​​​​​​​ ನವದೆಹಲಿಯ ನಡೆದ ʻಭಾರತ್ ಟೆಕ್ಸ್-2024ʼ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಪಠ್ಯಾಂತರ

February 26th, 11:10 am

ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಅವರೇ ಮತ್ತು ದರ್ಶನ ಜರ್ದೋಶ್ ಅವರೇ, ವಿವಿಧ ದೇಶಗಳ ರಾಯಭಾರಿಗಳೇ, ಹಿರಿಯ ರಾಜತಾಂತ್ರಿಕರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳೇ, ಫ್ಯಾಷನ್ ಮತ್ತು ಜವಳಿ ಪ್ರಪಂಚದ ಎಲ್ಲಾ ಸಹವರ್ತಿಗಳೇ, ಯುವ ಉದ್ಯಮಿಗಳೇ, ವಿದ್ಯಾರ್ಥಿಗಳೇ, ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳೇ ಹಾಗೂ ಮಹಿಳೆಯರೇ ಮತ್ತು ಮಹನೀಯರೇ! ಭಾರತ್ ಮಂಟಪದಲ್ಲಿ ʻಭಾರತ್ ಟೆಕ್ಸ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು! ಇಂದಿನ ಕಾರ್ಯಕ್ರಮವು ಖುದ್ದು ಬಹಳ ವಿಶೇಷವಾಗಿದೆ. ಇದು ಏಕೆ ವಿಶೇಷವೆಂದರೆ ಇದು ಭಾರತದ ಎರಡು ಅತಿದೊಡ್ಡ ಪ್ರದರ್ಶನ ಕೇಂದ್ರಗಳಾದ ʻಭಾರತ್ ಮಂಟಪʼ ಮತ್ತು ʻಯಶೋಭೂಮಿʼಯಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇಂದು, 3,000ಕ್ಕೂ ಹೆಚ್ಚು ಪ್ರದರ್ಶಕರು... 100 ದೇಶಗಳಿಂದ ಸುಮಾರು 3,000 ಖರೀದಿದಾರರು... 40,000ಕ್ಕೂ ಹೆಚ್ಚು ವ್ಯಾಪಾರ ಸಂದರ್ಶಕರು... ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಈ ಕಾರ್ಯಕ್ರಮವು ಜವಳಿ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರನ್ನು ಮತ್ತು ಇಡೀ ಮೌಲ್ಯ ಸರಪಳಿಯನ್ನು ಒಗ್ಗೂಡಿಸಲು ವೇದಿಕೆಯನ್ನು ಒದಗಿಸುತ್ತಿದೆ.

​​​​​​​ನವದೆಹಲಿಯಲ್ಲಿ ಭಾರತ್ ಟೆಕ್ಸ್ 2024 ಉದ್ಘಾಟಿಸಿದ ಪ್ರಧಾನಿ

February 26th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ದೇಶದಲ್ಲಿ ಆಯೋಜಿಸಿರುವ ಅತಿದೊಡ್ಡ ಜಾಗತಿಕ ಜವಳಿ ಮೇಳ ಎಂದು ಹೆಸರಾಗಿರುವ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸಿದರು. ಮೇಳದಲ್ಲಿ ಪ್ರದರ್ಶಿಸಿರುವ ಮಳಿಗೆಗಳಲ್ಲಿ ಓಡಾಡಿದ ಪ್ರಧಾನಿ ಅವರು ಅಲ್ಲಿನ ವಸ್ತುಗಳನ್ನು ವೀಕ್ಷಿಸಿದರು.

PM to inaugurate Bharat Tex 2024 on 26th February

February 25th, 03:32 pm

Prime Minister Narendra Modi will inaugurate Bharat Tex 2024, one of the largest-ever global textile events to be organised in the country, on 26th February at Bharat Mandapam, New Delhi. Bharat Tex 2024 is being organised from 26-29 February, 2024. Drawing inspiration from the 5F Vision of the Prime Minister, the event has a unified farm to foreign via fibre, fabric and fashion focus, covering the entire textiles value chain.