ಬ್ಲೂಂಬರ್ಗ್ ಹೊಸ ಆರ್ಥಿಕತೆ ವೇದಿಕೆಯ 3ನೇ ವಾರ್ಷಿಕ ಸಭೆ ಉದ್ದೇಶಿಸಿ 2020ರ ನವೆಂಬರ್ 17 ರಂದು ಪ್ರಧಾನಮಂತ್ರಿಯವರ ಭಾಷಣ

November 17th, 06:42 pm

ಮೈಕೆಲ್ ಮತ್ತು ಬ್ಲೂಂಬರ್ಗ್ ಫಿಲಾಂಥ್ರಪೀಸ್ ನಲ್ಲಿನ ಅವರ ತಂಡವು ಮಾಡುತ್ತಿರುವ ಮಹತ್ತರ ಕಾರ್ಯಗಳಿಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಮೂಲಕ ನಾನು ಮಾತು ಪ್ರಾರಂಭಿಸುತ್ತೇನೆ. ಭಾರತದ ಸ್ಮಾರ್ಟ್ ನಗರ ಅಭಿಯಾನದ ವಿನ್ಯಾಸದಲ್ಲಿ ಈ ತಂಡವು ನೀಡಿದ ಬೆಂಬಲವು ತುಂಬಾ ಉತ್ತಮವಾಗಿದೆ.

ಬ್ಲೂಮ್ ಬರ್ಗ್ ನವ ಆರ್ಥಿಕ ವೇದಿಕೆಯ 3ನೇ ವಾರ್ಷಿಕ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ

November 17th, 06:41 pm

ಭಾರತದ ನಗರೀಕರಣದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೂಡಿಕೆದಾರರನ್ನು ಆಹ್ವಾನಿಸಿದರು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬ್ಲೂಮ್ ಬರ್ಗ್ ನವ ಆರ್ಥಿಕ ವೇದಿಕೆಯ 3ನೇ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “ನೀವು ನಗರೀಕರಣದ ಹೂಡಿಕೆಯ ಅವಕಾಶಗಳನ್ನು ಎದುರು ನೋಡುತ್ತಿದ್ದರೆ, ನಿಮಗೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ. ನೀವು ಸಂಚಾರ ವಿಭಾಗದಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ, ಅದಕ್ಕೂ ಭಾರತದಲ್ಲಿ ಅತ್ಯಾಕರ್ಷಕ ಅವಕಾಶಗಳು ನಿಮಗಿವೆ. ನೀವು ಆವಿಷ್ಕಾರದಲ್ಲಿ ಹೂಡಿಕೆಯನ್ನು ಬಯಸುತ್ತಿದ್ದರೆ, ಅದಕ್ಕೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ. ನೀವು ಸುಸ್ಥಿರ ಪರಿಹಾರಗಳಲ್ಲಿ ಹೂಡಿಕೆ ಮಾಡಲು ಎದುರು ನೋಡುತ್ತಿದ್ದರೆ, ಅದಕ್ಕೂ ಭಾರತದಲ್ಲಿ ನಿಮಗೆ ಆಕರ್ಷಕ ಅವಕಾಶಗಳು ಲಭ್ಯವಿವೆ. ಈ ಎಲ್ಲ ಅವಕಾಶಗಳು ನಿಮಗೆ ಕ್ರಿಯಾಶೀಲ ಪ್ರಜಾಪ್ರಭುತ್ವದ ಜೊತೆ ಬರಲಿವೆ. ಈಗ ನಾವು ಭಾರತವನ್ನು ಆದ್ಯತೆಯ ಜಾಗತಿಕ ಹೂಡಿಕೆಯ ತಾಣವನ್ನಾಗಿಸುವ ನಿಟ್ಟಿನಲ್ಲಿ ಉದ್ಯಮ ಸ್ನೇಹಿ ವಾತಾವರಣ, ಬೃಹತ್ ಮಾರುಕಟ್ಟೆ ಮತ್ತು ಸರ್ಕಾರ ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ” ಎಂದರು.