ಬಿಹಾರದ ದರ್ಭಾಂಗದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ

November 13th, 11:00 am

ನಾನು ರಾಜ ಜನಕ ಮತ್ತು ಮಾತೆ ಸೀತಾ ಅವರ ಪವಿತ್ರ ಭೂಮಿಗೆ ಮತ್ತು ಮಹಾನ್ ಕವಿ ವಿದ್ಯಾಪತಿಯ ಜನ್ಮಸ್ಥಳಕ್ಕೆ ನಮಸ್ಕರಿಸುತ್ತೇನೆ. ಈ ಶ್ರೀಮಂತ ಮತ್ತು ಭವ್ಯವಾದ ಭೂಮಿಯ ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು!

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದಲ್ಲಿ 12,100 ಕೋಟಿ ರೂಪಾಯಿ ಮೊತ್ತದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ಶಂಕುಸ್ಥಾಪನೆ ನೆರವೇರಿಸಿದರು ರಾಷ್ಟ್ರಕ್ಕೆ ಸಮರ್ಪಿಸಿದರು

November 13th, 10:45 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ದರ್ಭಾಂಗದಲ್ಲಿ ಸುಮಾರು 12,100 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಅಭಿವೃದ್ಧಿ ಯೋಜನೆಗಳು ಆರೋಗ್ಯ, ರೈಲು, ರಸ್ತೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳನ್ನು ಒಳಗೊಂಡಿವೆ.

ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರವು ಭಗವಾನ್ ಬುದ್ಧನ ಚಿಂತನೆಗಳನ್ನು ಪಾಲಿಸುವವರಲ್ಲಿ ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ: ಪ್ರಧಾನಮಂತ್ರಿ

October 24th, 10:43 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವ ಭಾರತ ಸರ್ಕಾರದ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು. ಭಗವಾನ್ ಬುದ್ಧನ ಚಿಂತನೆಗಳನ್ನು ನಂಬುವವರಲ್ಲಿ ಇದು ಸಂತೋಷದ ಮನೋಭಾವವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ಕೊಲಂಬೋದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಆಯೋಜಿಸಿದ್ದ 'ಪಾಲಿ ಒಂದು ಶಾಸ್ತ್ರೀಯ ಭಾಷೆ' ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ ವಿವಿಧ ರಾಷ್ಟ್ರಗಳ ವಿದ್ವಾಂಸರು ಮತ್ತು ಸನ್ಯಾಸಿಗಳಿಗೆ ಶ್ರೀ ಮೋದಿಯವರು ಧನ್ಯವಾದ ಅರ್ಪಿಸಿದರು.

ಅಂತಾರಾಷ್ಟ್ರೀಯ ಅಭಿಧಮ್ಮ ದಿನ ಉದ್ಘಾಟಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

October 17th, 10:05 am

ಸಂಸ್ಕೃತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೀ, ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರೆನ್ ರಿಜಿಜು ಜೀ, ಬಂದಂತ್ ರಾಹುಲ್ ಬೊಧಿ ಮಹಥೆರೋ ಜೀ, ವೆನವರಬಲ್ ಜುಂಗ್ ಚುಪ್ ಚೋಡೆನ್ ಜೀ, ಮಹಾಸಂಘದ ಎಲ್ಲಾ ಗಣ್ಯ ಸದಸ್ಯರೇ, ರಾಯಭಾರಿ ಸಮುದಾಯದ ಸದಸ್ಯರೇ,. ಬೌದ್ಧ ಚಿಂತಕರೇ, ಬೌದ್ಧ ಧರ್ಮದ ಅನುಯಾಯಿಗಳೇ, ಮಹಿಳೆಯರೇ ಮತ್ತು ಮಹನೀಯರೇ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆ ಎಂದು ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು

October 17th, 10:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಅಭಿಧಮ್ಮ ದಿವಸ್ ಆಚರಣೆ ಮತ್ತು ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದರು. ಅಭಿಧಮ್ಮ ದಿನವನ್ನು ಅಭಿಧಮ್ಮನಿಗೆ ಕಲಿಸಿದ ನಂತರ ಭಗವಾನ್ ಬುದ್ಧನು ಆಕಾಶಲೋಕದಿಂದ ಇಳಿದದ್ದನ್ನು ಸ್ಮರಿಸಲಾಗುತ್ತದೆ. ಪಾಲಿಯನ್ನು ಶಾಸ್ತ್ರೀಯ ಭಾಷೆಯಾಗಿ ಇತ್ತೀಚೆಗೆ ಗುರುತಿಸಿರುವುದು ಈ ವರ್ಷದ ಅಭಿಧಮ್ಮ ದಿವಸ್ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ, ಏಕೆಂದರೆ ಭಗವಾನ್ ಬುದ್ಧನ ಅಭಿಧಮ್ಮದ ಬೋಧನೆಗಳು ಮೂಲತಃ ಪಾಲಿ ಭಾಷೆಯಲ್ಲಿ ಲಭ್ಯವಿದೆ.

ಲಾವೊ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಮಧ್ಯಂತರ ಭಾಷಣದ ಕನ್ನಡ ಅವತರಣಿಕೆ

October 11th, 08:15 am

ಭಾರತವು ಆಸಿಯಾನ್‌ ನ ಏಕತೆ ಮತ್ತು ಕೇಂದ್ರೀಕರಣವನ್ನು ಸತತವಾಗಿ ಬೆಂಬಲಿಸುತ್ತಿದೆ. ಭಾರತದ ಇಂಡೋ-ಪೆಸಿಫಿಕ್ ದೃಷ್ಟಿಕೋನ ಮತ್ತು ಕ್ವಾಡ್ ಸಹಕಾರಕ್ಕೆ ಆಸಿಯಾನ್ ಪ್ರಮುಖ ಆಧಾರವಾಗಿದೆ. ಭಾರತದ ಇಂಡೋ-ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್ ಮತ್ತು ಇಂಡೋ-ಪೆಸಿಫಿಕ್ ಮೇಲಿನ ಆಸಿಯಾನ್ ಔಟ್‌ಲುಕ್ ನಡುವೆ ಪ್ರಮುಖ ಸಾಮ್ಯತೆಗಳಿವೆ. ಸಂಪೂರ್ಣ ಪ್ರದೇಶದ ಸಮಗ್ರ ಶಾಂತಿ ಮತ್ತು ಪ್ರಗತಿಗೆ ಮುಕ್ತ, ತೆರೆದ, ಅಂತರ್ಗತ, ಸಮೃದ್ಧ ಮತ್ತು ನಿಯಮಗಳ-ಆಧಾರಿತ ಇಂಡೋ-ಪೆಸಿಫಿಕ್ ನಿರ್ಣಾಯಕಗಳು ಅಗತ್ಯವಾಗಿದೆ.

19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಗವಹಿಸುವಿಕೆ

October 11th, 08:10 am

ಪ್ರಧಾನಮಂತ್ರಿ ಅವರು 2024ರ ಅಕ್ಟೋಬರ್ 11ರಂದು ಲಾವೋ ಪಿಡಿಆರ್ ನ ವಿಯೆಂಟಿಯಾನ್ ನಲ್ಲಿ ನಡೆದ 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ (ಇಎಎಸ್) ಭಾಗವಹಿಸಿದ್ದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

June 30th, 11:00 am

'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.

ಭಗವಾನ್ ಬುದ್ಧನ ಆದರ್ಶಗಳಿಗೆ ಪ್ರಧಾನಿ ಮೋದಿ ಶ್ಲಾಘನೆ

March 05th, 09:47 am

ಫೆಬ್ರವರಿ 23 ರಿಂದ ಮಾರ್ಚ್ 3, 2024 ರವರೆಗೆ ಬ್ಯಾಂಕಾಕ್‌ನಲ್ಲಿ ಭಗವಾನ್ ಬುದ್ಧ ಮತ್ತು ಅವರ ಶಿಷ್ಯರಾದ ಅರಹಂತ ಸಾರಿಪುತ್ತ ಮತ್ತು ಅರಹಂತ್ ಮಹಾ ಮೊಗ್ಗಲ್ಲಾನ ಅವರ ಪವಿತ್ರ ಸ್ಮಾರಕಗಳಿಗೆ ಥೈಲ್ಯಾಂಡ್‌ನ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸಿದ್ದು, ಭಗವಾನ್ ಬುದ್ಧನ ಆದರ್ಶಗಳನ್ನು ಪಾಲಿಸುತ್ತಿರುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಜಿ20 ಸಂಸ್ಕೃತಿ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ

August 26th, 10:15 am

ಕಾಶಿ ಎಂದೂ ಕರೆಯಲ್ಪಡುವ ವಾರಣಾಸಿಗೆ ಸುಸ್ವಾಗತ. ನನ್ನ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ನೀವೆಲ್ಲರೂ ಭೇಟಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ಕಾಶಿ ಕೇವಲ ವಿಶ್ವದ ಅತ್ಯಂತ ಹಳೆಯ ಜೀವಂತ ನಗರವಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸಾರನಾಥ ಇದೆ. ಕಾಶಿಯನ್ನು सुज्ञान, धर्म, और सत्यराशि'’ (ಸುಜ್ಞಾನ್, ಧರ್ಮ, ಔರ್ ಸತ್ಯರಾಶಿ) ಎಂದರೆ, ಜ್ಞಾನ, ಕರ್ತವ್ಯ ಮತ್ತು ಸತ್ಯದ ನಿಧಿ ನಗರ ಎಂದು ಕೂಡಾ ಹೇಳಲಾಗುತ್ತದೆ. ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ. ಗಂಗಾ ಆರತಿಯನ್ನು ವೀಕ್ಷಿಸಲು, ಸಾರನಾಥಕ್ಕೆ ಭೇಟಿ ನೀಡಲು ಮತ್ತು ಕಾಶಿಯ ಖಾದ್ಯಭಕ್ಷ್ಯಗಳ ಸವಿರುಚಿ ಆಸ್ವಾದನೆ ಮಾಡಲು ನಿಮ್ಮ ಕಾರ್ಯಕ್ರಮಗಳ ನಡುವೆ ಸ್ವಲ್ಪ ಸಮಯವನ್ನು ಇಟ್ಟುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ.

ʻಜಿ-20 ಸಂಸ್ಕೃತಿ ಸಚಿವರ ಸಭೆʼಯನ್ನು ಉದ್ದೇಶಿಸಿ ಪ್ರಧಾನಿ ಭಾಷಣ

August 26th, 09:47 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ʻಜಿ 20 ಸಂಸ್ಕೃತಿ ಸಚಿವರ ಸಭೆʼಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಷಣ ಮಾಡಿದರು.

ತಮ್ಮ ಭಾಷಣಗಳಲ್ಲಿ ಬುದ್ಧನ ಸಂದೇಶಗಳನ್ನು ಉಲ್ಲೇಖಿಸಿದ ಪಿಐಬಿ ಕೈಪಿಡಿಯನ್ನು ಹಂಚಿಕೊಂಡ ಪ್ರಧಾನಿ

April 19th, 08:48 pm

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಜಾಗತಿಕ ಬೌದ್ಧ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತವು ಪ್ರಜಾಪ್ರಭುತ್ವದ ತಾಯಿ: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

January 29th, 11:30 am

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ. ಇದು 2023 ನೇ ಮೊದಲ ಮನದ ಮಾತು ಜೊತೆಗೆ ಈ ಕಾರ್ಯಕ್ರಮದ 97 ನೇ ಕಂತು ಇದಾಗಿದೆ. ನಿಮ್ಮೆಲ್ಲರೊಂದಿಗೆ ಮತ್ತೊಮ್ಮೆ ಮಾತನಾಡಿ ನನಗೆ ಬಹಳ ಸಂತೋಷವೆನಿಸುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳು ಬಹಳಷ್ಟು ಕಾರ್ಯಕ್ರಮಗಳಿಂದ ತುಂಬಿ ತುಳುಕುತ್ತದೆ. ಈ ತಿಂಗಳಿನಲ್ಲಿ ಜನವರಿ 14 ರಂದು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ದೇಶಾದ್ಯಂತ ಹಬ್ಬಗಳ ಉತ್ಸಾಹವಿರುತ್ತದೆ. ಇದರ ನಂತರ ದೇಶ ತನ್ನ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಈ ವರ್ಷವೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಹಳಷ್ಟು ಅಂಶಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮೂಡಿಬರುತ್ತಿದೆ. ಜೈಸಲ್ಮೇರ್ ನಿಂದ ಪುಲ್ಕಿತ್ ಅವರು ನನಗೆ ಹೀಗೆ ಬರೆದಿದ್ದಾರೆ - ಜನವರಿ 26 ರ ಕವಾಯತಿನ ಸಂದರ್ಭದಲ್ಲಿ ಕಾರ್ಮಿಕರು ಕರ್ತವ್ಯ ಪಥವನ್ನು ನಿರ್ಮಿಸುತ್ತಿರುವುದನ್ನು ಕಂಡು ಬಹಳ ಸಂತೋಷವಾಯಿತು. ಕಾನ್ಪುರದಿಂದ ಜಯಾ ಅವರು ಮೆರವಣಿಗೆಯಲ್ಲಿ ಭಾರತೀಯ ಸಂಸ್ಕೃತಿಯ ವಿವಿಧ ಅಂಶಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳನ್ನು ಕಂಡು ಆನಂದಿಸಿರುವುದಾಗಿ ಬರೆದಿದ್ದಾರೆ. ಈ ಪರೇಡ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ ಸಿಆರ್‌ಪಿಎಫ್‌ನ ಮಹಿಳಾ ತುಕಡಿ ಕೂಡ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

ಆಷಾಢ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಗವಾನ್ ಬುದ್ಧನ ಉದಾತ್ತ ಬೋಧನೆಗಳನ್ನು ಸ್ಮರಿಸಿದ ಪ್ರಧಾನಿ

July 13th, 09:34 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಷಾಢ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣ

June 05th, 09:46 pm

ಪ್ರಪಂಚದಾದ್ಯಂತದ ರೋಟರಿಯನ್ನರ ದೊಡ್ಡ ಕುಟುಂಬದವರೇ, ಆತ್ಮೀಯ ಸ್ನೇಹಿತರೇ, ನಮಸ್ತೆ! ರೋಟರಿ ಅಂತರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ, ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. ಆದರೂ, ನೀವು ಕೇವಲ ಕೆಲಸಗಳನ್ನು ಮಾಡಲು ನಿಮ್ಮನ್ನು ಸೀಮಿತಗೊಳಿಸಿಲ್ಲ. ನಮ್ಮ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಮ್ಮ ಬಯಕೆಯು ನಿಮ್ಮೆಲ್ಲರನ್ನು ಈ ವೇದಿಕೆಯಲ್ಲಿ ಒಟ್ಟಿಗೆ ತಂದಿದೆ. ಇದು ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣವಾಗಿದೆ.

ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿಯವರ ಭಾಷಣ

June 05th, 09:45 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಡಿಯೋ ಸಂದೇಶದ ಮೂಲಕ ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ರೋಟರಿಯನ್ನರನ್ನು ‘ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣ’ ಎಂದು ಕರೆದ ಪ್ರಧಾನಮಂತ್ರಿಯವರು ”ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. ಎಂದು ಹೇಳಿದರು.

ಜಪಾನ್‌ನ ಟೋಕಿಯೊದಲ್ಲಿ ಅನಿವಾಸಿ ಭಾರತೀಯ ಸಮುದಾಯ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

May 23rd, 08:19 pm

ನಾನು ಪ್ರತಿ ಬಾರಿ ಜಪಾನ್‌ಗೆ ಭೇಟಿ ನೀಡಿದಾಗಲೂ, ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ಸಮಯದೊಂದಿಗೆ ಬೆಳೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಅನಿವಾಸಿ ಭಆರತೀಯರು ಇದ್ದಾರೆ. ಜಪಾನ್‌ ಭಾಷೆ, ಅದರ ಉಡುಗೆ ತೊಡುಗೆ, ಸಂಸ್ಕೃತಿ, ಆಹಾರವು ಒಂದು ರೀತಿಯಲ್ಲಿ ನಿಮ್ಮ ಜೀವನದ ಒಂದು ಭಾಗವಾಗಿದೆ. ಅದು ಜೀವನ ಭಾಗವಾಗಲು ಒಂದು ಕಾರಣವೆಂದರೆ ಭಾರತೀಯ ಸಮುದಾಯದ ಸಂಸ್ಕೃತಿಯು ಯಾವಾಗಲೂ ಅಂತರ್ಗತವಾಗಿರುತ್ತದೆ. ಆದರೆ ಅದೇ ಸಮಯದಲ್ಲಿ, ಜಪಾನ್ ತನ್ನ ಸಂಪ್ರದಾಯ, ಅದರ ಮೌಲ್ಯಗಳು, ಈ ಭೂಮಿಯ ಮೇಲಿನ ತನ್ನ ಜೀವನದ ಬಗ್ಗೆ ಹೊಂದಿರುವ ಬದ್ಧತೆ ಬಹಳ ಆಳವಾದದ್ದು. ಮತ್ತೆ ಈಗ ಎರಡೂ ರಾಷ್ಟ್ರಗಳು ಭೇಟಿಯಾಗಿವೆ, ಹಾಗಾಗಿ ಆತ್ಮೀಯತೆಯ ಭಾವನೆ ಬರುವುದು ಸಹಜ.

ಜಪಾನ್ ನಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ

May 23rd, 04:15 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 23ರಂದು ಜಪಾನ್‌ನಲ್ಲಿನ 700 ಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಸಂವಾದ ನಡೆಸಿದರು.

Purvanchal region will become a medical hub of Northern India: PM Modi

October 25th, 10:31 am

Prime Minister Shri Narendra Modi inaugurated 9 Medical Colleges in Siddharth Nagar, UP. These nine medical colleges are in the districts of Siddharthnagar, Etah, Hardoi, Pratapgarh, Fatehpur, Deoria, Ghazipur, Mirzapur and Jaunpur. Governor and Chief Minister of Uttar Pradesh, Union Minister for Health and Family Welfare were also present on the occasion.

ಉತ್ತರ ಪ್ರದೇಶ ಸಿದ್ಧಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

October 25th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿಂದು 9 ಹೊಸ ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಈ 9 ವೈದ್ಯಕೀಯ ಕಾಲೇಜುಗಳು ಸಿದ್ದಾರ್ಥನಗರ, ಇಟಾ, ಹರ್ದೋಯ್, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಘಾಜಿಪುರ, ಮಿರ್ಜಾಪುರ ಮತ್ತು ಜೌನಪುರ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. ಉತ್ತರ ಪ್ರದೇಶದ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.