ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳು ಈಗ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗುತ್ತಿವೆ: ಪ್ರಧಾನಿ ಮೋದಿ
September 20th, 08:46 pm
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ನಗರಕ್ಕಾಗಿ ಪುರಸಭೆಯ ಮೂಲಕ ಕೆಲಸ ಮಾಡುವುದರಿಂದ ಹಿಡಿದು ಉಪಪ್ರಧಾನಿಯಾಗುವವರೆಗಿನ ಪ್ರಯಾಣವನ್ನು ಎತ್ತಿ ತೋರಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.ಗುಜರಾತ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
September 20th, 10:30 am
ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಿಜೆಪಿಯ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ನಗರಕ್ಕಾಗಿ ಪುರಸಭೆಯ ಮೂಲಕ ಕೆಲಸ ಮಾಡುವುದರಿಂದ ಹಿಡಿದು ಉಪಪ್ರಧಾನಿಯಾಗುವವರೆಗಿನ ಪ್ರಯಾಣವನ್ನು ಎತ್ತಿ ತೋರಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.ಸರ್ದಾರ್ ವಲ್ಲಭಭಾಯ್ ಪಟೇಲ್ ವನ್ಯಮೃಗಗಳ ಉದ್ಯಾನ ಉದ್ಘಾಟಿಸಿದ ಪ್ರಧಾನಮಂತ್ರಿ
October 30th, 06:43 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಕೆವಾಡಿಯಾದಲ್ಲಿ ಸರ್ದಾರ್ ಪಟೇಲ್ ವನ್ಯಮೃಗಗಳ ಉದ್ಯಾನ ಮತ್ತು ಭೂಮಿಯಂತೆ ಗೋಳಾಕಾರದ ಪಂಜರ ಉದ್ಘಾಟಿಸಿದರು. ಕೆವಾಡಿಯಾ ಸಮಗ್ರ ಅಭಿವೃದ್ಧಿ ಅಡಿಯಲ್ಲಿ 17 ಯೋಜನೆಗಳ ಲೋಕಾರ್ಪಣೆ ಮಾಡಿ, 4 ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ಪಥದರ್ಶಕ ಕಾಲುವೆ, ನೂತನ ಗೋರಾ ಸೇತುವೆ, ಗರುಡೇಶ್ವರ್ ಅಣೆಕಟ್ಟು, ಸರ್ಕಾರಿ ವಸತಿಗೃಹಗಳು, ಬಸ್ ಬೇ ಟರ್ಮಿನಸ್, ಏಕತಾ ನರ್ಸರಿ, ಖಲ್ವಾನಿ ಪರಿಸರ ಪ್ರವಾಸೋದ್ಯಮ, ಬುಡಕಟ್ಟು ಹೋಂ ಸ್ಟೇ ಸೇರಿವೆ. ಜೊತೆಗೆ ಪ್ರಧಾನಿ ಏಕತಾ ಪ್ರತಿಮೆವರೆಗಿನ ಏಕತಾ ಕ್ರ್ಯೂಸ್ ಸೇವೆಗೂ ಹಸಿರು ನಿಶಾನೆ ತೋರಿದರು.