ಡಿಸೆಂಬರ್ 13 ರಂದು ಶ್ರೀ ಅರಬಿಂದೋ ಅವರ 150 ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಮಂತ್ರಿ
December 12th, 06:10 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಡಿಸೆಂಬರ್, 13ರಂದು ಸಂಜೆ 5 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಶ್ರೀ ಅರಬಿಂದೋ ಅವರ 150 ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುದುಚೇರಿಯ ಕಂಬನ್ ಕಲೈ ಸಂಗಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಶ್ರೀ ಅರಬಿಂದೋ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ದೇಶಾದ್ಯಂತದ ಶ್ರೀ ಅರಬಿಂದೋ ಅವರ ಅನುಯಾಯಿಗಳು ಪಾಲ್ಗೊಳ್ಳುವ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.ಶ್ರೀ ಅರಬಿಂದೋ ಅವರನ್ನು ಅವರ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿ
August 15th, 07:02 pm
ಇಂದು ಶ್ರೀ ಅರಬಿಂದೋ ಅವರ ಜಯಂತಿಯಂದು ಅವರನ್ನು ಸ್ಮರಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಶ್ರೀ ಅರಬಿಂದೋ ಅವರು ನಮ್ಮ ರಾಷ್ಟ್ರದ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದ ಮೇಧಾವಿಯಾಗಿದ್ದರು. ಅವರು ಶಿಕ್ಷಣ, ಧೀಮಂತಿಕೆ ಮತ್ತು ಶೌರ್ಯಕ್ಕೆ ನೀಡಿದ ಒತ್ತು ನಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.ಭಾರತೀಯ ಸಂಸ್ಕೃತಿಯ ಕಂಪನವು ಯಾವಾಗಲೂ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತದೆ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ
January 30th, 11:30 am
ಸ್ನೇಹಿತರೆ, ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ದೇಶ ಇಂಥ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಪ್ರತಿಷ್ಠೆಯನ್ನು ಪುನಃ ಪ್ರತಿಸ್ಥಾಪಿಸುತ್ತಿದೆ. ಇಂಡಿಯಾ ಗೇಟ್ ಬಳಿಯ ‘ಅಮರ ಜವಾನ್ ಜ್ಯೋತಿ’ ಯನ್ನು ಹತ್ತಿರವೇ ‘ರಾಷ್ಟ್ರೀಯ ಯುದ್ಧ ಸ್ಮಾರಕ’ ದ ಜ್ಯೋತಿಗಳಲ್ಲಿ ಲೀನಗೊಳಿಸಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಇಂಥ ಭಾವನಾತ್ಮಕ ಸಂದರ್ಭದಲ್ಲಿ ಬಹಳಷ್ಟು ದೇಶವಾಸಿಗಳು ಮತ್ತು ಹುತಾತ್ಮ ಕುಟುಂಬದವರ ಕಣ್ಣಲ್ಲಿ ನೀರು ಜಿನುಗಿತ್ತು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಬರೆಯಲಾಗಿದೆ. ನನಗೆ ಸೇನೆಯ ಕೆಲವು ಮಾಜಿ ಯೋಧರು ಪತ್ರ ಬರೆದು ಹೀಗೆ ಹೇಳಿದ್ದಾರೆ – “ಹುತಾತ್ಮರ ನೆನಪುಗಳೆದುರು ಪ್ರಜ್ವಲಿಸುತ್ತಿರುವ ‘ಅಮರ ಜವಾನ್ ಜ್ಯೋತಿ’ ಹುತಾತ್ಮರು ಅಮರರಾಗಿರುವುದಕ್ಕೆ ಸಾಕ್ಷಿಯಾಗಿದೆ.” ಅಮರ ಜವಾನ್ ಜ್ಯೋತಿ’ ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಿಮ್ಮೆಲ್ಲರಿಗೂ ಹೇಳಬಯಸುತ್ತೇನೆ. ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿ. ಇಲ್ಲಿ ನಿಮಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಪ್ರೇರಣೆಯ ಅನುಭವವಾಗುತ್ತದೆ.ಪುದುಚೇರಿಯಲ್ಲಿ 25 ನೇ ರಾಷ್ಟ್ರೀಯ ಯುವ ಮಹೋತ್ಸವದ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
January 12th, 03:02 pm
ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಜಿ, ಮುಖ್ಯಮಂತ್ರಿ ಎನ್ ರಂಗಸಾಮಿ ಜಿ, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ನಾರಾಯಣ ರಾಣೆ ಜಿ, ಶ್ರೀ ಅನುರಾಗ್ ಠಾಕೂರ್ ಜಿ, ಶ್ರೀ ನಿಸಿತ್ ಪ್ರಮಾಣಿಕ್ ಜಿ, ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಜಿ, ಪುದುಚೇರಿ ಸರ್ಕಾರದ ಹಿರಿಯ ಸಚಿವರು, ಸಂಸದರು, ಸಚಿವರು, ದೇಶದ ಇತರ ರಾಜ್ಯಗಳ ಶಾಸಕರು ಮತ್ತು ನನ್ನ ಯುವ ಸ್ನೇಹಿತರೇ! ವಣಕ್ಕಂ! ನಿಮಗೆಲ್ಲರಿಗೂ ರಾಷ್ಟ್ರೀಯ ಯುವ ದಿನದ ಅನೇಕ ಶುಭಾಶಯಗಳು!ಪುದುಚೇರಿಯಲ್ಲಿ 25ನೇ ರಾಷ್ಟ್ರೀಯ ಯುವ ಉತ್ಸವ ಉದ್ಘಾಟಿಸಿದ ಪ್ರಧಾನಮಂತ್ರಿ
January 12th, 11:01 am
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ರಾಷ್ಟ್ರೀಯ ಯುವ ದಿನದಂದು ರಾಷ್ಟ್ರಕ್ಕೆ ಶುಭ ಕೋರಿದರು. ಸ್ವಾಮಿ ವಿವೇಕಾನಂದರಿಗೆ ನಮಿಸಿದ ಪ್ರಧಾನಮಂತ್ರಿ, ಈ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಅವರ ಜನ್ಮ ದಿನವು ಹೆಚ್ಚು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.Prime Minister chairs the first meeting of High Level Committee to commemorate 150th Birth Anniversary of Sri Aurobindo
December 24th, 06:52 pm
PM Narendra Modi chaired the first meeting of the High Level Committee which has been constituted to commemorate 150th Birth Anniversary of Sri Aurobindo. The PM said that the two aspects of Sri Aurobindo’s philosophy of ‘Revolution’ and ‘Evolution’, are of key importance and should be emphasized as part of the commemoration.ಸರ್ದಾರ್ ಧಾಮ ಭವನ ಲೋಕಾರ್ಪಣೆ ಮತ್ತು ಸರ್ದಾರ್ ಧಾಮ ಹಂತ ll ರ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
September 11th, 11:01 am
ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ಭಾಯಿ ರೂಪಾನಿ ಜೀ, ಉಪಮುಖ್ಯಮಂತ್ರಿ ಶ್ರೀ ನಿತಿನ್ ಭಾಯಿ, ಸಂಪುಟದ ನನ್ನ ಸಹೋದ್ಯೋಗಿಗಳಾದ, ಸಚಿವರಾದ ಶ್ರೀ ಪರಶೋತ್ತಮ ರೂಪಾಲ ಜೀ, ಶ್ರೀ ಮನ್ಸುಖ್ ಭಾಯಿ ಮಾಂಡವೀಯ ಜೀ, ಅನುಪ್ರಿಯ ಪಟೇಲ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮತ್ತು ಗುಜರಾತ್ ಪ್ರದೇಶ ಬಿ.ಜೆ.ಪಿ. ಅಧ್ಯಕ್ಷರಾದ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಎಲ್ಲಾ ಸಚಿವರೇ, ಇಲ್ಲಿ ಹಾಜರಿರುವ ಎಲ್ಲಾ ಸಂಸತ್ ಸದಸ್ಯರೇ, ಗುಜರಾತಿನ ಶಾಸಕರೇ, ಸರ್ದಾರ್ ಧಾಮದ ಎಲ್ಲಾ ಟ್ರಸ್ಟೀಗಳೇ, ನನ್ನ ಸ್ನೇಹಿತರಾದ ಶ್ರೀ ಗಾಗಿಭಾಯಿ, ಟ್ರಸ್ಟಿನ ಎಲ್ಲಾ ಗೌರವಾನ್ವಿತ ಸದಸ್ಯರೇ, ಈ ಶ್ರೇಷ್ಠ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಎಲ್ಲಾ ಸ್ನೇಹಿತರೇ, ಮತ್ತು ಸಹೋದರರೇ ಹಾಗು ಸಹೋದರಿಯರೇ!.ಸರ್ದಾರ್ ಧಾಮ್ ಭವನ ಲೋಕಾರ್ಪಣೆ ಮತ್ತು ಸರ್ದಾರ್ ಧಾಮ್ ಎರಡನೇ ಹಂತದ ಬಾಲಕಿಯರ ವಿದ್ಯಾರ್ಥಿನಿಲಯದ ಭೂಮಿ ಪೂಜೆ ನೆರವೇರಿಸಿದ ಪ್ರಧಾನಮಂತ್ರಿ
September 11th, 11:00 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ದಾರ್ ಧಾಮ್ ಭವನ ಲೋಕಾರ್ಪಣೆ ಮತ್ತು ಸರ್ದಾರ್ ಧಾಮ್ ಎರಡನೇ ಹಂತದ ಬಾಲಕಿಯರ ವಿದ್ಯಾರ್ಥಿನಿಲಯದ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಉಪಸ್ಥಿತರಿದ್ದರು.75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಪ್ರಾಂಗಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದರು.
August 15th, 03:02 pm
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪವಿತ್ರ ದಿನವಾದ ಇಂದು, ದೇಶವು ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳು ತಮ್ಮನ್ನು ಸಮರ್ಪಿಸಿಕೊಂಡಿರುವ ವೀರರಿಗೆ ತಲೆಬಾಗಿ ನಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ ಪೂಜ್ಯ ಬಾಪು, ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಥವಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ ಮತ್ತು ಅಶ್ಫಖುಲ್ಲಾ ಖಾನ್ ರಂತಹ ಮಹಾನ್ ಕ್ರಾಂತಿಕಾರಿಗಳನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನೂ ದೇಶವು ಸ್ಮರಿಸಿಕೊಳ್ಳುತ್ತಿದೆ; ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ ಅಥವಾ ರಾಣಿ ಗಾಯಿಡಿನ್ಲಿಯು ಅಥವಾ ಮಾತಂಗಿನಿಹಜ್ರಾ ಅವರ ಶೌರ್ಯ; ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂ, ದೇಶವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಭಾರತದ ಭವಿಷ್ಯಕ್ಕೆ ದಿಕ್ಕು ತೋರಿದ ಬಾಬಾ ಸಾಹೇಬ್ ಅಂಬೇಡ್ಕರ್. ಈ ಎಲ್ಲ ಮಹಾನ್ ವ್ಯಕ್ತಿಗಳಿಗೆ ದೇಶ ಚಿರಋಣಿಯಾಗಿದೆ.ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ
August 15th, 07:38 am
ನಿಮ್ಮೆಲ್ಲರಿಗೂ ಶುಭಾಶಯಗಳು. ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ಭಾರತವನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಪ್ರೀತಿಸುವ ವಿಶ್ವದೆಲ್ಲೆಡೆ ಇರುವ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳನ್ನು ಅರ್ಪಿಸುತ್ತೇನೆ.ಭಾರತ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ
August 15th, 07:37 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ದೇಶವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಭಾಷಣದ ಸಮಯದಲ್ಲಿ, ಪ್ರಧಾನಿ ಮೋದಿ ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು ಮತ್ತು ಭವಿಷ್ಯದ ಯೋಜನೆಗಳನ್ನು ಹಾಕಿದರು. ಅವರು ತಮ್ಮ ಜನಪ್ರಿಯ ಘೋಷಣೆಯಾದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಅನ್ನು ಸೇರಿಸಿದರು. ಈ ಗುಂಪಿಗೆ ಇತ್ತೀಚಿನ ಪ್ರವೇಶವು ಸಬ್ಕಾ ಪ್ರಯಾಸ್ ಆಗಿದೆ.PM Modi addresses public meeting at Puducherry
March 30th, 04:31 pm
Addressing a public meeting in Puducherry today, Prime Minister Narendra Modi said, “There is something special about Puducherry that keeps bringing me back here again and again.” He accused Congress government for its negligence and said, “In the long list of non-performing Congress governments over the years, the previous Puducherry Government has a special place. The ‘High Command’ Government of Puducherry failed on all fronts.”“ಪ್ರಬುದ್ಧ ಭಾರತ”ದ 125 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಭಾಷಣ
January 31st, 03:01 pm
ಸ್ವಾಮಿ ವಿವೇಕಾನಂದರು ಆರಂಭಿಸಿದ, ರಾಮಕೃಷ್ಣ ಆಶ್ರಮದ ಮಾಸಿಕ ಪತ್ರಿಕೆ “ಪ್ರಬುದ್ಧ ಭಾರತ”ದ 125 ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಾಲ್ಗೊಂಡು ಭಾಷಣ ಮಾಡಿದರು.“ಪ್ರಬುದ್ಧ ಭಾರತ” 125 ನೇ ವರ್ಷಾಚರಣೆ: ಪ್ರಧಾನ ಮಂತ್ರಿ ಭಾಷಣ
January 31st, 03:00 pm
ಸ್ವಾಮಿ ವಿವೇಕಾನಂದರು ಆರಂಭಿಸಿದ, ರಾಮಕೃಷ್ಣ ಆಶ್ರಮದ ಮಾಸಿಕ ಪತ್ರಿಕೆ “ಪ್ರಬುದ್ಧ ಭಾರತ”ದ 125 ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಾಲ್ಗೊಂಡು ಭಾಷಣ ಮಾಡಿದರು.ಜನವರಿ 31, ‘ಪ್ರಬುದ್ಧ ಭಾರತ’ದ 125ನೇ ವಾರ್ಷಿಕೋತ್ಸವ ಉದ್ದೇಶಿಸಿ ಪ್ರಧಾನಿ ಭಾಷಣ
January 29th, 02:51 pm
1896 ರಲ್ಲಿ ಸ್ವಾಮಿ ವಿವೇಕಾನಂದ ಅವರು ಪ್ರಾರಂಭಿಸಿದ ರಾಮಕೃಷ್ಣ ಮಿಷನ್ ನ ಮಾಸ ಪತ್ರಿಕೆ 'ಪ್ರಬುದ್ಧ ಭಾರತ' ದ 125 ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಮಾತನಾಡಲಿದ್ದಾರೆ. 2021 ರ ಜನವರಿ 31 ರಂದು ಮಧ್ಯಾಹ್ನ 3.15 ಕ್ಕೆ ಪ್ರಧಾನಿಯವರ ಬಾಷಣ ಇರುತ್ತದೆ. ಈ ಕಾರ್ಯಕ್ರಮವನ್ನು ಮಾಯಾವತಿಯ ಅದ್ವೈತ ಆಶ್ರಮ ಆಯೋಜಿಸಿದೆ.Social Media Corner 25 February 2018
February 25th, 07:27 pm
Your daily dose of governance updates from Social Media. Your tweets on governance get featured here daily. Keep reading and sharing!PM Modi addresses programme to mark Golden Jubilee of Auroville Foundation
February 25th, 12:58 pm
Addressing a programme to mark fifty years of Auroville Foundation, PM Modi said that it was important to remember the vast extent of action and thought of Shri Aurobindo. He said that Shri Aurobindo was a man of action, a philosopher, a poet and there many more facets to his character which were dedicated to the good of the nation and humanity.ಮುಂದಿನ ಎರಡು ದಿನಗಳಲ್ಲಿ ಎರಡು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭೇಟಿ
February 23rd, 04:13 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಿಗೆ ಹಾಗು ದಮನ್ ಮತ್ತು ದಿಯು ಹಾಗು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನೆರಡು ದಿನಗಳಲ್ಲಿ ಭೇಟಿ ನೀಡಲಿದ್ದಾರೆ.