ಭಾರತ-ಶ್ರೀಲಂಕಾ ಜಂಟಿ ಹೇಳಿಕೆ: ಪರಸ್ಪರ ಸಾಮಾನ್ಯ ಭವಿಷ್ಯಕ್ಕಾಗಿ ಪಾಲುದಾರಿಕೆಯ ಉತ್ತೇಜನ

December 16th, 03:26 pm

ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಭಾರತಕ್ಕೆ ಅಧಿಕೃತ ಭೇಟಿಯ ಕೈಗೊಂಡಿರುವ ಶ್ರೀಲಂಕಾದ ಅಧ್ಯಕ್ಷರಾದ ಗೌರವಾನ್ವಿತ ಅನುರಾ ಕುಮಾರ ದಿಸ್ಸನಾಯಕೆ ಅವರು 2024ರ ಡಿಸೆಂಬರ್ 16 ರಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಮಗ್ರ ಮತ್ತು ಫಲಪ್ರದ ಚರ್ಚೆ ನಡೆಸಿದರು.

ಶ್ರೀಲಂಕಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

December 16th, 01:00 pm

ನಾನು ಅಧ್ಯಕ್ಷ ದಿಸನಾಯಕ ಅವರನ್ನು ಭಾರತಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತೇನೆ. ಅಧ್ಯಕ್ಷರಾದ ನಂತರ ನೀವು ನಿಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ಸಂತೋಷವಾಗಿದೆ. ಅಧ್ಯಕ್ಷ ದಿಸನಾಯಕ ಅವರ ಭೇಟಿ ನಮ್ಮ ಸಂಬಂಧದಲ್ಲಿ ಹೊಸ ಚೈತನ್ಯ ಮತ್ತು ಶಕ್ತಿಯನ್ನು ತುಂಬಿದೆ. ನಮ್ಮ ಪಾಲುದಾರಿಕೆಗಾಗಿ ನಾವು ಭವಿಷ್ಯದ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದೇವೆ. ನಾವು ನಮ್ಮ ಆರ್ಥಿಕ ಪಾಲುದಾರಿಕೆಯಲ್ಲಿ ಹೂಡಿಕೆ ಆಧಾರಿತ ಬೆಳವಣಿಗೆ ಮತ್ತು ಸಂಪರ್ಕಕ್ಕೆ ಒತ್ತು ನೀಡಿದ್ದೇವೆ. ಮತ್ತು ಭೌತಿಕ, ಡಿಜಿಟಲ್ ಹಾಗು ಇಂಧನ ಸಂಪರ್ಕವು ನಮ್ಮ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭಗಳಾಗಿರಬೇಕು ಎಂದು ನಿರ್ಧರಿಸಿದ್ದೇವೆ. ಎರಡೂ ರಾಷ್ಟ್ರಗಳ ನಡುವೆ ವಿದ್ಯುತ್-ಗ್ರಿಡ್ ಸಂಪರ್ಕ ಮತ್ತು ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್ ಲೈನ್ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಸಂಪೂರ್ ಸೌರ ವಿದ್ಯುತ್ ಯೋಜನೆಯನ್ನು ತ್ವರಿತಗೊಳಿಸಲಾಗುವುದು. ಹೆಚ್ಚುವರಿಯಾಗಿ, ಶ್ರೀಲಂಕಾದ ವಿದ್ಯುತ್ ಸ್ಥಾವರಗಳಿಗೆ ಎಲ್ ಎನ್ ಜಿ ಪೂರೈಸಲಾಗುವುದು. ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸಲು ಇಟಿಸಿಎ ಅನ್ನು ಶೀಘ್ರದಲ್ಲೇ ಸಾಧಿಸಲು ಎರಡೂ ಕಡೆಯವರು ಪ್ರಯತ್ನಿಸುತ್ತಾರೆ.

ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ

September 23rd, 12:11 am

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಅನುರ ಕುಮಾರ ದಿಸ್ಸನಾಯಕೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಶ್ರೀಲಂಕಾ ಜೊತೆಗೆ ಬಹುಮುಖಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಿಕಟವಾಗಿ ಕೆಲಸ ಮಾಡುವ ಭರವಸೆಯನ್ನು ಪ್ರಧಾನ ಮಂತ್ರಿಗಳು ವ್ಯಕ್ತಪಡಿಸಿದ್ದಾರೆ.