ಭೂತಾನ್‌ನ ದೊರೆ ಮತ್ತು ರಾಣಿಯನ್ನು ಬರಮಾಡಿಕೊಂಡ ಪ್ರಧಾನಮಂತ್ರಿ

December 05th, 03:42 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಭೂತಾನ್ ದೊರೆ ಘನತೆವೆತ್ತ ಜಿಗ್ಮೆ ಖೇಸರ್ ನಮ್ಗಯೆಲ್ ವಾಂಗ್ ಚುಕ್ ಮತ್ತು ಭೂತಾನ್ ರಾಣಿ ಘನತೆವೆತ್ತ ಜೆಟ್ಸುನ್ ಪೆಮಾ ವಾಂಗ್ ಚುಕ್ ಅವರನ್ನು ಬರಮಾಡಿಕೊಂಡರು. ಪ್ರಧಾನಮಂತ್ರಿಯವರು ಘನತೆವೆತ್ತರಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು 2024ರ ಮಾರ್ಚ್ ನಲ್ಲಿ ತಾವು ಭೂತಾನ್‌ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಅಲ್ಲಿನ ಜನರು ನೀಡಿದ ಅಸಾಧಾರಣ ಆತ್ಮೀಯ ಆತಿಥ್ಯವನ್ನು ಪ್ರೀತಿಯಿಂದ ಸ್ಮರಿಸಿದರು.

ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್, ಸುಸ್ಥಿರತೆಯನ್ನು ಹೆಚ್ಚಿಸಿ ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ನಮ್ಮ ಪ್ರಯತ್ನಗಳ ಒಂದು ಭಾಗವಾಗಿದೆ: ಪ್ರಧಾನಮಂತ್ರಿ

October 21st, 08:08 pm

ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ ಬಸ್‌ನಲ್ಲಿ ಭೂತಾನ್ ಪ್ರಧಾನಮಂತ್ರಿ ಶೆರಿಂಗ್ ಟೊಬ್ಗೆ ಅವರ ಸವಾರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಗ್ರೀನ್ ಹೈಡ್ರೋಜನ್ ಫ್ಯೂಲ್ ಸೆಲ್ ಬಸ್ ಸುಸ್ಥಿರತೆಯನ್ನು ಹೆಚ್ಚಿಸುವ ಮತ್ತು ಮುಂಬರುವ ಪೀಳಿಗೆಗೆ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವ ಭಾರತದ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದರು.

ಭೂತಾನ್ ಭಾರತದ ವಿಶೇಷ ಸ್ನೇಹಿತ, ಆದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ಸಹಕಾರ ಇನ್ನೂ ಉತ್ತಮಗೊಳ್ಳುತ್ತಲೇ ಇರುತ್ತದೆ: ಪ್ರಧಾನಮಂತ್ರಿ

October 21st, 07:27 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭೂತಾನ್ ನ ಪ್ರಧಾನಮಂತ್ರಿ ತ್ಸೆರಿಂಗ್ ಟೊಬ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಭೂತಾನ್ ಭಾರತದ ಅತ್ಯಂತ ವಿಶೇಷ ಸ್ನೇಹಿತ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಧನ್ಯವಾದಗಳು

August 15th, 09:20 pm

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ, ಪ್ರಗತಿಯತ್ತ ರಾಷ್ಟ್ರದ ಪ್ರಯಾಣ ಮತ್ತು ಅದರ ಬೆಳೆಯುತ್ತಿರುವ ಜಾಗತಿಕ ಪ್ರಭಾವವನ್ನು ಒತ್ತಿ ಹೇಳಿದರು. ಪ್ರಧಾನಿಯವರು ಅಂತಾರಾಷ್ಟ್ರೀಯ ಸಂಬಂಧಗಳ ಬಲವನ್ನು ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹಂಚಿಕೊಂಡ ದೃಷ್ಟಿಯನ್ನು ಎತ್ತಿ ತೋರಿಸಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಪುನರುಚ್ಚರಿಸಿದ ದೇಶವಾಸಿಗಳಿಗೆ ಕೃತಜ್ಞತೆಗಳು: ಮನ್ ಕಿ ಬಾತ್ ಸಂದರ್ಭದಲ್ಲಿ ಪ್ರಧಾನಿ ಮೋದಿ

June 30th, 11:00 am

'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮಕ್ಕೆ ಕೆಲವು ತಿಂಗಳ ತನಕ ವಿರಾಮ ನೀಡಿರಬಹುದು. ಆದರೆ ದೇಶ ಮತ್ತು ಸಮಾಜದಲ್ಲಿ 'ಮನ್ ಕಿ ಬಾತ್' ಮನೋಭಾವ, ಪ್ರತಿದಿನ ಮಾಡುವ ಒಳ್ಳೆಯ ಕೆಲಸ, ನಿಸ್ವಾರ್ಥ ಮನೋಭಾವದಿಂದ ಮಾಡುವ ಕೆಲಸ, ಕೆಲಸದಿಂದ ಸಮಾಜದ ಮೇಲಾಗುವ ಸಕಾರಾತ್ಮಕ ಪರಿಣಾಮ – ಇವೆಲ್ಲವನ್ನೂ ಪಟ್ಟುಬಿಡದೆ ನಡೆಸಿತು. ಚುನಾವಣೆಯ ಸುದ್ದಿಗಳ ನಡುವೆ, ಹೃದಯ ಸ್ಪರ್ಶಿಸುವ ಇಂತಹ ಸುದ್ದಿಗಳನ್ನು ನೀವು ಖಂಡಿತವಾಗಿಯೂ ಗಮನಿಸಿದ್ದೀರಿ ಎಂದು ನಾನು ಭಾವಿಸುವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ ಭೂತಾನ್ ಪ್ರಧಾನಿ

June 06th, 02:56 pm

ಭೂತಾನ್ ಪ್ರಧಾನಿ ದಾಶೋ ಶೆರಿಂಗ್ ಟೊಬ್ಗೆ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ 18ನೇ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಗೆಲುವಿಗಾಗಿ ಅಭಿನಂದಿಸಿದರು. ಕಳೆದ ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಪ್ರಧಾನಿ ಟೊಬ್ಗೆ ಶ್ಲಾಘಿಸಿದರು ಮತ್ತು ಅವರ ಯಶಸ್ವಿ ಮೂರನೇ ಅವಧಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು.

ಪ್ರಧಾನಮಂತ್ರಿಯವರಿಗೆ ಭೂತಾನ್ ದೇಶದ ಘನತೆವೆತ್ತ ಮಹಾರಾಜರಿಂದ ಅಭಿನಂದನಾ ಕರೆ

June 05th, 08:05 pm

ಭೂತಾನ್ ದೊರೆ ಜಿಗ್ಮೆ ಖೈಸರ್‌ ನ್ಯಾಮ್‌ಗೈಲ್‌ ವಾಂಗ್‌ಚುಕ್ ಅವರು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಕರೆ ಮಾಡಿ 18 ನೇ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕಾಗಿ ಶುಭಾಶಯ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಜನರ ನಿರಂತರ ಪ್ರಗತಿ ಮತ್ತು ಸಮೃದ್ಧಿಗಾಗಿ ಭೂತಾನ್‌ ದೊರೆಗಳು ಶುಭಾಶಯ ತಿಳಿಸಿದರು. ಪ್ರಧಾನಮಂತ್ರಿಯವರು ಭೂತಾನ್‌ ದೊರೆಗಳಿಗೆ ಧನ್ಯವಾದ ತಿಳಿಸಿದರು.

ಪ್ರಧಾನ ಮಂತ್ರಿಗಳು ಭೂತಾನಿನ ಮಹಾರಾಜರನ್ನು ಭೇಟಿಯಾದರು

March 22nd, 06:32 pm

ಪಾರೊದಿಂದ ಥಿಂಪುವಿನವರೆಗಿನ ಪ್ರಯಾಣದ ಉದ್ದಕ್ಕೂ ಜನರು ಅವರನ್ನು ಸ್ವಾಗತಿಸುವ ಮೂಲಕ, ತಮಗೆ ನೀಡಿದ ಅಸಾಧಾರಣ ಸಾರ್ವಜನಿಕ ಸ್ವಾಗತಕ್ಕಾಗಿ ಪ್ರಧಾನಮಂತ್ರಿಯವರು ಮಹಾರಾಜರಿಗೆ ಧನ್ಯವಾದಗಳನ್ನು ಅರ್ಪಿಸಿದರು.

Bilateral meeting of Prime Minister with Prime Minister of Bhutan and Exchange of MoUs

March 22nd, 06:30 pm

Prime Minister Narendra Modi met H.E. Tshering Tobgay, Prime Minister of Bhutan in Thimphu over a working lunch hosted in his honour. The Prime Minister thanked Prime Minister Tobgay for the exceptional public welcome accorded to him, with people greeting him all along the journey from Paro to Thimphu. The two leaders held discussions on various aspects of the multi- faceted bilateral relations and forged an understanding to further enhance cooperation in sectors such as renewable energy, agriculture, youth exchange, environment and forestry, and tourism.

List of Outcomes : State visit of Prime Minister Shri Narendra Modi to Bhutan

March 22nd, 03:10 pm

Both India and Bhutan agreed on MoUs ranging across sectors also having agreed on and initialled the text of the MoU on Establishment of Rail Links between India and Bhutan. The MoU provides for establishment of two proposed rail links between India and Bhutan, including the Kokrajhar-Gelephu rail link and Banarhat-Samtse rail link and their implementation modalities.

ಭೂತಾನ್‌ಗೆ ಆಗಮಿಸಿದ ಪ್ರಧಾನಿ

March 22nd, 09:53 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಮಾರ್ಚ್ 22-23ರಂದು ಭೂತಾನ್‌ಗೆ ಅಧಿಕೃತ ಭೇಟಿಯ ಭಾಗವಾಗಿ ಇಂದು ಪಾರೋಗೆ ಆಗಮಿಸಿದರು. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ನಿಯಮಿತವಾದ ಉನ್ನತ ಮಟ್ಟದ ವಿನಿಮಯ ಸಂಪ್ರದಾಯ ಹಾಗೂ ʻನೆರೆಹೊರೆಯವರಿಗೆ ಮೊದಲ ನೀತಿʼಗೆ ಭಾರತ ಸರ್ಕಾರ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.

ಮಾರ್ಚ್ 21-22, 2024ರಂದು ಭೂತಾನ್ ದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

March 22nd, 08:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 21-22, 2024 ರಂದು ಭೂತಾನ್ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಭಾರತ ಮತ್ತು ಭೂತಾನ್ ನಡುವೆ ಆಗಾಗ ನಡೆಯುವ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯಕ್ಕೆ ಅನುಗುಣವಾಗಿದೆ ಮತ್ತು ಭಾರತದ ನೆರೆಹೊರೆ ದೇಶಗಳ ಮೊದಲ ನೀತಿಗೆ ಪೂರಕವಾಗಿದೆ.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಭೂತಾನ್ ಪ್ರಧಾನಿ

March 15th, 10:22 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ನವದೆಹಲಿಯಲ್ಲಿ ಭೂತಾನ್ ಪ್ರಧಾನ ಮಂತ್ರಿ ಗೌರವಾನ್ವಿತ ದಾಶೋ ಶೆರಿಂಗ್ ಟೋಬ್ಗೆ ಅವರನ್ನು ಬರಮಾಡಿಕೊಂಡರು.

​​​​​​​ಶ್ರೀಲಂಕಾ ಮತ್ತು ಮಾರಿಷಸ್ ನಲ್ಲಿ ಯುಪಿಐ ಸೇವೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ

February 12th, 01:30 pm

ಗೌರವಾನ್ವಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಜೀ, ಗೌರವಾನ್ವಿತ ಪ್ರಧಾನಿ ಪ್ರವಿಂದ್ ಜುಗ್ನೌತ್ ಜೀ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಜೈಶಂಕರ್ ಜೀ, ಶ್ರೀಲಂಕಾ, ಮಾರಿಷಸ್ ಮತ್ತು ಭಾರತ ಕೇಂದ್ರೀಯ ಬ್ಯಾಂಕುಗಳ ಗೌರವಾನ್ವಿತ ಗವರ್ನರ್ ಗಳು ಮತ್ತು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಗೌರವಾನ್ವಿತರೇ!

​​​​​​​ಮಾರಿಷನ್‌ ಪ್ರಧಾನಿ ಮತ್ತು ಶ್ರೀಲಂಕಾ ಅಧ್ಯಕ್ಷರ ಜೊತೆ ಜಂಟಿಯಾಗಿ ಯುಪಿಐ ಸೇವೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

February 12th, 01:00 pm

‍ಶ್ರೀಲಂಕಾ ಅಧ್ಯಕ್ಷ ಶ್ರೀ ರನಿಲ್‌ ವಿಕ್ರಮಸಿಂಘೆ ಮತ್ತು ಮಾರಿಷಸ್‌ ಪ್ರಧಾನಿ ಶ್ರೀ ಪ್ರವೀಂದ್‌ ಜುಗ್ನಾಥ್‌ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಲಂಕಾ ಮತ್ತು ಮಾರಿಷಸ್‌ ನಲ್ಲಿ ಯುನೈಫೈಡ್‌ ಪೇಮೆಂಟ್‌ ಇಂಟರ್ಪೇಸ್‌ [ಯುಪಿಐ] ಸೇವೆಗಳನ್ನು ಜಂಟಿಯಾಗಿ ಉದ್ಘಾಟಿಸಿದರು ಮತ್ತು ವಿಡಿಯೋ ಕಾನ್ಪರೆನ್ಸ್‌ ಮೂಲಕ ಮಾರಿಷಸ್‌ ನಲ್ಲಿ ರುಪೇ ಕಾರ್ಡ್‌ ಸೇವೆಗಳಿಗೆ ಚಾಲನೆ ನೀಡಿದರು.

ಭೂತಾನ್ ನಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ಶೆರಿಂಗ್ ಟೊಬ್ಗೆ ಮತ್ತು ಪಿಡಿಪಿ ಪಕ್ಷಕ್ಕೆ ಪ್ರಧಾನಮಂತ್ರಿಯವರಿಂದ ಅಭಿನಂದನೆ

January 09th, 10:22 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್‌ ನಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಶ್ರೀ ಶೆರಿಂಗ್ ಟೊಬ್ಗೆ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯನ್ನು ಅಭಿನಂದಿಸಿದರು.

​​​​​​​ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್‌ ವಾಂಗ್‌ಚುಕ್ ಅವರನ್ನು ಭೇಟಿಯಾದ ಪ್ರಧಾನಿ

November 06th, 11:30 pm

ಭಾರತಕ್ಕೆ ಭೇಟಿ ನೀಡಿರುವ ಭೂತಾನ್ ದೊರೆ ಜಿಗ್ಮೆ ಖೇಸರ್ ನಾಂಗೇಲ್‌ ವಾಂಗ್‌ಚುಕ್‌ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಸ್ವಾಗತ ಕೋರಿದ್ದಾರೆ.

77ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಹಾರೈಸಿ, ಶುಭಾಶಯ ಕೋರಿದ ವಿಶ್ವದ ಜನನಾಯಕರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ

August 15th, 04:21 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 77ನೇ ಸ್ವಾತಂತ್ರ್ಯ ದಿನಾಚರಣೆಯಂದು ಶುಭಾಶಯ ಕೋರಿದ ವಿಶ್ವದ ಎಲ್ಲಾ ನಾಯಕರಿಗೆ ಧನ್ಯವಾದ ಅರ್ಪಿಸಿದರು.

ಚಂದ್ರಯಾನಕ್ಕೆ ಶುಭ ಹಾರೈಸಿದ ಭೂತಾನ್ ಪ್ರಧಾನಿಗೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

July 16th, 09:30 am

ಚಂದ್ರಯಾನ-3 ರ ಯಶಸ್ವಿ ಉಡಾವಣೆಗೆ ಶುಭಾಶಯ ತಿಳಿಸಿದ ಭೂತಾನ್ ಪ್ರಧಾನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ಹೇಳಿದ್ದಾರೆ.

ಗುಜರಾತಿನ ಗಾಂಧಿನಗರದಲ್ಲಿ ನಡೆದ ಅಖಿಲ ಭಾರತೀಯ ಶಿಕ್ಷಣ ಸಂಘ ಸಮಾವೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಅನುವಾದ

May 12th, 10:31 am

ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ತಮ್ಮ ಜೀವನದುದ್ದಕ್ಕೂ ಶಿಕ್ಷಕರಾಗಿ ತಮ್ಮನ್ನು ಪರಿಚಯಿಸಿಕೊಂಡ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಗೆಲುವಿನಿಂದ ಗೆದ್ದ ಪರಷೋತ್ತಮ್ ರೂಪಾಲಾ ಜಿ, ಸಿ.ಆರ್.ಪಾಟೀಲ್ ಜೀ ಅವರೇ, ಗುಜರಾತ್ ಸರ್ಕಾರದ ಸಚಿವರೇ, ಅಖಿಲ ಭಾರತೀಯ ಪ್ರಾಥಮಿಕ ಶಿಕ್ಷಕ ಸಂಘದ ಎಲ್ಲಾ ಸದಸ್ಯರು, ದೇಶದ ಮೂಲೆ ಮೂಲೆಯಿಂದ ಬಂದಿರುವ ಗೌರವಾನ್ವಿತ ಶಿಕ್ಷಕರು, ಮಹನೀಯರೇ ಮತ್ತು ಮಹಿಳೆಯರೇ!