'ಭಾರತ್ ಕೋ ಜಾನಿಯೇ' ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವಂತೆ ಅನಿವಾಸಿ ಭಾರತೀಯಗೆ ಪ್ರಧಾನಿಯವರಿಂದ ಮನವಿ

November 23rd, 09:15 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಭಾರತ್ ಕೋ ಜಾನಿಯೆ' (ಭಾರತವನ್ನು ತಿಳಿಯಿರಿ) ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅನಿವಾಸಿ ಭಾರತೀಯರು ಮತ್ತು ಇತರ ದೇಶಗಳ ಸ್ನೇಹಿತರನ್ನು ಆಹ್ವಾನಿಸಿದರು. ಈ ರಸಪ್ರಶ್ನೆಯು ಭಾರತ ಮತ್ತು ವಿಶ್ವಾದ್ಯಂತ ಇರುವ ವಲಸಿಗರ ನಡುವಿನ ಸಂಪರ್ಕವನ್ನು ಉತ್ತಮಗೊಳಿಸುವುದಲ್ಲದೆ ನಮ್ಮ ಭಾರತೀಯ ಶ್ರೀಮಂತ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಮರುಶೋಧಿಸುವ ಅದ್ಭುತ ಮಾರ್ಗವಾಗಿದೆ ಎಂದು ಅವರು ತಿಳಿಸಿದರು.