ಶಸ್ತ್ರಚಿಕಿತ್ಸೆಯ ನಂತರ ಬ್ರೆಜಿಲ್ ಅಧ್ಯಕ್ಷರು ಉತ್ತಮ ಆರೋಗ್ಯವನ್ನು ಹೊಂದಿ ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿಯವರಿಂದ ಹಾರೈಕೆ

December 12th, 09:50 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬ್ರೆಜಿಲ್ ಅಧ್ಯಕ್ಷರಾದ ಲುಲಾ ಡಾ ಸಿಲ್ವಾ ಅವರು ಶಸ್ತ್ರಚಿಕಿತ್ಸೆಯ ನಂತರ ಉತ್ತಮ ಆರೋಗ್ಯವನ್ನು ಹೊಂದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

2ನೇ ಭಾರತ-ಕ್ಯಾರಿಕಾಮ್ (ಸಿ ಎ ಆರ್ ಐ ಸಿ ಒ ಎಂ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣಗಳು

November 21st, 02:21 am

ನೀವೆಲ್ಲರೂ ನೀಡಿದ ಅಮೂಲ್ಯ ಸಲಹೆಗಳು ಮತ್ತು ಸಕಾರಾತ್ಮಕ ಆಲೋಚನೆಗಳನ್ನು ನಾನು ಸ್ವಾಗತಿಸುತ್ತೇನೆ. ಭಾರತದ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ, ನನ್ನ ತಂಡವು ನಿಮ್ಮೊಂದಿಗೆ ಎಲ್ಲಾ ವಿವರಗಳನ್ನು ಹಂಚಿಕೊಳ್ಳುತ್ತದೆ ಮತ್ತು ನಾವು ಎಲ್ಲಾ ವಿಷಯಗಳ ಬಗ್ಗೆ ಕಾಲಮಿತಿಯೊಳಗೆ ಮುಂದುವರಿಯುತ್ತೇವೆ.

ಚಿಲಿ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 20th, 08:36 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವೆಂಬರ್ 19ರಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆದ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಚಿಲಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಗೇಬ್ರಿಯಲ್ ಬೋರಿಕ್ ಫಾಂಟ್ ಅವರನ್ನು ಭೇಟಿಯಾದರು. ಇದು ಅವರ ಮೊದಲ ಭೇಟಿಯಾಗಿತ್ತು.

ಪ್ರಧಾನಮಂತ್ರಿ ಅವರಿಂದ ಅರ್ಜೆಂಟೀನಾ ಅಧ್ಯಕ್ಷರ ಭೇಟಿ

November 20th, 08:09 pm

ಇದು ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆಯಾಗಿತ್ತು. ಐತಿಹಾಸಿಕ ಮೂರನೇ ಅವಧಿಯ ಅಧಿಕಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧ್ಯಕ್ಷ ಮಿಲೀ ಅವರು ಅಭಿನಂದಿಸಿದರು. ಪ್ರಧಾನಮಂತ್ರಿ ಸಹ ಅಧ್ಯಕ್ಷ ಮೈಲಿ ಅವರು ಅಧಿಕಾರ ವಹಿಸಿಕೊಂಡಿರುವುದಕ್ಕೆ ಶುಭ ಕೋರಿದರು.

ಪ್ರಧಾನಮಂತ್ರಿ ಅವರಿಂದ ಬ್ರೆಜಿಲ್ ಅಧ್ಯಕ್ಷರ ಭೇಟಿ

November 20th, 08:05 pm

ರಿಯೊ ಡಿ ಜನೈರೊದಲ್ಲಿ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷರಾದ ಶ್ರೀ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರನ್ನು ನವೆಂಬರ್ 19 ರಂದು ಭೇಟಿಯಾದರು. ಅಧ್ಯಕ್ಷ ಲುಲಾ ಅವರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿಗಳು ಧನ್ಯವಾದ ಅರ್ಪಿಸಿ ಬ್ರೆಜಿಲ್ನ ಜಿ-20 ಮತ್ತು ಐ ಬಿ ಎಸ್‌ ಎ ಅಧ್ಯಕ್ಷತೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದರು. ಬಡತನ ಮತ್ತು ಹಸಿವಿನ ವಿರುದ್ಧ ಜಾಗತಿಕ ಒಕ್ಕೂಟವನ್ನು ಸ್ಥಾಪಿಸುವ ಬ್ರೆಜಿಲಿಯನ್ ಉಪಕ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದಕ್ಕೆ ಭಾರತದ ದೃಢ ಬೆಂಬಲವನ್ನು ತಿಳಿಸಿದರು. ಜಿ 20 ತ್ರಿ ಸದಸ್ಯ ರಾಷ್ಟ್ರವಾಗಿ, ಜಾಗತಿಕ ದಕ್ಷಿಣದ ಒಳಿತಿಗೆ ಆದ್ಯತೆ ನೀಡಿರುವ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆಡಳಿತ ಸುಧಾರಣೆಯ ಮೇಲೆ ಕೇಂದ್ರೀಕರಿಸಿದ ಬ್ರೆಜಿಲ್ ನ ಜಿ 20 ಕಾರ್ಯಸೂಚಿಗೆ ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಮುಂದಿನ ವರ್ಷ ಬ್ರಿಕ್ಸ್ ಮತ್ತು ಸಿಒಪಿ 30ರ ಬ್ರೆಜಿಲ್ ನ ನಾಯಕತ್ವಕ್ಕಾಗಿ ಅವರು ಶುಭ ಕೋರಿದರು ಮತ್ತು ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಪ್ರಧಾನಮಂತ್ರಿಯವರಿಂದ ಜೋನಾಸ್ ಮಾಸೆಟ್ಟಿ ಮತ್ತು ಅವರ ತಂಡದ ಭೇಟಿ; ವೇದಾಂತ ಮತ್ತು ಗೀತೆಯ ಮೇಲಿನ ಅವರ ಒಲವಿಗೆ ಮೆಚ್ಚುಗೆ

November 20th, 07:54 am

ಜೋನಾಸ್ ಮಾಸೆಟ್ಟಿ ಅವರು ವೇದಾಂತ ಮತ್ತು ಗೀತೆಯ ಬಗ್ಗೆ ಹೊಂದಿರುವ ಅಪಾರ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ಹೇಗೆ ಪ್ರಭಾವ ಬೀರುತ್ತಿದೆ ಎಂಬುದು ಶ್ಲಾಘನೀಯ ಎಂದು ಹೇಳಿದ್ದಾರೆ. ಸಂಸ್ಕೃತದಲ್ಲಿ ರಾಮಾಯಣದ ಪ್ರದರ್ಶನವನ್ನು ವೀಕ್ಷಿಸಿದ ನಂತರ ಜೋನಾಸ್ ಮಾಸೆಟ್ಟಿ ಮತ್ತು ತಂಡವನ್ನು ಪ್ರಧಾನಮಂತ್ರಿಯವರು ಭೇಟಿಯಾದರು.

ಡಿಜಿಟಲ್ ಮೂಲಸೌಕರ್ಯ AI ಮತ್ತು ಆಡಳಿತಕ್ಕಾಗಿ ದತ್ತಾಂಶದ ಕುರಿತು ಜಂಟಿ G20 ಘೋಷಣೆ

November 20th, 07:52 am

G20 ಜಂಟಿ ಘೋಷಣೆಯು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸುವಲ್ಲಿ ಅಂತರ್ಗತ ಡಿಜಿಟಲ್ ರೂಪಾಂತರದ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ. ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI), AI, ಮತ್ತು ಸಮಾನ ಡೇಟಾ ಬಳಕೆಯನ್ನು ನಿಯಂತ್ರಿಸುವುದು ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಆರೋಗ್ಯ ಮತ್ತು ಶಿಕ್ಷಣದ ಫಲಿತಾಂಶಗಳನ್ನು ಸುಧಾರಿಸುತ್ತದೆ. ಈ ತಂತ್ರಜ್ಞಾನಗಳು ಗೌಪ್ಯತೆಯನ್ನು ಗೌರವಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಜಾಗತಿಕವಾಗಿ ವೈವಿಧ್ಯಮಯ ಸಮಾಜಗಳಿಗೆ ಪ್ರಯೋಜನವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯೋಚಿತ ಆಡಳಿತ, ಪಾರದರ್ಶಕತೆ ಮತ್ತು ನಂಬಿಕೆ ಅತ್ಯಗತ್ಯ.

ಅಂತರ್ಗತ ಬೆಳವಣಿಗೆಯನ್ನು ಸಾಧಿಸಲು ಮತ್ತು ಜಾಗತಿಕವಾಗಿ ಜೀವನವನ್ನು ಪರಿವರ್ತಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ ಮತ್ತು ಆಡಳಿತ ದತ್ತಾಂಶಕ್ಕೆ ಒತ್ತು ನೀಡುವುದು ಪ್ರಮುಖವಾಗಿದೆ: ಪ್ರಧಾನಮಂತ್ರಿ

November 20th, 05:04 am

ಅಂತರ್ಗತ ಬೆಳವಣಿಗೆಯನ್ನು ಸಾಧಿಸಲು ಮತ್ತು ಜಾಗತಿಕವಾಗಿ ಜೀವನವನ್ನು ಪರಿವರ್ತಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ ಮತ್ತು ಆಡಳಿತ ಡೇಟಾ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಒತ್ತಿ ಹೇಳಿದರು.

ತಂತ್ರಜ್ಞಾನವನ್ನು ಸಂಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ: ಪ್ರಧಾನಮಂತ್ರಿ

November 20th, 05:02 am

ಆರೋಗ್ಯಕರ ಪ್ರಪಂಚವು ಉತ್ತಮವಾಗಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತಂತ್ರಜ್ಞಾನವನ್ನು ಸಂಯೋಜಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ಭಾರತವು ಜಾಗತಿಕ ಪ್ರಯತ್ನಗಳನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಸುಸ್ಥಿರ ಅಭಿವೃದ್ಧಿ ಗುರಿ(SDGs)ಯತ್ತ ಪ್ರಗತಿ ಹೆಚ್ಚಿಸಲು ಮತ್ತು ಜಾಗತಿಕವಾಗಿ ಜೀವನ ಮಟ್ಟ ಸಶಕ್ತಗೊಳಿಸಲು ತಂತ್ರಜ್ಞಾನ ಅಪಾರ ಸಾಮರ್ಥ್ಯ ಹೊಂದಿದೆ: ಪ್ರಧಾನಮಂತ್ರಿ

November 20th, 05:00 am

ಸುಸ್ಥಿರ ಅಭಿವೃದ್ಧಿ ಗುರಿಯತ್ತ(SDGs) ಪ್ರಗತಿ ಹೆಚ್ಚಿಸಲು ಮತ್ತು ಜಾಗತಿಕವಾಗಿ ಜೀವನ ಮಟ್ಟವನ್ನು ಸಶಕ್ತಗೊಳಿಸಲು ತಂತ್ರಜ್ಞಾನವು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತ ಜಿ 20 ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

November 20th, 01:40 am

ಇಂದಿನ ಅಧಿವೇಶನದ ವಿಷಯವು ಬಹಳ ಪ್ರಸ್ತುತವಾಗಿದೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ. ನವದೆಹಲಿ ಜಿ -20 ಶೃಂಗಸಭೆಯಲ್ಲಿ, ಎಸ್ ಡಿಜಿಗಳ ಸಾಧನೆಯನ್ನು ವೇಗಗೊಳಿಸಲು ನಾವು ವಾರಣಾಸಿ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡಿದ್ದೇವೆ.

ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತು ಜಿ 20 ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

November 20th, 01:34 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಸ್ಥಿರ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಕುರಿತು ಜಿ-20 ಶೃಂಗಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ನವದೆಹಲಿ ಜಿ-20 ಶೃಂಗಸಭೆಯ ಸಮಯದಲ್ಲಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲು ಮತ್ತು 2030ರ ವೇಳೆಗೆ ಇಂಧನ ದಕ್ಷತೆಯ ದರವನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. ಈ ಸುಸ್ಥಿರ ಅಭಿವೃದ್ಧಿ ಆದ್ಯತೆಗಳನ್ನು ಮುಂದಕ್ಕೆ ತೆಗೆದುಕೊಳ್ಳುವ ಬ್ರೆಜಿಲ್ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದರು.

ಜಂಟಿ ಹೇಳಿಕೆ: ಭಾರತ-ಆಸ್ಟ್ರೇಲಿಯಾ 2ನೇ ವಾರ್ಷಿಕ ಶೃಂಗಸಭೆ

November 19th, 11:22 pm

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಎಂಪಿ ಅವರು 2024ರ ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ʻಗ್ರೂಪ್ ಆಫ್ 20ʼ (ಜಿ 20) ಶೃಂಗಸಭೆಯ ನೇಪಥ್ಯದಲ್ಲಿ ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಸಿದರು.

ಇಟಲಿ-ಭಾರತ ಜಂಟಿ ಕಾರ್ಯತಂತ್ರದ ಕ್ರಿಯಾ ಯೋಜನೆ 2025-2029

November 19th, 09:25 am

18 ನವೆಂಬರ್ 2024 ರಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರು ಭಾರತ ಇಟಲಿಯ ರಚನಾತ್ಮಕ ಪಾಲುದಾರಿಕೆಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ನಿರ್ಧರಿಸಿದ್ದಾರೆ. ಕೆಳಗಿನ ಕೇಂದ್ರೀಕೃತ, ಸಮಯ ಬದ್ಧ ಉಪಕ್ರಮಗಳು ಮತ್ತು ಕಾರ್ಯತಂತ್ರದ ಕ್ರಿಯೆಯ ಜಂಟಿ ಯೋಜನೆಯ ಮೂಲಕ ಮತ್ತಷ್ಟು ಆದ್ಯತೆ ನೀಡುವ ನಿಟ್ಟಿನಲ್ಲಿ ಇಟಲಿ ಮತ್ತು ಭಾರತ ಒಪ್ಪಿಗೆ ಸೂಚಿಸಿವೆ.

ಇಟಲಿಯ ಮಂತ್ರಿಗಳ ಮಂಡಳಿಯ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

November 19th, 08:34 am

ರಿಯೊ ಡಿ ಜನೈರೊದಲ್ಲಿ ನಡೆಯುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಾಲಿಯನ್ ಗಣರಾಜ್ಯದ ಮಂತ್ರಿಗಳ ಪರಿಷತ್ತಿನ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಭೇಟಿಯಾದರು. ಕಳೆದ ಎರಡು ವರ್ಷಗಳಲ್ಲಿ ಉಭಯ ಪ್ರಧಾನಮಂತ್ರಿಗಳ ನಡುವಿನ ಐದನೇ ಭೇಟಿ ಇದಾಗಿದೆ. ಜೂನ್ 2024 ರಲ್ಲಿ ಇಟಲಿಯ ಪುಗ್ಲಿಯಾದಲ್ಲಿ ಪ್ರಧಾನ ಮಂತ್ರಿ ಮೆಲೋ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರ ಅಧ್ಯಕ್ಷತೆಯಲ್ಲಿ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಉಭಯ ನಾಯಕರು ಕೊನೆಯದಾಗಿ ಭೇಟಿಯಾಗಿದ್ದರು. ಸವಾಲಿನ ಈ ಸಂದರ್ಭದದಲ್ಲಿ ಜಿ7 ಅನ್ನು ಮುನ್ನಡೆಸಿದ್ದಕ್ಕಾಗಿ ಶ್ರೀಮತಿ ಜಾರ್ಜಿಯಾ ಮೆಲೊನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಇಂಡೋನೇಷ್ಯಾದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 19th, 06:09 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ನೇಪಥ್ಯದಲ್ಲಿ ಇಂಡೋನೇಷ್ಯಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಗೌರವಾನ್ವಿತ ಪ್ರಬೋವೊ ಸುಬಿಯಾಂಟೊ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ಮೊದಲ ಭೇಟಿಯಾಗಿತ್ತು

ಪೋರ್ಚುಗಲ್‌ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 19th, 06:08 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ G20 ಶೃಂಗಸಭೆಯ ನೇಪಥ್ಯದಲ್ಲಿ ಪೋರ್ಚುಗೀಸ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಲೂಯಿಸ್ ಮಾಂಟೆನೆಗ್ರೊ ಅವರನ್ನು ಭೇಟಿ ಮಾಡಿದ್ದರು. ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ. 2024ರ ಏಪ್ರಿಲ್‌ ನಲ್ಲಿ ಪ್ರಧಾನಮಂತ್ರಿಯಾಗಿ ಮಾಂಟೆನೆಗ್ರೊ ಅಧಿಕಾರ ಸ್ವೀಕರಿಸಿದ್ದಾಗ ಪ್ರಧಾನಿ ನರೇಂದ್ರ ಮೋದಿ, ಅವರನ್ನು ಅಭಿನಂದಿಸಿದ್ದರು ಮತ್ತು ಭಾರತ ಮತ್ತು ಪೋರ್ಚುಗಲ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಒಗ್ಗೂಡಿ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಗೆ ಪ್ರಧಾನಿ ಮೊಂಟೆನೆಗ್ರೊ ಅವರು ಅಭಿನಂದನೆ ಸಲ್ಲಿಸಿದ್ದರು.

ಪ್ರಧಾನಮಂತ್ರಿ ಅವರಿಂದ ನಾರ್ವೆ ಪ್ರಧಾನಮಂತ್ರಿ ಭೇಟಿ

November 19th, 05:44 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಿ20 ಶೃಂಗಸಭೆಯ ನೇಪಥ್ಯದಲ್ಲಿ ರಿಯೊ ಡಿ ಜನೈರೊದಲ್ಲಿ ನಾರ್ವೆಯ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಜೊನಸ್ ಗಹರ್ ಸ್ಟೋರ್ ಅವರನ್ನು ಭೇಟಿ ಮಾಡಿದ್ದರು.

ಯುಕೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 19th, 05:41 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಯುನೈಟೆಡ್ ಕಿಂಗ್‌ಡಂನ ಪ್ರಧಾನಮಂತ್ರಿ ಗೌರವಾನ್ವಿತ ಸರ್ ಕೀರ್ ಸ್ಟಾರ್ಮರ್ ಅವರನ್ನು ಭೇಟಿ ಮಾಡಿದ್ದರು. ಉಭಯ ಪ್ರಧಾನಿಗಳ ನಡುವಿನ ಮೊದಲ ಭೇಟಿ ಇದಾಗಿದೆ. ಪ್ರಧಾನಮಂತ್ರಿಯಾಗಿ ಸ್ಟಾರ್ಮರ್ ಅಧಿಕಾರ ಸ್ವೀಕರಿಸುವುದಕ್ಕೆ ಪ್ರಧಾನಿ ಅಭಿನಂದಿಸಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಮೂರನೇ ಅವಧಿಯ ಅಧಿಕಾರ ವಹಿಸಿಕೊಂಡಿರುವುದಕ್ಕೆ ಪ್ರಧಾನಮಂತ್ರಿ ಸ್ಟಾರ್ಮರ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು.

ಫ್ರಾನ್ಸ್ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

November 19th, 05:26 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್ ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿದರು. ಜನವರಿಯಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದ ನಂತರ ಮತ್ತು ಜೂನ್ ನಲ್ಲಿ ಇಟಲಿಯಲ್ಲಿ ನಡೆದ ಜಿ 7 ಶೃಂಗಸಭೆಯ ಹೊರತಾಗಿ ಅವರ ಸಭೆಯ ನಂತರ ಈ ವರ್ಷ ಉಭಯ ನಾಯಕರ ನಡುವಿನ ಮೂರನೇ ಸಭೆ ಇದಾಗಿದೆ.