2023ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಪ್ರಧಾನ ಮಂತ್ರಿಯವರ ಪ್ರತಿಕ್ರಿಯೆ

February 01st, 02:01 pm

ʻಅಮೃತ ಕಾಲʼದ ಈ ಚೊಚ್ಚಲ ಬಜೆಟ್, ಅಭಿವೃದ್ಧಿ ಹೊಂದಿದ ಭಾರತದ ಭವ್ಯ ದೃಷ್ಟಿಕೋನವನ್ನು ಪೂರೈಸುವ ನಿಟ್ಟಿನಲ್ಲಿ ಸುದೃಢ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ದೀನದಲಿತರಿಗೆ ಆದ್ಯತೆ ನೀಡಿದೆ. ಇಂದಿನ ಮಹತ್ವಾಕಾಂಕ್ಷೆಯ ಸಮಾಜದ – ಹಳ್ಳಿಯ ಜನರು, ಬಡವರು, ರೈತರು, ಮಧ್ಯಮ ವರ್ಗದವರ ಕನಸುಗಳನ್ನು ಈ ಬಜೆಟ್ ಈಡೇರಿಸಲಿದೆ.

ಈ ಬಜೆಟ್ ವಂಚಿತರಿಗೆ ಆದ್ಯತೆ ನೀಡುತ್ತದೆ: ಪ್ರಧಾನಮಂತ್ರಿ

February 01st, 02:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಅಮೃತ ಕಾಲದ ಮೊದಲ ಬಜೆಟ್ ವಿಕಸಿತ ಭಾರತದ ಆಕಾಂಕ್ಷೆಗಳು ಮತ್ತು ಸಂಕಲ್ಪಗಳನ್ನು ಈಡೇರಿಸಲು ಬಲವಾದ ತಳಹದಿಯನ್ನು ಹಾಕಿದೆ ಎಂದು ಹೇಳಿದ್ದಾರೆ. ಈ ಬಜೆಟ್ ವಂಚಿತರಿಗೆ ಆದ್ಯತೆ ನೀಡುತ್ತದೆ ಮತ್ತು ಮಹತ್ವಾಕಾಂಕ್ಷೆಯ ಸಮಾಜ, ಬಡವರು, ಗ್ರಾಮಗಳು ಮತ್ತು ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತದೆ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಯನ್ನು ಇನ್ನೂ ಮೂರು ತಿಂಗಳವರೆಗೆ (2022ರ ಅಕ್ಟೋಬರ್ -2022ರ ಡಿಸೆಂಬರ್) ವಿಸ್ತರಿಸಿದ ಕೇಂದ್ರ ಸರಕಾರ

September 28th, 04:06 pm

2021 ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಮಾಡಿದ ಜನಪರ ಘೋಷಣೆ ಮತ್ತು ಪಿಎಂಜಿಕೆಎವೈ ಅಡಿಯಲ್ಲಿ ಹೆಚ್ಚುವರಿ ಆಹಾರ ಭದ್ರತೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ-ಹಂತ 7) ಯನ್ನು ಇನ್ನೂ 3 ತಿಂಗಳ ಅವಧಿಗೆ ಅಂದರೆ 2022ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆ ನೀಡಿದೆ.