I consider industry, and also the private sector of India, as a powerful medium to build a Viksit Bharat: PM Modi at CII Conference
July 30th, 03:44 pm
Prime Minister Narendra Modi attended the CII Post-Budget Conference in Delhi, emphasizing the government's commitment to economic reforms and inclusive growth. The PM highlighted various budget provisions aimed at fostering investment, boosting infrastructure, and supporting startups. He underscored the importance of a self-reliant India and the role of industry in achieving this vision, encouraging collaboration between the government and private sector to drive economic progress.ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮಾತನಾಡಿದರು
July 30th, 01:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ಆಯೋಜಿಸಿದ್ದ “ವಿಕಸಿತ ಭಾರತದೆಡೆಗೆ ಪಯಣ: ಕೇಂದ್ರ ಬಜೆಟ್ 2024-25 ನಂತರದ ಸಮ್ಮೇಳನ” ದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅಭಿವೃದ್ಧಿ ಮತ್ತು ಕೈಗಾರಿಕೆಗಳ ಪಾತ್ರದ ಬಗ್ಗೆ ಸರ್ಕಾರದ ರೂಪುರೇಷೆ ರೂಪಿಸುವುದು ಸಮ್ಮೇಳನದ ಉದ್ದೇಶವಾಗಿದೆ .ಕೈಗಾರಿಕೆಗಳು, ಸರ್ಕಾರ, ರಾಜತಾಂತ್ರಿಕ ಸಮುದಾಯ, ಚಿಂತಕರ ಚಾವಡಿ ಮೊದಲಾದ ಸಾವಿರಕ್ಕೂಕ್ಕೂ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ದೇಶ ಮತ್ತು ವಿದೇಶದ ವಿವಿಧ ಸಿಐಐ ಕೇಂದ್ರಗಳಿಂದ ಅನೇಕ ಜನರು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.2024-25ರ ಬಜೆಟ್ ಕುರಿತು ಪ್ರಧಾನಮಂತ್ರಿಯವರ ಪ್ರತಿಕ್ರಿಯೆ
July 23rd, 02:57 pm
ಈ ಬಜೆಟ್ ಸಮಾಜದ ಪ್ರತಿಯೊಂದು ವರ್ಗಕ್ಕೂ ಅಧಿಕಾರ ನೀಡುತ್ತದೆ. ಇದು ನಮ್ಮ ಹಳ್ಳಿಗಳಲ್ಲಿ ಮತ್ತು ಬಡವರಿಗೆ ಮತ್ತು ರೈತರಿಗೆ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ಬಜೆಟ್ ಮಧ್ಯಮ ವರ್ಗದ ಸಬಲೀಕರಣವನ್ನು ಮುಂದುವರೆಸುತ್ತದೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಇದು ಮಧ್ಯಮ ವರ್ಗಕ್ಕೆ ಹೊಸ ಶಕ್ತಿಯನ್ನು ಒದಗಿಸುತ್ತದೆ ಮತ್ತು ಬುಡಕಟ್ಟು ಸಮಾಜ, ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಸಶಕ್ತಗೊಳಿಸಲು ದೃಢವಾದ ಯೋಜನೆಗಳನ್ನು ಒಳಗೊಂಡಿದೆ. ಇದರ ಜೊತೆಗೆ , ಈ ಬಜೆಟ್ ಆರ್ಥಿಕತೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ ಮತ್ತು ಸಣ್ಣ ವ್ಯಾಪಾರಿಗಳು , MSME ಗಳು ಅಥವಾ ಸಣ್ಣ ಪ್ರಮಾಣದ ಕೈಗಾರಿಕೆಗಳ ಪ್ರಗತಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಬಜೆಟ್ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುತ್ತದೆ ಮತ್ತು ಉತ್ಪಾದನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ವಿಶೇಷ ಗಮನವನ್ನು ನೀಡುವ ಮೂಲಕ ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತದೆ.2024-25ರ ಬಜೆಟ್ ಕುರಿತು ಪ್ರಧಾನ ಮಂತ್ರಿ ಹೇಳಿಕೆ
July 23rd, 01:30 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ 2024-25 ಅನ್ನು ಶ್ಲಾಘಿಸಿದರು.