14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ.
June 24th, 09:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 23 ಮತ್ತು 24 ಜೂನ್ 2022 ರಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಆಗಿ ನಡೆಸಲಾದ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಮುನ್ನಡೆಸಿದರು. ಜೂನ್ 23 ರಂದು ನಡೆದ ಶೃಂಗಸಭೆಯಲ್ಲಿ ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೋಲ್ಸನಾರೊ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಸಹ ಭಾಗವಹಿಸಿದ್ದರು. ಜಾಗತಿಕ ಅಭಿವೃದ್ಧಿ, ಶೃಂಗಸಭೆಯ ಇತರ ಕಾರ್ಯಕ್ರಮದ ವಿಭಾಗದಲ್ಲಿ ಉನ್ನತ ಮಟ್ಟದ ಸಂವಾದವನ್ನು ಜೂನ್ 24 ರಂದು ನಡೆಸಲಾಯಿತು. .13 ನೇ ಬ್ರಿಕ್ಸ್ ಶೃಂಗಸಭೆಗೆ ಪ್ರಧಾನ ಮಂತ್ರಿ ಅಧ್ಯಕ್ಷತೆ ವಹಿಸಿದರು
September 09th, 09:21 pm
ಬ್ರಿಕ್ಸ್ ಶೃಂಗಸಭೆಯಲ್ಲಿ, ಮುಂದಿನ 15 ವರ್ಷಗಳಲ್ಲಿ ಬ್ರಿಕ್ಸ್ ಇನ್ನೂ ಹೆಚ್ಚಿನ ಫಲಿತಾಂಶ ಆಧಾರಿತವಾಗಿದೆಯೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಭಾರತವು ತನ್ನ ಅಧ್ಯಕ್ಷತೆಯ ಅವಧಿಗೆ ಆಯ್ಕೆ ಮಾಡಿದ ವಿಷಯವು ನಿಖರವಾಗಿ ಈ ಆದ್ಯತೆಯನ್ನು ತೋರಿಸುತ್ತದೆ - 'ಬ್ರಿಕ್ಸ್@15: ಇಂಟ್ರಾ ಬ್ರಿಕ್ಸ್ ಸಹಕಾರ ನಿರಂತರತೆ, ಬಲವರ್ಧನೆ ಮತ್ತು ಒಮ್ಮತಕ್ಕಾಗಿ. ಈ ನಾಲ್ಕು ಸಿಗಳು ಒಂದು ರೀತಿಯಲ್ಲಿ ನಮ್ಮ ಬ್ರಿಕ್ಸ್ ಪಾಲುದಾರಿಕೆಯ ಮೂಲಭೂತ ತತ್ವಗಳಾಗಿವೆ.13 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಆರಂಭಿಕ ಭಾಷಣ
September 09th, 05:43 pm
ನಾನು ನಿಮ್ಮೆಲ್ಲರನ್ನೂ ಬ್ರಿಕ್ಸ್ ಸಮಾವೇಶಕ್ಕೆ ಸ್ವಾಗತಿಸುತ್ತಿದ್ದೇನೆ. 15 ನೇ ಬ್ರಿಕ್ಸ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಶೃಂಗ ಸಭೆಯ ಅಧ್ಯಕ್ಷತೆ ವಹಿಸಿರುವುದು ನಮಗೆ ಮತ್ತು ಭಾರತಕ್ಕೆ ತುಂಬಾ ಸಂತೋಷದ ವಿಷಯವಾಗಿದೆ. ಇಂದಿನ ಶೃಂಗಸಭೆಗೆ ನಮ್ಮಲ್ಲಿ ವಿಸ್ತಾರವಾದ ಕಾರ್ಯಸೂಚಿಯಿದೆ. ನೀವು ಒಪ್ಪಿದರೆ ಈ ಕಾರ್ಯಸೂಚಿಯನ್ನು ನಾವು ಅಳವಡಿಸಿಕೊಳ್ಳಬಹುದು. ಧನ್ಯವಾದಗಳು, ಈಗ ನಾವು ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದೇವೆ.13ನೇ ಬ್ರಿಕ್ಸ್ ಶೃಂಗಸಭೆ
September 07th, 09:11 am
ಭಾರತವು 2021ರ ಬ್ರಿಕ್ಸ್ ದೇಶಗಳ ಸಮಾವೇಶದ ಅಧ್ಯಕ್ಷತೆ ವಹಿಸಿರುವ ಭಾಗವಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 9ರಂದು 13ನೇ ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.