ.ಅಂತಾರಾಷ್ಟ್ರೀಯ ಅಭಿದಮ್ಮ ದಿವಸ್ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆಯನ್ನಾಗಿ ಗುರುತಿಸಿದ ಅಂಗವಾಗಿ ಅಕ್ಟೋಬರ್ 17 ರಂದು ಏರ್ಪಾಡಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗಿ
October 15th, 09:14 pm
ಅಂತಾರಾಷ್ಟ್ರೀಯ ಅಭಿದಮ್ಮ ದಿವಸ್ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆಯನ್ನಾಗಿ ಗುರುತಿಸಿದ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ಅಕ್ಟೋಬರ್ 17 ರಂದು ಬೆಳಗ್ಗೆ 10 ಗಂಟೆಗೆ ಆಯೋಜನೆಯಾಗಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನೆರೆದಿರುವವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.