`ಭಾರತ-ಬಾಂಗ್ಲಾದೇಶ ಸ್ನೇಹ ಕೊಳವೆ ಮಾರ್ಗʼದ (ಇಂಧನ ಕೊಳವೆ ಮಾರ್ಗ) ಜಂಟಿ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಕನ್ನಡ ಅನುವಾದ

March 18th, 05:10 pm

ಇಂದು ಭಾರತ-ಬಾಂಗ್ಲಾದೇಶ ಬಾಂಧವ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ʻಭಾರತ-ಬಾಂಗ್ಲಾದೇಶ ಸ್ನೇಹ ಕೊಳವೆ ಮಾರ್ಗʼಕ್ಕೆ (ಇಂಧನ ಕೊಳವೆ ಮಾರ್ಗಕ್ಕೆ) ನಾವು 2018ರ ಸೆಪ್ಟೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದೆವು. ಇಂದು ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಇದನ್ನು ಉದ್ಘಾಟಿಸುವ ಅವಕಾಶ ಬಂದಿರುವುದು ನನಗೆ ಸಂತೋಷ ತಂದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್ಲೈನ್ ಅನ್ನು ಜಂಟಿಯಾಗಿ ಉದ್ಘಾಟಿಸಿದರು

March 18th, 05:05 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶ್ರೀಮತಿ ಶೇಖ್ ಹಸೀನಾ ಅವರು ಇಂದು ಭಾರತ-ಬಾಂಗ್ಲಾದೇಶ ಮೈತ್ರಿ ಪೈಪ್ಲೈನ್ (ಐ ಬಿ ಎಫ್ ಪಿ) ಅನ್ನು ವರ್ಚುವಲ್ ವಿಧಾನದಲ್ಲಿ ಜಂಟಿಯಾಗಿ ಉದ್ಘಾಟಿಸಿದರು. ಈ ಪೈಪ್ಲೈನ್ನ ನಿರ್ಮಾಣಕ್ಕೆ ಸೆಪ್ಟೆಂಬರ್ 2018 ರಲ್ಲಿ ಇಬ್ಬರೂ ಪ್ರಧಾನ ಮಂತ್ರಿಗಳು ಅಡಿಪಾಯ ಹಾಕಿದ್ದರು. ನುಮಾಲಿಗಢ್ ರಿಫೈನರಿ ಲಿಮಿಟೆಡ್ 2015 ರಿಂದ ಬಾಂಗ್ಲಾದೇಶಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುತ್ತಿದೆ. ಇದು ಭಾರತ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳ ನಡುವಿನ ಎರಡನೇ ಗಡಿಯಾಚೆಗಿನ ಇಂಧನ ಪೈಪ್ಲೈನ್ ಆಗಿದೆ.

ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಸಮಾಧಿಗೆ ಪ್ರಧಾನಮಂತ್ರಿ ಗೌರವ ನಮನ

March 27th, 01:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಎರಡು ದಿನಗಳ ಭೇಟಿಯ ಎರಡನೇ ದಿನ ತುಂಗಿಪುರದಲ್ಲಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಇದರೊಂದಿಗೆ ಬಂಗಬಂಧು ಸಮಾಧಿ ಸ್ಥಳದಲ್ಲಿ ಗೌರವನಮನ ಸಲ್ಲಿಸಿದ ಪ್ರಥಮ ವಿದೇಶೀ ಮುಖ್ಯಸ್ಥರು ಅಥವಾ ಸರ್ಕಾರದ ಮುಖ್ಯಸ್ಥರೆನಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಈ ಐತಿಹಾಸಿಕ ಕ್ಷಣದ ನೆನಪಿಗಾಗಿ ಬಕುಲ ಗಿಡವನ್ನು ನೆಟ್ಟರು. ಅವರ ಸಹವರ್ತಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಅವರ ಸೋದರಿ ಶೇಖ್ ರೆಹನಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.