ಕೇಂದ್ರ ವಲಯ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿ.ಎಂ.ಎಫ್.ಬಿ.ವೈ) ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್.ಡಬ್ಲ್ಯೂ.ಬಿ.ಸಿ.ಐ.ಎಸ್.) ಗಳ ಅನುಷ್ಠಾನ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ವೈಶಿಷ್ಟ್ಯಗಳು/ ನಿಬಂಧನೆಗಳಲ್ಲಿ ಸೂಕ್ತ ಮಾರ್ಪಾಡು/ ಸೇರ್ಪಡೆಗೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ
January 01st, 03:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಸ್ತುತ 2021-22 ರಿಂದ 2025 ರವರೆಗೆ ಅನುಷ್ಠಾನದಲ್ಲಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ರೂ.69,515.71 ಕೋಟಿಗಳ ಒಟ್ಟಾರೆ ವೆಚ್ಚದೊಂದಿಗೆ 2025-26 ರವರೆಗೆ ಮುಂದುವರಿಸಲು ಅನುಮೋದಿಸಿದೆ. ಈ ನಿರ್ಧಾರವು 2025-26 ರವರೆಗೆ ದೇಶದಾದ್ಯಂತ ರೈತರಿಗೆ ಕೈಮಿಗಿಲಾಗಿ ಸಂಭವಿಸುವ ತಡೆಗಟ್ಟಲಾಗದ ನೈಸರ್ಗಿಕ ವಿಕೋಪಗಳಿಂದ ಬೆಳೆಗಳ ಅಪಾಯದ ಸಂದರ್ಭದಲ್ಲಿ ಪರಿಹಾರ ನೀಡಲು ಸಹಾಯ ಮಾಡುತ್ತದೆ.