ನಿಮಗೆ ನಾಯಿ ಸಾಕುವ ಆಲೋಚನೆ ಇದ್ದರೆ, ಭಾರತೀಯ ತಳಿಯನ್ನು ಮನೆಗೆ ತನ್ನಿ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ

August 30th, 04:34 pm

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಮನ್ ಕಿ ಬಾತ್ ನಲ್ಲಿ, ಸೇನಾ ಮುಖ್ಯಸ್ಥರ ‘ಪ್ರಶಂಸಾ ಪತ್ರ’ ಪಡೆದಿರುವ ಭಾರತೀಯ ಸೇನೆಯ ನಾಯಿಗಳಾದ ಸೋಫಿ ಮತ್ತು ವಿದಾ ಕುರಿತು ಮಾತನಾಡಿದರು. ಹಲವಾರು ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ಪಿತೂರಿಗಳನ್ನು ತಡೆಯುವಲ್ಲಿ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಪಡೆಗಳು ಇಂತಹ ಅನೇಕ ಕೆಚ್ಚೆದೆಯ ನಾಯಿಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಅವುಗಳು ಮದ್ದುಗುಂಡುಗಳನ್ನು ಮತ್ತು ಸ್ಫೋಟಕಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಹಲವು ಉದಾಹರಣೆಗಳನ್ನು ನೀಡಿದರು. ಇತ್ತೀಚೆಗೆ ಬೀಡ್ ಪೊಲೀಸರು 300 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ ತಮ್ಮ ಸಹೋದ್ಯೋಗಿ ನಾಯಿ ರಾಕಿಗೆ ಸಕಲ ಗೌರವಗಳೊಂದಿಗೆ ನೀಡಿದ ಅಂತಿಮ ವಿದಾಯ ಬಗ್ಗೆಯೂ ಉಲ್ಲೇಖಿಸಿದರು.

ಆಟ ಈಗ ಶುರುವಾಗಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಆಟಿಕೆಗ ಕ್ಷೇತ್ರದಲ್ಲಿ ಸ್ವಾವಲಂಬಿ ಭಾರತ ವಾಗಲು ಉತ್ತೇಜಿಸಿದರು.

August 30th, 11:00 am

ಸ್ನೇಹಿತರೆ, ಇಂದು ಓನಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಬ್ಬ ಚಿಂಗಂ ಮಾಸದಲ್ಲಿ ಬರುತ್ತದೆ. ಈ ಸಮಯದಲ್ಲಿ ಜನರು ಏನನ್ನಾದರೂ ಹೊಸ ವಸ್ತುವನ್ನು ಖರೀದಿಸುತ್ತಾರೆ. ತಮ್ಮ ಮನೆಗಳನ್ನು ಸಿಂಗರಿಸುತ್ತಾರೆ. ಹೂವಿನ ರಂಗೋಲಿ ಹಾಕುತ್ತಾರೆ. ಓಣಂ ಹಬ್ಬದ ಆನಂದವನ್ನು ಅನುಭವಿಸುತ್ತಾರೆ. ವಿವಿಧ ಬಗೆಯ ಕ್ರೀಡೆಗಳು, ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆ. ಓಣಂ ಹಬ್ಬದ ಸಡಗರ ಇಂದು ದೂರದ ವಿದೇಶಗಳಿಗೂ ಹಬ್ಬಿದೆ. ಅಮೇರಿಕಾ ಆಗಲಿ, ಯುರೋಪ್ ಆಗಲಿ ಅಥವಾ ಖಾಡಿ ದೇಶವೇ ಆಗಲಿ ಓಣಂ ಹಬ್ಬದ ಉಲ್ಲಾಸ ನಿಮಗೆ ಎಲ್ಲೆಡೆ ನೋಡಲು ಸಿಗುತ್ತದೆ. ಓಣಂ ಈಗ ಒಂದು ಅಂತಾರಾಷ್ಟ್ರೀಯ ಹಬ್ಬವಾಗುತ್ತಾ ಸಾಗಿದೆ.