ಡಿಸೆಂಬರ್ 11 ರಂದು ಮಹಾರಾಷ್ಟ್ರ ಮತ್ತು ಗೋವಾಕ್ಕೆ ಪ್ರಧಾನಿ ಭೇಟಿ
December 09th, 07:39 pm
ಅಂದು ಬೆಳಿಗ್ಗೆ 9:30 ರ ಸುಮಾರಿಗೆ, ಪ್ರಧಾನ ಮಂತ್ರಿ ಅವರು ನಾಗಪುರ ರೈಲು ನಿಲ್ದಾಣವನ್ನು ತಲುಪುತ್ತಾರೆ. ಅಲ್ಲಿ ಅವರು ವಂದೇ ಭಾರತ್ ಎಕ್ಸ್ಪ್ರೆಸ್ ಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಿಯವರು ಫ್ರೀಡಂ ಪಾರ್ಕ್ ಮೆಟ್ರೋ ನಿಲ್ದಾಣದಿಂದ ಖಾಪ್ರಿ ಮೆಟ್ರೋ ನಿಲ್ದಾಣಕ್ಕೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ, ಅಲ್ಲಿ ಅವರು 'ನಾಗಪುರ ಮೆಟ್ರೋ ಮೊದಲ ಹಂತ' ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಕಾರ್ಯಕ್ರಮದ ಸಮಯದಲ್ಲಿಯೇ, ಅವರು 'ನಾಗಪುರ ಮೆಟ್ರೋ ಹಂತ- II' ರ ಶಂಕುಸ್ಥಾಪನೆಯನ್ನೂ ಮಾಡಲಿದ್ದಾರೆ. ಬೆಳಗ್ಗೆ 10:45 ರ ಸುಮಾರಿಗೆ, ಪ್ರಧಾನ ಮಂತ್ರಿಯವರು ನಾಗಪುರ ಮತ್ತು ಶಿರಡಿಯನ್ನು ಸಂಪರ್ಕಿಸುವ ಸಮೃದ್ಧಿ ಮಹಾಮಾರ್ಗದ ಮೊದಲ ಹಂತವನ್ನು ಉದ್ಘಾಟಿಸುತ್ತಾರೆ ಮತ್ತು ಹೆದ್ದಾರಿಯ ಪ್ರವಾಸವನ್ನು ಕೈಗೊಳ್ಳುತ್ತಾರೆ. ಪ್ರಧಾನಮಂತ್ರಿಯವರು ಬೆಳಗ್ಗೆ 11:15 ರ ಸುಮಾರಿಗೆ ನಾಗಪುರದ ಏಮ್ಸ್ (ಎಐಐಎಂಎಸ್) ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.India has resolved to increase its strength, self-reliance in the pandemic: PM Modi
September 30th, 11:01 am
Prime Minister Modi inaugurated CIPET–Jaipur and laid the foundation stone for four new medical colleges in Rajasthan. He informed that after 2014, 23 medical colleges have been approved by the central government for Rajasthan and 7 medical colleges have already become operational.ಜೈಪುರದ ಪೆಟ್ರೋ ಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ –ಸಿಪೆಟ್ ಉದ್ಘಾಟಿಸಿ ಪ್ರಧಾನಮಂತ್ರಿ
September 30th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ–ಸಿಐಪಿಇಟಿಯನ್ನು ಉದ್ಘಾಟಿಸಿದರು. ಅಲ್ಲದೆ, ಅವರು ರಾಜಸ್ಥಾನದ ಬನ್ಸ್ವಾರಾ, ಸಿರೋಹಿ, ಹನುಮಾನ್ ಗಢ ಮತ್ತು ಡೌಸಾ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಜಸ್ಥಾನದಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜು ಮತ್ತು ಸಿಪೆಟ್ ಕೇಂದ್ರ ಆರಂಭವಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ರಾಜಸ್ಥಾನದ ಜನತೆಯನ್ನು ಅಭಿನಂದಿಸಿದರು. ಅವರು 2014ರಲ್ಲಿ ಕೇಂದ್ರ ಸರ್ಕಾರ ರಾಜಸ್ಥಾನಕ್ಕೆ 23 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿತ್ತು, ಆ ಪೈಕಿ 7 ವೈದ್ಯಕೀಯ ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದರು.ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು (ಸಿಐಪಿಇಟಿ) ಸೆಪ್ಟೆಂಬರ್ 30ರಂದು ಉದ್ಘಾಟನೆ ಮಾಡಲಿರುವ ಪ್ರಧಾನಿ
September 29th, 12:57 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರದ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆಯನ್ನು (ಸಿಐಪಿಇಟಿ) ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ರಾಜಸ್ಥಾನದ ಬನ್ಸ್ವಾರಾ, ಸಿರೋಹಿ, ಹನುಮಾನ್ಗಢ ಮತ್ತು ಡೌಸಾ ಜಿಲ್ಲೆಗಳಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳಿಗೆ 2021ರ ಸೆಪ್ಟೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.