ಭಾರತೀಯ ಅಂತರಿಕ್ಷ್ ನಿಲ್ದಾಣ (ಬಿಎಎಸ್): ವೈಜ್ಞಾನಿಕ ಸಂಶೋಧನೆಗಾಗಿ ನಮ್ಮದೇ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲು 2028ರಲ್ಲಿ ಅದರ ಮೊದಲ ಮಾಡ್ಯೂಲ್ ಪ್ರಾರಂಭ

September 18th, 04:38 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಗಗನ್ಯಾನ್ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಭಾರತೀಯ ಅಂತರಿಕ್ಷ ನಿಲ್ದಾಣದ ಮೊದಲ ಘಟಕದ ಕಟ್ಟಡಕ್ಕೆ ಅನುಮೋದನೆ ನೀಡಿದೆ. ಭಾರತೀಯ ಅಂತರಿಕ್ಷ್ ನಿಲ್ದಾಣದ (ಬಿಎಎಸ್-1) ಮೊದಲ ಮಾಡ್ಯೂಲ್ ಅಭಿವೃದ್ಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದ್ದು, ಬಿಎಎಸ್ ಅನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸಲು ವಿವಿಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಮೌಲ್ಯೀಕರಿಸಲು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. BAS ಮತ್ತು ಪೂರ್ವಗಾಮಿ ಮಿಷನ್‌ಗಳಿಗಾಗಿ ಹೊಸ ತಂತ್ರಜ್ಞಾನ ಸೇರಿಸಲು ಗಗನ್‌ಯಾನ್ ಕಾರ್ಯಕ್ರಮದ ವ್ಯಾಪ್ತಿ ಮತ್ತು ನಿಧಿಯನ್ನು ಪರಿಷ್ಕರಿಸಲು ಮತ್ತು ಹಾಲಿ ಗಗನ್‌ಯಾನ್ ಕಾರ್ಯಕ್ರಮವನ್ನು ಪೂರೈಸಲು ಹೆಚ್ಚುವರಿ ಅಗತ್ಯತೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ.