ಪೊಹರಾದೇವಿಯಲ್ಲಿರುವ ಬಂಜಾರ ವಿರಾಸತ್ ಮ್ಯೂಸಿಯಂ ಬಂಜಾರ ಸಂಸ್ಕೃತಿಯನ್ನು ಸಂಭ್ರಮಿಸುವ ಶ್ಲಾಘನೀಯ ಪ್ರಯತ್ನ: ಪ್ರಧಾನಮಂತ್ರಿ

October 05th, 04:39 pm

ಪೊಹರಾದೇವಿಯಲ್ಲಿ ಬಂಜಾರ ವಿರಾಸತ್ ವಸ್ತು ಸಂಗ್ರಹಾಲಯವನ್ನು ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಹೊಂದಿರುವ ಎಲ್ಲರೂ ಈ ಮ್ಯೂಸಿಯಂಗೆ ಒಮ್ಮೆ ಭೇಟಿ ನೀಡುವಂತೆ ಅವರು ಒತ್ತಾಯಿಸಿದರು.

ಅಕ್ಟೋಬರ್ 5ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

October 04th, 05:39 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 5 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:15 ರ ಸುಮಾರಿಗೆ ಅವರು ಪೊಹರಾದೇವಿಯ ಜಗದಂಬಾ ಮಾತಾ ದೇವಸ್ಥಾನದಲ್ಲಿ ದರ್ಶನ ಪಡೆಯಲಿದ್ದಾರೆ. ವಾಶಿಮ್ ನಲ್ಲಿ ಸಂತ ಸೇವಾಲಾಲ್ ಮಹಾರಾಜ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರ ಸಮಾಧಿಗಳಿಗೂ ಅವರು ಗೌರವ ನಮನ ಸಲ್ಲಿಸಲಿದ್ದಾರೆ. ನಂತರ ಬೆಳಗ್ಗೆ 11.30ಕ್ಕೆ ಬಂಜಾರ ಸಮುದಾಯದ ಶ್ರೀಮಂತ ಪರಂಪರೆಯನ್ನು ಸಾರುವ ಬಂಜಾರ ವಿರಾಸತ್ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅವರು ಸುಮಾರು 23,300 ಕೋಟಿ ರೂ.ಗಳ ಕೃಷಿ ಮತ್ತು ಪಶುಸಂಗೋಪನಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಅವರು ಥಾಣೆಯಲ್ಲಿ 32,800 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ಬಿಕೆಸಿ ಮೆಟ್ರೋ ನಿಲ್ದಾಣದಿಂದ ಬಿಕೆಸಿಯಿಂದ ಮುಂಬೈನ ಆರೆ ಜೆವಿಎಲ್ಆರ್ ಗೆ ಚಲಿಸುವ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅವರು ಬಿಕೆಸಿ ಮತ್ತು ಸಾಂತಾಕ್ರೂಜ್ ನಿಲ್ದಾಣಗಳ ನಡುವಿನ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ.