ಜಂಟಿ ಹೇಳಿಕೆ: ಭಾರತ-ಆಸ್ಟ್ರೇಲಿಯಾ 2ನೇ ವಾರ್ಷಿಕ ಶೃಂಗಸಭೆ
November 19th, 11:22 pm
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಎಂಪಿ ಅವರು 2024ರ ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ʻಗ್ರೂಪ್ ಆಫ್ 20ʼ (ಜಿ 20) ಶೃಂಗಸಭೆಯ ನೇಪಥ್ಯದಲ್ಲಿ ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಸಿದರು.ಅಕ್ಟೋಬರ್ 29 ರಂದು ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು 12,850 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಹು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ
October 28th, 12:47 pm
ಧನ್ವಂತರಿ ಜಯಂತಿ ಮತ್ತು 9ನೇ ಆಯುರ್ವೇದ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 29 ರಂದು ಮಧ್ಯಾಹ್ನ 12:30 ಕ್ಕೆ ನವದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ)ಯಲ್ಲಿ ಸುಮಾರು 12,850 ಕೋಟಿ ರೂಪಾಯಿಗಳ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆಯನ್ನು ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.ಬೆಂಗಳೂರಿನಲ್ಲಿ ಕಟ್ಟಡ ಕುಸಿತದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ; ಪಿ.ಎಂ.ಎನ್.ಆರ್.ಎಫ್ ನಿಂದ ಪರಿಹಾರ ಘೋಷಣೆ
October 24th, 07:47 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಕಟ್ಟಡ ಕುಸಿತದಲ್ಲಿ ಸಂಭವಿಸಿದ ಜೀವಹಾನಿಗೆ ಇಂದು ಸಂತಾಪ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೃತರ ಹತ್ತಿರದ ಸಂಬಂಧಿಗಳಿಗೆ ಪಿ.ಎಂ.ಎನ್.ಆರ್.ಎಫ್. ನಿಂದ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಘೋಷಿಸಿದರು.ಭಾರತ ಮತ್ತು ಮಾಲ್ಡೀವ್ಸ್: ಸಮಗ್ರ ಆರ್ಥಿಕ ಮತ್ತು ಕಡಲ ತೀರದ ಸುರಕ್ಷತೆಯಲ್ಲಿ ಪಾಲುದಾರಿಕೆಗಾಗಿ ಒಂದು ದೂರದರ್ಶಿತ್ವ
October 07th, 02:39 pm
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮೊಹಮದ್ ಮುಯಿಝು ಅವರು 7ನೇ ಅಕ್ಟೋಬರ್ 2024ರಂದು ಭೇಟಿಯಾಗಿದ್ದರು. ದ್ವಿಪಕ್ಷೀಯ ಸಂಬಂಧಗಳ ವಿಚಾರವಾಗಿ ವಿಸ್ತೃತವಾಗಿ ಸಮಗ್ರವಾಗಿ ಪರಿಶೀಲಿಸಿದ ಉಭಯ ನಾಯಕರು ಎರಡೂ ದೇಶಗಳ ಜನರ ಒಳಿತಿಗಾಗಿ ಐತಿಹಾಸಿಕವೆನಿಸುವ ಇನ್ನಷ್ಟು ನಿಕಟ ಮತ್ತು ವಿಶೇಷ ಸಂಬಂಧವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈವರೆಗೆ ಸಾಧಿಸಿದ ಪ್ರಗತಿಯ ಪರಿಶೀಲನೆ ನಡೆಸಿದರು.ಶ್ರೀ ನಾಡಪ್ರಭು ಕೆಂಪೇಗೌಡ ಅವರಿಗೆ ಪ್ರಧಾನಮಂತ್ರಿ ನಮನ
June 27th, 04:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಶ್ರೀ ನಾಡಪ್ರಭು ಕೆಂಪೇಗೌಡರು ಆರ್ಥಿಕ ಹಿತಚಿಂತನೆ, ಕೃಷಿ, ನೀರಾವರಿ ಮುಂತಾದವುಗಳಿಗೆ ಉತ್ತೇಜನ ನೀಡುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ಶ್ರೀ ಮೋದಿ ಹೇಳಿದರು.ಬೆಂಗಳೂರಿನ ವಿಕಸಿತ್ ಭಾರತ್ ರಾಯಭಾರಿಗಳು ರಾಮನವಮಿಯಂದು ‘ಸಂಗೀತ ಮತ್ತು ಧ್ಯಾನದ ಸಂಜೆ’ಗೆ ಸೇರುತ್ತಾರೆ
April 18th, 05:13 pm
ಬುಧವಾರ, ಏಪ್ರಿಲ್ 17 ರಂದು, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ವಿಕಸಿತ್ ಭಾರತ್ ರಾಯಭಾರಿಗಳೊಂದಿಗೆ ಸಂಗೀತ ಮತ್ತು ಧ್ಯಾನದ ಸಂಜೆ ಎಂಬ ಕಾರ್ಯಕ್ರಮಕ್ಕಾಗಿ ವಿವಿಧ ಹಿನ್ನೆಲೆಗಳಿಂದ 10,000 ಕ್ಕೂ ಹೆಚ್ಚು ಜನರು ಸೇರಿದ್ದರು. ಆರ್ಟ್ ಆಫ್ ಲಿವಿಂಗ್ ಶಿಷ್ಯರು, ಬೋಧಕರು, ವೃತ್ತಿಪರರು ಮತ್ತು ವಿವಿಧ ವಯೋಮಾನದ ವಿದ್ಯಾವಂತ ವ್ಯಕ್ತಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿದ್ದರು.ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
January 19th, 03:15 pm
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಜೀ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜೀ, ಭಾರತದಲ್ಲಿ ಬೋಯಿಂಗ್ ಕಂಪನಿಯ ಸಿಒಒ ಸ್ಟೆಫನಿ ಪೋಪ್, ಇತರ ಉದ್ಯಮ ಪಾಲುದಾರರು, ಮಹಿಳೆಯರೇ ಮತ್ತು ಮಹನೀಯರೇ!ಪ್ರಧಾನಿ ಅವರಿಂದ ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಉದ್ಘಾಟನೆ
January 19th, 02:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿಂದು ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿಸಿ)ಯ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದನ್ನು 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಇದು ಅಮೆರಿಕಾದ ಹೊರಗೆ ಸ್ಥಾಪನೆಯಾಗಿರುವ ಬೃಹತ್ ಬೋಯಿಂಗ್ ಆಗಿದೆ. ಪ್ರಧಾನಮಂತ್ರಿ ಅವರು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೈಮಾನಿಕ ವಲಯದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿ ಇರುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.ಜನವರಿ 19ರಂದು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿ
January 17th, 09:32 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 19ರಂದು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ 10:45ರ ಸುಮಾರಿಗೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಪ್ರಧಾನ ಮಂತ್ರಿ ಅವರು ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 2:45ರ ಸುಮಾರಿಗೆ ಪ್ರಧಾನಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಜತೆಗೆ, ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ, ಸಂಜೆ 6 ಗಂಟೆಗೆ ತಮಿಳುನಾಡಿನ ಚೆನ್ನೈನಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2023ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ T2 ಇಂಟೀರಿಯರ್‌ಗಾಗಿ ವಿಶ್ವ ವಿಶೇಷ ಬಹುಮಾನ ಪಡೆದಿದ್ದಕ್ಕೆ ಪ್ರಧಾನಿ ಅಭಿನಂದನೆ
December 23rd, 05:53 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಟರ್ಮಿನಲ್ 2 ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಇಂಟೀರಿಯರ್ 2023ಗಾಗಿ ವಿಶೇಷ ಬಹುಮಾನಕ್ಕೆ ಭಾಜನರಾಗಿದ್ದಕ್ಕಾಗಿ ಅಭಿನಂದಿಸಿದರು.Aatmanirbharta in Defence: India First Soars as PM Modi Takes Flight in LCA Tejas
November 28th, 03:40 pm
Prime Minister Narendra Modi visited Hindustan Aeronautics Limited (HAL) in Bengaluru today, as the state-run plane maker experiences exponential growth in manufacturing prowess and export capacities. PM Modi completed a sortie on the Indian Air Force's multirole fighter jet Tejas.ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಎರಡು ಪ್ರಮುಖ ವಿಸ್ತರಣೆಗಳಲ್ಲಿ ಸೇವೆಗಳ ಆರಂಭದ ಬಗ್ಗೆ ಪ್ರಧಾನಿ ಸಂತಸ
October 09th, 06:28 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಎರಡು ಪ್ರಮುಖ ವಿಸ್ತರಣೆಗಳಲ್ಲಿ ಸೇವೆಗಳು ಪ್ರಾರಂಭವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಫಲಪ್ರದ ಪ್ರವಾಸದ ನಂತರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ
August 26th, 10:08 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 4 ದಿನಗಳ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಫಲಪ್ರದ ಪ್ರವಾಸದ ನಂತರ ಇಂದು ಬೆಂಗಳೂರಿಗೆ ಬಂದಿಳಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ, ನಂತರ ಗ್ರೀಸ್‌ಗೆ ಭೇಟಿ ನೀಡಿದರು. ಪ್ರಧಾನ ಮಂತ್ರಿ ಅವರು ವಿವಿಧ ದ್ವಿಪಕ್ಷೀಯ ಸಭೆಗಳನ್ನು ಮತ್ತು ಸ್ಥಳೀಯ ಚಿಂತಕರ ಗುಂಪಿನೊಂದಿಗೆ ಸಭೆಗಳನ್ನು ನಡೆಸಿದರು. ಮೋದಿ ಅವರು ಎರಡೂ ದೇಶಗಳಲ್ಲಿ ಇರುವ ರೋಮಾಂಚಕ ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು. ಮೂಲಕ ಚಂದ್ರಯಾನ-3 ಮೂನ್ ಲ್ಯಾಂಡರ್ ಲ್ಯಾಂಡಿಂಗ್ ಅನ್ನು ವೀಡಿಯೊ ಕಾನ್ಫರೆನ್ಸ್ ವೀಕ್ಷಿಸಿದ್ದ ಪ್ರಧಾನಿ ಅವರು, ಇಂದು ಇಸ್ರೋ ತಂಡದೊಂದಿಗೆ ಸಂವಾದ ನಡೆಸಲು ಬೆಂಗಳೂರಿಗೆ ಬಂದಿಳಿದರು.ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತಕ್ಕೆ ಹಿಂದಿರುಗಿದ ತಕ್ಷಣ, ಆಗಸ್ಟ್ 26 ರಂದು ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ.
August 25th, 08:10 pm
ಆಗಸ್ಟ್ 26 , 2೦23 ರಂದು ಬೆಳಿಗ್ಗೆ 7:15 ರ ಸುಮಾರಿಗೆ ಬೆಂಗಳೂರಿನಲ್ಲಿ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐ.ಎಸ್.ಟಿ.ಆರ್.ಎ.ಸಿ) ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ನಂತರ ತಕ್ಷಣವೇ ಬೆಂಗಳೂರು ತಲುಪಲಿದ್ದಾರೆ.ಜಿ20 ಡಿಜಿಟಲ್ ಆರ್ಥಿಕತೆ ಸಚಿವರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ವಿಡಿಯೋ ಸಂದೇಶದ ಪಠ್ಯ
August 19th, 11:05 am
ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಡಿಜಿಟಲ್ ರೂಪಾಂತರವು ಅಭೂತಪೂರ್ವವಾಗಿದೆ. ಇದು 2015ರಲ್ಲಿ ನಮ್ಮ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸುವುದರೊಂದಿಗೆ ಆರಂಭವಾಯಿತು. ನಾವೀನ್ಯತೆಯಲ್ಲಿ ನಮ್ಮ ಅಚಲ ನಂಬಿಕೆಯಿಂದ ಇದು ಶಕ್ತಿಯುತವಾಗಿದೆ. ತ್ವರಿತ ಅನುಷ್ಠಾನಕ್ಕೆ ನಮ್ಮ ಬದ್ಧತೆಯಿಂದ ಇದು ಚಾಲಿತವಾಗಿದೆ. ಮತ್ತು, ಇದು ಯಾರನ್ನೂ ಹಿಂದೆ ಬಿಡದೆ ನಮ್ಮ ಒಳಗೊಳ್ಳುವಿಕೆಯ ಮನೋಭಾವದಿಂದ ಪ್ರೇರೇಪಿಸಲ್ಪಟ್ಟಿದೆ. ಈ ರೂಪಾಂತರದ ಪ್ರಮಾಣ, ವೇಗ ಮತ್ತು ವ್ಯಾಪ್ತಿ ಕಲ್ಪನೆಗೂ ಮೀರಿದ್ದಾಗಿದೆ. ಇಂದು, ಭಾರತವು 850 ದಶಲಕ್ಷಕ್ಕೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ, ಇದು ವಿಶ್ವದ ಅಗ್ಗದ ಡೇಟಾ ವೆಚ್ಚಗಳನ್ನು ಆನಂದಿಸುತ್ತಿದೆ. ಆಡಳಿತವನ್ನು ಹೆಚ್ಚು ದಕ್ಷ, ಅಂತರ್ಗತ, ವೇಗ ಮತ್ತು ಪಾರದರ್ಶಕವಾಗಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ನಮ್ಮ ವಿಶಿಷ್ಟ ಡಿಜಿಟಲ್ ಗುರುತಿನ ವೇದಿಕೆಯಾದ ಆಧಾರ್ ನಮ್ಮ ಒಂದು ಬಿಲಿಯನ್ ಗಿಂತಲೂ ಹೆಚ್ಚು ಜನರನ್ನು ಒಳಗೊಂಡಿದೆ. ಭಾರತದಲ್ಲಿ ಆರ್ಥಿಕ ಸೇರ್ಪಡೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಾವು ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಮತ್ತು ಮೊಬೈಲ್ ಎಂಬ JAM ತ್ರಿಮೂರ್ತಿಗಳ ಶಕ್ತಿಯನ್ನು ಬಳಸಿದ್ದೇವೆ. ಪ್ರತಿ ತಿಂಗಳು, ನಮ್ಮ ತ್ವರಿತ ಪಾವತಿ ವ್ಯವಸ್ಥೆಯಾದ ಯುಪಿಐನಲ್ಲಿ ಸುಮಾರು 10 ಶತಕೋಟಿ ರೂ. ವಹಿವಾಟುಗಳು ನಡೆಯುತ್ತವೆ. ಜಾಗತಿಕ ನೈಜ ಸಮಯದ ಪಾವತಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ. ನೇರ ಪ್ರಯೋಜನಗಳು ಸರ್ಕಾರದ ಬೆಂಬಲದ ವರ್ಗಾವಣೆಯು ಸೋರಿಕೆಯನ್ನು ತಡೆಯುತ್ತಿದೆ ಮತ್ತು 33 ಶತಕೋಟಿ ಡಾಲರ್ ಗಳನ್ನು ಉಳಿಸಿದೆ. ಕೋವಿನ್ ಪೋರ್ಟಲ್ಜಿ-20 ಡಿಜಿಟಲ್ ಆರ್ಥಿಕ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ
August 19th, 09:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಡಿಜಿಟಲ್ ಆರ್ಥಿಕತೆ ಕುರಿತ ಸಚಿವರ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿದರು.ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ: ಪ್ರಧಾನಿ ಶ್ಲಾಘನೆ
August 18th, 01:15 pm
ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಮಹಾರಾಷ್ಟ್ರದ ಪುಣೆಯಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಅನುವಾದ
August 01st, 02:00 pm
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ರಮೇಶ್ ಬೈಸ್ ಅವರೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಅವರೇ ಮತ್ತು ಅಜಿತ್ ಪವಾರ್ ಅವರೇ, ದಿಲೀಪ್ ಅವರೇ, ಇತರ ಸಚಿವರೇ, ಸಂಸದರೇ, ಶಾಸಕರು ಮತ್ತು ಸಹೋದರ -ಸಹೋದರಿಯರೇ!ಮಹಾರಾಷ್ಟ್ರದ ಪುಣೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಪ್ರಧಾನಮಂತ್ರಿ.
August 01st, 01:41 pm
ಪುಣೆಯ ಮೆಟ್ರೋದಲ್ಲಿ ಪೂರ್ಣಗೊಂಡ ವಿಭಾಗಗಳಲ್ಲಿ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದರು. ಪಿಂಪ್ರಿ ಚಿನ್ ಚನ್ ವಾಡ್ ನಗರ ಪಾಲಿಕೆ [ಪಿಸಿಎಂಸಿ] ವ್ಯಾಪ್ತಿಯಡಿ 1280 ಮನೆಗಳನ್ನು ಅವರು ಹಸ್ತಾಂತರಿಸಿದರು ಮತ್ತು ಪುಣೆ ನಗರ ಪಾಲಿಕೆಯಿಂದ ಪಿಎಂಎವೈ ಯೋಜನೆಯಡಿ 2650ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗಾಗಿ ನಿರ್ಮಿಸಲಾಗಿದೆ. ಪಿಸಿಎಂಸಿಯಿಂದ ಸುಮಾರು 1190 ಪಿಎಂಎವೈ ಮನೆಗಳ ನಿರ್ಮಾಣಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು. ಪುಣೆ ಮೆಟ್ರೋಪಾಲಿಟಿನ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ 6400ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಪಿಸಿಎಂಸಿ ಅಭಿವೃದ್ಧಿಯಿಂದ 300 ಕೋಟಿ ರೂಪಾಯಿ ವೆಚ್ಚದಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಘಟಕವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.ಸ್ವಾಮಿಹ್ ನಿಧಿ ಅಡಿಯಲ್ಲಿ ಬೆಂಗಳೂರಿನ ಮೊದಲ ಯೋಜನೆಯ ಹೊಸ ಮನೆ ಮಾಲೀಕರಿಗೆ ಪ್ರಧಾನಿಗಳಿಂದ ಅಭಿನಂದನೆ
July 03rd, 10:08 pm
ಸ್ವಾಮಿಹ್ ನಿಧಿಯಡಿಯಲ್ಲಿ ಬೆಂಗಳೂರಿನ ಮೊದಲ ಯೋಜನೆಯಲ್ಲಿ ಮನೆ ಖರೀದಿಸಿ ತಮ್ಮ ಕನಸು ನನಸು ಮಾಡಿಕೊಂಡ 3,000 ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.