ಮೂರು ಕೃತಕ ಬುದ್ಧಿಮತ್ತೆಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ
October 15th, 10:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಮೇಲೆ ಕೇಂದ್ರೀಕೃತವಾದ ಮೂರು ಕೃತಕ ಬುದ್ಧಿಮತ್ತೆಯ ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆಯನ್ನು ಶ್ಲಾಘಿಸಿದ್ದಾರೆ.2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ
November 17th, 04:03 pm
140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್ ಆಫ್ ಗ್ಲೋಬಲ್ ಸೌತ್) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.