ಪ್ರಧಾನಮಂತ್ರಿ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಜರುಗಿದ ಅತ್ಯುತ್ತಮ ಸಂಸದರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಡಿದ ಭಾಷಣದ ಕನ್ನಡ ಅವತರಣಿಕೆ

August 01st, 07:57 pm

ಪ್ರಪ್ರಥಮವಾಗಿ ಐವರು ಪ್ರಶಸ್ತಿ ವಿಜೇತರಿಗೆ ನಾನು ಹೃದಯಾಳದಿಂದ ಶುಭ ಹಾರೈಸಲು ಬಯಸುತ್ತೇನೆ. ದೇಶ ಈ ಸಮಾರಂಭವನ್ನು ಟಿವಿಯಲ್ಲಿ ವೀಕ್ಷಿಸುತ್ತಿರಬೇಕು ಮತ್ತು ಇವರು ನಾವು ದಿನಂಪ್ರತಿ ಕಾಣುವ ಸಂಸದರಲ್ಲವೇ! ಎಂದು ಆಶ್ಚರ್ಯ ಪಡುತ್ತಿರಬೇಕು. ಎಲ್ಲರೂ ಶಾಂತ ಮತ್ತು ಸಂಯೋಜಿತರಾಗಿರುವ ಈ ಸಮಾರಂಭಕ್ಕೆ ಸಾಕ್ಷಿಯಾಗಲು ಉಪರಾಷ್ರ್ಟಪತಿ ಮತ್ತು ಮ್ಯಾಡಮ್ ಸ್ಪೀಕರ್ ಅವರೂ ನಿಜವಾಗಿಯೂ ಸಂತೋಷ ಪಡುತ್ತಿರಬೇಕು.

ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಗಿ

August 01st, 07:57 pm

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಭಾರತೀಯ ಸಂಸದೀಯ ಗುಂಪು ಆಯೋಜಿಸಿದ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಯವರಾದ ಶ್ರೀ ರಾಮ್ ನಾಥ್ ಕೋವಿಂದ್ ಅವರು ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಉಪರಾಷ್ಟ್ರಪತಿಯವರಾದ ಶ್ರೀ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಶ್ರೀಮತಿ ಸುಮಿತ್ರಾ ಮಹಾಜನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.