PM Modi remembers former PM Chaudhary Charan Singh on his birth anniversary
December 23rd, 09:38 am
The Prime Minister, Shri Narendra Modi, remembered the former PM Chaudhary Charan Singh on his birthday anniversary today.ಮಹಾನ್ ದಿಗ್ಗಜ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು
December 14th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಲನಚಿತ್ರ ಲೋಕದ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರನ್ನು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರು, ಚಲನಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ಬಹಳಷ್ಟು ಕಲಿಯಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.ಚಿತ್ರರಂಗದ ದಂತಕಥೆ ರಾಜ್ ಕಪೂರ್ ಅವರ 100 ವರ್ಷಗಳ ವೃತ್ತಿ-ಬದುಕು ಕುರಿತು ಕಪೂರ್ ಕುಟುಂಬದ ಜತೆ ಪ್ರಧಾನಮಂತ್ರಿ ಸಂಭಾಷಣೆ
December 11th, 09:00 pm
ಕಳೆದ ವಾರದಿಂದ, ನಮ್ಮ ವಾಟ್ಸ್ಆಪ್ ಫ್ಯಾಮಿಲಿ ಗ್ರೂಪ್, ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂದು ಸಕ್ರಿಯವಾಗಿ ಚರ್ಚಿಸುತ್ತಿದೆ - ಪ್ರಧಾನಿ ಜೀ ಅಥವಾ ಪ್ರಧಾನ ಮಂತ್ರಿ ಜೀ! ರೀಮಾ ಬುವಾ(ರಾಜ್ ಕಪೂರ್ ಪುತ್ರಿ) ಪ್ರತಿದಿನ ನನಗೆ ಕರೆ ಮಾಡುತ್ತಾರೆ, ಏನು ಹೇಳಬೇಕು ಮತ್ತು ಹೇಗೆ ಮಾತನಾಡಿಸಬೇಕು ಎಂದು ಕೇಳುತ್ತಿದ್ದರು..ದಂತಕಥೆ ರಾಜ್ ಕಪೂರ್ ಅವರ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕಪೂರ್ ಕುಟುಂಬದೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 08:47 pm
ನಾವು ದಂತಕಥೆ ರಾಜ್ ಕಪೂರ್ ಅವರ 100ನೇ ವರ್ಷವನ್ನು ಆಚರಿಸುತ್ತಿರುವಾಗ, ಕಪೂರ್ ಕುಟುಂಬವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರೊಂದಿಗೆ ಹೃದಯಸ್ಪರ್ಶಿ ಸಂವಾದವನ್ನು ನಡೆಸಿತು. ಈ ವಿಶೇಷ ಸಭೆಯು ಭಾರತೀಯ ಚಿತ್ರರಂಗಕ್ಕೆ ರಾಜ್ ಕಪೂರ್ ಅವರ ಅಪ್ರತಿಮ ಕೊಡುಗೆ ಮತ್ತು ಅವರ ಶಾಶ್ವತ ಪರಂಪರೆಯನ್ನು ಗೌರವಿಸಿತು. ಪ್ರಧಾನಮಂತ್ರಿಯವರು ಕಪೂರ್ ಕುಟುಂಬದೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು.ತಮಿಳು ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ
December 11th, 02:00 pm
ಕೇಂದ್ರ ಸಚಿವರಾದ, ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜಿ, ರಾವ್ ಇಂದರ್‌ಜಿತ್ ಸಿಂಗ್ ಮತ್ತು ಎಲ್. ಮುರುಗನ್ ಜಿ, ಈ ಕಾರ್ಯಕ್ರಮದ ಕೇಂದ್ರ ವ್ಯಕ್ತಿ, ಸಾಹಿತ್ಯ ವಿದ್ವಾಂಸ ಶ್ರೀ ಸೀನಿ ವಿಶ್ವನಾಥನ್ ಜಿ, ಪ್ರಕಾಶಕ ವಿ. ಶ್ರೀನಿವಾಸನ್ ಜಿ, ಮತ್ತು ಉಪಸ್ಥಿತರಿರುವ ಎಲ್ಲ ಗೌರವಾನ್ವಿತ ಗಣ್ಯರೇ... ಮಹಿಳೆಯರೇ ಮತ್ತು ಮಹನೀಯರೇ,ತಮಿಳು ಶ್ರೇಷ್ಠ ಕವಿ ಸುಬ್ರಮಣ್ಯ ಭಾರತಿ ಅವರ ಸಂಪೂರ್ಣ ಕೃತಿಗಳ ಸಂಕಲನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 01:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗದ ನಂಬರ್ 7 ನಿವಾಸದಲ್ಲಿ ತಮಿಳು ಮಹಾನ್ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಬ್ರಮಣ್ಯ ಭಾರತಿ ಅವರ ಸಮಗ್ರ ಕೃತಿಗಳ ಸಂಕಲನ ಬಿಡುಗಡೆ ಮಾಡಿದರು. ತಮಿಳಿನ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ ಅವರು, ಭಾರತದ ಸಂಸ್ಕೃತಿ ಮತ್ತು ಸಾಹಿತ್ಯ, ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳು ಮತ್ತು ತಮಿಳುನಾಡಿನ ಹೆಮ್ಮೆಗೆ ಇಂದು ಉತ್ತಮ ಅವಕಾಶವಾಗಿದೆ. ಮಹಾಕವಿ ಸುಬ್ರಹ್ಮಣ್ಯ ಭಾರತಿ ಅವರ ಕೃತಿಗಳ ಪ್ರಕಟಣೆಯ ಮಹಾಪೂರವೇ ಇಂದು ನೆರವೇರಿತು ಎಂದರು.ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
December 11th, 10:29 am
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರನ್ನು ಸ್ಮರಿಸಿದ್ದಾರೆ.ಶ್ರೀ ಸಿ. ರಾಜಗೋಪಾಲಾಚಾರಿಯವರನ್ನು ಅವರ ಜನ್ಮ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿ
December 10th, 04:18 pm
ಶ್ರೀ ಸಿ. ರಾಜಗೋಪಾಲಾಚಾರಿಯವರ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಜಗೋಪಾಲಾಚಾರಿಯವರು ಬಹುಮುಖಿ ವ್ಯಕ್ತಿತ್ವವಾಗಿದ್ದು, ಆಡಳಿತ, ಸಾಹಿತ್ಯ ಮತ್ತು ಸಾಮಾಜಿಕ ಸಬಲೀಕರಣದ ಮೇಲೆ ಪ್ರಬಲವಾದ ಪ್ರಭಾವ ಬೀರಿದ್ದಾರೆ ಎಂದು ಹೇಳಿದರು.ಅಹಮದಾಬಾದ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸ್ ಭಾಷಣ
December 09th, 01:30 pm
ಗೌರವಾನ್ವಿತ ಸ್ವಾಮಿ ಗೌತಮಾನಂದ ಜೀ ಮಹಾರಾಜ್, ದೇಶ ಮತ್ತು ವಿದೇಶಗಳಲ್ಲಿರುವ ರಾಮಕೃಷ್ಣ ಮಿಷನ್ ಮತ್ತು ಮಠದ ಗೌರವಾನ್ವಿತ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಮತ್ತು ಈ ಕಾರ್ಯಕ್ರಮಕ್ಕೆ ಭಾಗವಹಿಸಿರುವ ಎಲ್ಲಾ ಗಣ್ಯ ಅತಿಥಿಗಳೆ, ಮಹಿಳೆಯರೆ ಮತ್ತು ಮಹನೀಯರೆ, ನಮಸ್ಕಾರ!ಗುಜರಾತ್‌ನ ರಾಮಕೃಷ್ಣ ಮಠ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 09th, 01:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ರಾಮಕೃಷ್ಣ ಮಠದಲ್ಲಿಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪೂಜ್ಯ ಶ್ರೀಮತ್ ಸ್ವಾಮಿ ಗೌತಮಾನಂದ ಜಿ ಮಹಾರಾಜ್, ಭಾರತ ಮತ್ತು ವಿದೇಶಗಳ ರಾಮಕೃಷ್ಣ ಮಠ ಮತ್ತು ಮಿಷನ್ ನ ಪೂಜ್ಯ ಸಾಧು ಸಂತರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರೆ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು. ಶ್ರೀ ಮೋದಿ ಅವರು ಶಾರದಾ ದೇವಿ, ಗುರುದೇವ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿದರು. ಇಂದಿನ ಕಾರ್ಯಕ್ರಮವನ್ನು ಶ್ರೀಮತ್ ಸ್ವಾಮಿ ಪ್ರೇಮಾನಂದ ಮಹಾರಾಜರ ಜನ್ಮದಿನದಂದು ಆಯೋಜಿಸಲಾಗಿದ್ದು, ಅವರಿಗೂ ನಮನ ಸಲ್ಲಿಸಿದರು.ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 07th, 05:52 pm
ಕಾರ್ಯಕಾರ್(ಕಾರ್ಯಕರ್ತರು) ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು ಭಗವಾನ್ ಸ್ವಾಮಿನಾರಾಯಣ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103ನೇ ಜನ್ಮದಿನ ಆಚರಿಸಲಾಗುತ್ತಿದೆ, ಅವರಿಗೂ ಸಹ ನಾನು ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ, ಏಕೆಂದರೆ ಅವರು ದೈವಿಕ ಗುರು ಹರಿ ಪ್ರಗತ್ ಬ್ರಹ್ಮನ ಮೂರ್ತರೂಪವಾಗಿದ್ದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸಂಕಲ್ಪಗಳು ಮತ್ತು ನಿರ್ಣಯಗಳು ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಅವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯ ಮೂಲಕ ಇಂದು ಸಾಕಾರಗೊಳ್ಳುತ್ತಿವೆ. 1 ಲಕ್ಷ ಸ್ವಯಂಸೇವಕರು, ಯುವಕರು ಮತ್ತು ಮಕ್ಕಳನ್ನು ಒಳಗೊಂಡ ಈ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಬೀಜ, ಮರ ಮತ್ತು ಹಣ್ಣುಗಳ ಸಾರವನ್ನು ಸುಂದರವಾಗಿ ಪ್ರತಿನಿಧಿಸುತ್ತಿದೆ. ನಾನು ನಿಮ್ಮ ನಡುವೆ ದೈಹಿಕವಾಗಿ ಇರಲು ಸಾಧ್ಯವಾಗದಿದ್ದರೂ, ಈ ಘಟನೆಯ ಚೈತನ್ಯ ಮತ್ತು ಶಕ್ತಿಯನ್ನು ನನ್ನ ಹೃದಯದಲ್ಲಿ ಆಳವಾಗಿ ಅನುಭವಿಸುತ್ತೇನೆ. ಇಂತಹ ಭವ್ಯವಾದ ಮತ್ತು ದಿವ್ಯವಾದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.ಅಹಮದಾಬಾದ್‌ನಲ್ಲಿ ಕಾರ್ಯಕರ್ತರ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 07th, 05:40 pm
ಅಹಮದಾಬಾದ್‌ನಲ್ಲಿ ಆಯೋಜಿತವಾಗಿದ್ದ ಕಾರ್ಯಕರ್ತರ ಸುವರ್ಣ ಮಹೋತ್ಸವವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಉದ್ದೇಶಿಸಿ ಭಾಷಣ ಮಾಡಿದರು. ಪರಮಪೂಜ್ಯ ಗುರು ಹರಿ ಮಹಂತ ಸ್ವಾಮಿ ಮಹಾರಾಜ್, ಪೂಜ್ಯ ಸಾಧು ಸಂತರು ಮತ್ತು ಸತ್ಸಂಗಿ ಕುಟುಂಬದ ಸದಸ್ಯರು ಮತ್ತು ಇತರೆ ಗಣ್ಯರು ಮತ್ತು ಪ್ರತಿನಿಧಿಗಳನ್ನು ಅವರು ಸ್ವಾಗತಿಸಿದರು. ಕಾರ್ಯಕರ್ತರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮೋದಿ ಅವರು ಭಗವಾನ್ ಸ್ವಾಮಿ ನಾರಾಯಣರ ಪಾದಗಳಿಗೆ ನಮಸ್ಕರಿಸಿ, ಇಂದು ಪ್ರಮುಖ್ ಸ್ವಾಮಿ ಮಹಾರಾಜರ 103ನೇ ಜನ್ಮದಿನವೂ ಆಗಿದೆ. ಭಗವಾನ್ ಸ್ವಾಮಿ ನಾರಾಯಣರ ಬೋಧನೆಗಳು, ಪ್ರಮುಖ ಸ್ವಾಮಿ ಮಹಾರಾಜರ ಸಂಕಲ್ಪಗಳು ಪರಮ ಪೂಜ್ಯ ಗುರು ಹರಿಮಹಂತ ಸ್ವಾಮಿ ಮಹಾರಾಜರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಇಂದು ಫಲ ನೀಡುತ್ತಿವೆ. ಯುವಕರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸುಮಾರು 1 ಲಕ್ಷ ಕಾರ್ಯಕರ್ತರು ಸೇರಿದಂತೆ ಇಂತಹ ಬೃಹತ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು ಸಂತಸ ತಂದಿದೆ. ಸ್ಥಳದಲ್ಲಿ ದೈಹಿಕವಾಗಿ ಇಲ್ಲದಿದ್ದರೂ, ಈ ಕಾರ್ಯಕ್ರಮದ ಶಕ್ತಿಯನ್ನು ಅನುಭವಿಸಬಹುದಾಗಿದೆ. ಮಹಾರಥೋತ್ಸವದಲ್ಲಿ ಭಾಗಿಯಾಗಿರುವ ಪರಮಪೂಜ್ಯ ಗುರು ಹರಿಮಹಾಂತ ಸ್ವಾಮಿ ಮಹಾರಾಜರು, ಸಕಲ ಸಾಧು ಸಂತರಿಗೆ ಅವರು ಶುಭ ಕೋರಿದರು.ದೇಶದ ಮೊದಲ ರಾಷ್ಟ್ರಪತಿ, ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
December 03rd, 08:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶದ ಮೊದಲ ರಾಷ್ಟ್ರಪತಿ, ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತೀಯ ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯ ಹಾಕುವಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರ ಅಮೂಲ್ಯ ಕೊಡುಗೆಯನ್ನು ಅವರು ಶ್ಲಾಘಿಸಿದರು.We are working fast in every sector for the development of Odisha: PM Modi at Odisha Parba 2024
November 24th, 08:48 pm
PM Modi addressed Odisha Parba 2024, celebrating Odisha's rich cultural heritage. He paid tribute to Swabhaba Kabi Gangadhar Meher on his centenary, along with saints like Dasia Bauri, Salabega, and Jagannath Das. Highlighting Odisha's role in preserving India's cultural persity, he shared the inspiring tale of Lord Jagannath leading a battle and emphasized faith, unity, and pine guidance in every endeavor.“ಒಡಿಶಾ ಪರ್ಬಾ 2024”ರ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
November 24th, 08:30 pm
ನವದೆಹಲಿಯ ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ “ಒಡಿಶಾ ಪರ್ಬಾ 2024”ರ ಆಚರಣೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹೋದಯರಿಯರು ಮತ್ತು ಸಹೋದರರಿಗೆ ಶುಭ ಹಾರೈಸಿದರು. ಈ ವರ್ಷ ಸ್ವಾಭವ್ ಕವಿ ಗಂಗಾಧರ್ ಮೆಹರ್ ಅವರ 100ನೇ ಪುಣ್ಯ ಸ್ಮರಣೆಯಾಗಿದೆ ಮತ್ತು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಭಕ್ತ ದಾಸಿಯಾ ಭೌಹುರಿ, ಭಕ್ತ ಸಲೆಬೆಗ ಮತ್ತು ಒರಿಯಾ ಲೇಖಕರಾದ ಭಗವಂತ, ಶ್ರೀ ಜಗನ್ನಾಥ್ ದಾಸ್ ಅವರಿಗೆ ಪ್ರಧಾನಮಂತ್ರಿಯವರು ಶ್ರದ್ಧಾಂಜಲಿ ಸಲ್ಲಿಸಿದರು.ಡಾ. ಹರೇಕೃಷ್ಣ ಮಹತಾಬ್ ಜೀಯವರು ಭಾರತವನ್ನು ಸ್ವತಂತ್ರಗೊಳಿಸಿ ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನತೆಯ ಜೀವನವನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯುನ್ನತ ವ್ಯಕ್ತಿತ್ವ: ಪ್ರಧಾನಮಂತ್ರಿ
November 22nd, 03:11 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಡಾ. ಹರೇಕೃಷ್ಣ ಮಹಾತಾಬ್ ಜೀ ಅವರನ್ನು ಭಾರತವನ್ನು ಸ್ವತಂತ್ರಗೊಳಿಸಿ, ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನತೆಯ ಜೀವನವನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯುನ್ನತ ವ್ಯಕ್ತಿತ್ವ ಎಂದು ಶ್ಲಾಘಿಸಿದ್ದಾರೆ. ಅವರ 125ನೇ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದ ಶ್ರೀ ಮೋದಿಯವರು, ಡಾ. ಮಹತಾಬ್ ಅವರ ಆದರ್ಶಗಳನ್ನು ಈಡೇರಿಸುವುದು ಸರ್ಕಾರದ ಬದ್ಧತೆ ಎಂದು ಹೇಳಿದರು.ಆರ್ಯ ಸಮಾಜದ ಸ್ಮಾರಕಕ್ಕೆ ಪ್ರಧಾನಮಂತ್ರಿಯವರಿಂದ ಗೌರವ ನಮನ
November 22nd, 03:09 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಜಾರ್ಜ್ ಟೌನ್ ನಲ್ಲಿರುವ ಆರ್ಯ ಸಮಾಜದ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಗಯಾನಾದಲ್ಲಿ ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸುವಲ್ಲಿ ಗಯಾನಾ ಜನರ ಪ್ರಯತ್ನಗಳು ಮತ್ತು ಪಾತ್ರವನ್ನು ಶ್ರೀ ಮೋದಿಯವರು ಶ್ಲಾಘಿಸಿದರು. ಸ್ವಾಮಿ ದಯಾನಂದ ಸರಸ್ವತಿ ಅವರ 200ನೇ ಜಯಂತಿಯನ್ನು ನಾವು ಆಚರಿಸುತ್ತಿರುವುದರಿಂದ ಈ ವರ್ಷವು ಬಹಳ ವಿಶೇಷವಾಗಿದೆ ಎಂದು ಅವರು ಹೇಳಿದರು.ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
November 19th, 08:41 am
ಝಾನ್ಸಿಯ ವೀರ ರಾಣಿ ಲಕ್ಷ್ಮೀಬಾಯಿ ಅವರು ಧೈರ್ಯ ಮತ್ತು ದೇಶಭಕ್ತಿಯ ನಿಜವಾದ ಸಾಕಾರಮೂರ್ತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಇಂದು ಲಕ್ಷ್ಮೀ ಬಾಯಿ ಅವರ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
November 19th, 08:37 am
ಇಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.ಜನಜಾತೀಯ ಗೌರವ ದಿವಸ ಎಂದು ಸ್ಮರಿಸಲಾಗುವ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಾದ ಇಂದು ಪ್ರಧಾನಮಂತ್ರಿಯವರಿಂದ ಅವರಿಗೆ ಗೌರವ ನಮನ
November 15th, 08:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಭಗವಾನ್ ಬಿರ್ಸಾ ಮುಂಡಾ ಜೀ ಅವರು ತಾಯ್ನಾಡಿನ ಹೆಮ್ಮೆ ಮತ್ತು ಘನತೆಯನ್ನು ರಕ್ಷಿಸಲು ಎಲ್ಲವನ್ನೂ ತ್ಯಾಗ ಮಾಡಿದರು ಎಂದು ಅವರು ಹೇಳಿದ್ದಾರೆ.