ವಾಯುಸೇನಾ ಮಾರ್ಷಲ್ ಶ್ರೀ ಅರ್ಜುನ್ ಸಿಂಗ್ ಅವರಿಗೆ ಪ್ರಧಾನಮಂತ್ರಿ ಅಂತಿಮ ಗೌರವ ಸಲ್ಲಿಸಿದರು

September 17th, 09:36 pm

ನವದೆಹಲಿಯಲ್ಲಿ, ವಾಯುಸೇನಾ ಮಾರ್ಷಲ್ ಶ್ರೀ ಅರ್ಜುನ್ ಸಿಂಗ್ ಅವರ ಮನೆಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆರಳಿ ಅಂತಿಮ ಗೌರವ ಹಾಗೂ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಸರ್ದಾರ್ ಪಟೇಲ್ ಪ್ರಯತ್ನದಿಂದಾಗಿ 'ಏಕ್ ಭಾರತ್, ಶ್ರೇಷ್ಠ ಭಾರತ್' ಕನಸನ್ನು ನಾವು ಅರಿತುಕೊಂಡಿದ್ದೇವೆ : ಪ್ರಧಾನಿ ಮೋದಿ

September 17th, 12:26 pm

ಗುಜರಾತ್ ನ ದಭೋಯಿ ನಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಮ್ಯೂಸಿಯಂಗಾಗಿ ಮೋದಿ ಇಂದು ಶಂಕುಸ್ಥಾಪನೆ ಮಾಡಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ವಿರುದ್ಧ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ನೆನಪಿಸುತ್ತೇವೆ ಎಂದು ಹೇಳಿದರು.

ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ; ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಮಾಡಿದರು

September 17th, 12:25 pm

ದಬೋಯ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಅಂಗವಾಗಿ ಶಿಲಾನ್ಯಾಸ ನೆರವೇರಿಸಿದರು . ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಗಳಿಗೆ ಬಲವಾದ ಹೋರಾಟವನ್ನು ನೀಡಿದ ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತೇವೆ ಎಂದು ಹೇಳಿದರು.

ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜುನ್ ಸಿಂಗ್ ನಿಧನಕ್ಕೆ ಪ್ರಧಾನಿ ಕಂಬನಿ

September 16th, 09:50 pm

ಭಾರತೀಯ ವಾಯುಪಡೆಯಲ್ಲಿ ಮಾರ್ಷಲ್ ಆಗಿದ್ದ ಅರ್ಜುನ್ ಸಿಂಗ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ಐ.ಎ.ಎಫ್.ನ ಸಾಮರ್ಥ್ಯವರ್ಧನೆಗೆ ಐ.ಎ.ಎಫ್.ನ ಮಾರ್ಷಲ್ ಅರ್ಜುನ್ ಸಿಂಗ್ ಅವರ ನಿಶ್ಚಿತ ಗಮನ ಹರಿಸಿದ್ದರು, ಇದು ನಮ್ಮ ರಕ್ಷಣಾ ಸಾಮರ್ಥ್ಯಕ್ಕೆ ಬಲ ನೀಡಿತು ಎಂದು ತಿಳಿಸಿದ್ದಾರೆ .

ಭಾರತೀಯ ವಾಯು ಪಡೆಯ ಮಾರ್ಷಲ್ ಅರ್ಜುನ್ ಸಿಂಗ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಪ್ರಧಾನಮಂತ್ರಿ;ಶೀಘ್ರ ಗುಣಮುಖರಾಗುವಂತೆ ಶುಭ ಕೋರಿಕೆ

September 16th, 06:43 pm

ತೀವ್ರ ಅನಾರೋಗ್ಯಪೀಡಿತರಾಗಿರುವ ಭಾರತೀಯ ವಾಯು ಪಡೆಯ ಮಾರ್ಷಲ್ ಅರ್ಜುನ್ ಸಿಂಗ್ ಅವರನ್ನು ಕಾಣಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರ್.ಆರ್. ಆಸ್ಪತ್ರೆಗೆ ಭೇಟಿ ನೀಡಿದ್ದರು. ಅವರ ಕುಟುಂಬದ ಸದಸ್ಯರನ್ನೂ ಭೇಟಿ ಮಾಡಿದ ಅವರು, ಶೀಘ್ರ ಗುಣಮುಖರಾಗುವಂತೆ ಶುಭಕೋರಿದರು.