ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 19th, 05:00 pm

ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಜಿ, ಉಪಮುಖ್ಯಮಂತ್ರಿ ಭಾಯಿ ದೇವೇಂದ್ರ ಫಡ್ನವೀಸ್ ಜಿ, ಅಜಿತ್ ಪವಾರ್ ಜೀ, ಶ್ರೀ ಮಂಗಲ್ ಪ್ರಭಾತ್ ಲೋಧಾ ಜಿ, ಇಲ್ಲಿರುವ ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಮಹಿಳೆಯರು ಮತ್ತು ಮಹನೀಯರೆ!

ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳಿಗೆ ಪ್ರಧಾನ ಮಂತ್ರಿ ಚಾಲನೆ

October 19th, 04:30 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದಲ್ಲಿ 511 ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳಿಗೆ ಚಾಲನೆ ನೀಡಿದರು. ಮಹಾರಾಷ್ಟ್ರದ 34 ಗ್ರಾಮಾಂತರ ಜಿಲ್ಲೆಗಳಲ್ಲಿ ಸ್ಥಾಪಿತವಾಗಿರುವ ಈ ಕೇಂದ್ರಗಳು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ವಿವಿಧ ವಲಯಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತವೆ.

True spirit of the Constitution is realized when work is done with the spirit of Sabka Vikas: PM Modi in Telangana

April 08th, 12:30 pm

PM Modi laid foundation stone and dedicated to the nation various projects worth over Rs. 11,300 crores in Hyderabad, Telangana. He highlighted that India is one of the few countries to have made record investments towards modern infrastructure. Rs 10 lakh crores have been earmarked for development of modern infrastructure in India in this year’s Budget, he said.

PM lays foundation stone and dedicates to the nation various projects worth over Rs. 11,300 crores in Hyderabad, Telangana

April 08th, 12:10 pm

PM Modi laid foundation stone and dedicated to the nation various projects worth over Rs. 11,300 crores in Hyderabad, Telangana. He highlighted that India is one of the few countries to have made record investments towards modern infrastructure. Rs 10 lakh crores have been earmarked for development of modern infrastructure in India in this year’s Budget, he said.

India is now working with new thinking and approach: PM Modi in Bhopal, Madhya Pradesh

April 01st, 03:51 pm

PM Modi flagged off the Vande Bharat Express train between Bhopal and New Delhi at Rani Kamlapati Railway Station in Bhopal, Madhya Pradesh. The PM congratulated the people of Madhya Pradesh for getting their first Vande Bharat train. He said that the train will reduce the travel time between Delhi and Bhopal and will usher in many facilities and conveniences for the professionals and youth.

PM flags off Vande Bharat Express at Rani Kamalapati Station, Bhopal, Madhya Pradesh

April 01st, 03:30 pm

PM Modi flagged off the Vande Bharat Express train between Bhopal and New Delhi at Rani Kamlapati Railway Station in Bhopal, Madhya Pradesh. The PM congratulated the people of Madhya Pradesh for getting their first Vande Bharat train. He said that the train will reduce the travel time between Delhi and Bhopal and will usher in many facilities and conveniences for the professionals and youth.

"ಮಹಿಳೆಯರ ಆರ್ಥಿಕ ಸಬಲೀಕರಣ" ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 10th, 10:23 am

2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ಅನ್ನು ರಾಷ್ಟ್ರವು ನೋಡಿರುವುದು ನಮಗೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದೆ. ಭವಿಷ್ಯದ 'ಅಮೃತಕಾಲ'ದ ದೃಷ್ಟಿಯಿಂದ ಬಜೆಟ್ ನೋಡಲಾಗಿದೆ ಮತ್ತು ಪರಿಶೀಲಿಸಲಾಗಿದೆ. ದೇಶದ ನಾಗರಿಕರು ಮುಂದಿನ 25 ವರ್ಷಗಳನ್ನು ಸ್ಫಟಿಕದ ಮೂಲಕ ಈ ಗುರಿಗಳನ್ನು ನೋಡುತ್ತಿರುವುದು ದೇಶಕ್ಕೆ ಶುಭ ಸಂಕೇತವಾಗಿದೆ.

"ಮಹಿಳೆಯರ ಆರ್ಥಿಕ ಸಬಲೀಕರಣ" ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ

March 10th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಿಳೆಯರ ಆರ್ಥಿಕ ಸಬಲೀಕರಣ ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇದು 11 ನೆಯದು.

ಹಣಕಾಸು ವಲಯದ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

March 07th, 10:14 am

ಬಜೆಟ್ ನಂತರದ ವೆಬಿನಾರ್ ಮೂಲಕ ಬಜೆಟ್ ಅನುಷ್ಠಾನದಲ್ಲಿ ಸಾಮೂಹಿಕ ಮಾಲೀಕತ್ವ ಮತ್ತು ಸಮಾನ ಸಹಭಾಗಿತ್ವದ ಬಲವಾದ ಮಾರ್ಗವನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಈ ವೆಬಿನಾರ್ ನಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳು ಬಹಳ ಮಹತ್ವದ್ದಾಗಿವೆ. ಈ ವೆಬಿನಾರ್ ನಲ್ಲಿ ನಾನು ನಿಮ್ಮೆಲ್ಲರಿಗೂ ಹಾರ್ದಿಕ ಸ್ವಾಗತ ಕೋರುತ್ತೇನೆ.

ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆ ಹೆಚ್ಚಳʼ ವಿಷಯದ ಬಗ್ಗೆ ಪ್ರಧಾನಿ ಭಾಷಣ

March 07th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ 'ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವುದು' ಎಂಬ ವಿಷಯದ ಬಗ್ಗೆ ಮಾತನಾಡಿದರು. ʻಕೇಂದ್ರ ಬಜೆಟ್-2023ʼರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯುವ ನಿಟ್ಟಿನಲ್ಲಿ ಸರಕಾರ ಆಯೋಜಿಸಿದ 12 ಬಜೆಟ್ ನಂತರದ ವೆಬಿನಾರ್‌ ಸರಣಿಯಲ್ಲಿ ಇದು ಹತ್ತನೆಯದು.

Priority is being given to the skill development of youth: PM Modi at Gujarat Rozgar Mela

March 06th, 04:35 pm

PM Modi addressed the Rozgar Mela of the Gujarat Government. Highlighting the efforts of the current government in creating new opportunities for the youth, the PM underlined the concrete strategy for Direct and Indirect Employment Generation with a focus on boosting employment through infrastructure and development projects, boosting manufacturing, and creating the right environment in the country for self-employment.

ಗುಜರಾತ್ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ

March 06th, 04:15 pm

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೋಳಿ ಹಬ್ಬವು ಹತ್ತಿರದಲ್ಲಿದೆ ಮತ್ತು ಗುಜರಾತ್ ಉದ್ಯೋಗ ಮೇಳದ ಆಯೋಜನೆಯು ನೇಮಕಾತಿ ಪತ್ರಗಳನ್ನು ಪಡೆದವರಿಗೆ ಹಬ್ಬದ ಸಂಭ್ರಮವನ್ನು ದುಪ್ಪಟ್ಟುಗೊಳಿಸುತ್ತದೆ ಎಂದು ಹೇಳಿದರು. ಗುಜರಾತಿನಲ್ಲಿ ಎರಡನೇ ಬಾರಿಗೆ ಉದ್ಯೋಗ ಮೇಳ ನಡೆಯುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನಿ, ಯುವಜನರಿಗೆ ನಿರಂತರ ಅವಕಾಶಗಳನ್ನು ಒದಗಿಸುವ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದರು. ಗರಿಷ್ಠ ಸಂಖ್ಯೆಯ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಸರ್ಕಾರ ಮತ್ತು ಎನ್‌ಡಿಎ ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳು ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವನ್ನು ಹೊರತುಪಡಿಸಿ, ಎನ್‌ಡಿಎ ಆಡಳಿತದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯೋಗ ಮೇಳಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಯುವಜನತೆ ಅಮೃತ ಕಾಲದ ಸಂಕಲ್ಪಗಳನ್ನು ಈಡೇರಿಸಲು ಸಂಪೂರ್ಣ ಸಮರ್ಪಣಾ ಭಾವದಿಂದ ಮತ್ತು ಶ್ರದ್ಧೆಯಿಂದ ಸಹಕರಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

'ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ' ಕುರಿತ ಬಜೆಟ್ ನಂತರದ ವೆಬಿನಾರ್‌ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

March 06th, 10:30 am

ಕೋವಿಡ್ ಪೂರ್ವ ಮತ್ತು ಸಾಂಕ್ರಾಮಿಕ ನಂತರದ ಕಾಲಘಟ್ಟದಲ್ಲಿ ಆರೋಗ್ಯ ಸಂರಕ್ಷಣಾ ವಲಯವನ್ನು ಗಮನಿಸಿದರೆ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಸಮೃದ್ಧ ದೇಶಗಳ ಅಭಿವೃದ್ಧಿ ಹೊಂದಿದ ಆರೋಗ್ಯ ವ್ಯವಸ್ಥೆಗಳು ಸಹ ಕುಸಿಯುತ್ತವೆ ಎಂಬುದನ್ನು ಕೊರೊನ ಜಗತ್ತಿಗೆ ತೋರಿಸಿದೆ ಮತ್ತು ಪಾಠ ಕಲಿಸಿದೆ ಎಂಬುದನ್ನು ಕಾಣಬಹುದು. ಹಾಗಾಗಿ, ಆರೋಗ್ಯ ಸಂರಕ್ಷಣೆಯ ಮೇಲೆ ಇಡೀ ವಿಶ್ವದ ಗಮನವು ಹಿಂದೆಂದಿಗಿಂತಲೂ ಹೆಚ್ಚಾಗಿದೆ, ಆದರೆ ಭಾರತದ ವಿಧಾನವು ಆರೋಗ್ಯ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ನಾವು ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೇವೆ. ಒಟ್ಟಾರೆ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ, ನಾವು ಇಡೀ ವಿಶ್ವದ ಮುಂದೆ ಒಂದು ದೃಷ್ಟಿಯನ್ನು ಮುಂದಿಟ್ಟಿದ್ದೇವೆ. ಅದೇ 'ಒಂದು ಭೂಮಿ-ಒಂದು ಆರೋಗ್ಯ'. ಮಾನವರು, ಪ್ರಾಣಿಗಳು ಅಥವಾ ಸಸ್ಯಗಳಾಗಿದ್ದರೂ ಸಕಲ ಜೀವರಾಶಿಗಳ ಸಮಗ್ರ ಆರೋಗ್ಯ ರಕ್ಷಣೆಗೆ ನಾವು ಒತ್ತು ನೀಡುತ್ತಿದ್ದೇವೆ ಎಂದರ್ಥ. ಕೊರೊನಾ ಜಾಗತಿಕ ಸಾಂಕ್ರಾಮಿಕವು ಪೂರೈಕೆ ಸರಪಳಿಯ ಪ್ರಾಮುಖ್ಯವನ್ನು ಸಹ ಒತ್ತಿಹೇಳಿದೆ. ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ, ಔಷಧಿಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳಂತಹ ಜೀವ ಉಳಿಸುವ ವಸ್ತುಗಳು ದುರದೃಷ್ಟವಶಾತ್ ಕೆಲವು ದೇಶಗಳಿಗೆ ಆಯುಧಗಳಾಗಿವೆ. ಕಳೆದ ಕೆಲವು ವರ್ಷಗಳ ಬಜೆಟ್‌ನಲ್ಲಿ ಭಾರತವು ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಿದೆ. ವಿದೇಶಗಳ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಈ ನಿಟ್ಟಿನಲ್ಲಿ ಎಲ್ಲ ಪಾಲುದಾರರು ಪ್ರಮುಖ ಪಾತ್ರವನ್ನು ವಹಿಸಬೇಕು.

ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ ಕುರಿತ ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 06th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ' ವಿಷಯದ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವದ 12 ಬಜೆಟ್ ನಂತರದ ವೆಬಿನಾರ್ ಗಳ ಸರಣಿಯಲ್ಲಿ ಇದು ಒಂಬತ್ತನೆಯದು.

'ಮಿಷನ್ ಮೋಡ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತ ಬಜೆಟ್ ನಂತರದ ವೆಬಿನಾರ್ ನಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಕನ್ನಡ ಅನುವಾದ

March 03rd, 10:21 am

ಈ ವೆಬಿನಾರ್ ನಲ್ಲಿ ಉಪಸ್ಥಿತರಿರುವ ಎಲ್ಲ ಗಣ್ಯರಿಗೆ ಸ್ವಾಗತ. ಇಂದಿನ ನವ ಭಾರತವು ಹೊಸ ಕೆಲಸದ ಸಂಸ್ಕೃತಿಯೊಂದಿಗೆ ಮುಂದುವರಿಯುತ್ತಿದೆ. ಈ ವರ್ಷದ ಬಜೆಟ್ ಸಾಕಷ್ಟು ಚಪ್ಪಾಳೆಯನ್ನು ಪಡೆದಿದೆ ಮತ್ತು ದೇಶದ ಜನರು ಇದನ್ನು ಬಹಳ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ಅದೇ ಹಳೆಯ ಕೆಲಸದ ಸಂಸ್ಕೃತಿ ಮುಂದುವರಿದಿದ್ದರೆ, ಅಂತಹ ಬಜೆಟ್ ವೆಬಿನಾರ್ ಗಳ ಬಗ್ಗೆ ಯಾರೂ ಯೋಚಿಸುತ್ತಿರಲಿಲ್ಲ. ಆದರೆ ಇಂದು ನಮ್ಮ ಸರ್ಕಾರವು ಬಜೆಟ್ ಮಂಡನೆಯ ಮೊದಲು ಮತ್ತು ನಂತರ ಪ್ರತಿಯೊಬ್ಬ ಮಧ್ಯಸ್ಥಗಾರರೊಂದಿಗೆ ವಿವರವಾಗಿ ಚರ್ಚಿಸುತ್ತದೆ ಮತ್ತು ಅವರನ್ನು ಜೊತೆಯಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತದೆ. ಈ ವೆಬಿನಾರ್ ಬಜೆಟ್ ನ ಗರಿಷ್ಠ ಫಲಿತಾಂಶವನ್ನು ಪಡೆಯಲು, ಬಜೆಟ್ ಪ್ರಸ್ತಾಪಗಳನ್ನು ನಿಗದಿತ ಸಮಯದ ಚೌಕಟ್ಟಿನೊಳಗೆ ಅನುಷ್ಠಾನಗೊಳಿಸುವಲ್ಲಿ ಮತ್ತು ಬಜೆಟ್ ಗುರಿಗಳನ್ನು ಸಾಧಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರದ ಮುಖ್ಯಸ್ಥನಾಗಿ ಕೆಲಸ ಮಾಡುವಾಗ ನನಗೆ 20 ವರ್ಷಗಳಿಗಿಂತ ಹೆಚ್ಚು ಅನುಭವವಿದೆ ಎಂದು ನಿಮಗೆ ತಿಳಿದಿದೆ. ಈ ಅನುಭವದ ಸಾರವೇನೆಂದರೆ, ಎಲ್ಲಾ ಪಾಲುದಾರರು ನೀತಿ ನಿರ್ಧಾರದಲ್ಲಿ ತೊಡಗಿಸಿಕೊಂಡಾಗ, ಅಪೇಕ್ಷಿತ ಫಲಿತಾಂಶವೂ ಕಾಲಮಿತಿಯೊಳಗೆ ಬರುತ್ತದೆ. ಕಳೆದ ಕೆಲವು ದಿನಗಳಲ್ಲಿ ನಡೆದ ವೆಬಿನಾರ್ ಗಳಲ್ಲಿ ಸಾವಿರಾರು ಜನರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಎಂದು ನಾವು ನೋಡಿದ್ದೇವೆ. ಪ್ರತಿಯೊಬ್ಬರೂ ದಿನವಿಡೀ ಚಿಂತನ-ಮಂಥನ ಮಾಡುತ್ತಿದ್ದರು ಮತ್ತು ಭವಿಷ್ಯಕ್ಕಾಗಿ ಬಹಳ ಮುಖ್ಯವಾದ ಸಲಹೆಗಳು ಬಂದವು ಎಂದು ನಾನು ಹೇಳಬಲ್ಲೆ. ಪ್ರತಿಯೊಬ್ಬರೂ ಬಜೆಟ್ ಮೇಲೆ ಕೇಂದ್ರೀಕರಿಸಿದರು ಮತ್ತು ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಉತ್ತಮ ಸಲಹೆಗಳಿವೆ. ಇಂದು ನಾವು ದೇಶದ ಪ್ರವಾಸೋದ್ಯಮ ಕ್ಷೇತ್ರದ ಪರಿವರ್ತನೆಗಾಗಿ ಈ ಬಜೆಟ್ ವೆಬಿನಾರ್ ನಡೆಸುತ್ತಿದ್ದೇವೆ.

'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಕುರಿತ ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

March 03rd, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ 'ಅಭಿಯಾನದೋಪಾದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ' ಎಂಬ ವಿಷಯದ ಕುರಿತು ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನನಕ್ಕೆ ತರಲು ಕಲ್ಪನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವ 12 ಬಜೆಟೋತ್ತರ ವೆಬಿನಾರ್ ಗಳ ಸರಣಿಯಲ್ಲಿ ಇದು ಏಳನೆಯದಾಗಿದೆ.

ಬಜೆಟ್ ನಂತರದ ವೆಬಿನಾರ್ ನಲ್ಲಿ ಯುವ ಶಕ್ತಿಯನ್ನು ಬಳಸಿಕೊಳ್ಳುವುದು - ಕೌಶಲ್ಯ ಮತ್ತು ಶಿಕ್ಷಣ ಕುರಿತ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ

February 28th, 10:05 am

'ಅಮೃತಕಾಲ ' ದ ಈ ಯುಗದಲ್ಲಿ ಕೌಶಲ್ಯ ಮತ್ತು ಶಿಕ್ಷಣವು ದೇಶಕ್ಕೆ ಎರಡು ಪ್ರಮುಖ ಸಾಧನಗಳಾಗಿವೆ. ಅಭಿವೃದ್ಧಿ ಹೊಂದಿದ ಭಾರತದ ದೂರದೃಷ್ಟಿಯೊಂದಿಗೆ ನಮ್ಮ ಯುವಕರು ದೇಶದ ಅಮೃತ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಆದ್ದರಿಂದ, ' ಅಮೃತಕಾಲ್ ' ನ ಮೊದಲ ಆಯವ್ಯಯದಲ್ಲಿ ಯುವಕರು ಮತ್ತು ಅವರ ಭವಿಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಬಜೆಟ್ ನಮ್ಮ ಶಿಕ್ಷಣ ವ್ಯವಸ್ಥೆಯು ಪ್ರಾಯೋಗಿಕ ಮತ್ತು ಉದ್ಯಮ ಆಧಾರಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಡಿಪಾಯವನ್ನು ಬಲಪಡಿಸುತ್ತಿದೆ. ಹಲವಾರು ವರ್ಷಗಳಿಂದ, ನಮ್ಮ ಶಿಕ್ಷಣ ಕ್ಷೇತ್ರವು ಕಠಿಣತೆಗೆ ಬಲಿಪಶುವಾಗಿದೆ. ನಾವು ಈ ಸನ್ನಿವೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ದೇವೆ. ನಾವು ಯುವಕರ ಯೋಗ್ಯತೆ ಮತ್ತು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯವನ್ನು ಪುನರ್ ರಚಿಸಿದೆವು. ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆ ಮತ್ತು ಕೌಶಲ್ಯ ಎರಡಕ್ಕೂ ಸಮಾನ ಒತ್ತು ನೀಡಿದೆ. ಈ ಪ್ರಯತ್ನದಲ್ಲಿ ಶಿಕ್ಷಕರಿಂದ ನಮಗೆ ಸಾಕಷ್ಟು ಬೆಂಬಲ ಸಿಕ್ಕಿದೆ ಎಂದು ನನಗೆ ಸಂತೋಷವಾಗಿದೆ. ಇದು ನಮ್ಮ ಮಕ್ಕಳನ್ನು ಗತಕಾಲದ ಹೊರೆಯಿಂದ ಮುಕ್ತಗೊಳಿಸಲು ನಮಗೆ ಹೆಚ್ಚಿನ ಧೈರ್ಯವನ್ನು ನೀಡಿತು. ಇದು ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ಕೈಗೊಳ್ಳಲು ಸರ್ಕಾರವನ್ನು ಉತ್ತೇಜಿಸಿದೆ.

'ತಂತ್ರಜ್ಞಾನವನ್ನು ಬಳಸಿಕೊಂಡು ಸುಗಮ ಜೀವನ' ಕುರಿತು ಬಜೆಟ್ ನಂತರದ ವೆಬಿನಾರ್ನಲ್ಲಿ ಪ್ರಧಾನಿ ಭಾಷಣ

February 28th, 10:00 am

ಬಜೆಟ್ ನಂತರದ ವೆಬಿನಾರ್ನಲ್ಲಿ 'ತಂತ್ರಜ್ಞಾನವನ್ನು ಬಳಸಿಕೊಂಡು ಸುಗಮ ಜೀವನ' ಎಂಬ ವಿಷಯದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ʻಕೇಂದ್ರ ಬಜೆಟ್-2023ʼರಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರಕಾರ ಆಯೋಜಿಸಿದ್ದ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇದು ಐದನೇಯದು.

‘ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಅಥವಾ ದೂರದ ಪ್ರದೇಶಗಳಿಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವುದು’ ವಿಷಯ ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

February 27th, 10:16 am

ಬಜೆಟ್ ಮಂಡನೆಯ ನಂತರ ಸಂಸತ್ತಿನಲ್ಲಿ ಆಯವ್ಯಯ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆಯಾಗಿದೆ. ಆದರೆ ಇದು ಅವಶ್ಯಕ ಮತ್ತು ಉಪಯುಕ್ತವಾಗಿದೆ. ನಮ್ಮ ಸರ್ಕಾರವು ಬಜೆಟ್ ಕುರಿತು ಚರ್ಚೆಯನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿದೆ. ಕಳೆದ ಕೆಲವು ವರ್ಷಗಳಿಂದ, ನಮ್ಮ ಸರ್ಕಾರವು ಬಜೆಟ್ ಮಂಡನೆಯ ಮೊದಲು ಮತ್ತು ನಂತರ ಎಲ್ಲಾ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ಮತ್ತು ಸಂವಾದ ಹಾಗೂ ಸಲಹೆ ಸೂಚನೆ ಸ್ವೀಕರಿಸುವ ಹೊಸಸಂಪ್ರದಾಯ ಹುಟ್ಟುಹಾಕಿದೆ. ಬಜೆಟ್ ಕಾರ್ಯಕ್ರಮಗಳ ಪ್ರಾಮಾಣಿಕ ಅನುಷ್ಠಾನ ಮತ್ತು ಕಾಲಮಿತಿಯಲ್ಲಿ ಕಾರ್ಯಕ್ರಮಗಳ ಜಾರಿ ದೃಷ್ಟಿಕೋನದಿಂದ ಇದು ಬಹಳ ಮುಖ್ಯವಾಗಿದೆ. ತೆರಿಗೆದಾರರ ಹಣದ ಪ್ರತಿ ಪೈಸೆಯ ಸಮರ್ಪಕ ಬಳಕೆಯನ್ನು ಇದು ಖಾತ್ರಿಗೊಳಿಸುತ್ತಿದೆ. ನಾನು ಕಳೆದ ಕೆಲವು ದಿನಗಳಲ್ಲಿ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಮಾತನಾಡಿದ್ದೇನೆ. ಇಂದು ನಿಮ್ಮ ನೀತಿಗಳು ಮತ್ತು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ಹಾಗೂ ದೂರದ ಪ್ರದೇಶಗಳಿಗೆ ಎಷ್ಟು ಬೇಗ ತಲುಪುತ್ತವೆ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದ ‘ಕೊನೆಯ ಮೈಲಿ ತಲುಪುವುದು’ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಇಂದು ಈ ವಿಷಯದ ಬಗ್ಗೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ನಾವು ಬಜೆಟ್‌ನ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತ ಗೊಳಿಸಬಹುದು ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಫಲಾನುಭವಿಗಳಿಗೆ ತಲುಪಿಸಬಹುದು.

ʼಕೊನೆಯ ಮೈಲಿಯನ್ನು ತಲುಪುವುದುʼ ವಿಷಯವಾಗಿ ಬಜೆಟ್‌ ಕುರಿತ ವೆಬಿನಾರ್‌ನಲ್ಲಿ ಪ್ರಧಾನ ಮಂತ್ರಿಗಳ ಭಾಷಣ

February 27th, 10:00 am

ಕೊನೆಯ ಮೈಲಿ ತಲುಪುವುದುʼʼ ಕುರಿತಂತೆ ಬಜೆಟ್‌ ವೆಬ್‌ನಾರ್‌ನಲ್ಲಿ ಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆ, ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಂಬಂಧ ಸಲಹೆ, ಹೊಸ ಚಿಂತನೆಗಳನ್ನು ಸ್ವೀಕರಿಸುವ ಸಲುವಾಗಿ ಬಜೆಟ್‌ ಮಂಡನೆ ನಂತರ ನಡೆಯುತ್ತಿರುವ 12 ಸರಣಿ ವೆಬ್‌ನಾರ್‌ ಸರಣಿಯ ಭಾಗವಾಗಿ ಇದು ನಾಲ್ಕನೇ ವೆಬಿನಾರ್‌ ಆಗಿದೆ.