ನವದೆಹಲಿಯಲ್ಲಿ ನಡೆದ 2ನೇ ಏಷ್ಯಾ ಪೆಸಿಫಿಕ್ ನಾಗರಿಕ ವಿಮಾನಯಾನ ಸಚಿವರ ಸಮ್ಮೇಳನ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ
September 12th, 04:00 pm
ವಿವಿಧ ದೇಶಗಳಿಂದ ಆಗಮಿಸಿರುವ ಎಲ್ಲ ಗಣ್ಯರಿಗೆ ನಾನು ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಕಳೆದ 2 ದಿನಗಳಿಂದ ನಾಗರೀಕ ವಿಮಾನಯಾನ ವಲಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಿದ್ದೀರಿ. ನಮ್ಮ ಸಾಮೂಹಿಕ ಅಥವಾ ಸಂಘಟಿತ ಬದ್ಧತೆ ಮತ್ತು ಏಷ್ಯಾ ಪೆಸಿಫಿಕ್ ವಲಯದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಾವು ಕೆಲವು ಪ್ರಕಾಶಮಾನವಾದ ಮನಸ್ಸುಗಳನ್ನು ಹೊಂದಿದ್ದೇವೆ ಎಂದು ನಾನು ನಂಬುತ್ತೇನೆ. ಈ ಸಂಸ್ಥೆಯು 80 ವರ್ಷಗಳನ್ನು ಪೂರೈಸಿದೆ. ನಮ್ಮ ಸಚಿವರಾದ ಶ್ರೀ ನಾಯ್ಡು ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ, 80,000 ಮರಗಳನ್ನು ನೆಡುವ ಪ್ರಮುಖ ಉಪಕ್ರಮವನ್ನು 'ಏಕ್ ಪೆಡ್ ಮಾ ಕೆ ನಾಮ್'(ಭೂತಾಯಿಗಾಗಿ ಒಂದು ಮರ) ಕೈಗೊಳ್ಳಲಾಗಿದೆ. ಆದಾಗ್ಯೂ, ನಾನು ಇನ್ನೊಂದು ವಿಷಯದತ್ತ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಮ್ಮ ದೇಶದಲ್ಲಿ, ಒಬ್ಬ ವ್ಯಕ್ತಿ 80 ವರ್ಷ ತಲುಪಿದಾಗ, ಅದನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ನಮ್ಮ ಪೂರ್ವಜರ ಪ್ರಕಾರ, 80ನೇ ವಯಸ್ಸು ತಲುಪುವುದು ಎಂದರೆ ಒಂದು ಸಾವಿರ ಹುಣ್ಣಿಮೆಗಳನ್ನು ನೋಡುವ ಅವಕಾಶ ಹೊಂದಿರುವುದು ಎಂಬರ್ಥ. ಒಂದರ್ಥದಲ್ಲಿ ನಮ್ಮ ಈ ವಲಯದ ಸಂಸ್ಥೆಯೂ ಒಂದು ಸಾವಿರ ಹುಣ್ಣಿಮೆಗಳನ್ನು ಕಣ್ತುಂಬಿಕೊಂಡು ಹತ್ತಿರದಿಂದ ನೋಡಿದ ಅನುಭವ ಪಡೆದಿದೆ. ಹೀಗಾಗಿ, ಭೂಮಿಯ ಮೇಲಿನ ಈ 80 ವರ್ಷಗಳ ಪ್ರಯಾಣವು ಸ್ಮರಣೀಯ, ಯಶಸ್ವಿ ಮತ್ತು ಶ್ಲಾಘನೀಯ ಪ್ರಯಾಣವಾಗಿದೆ.ಏಷ್ಯಾ – ಪೆಸಿಫಿಕ್ ನಾಗರಿಕ ವಿಮಾನಯಾನ ಸಚಿವರ ಎರಡನೇ ಸಮ್ಮೇಳನದಲ್ಲಿ ಸೆಪ್ಟೆಂಬರ್ 12 ರಂದು ಪ್ರಧಾನಮಂತ್ರಿ ಭಾಗಿ
September 11th, 07:41 pm
ನವದೆಹಲಿಯ ಭಾರತ ಮಂಟಪಂನಲ್ಲಿ 2024 ರ ಸೆಪ್ಟೆಂಬರ್ 12 ರಂದು ಸಂಜೆ 4 ಗಂಟೆಗೆ ನಾಗರಿಕ ವಿಮಾನಯಾನ ಕುರಿತ ಎರಡನೇ ಏಷ್ಯಾ ಪೆಸಿಫಿಕ್ ಸಚಿವ ಮಟ್ಟದ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದಾರೆ. ಅವರು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.