ಭಾರತಕ್ಕೆ 297 ಪ್ರಾಚೀನ ವಸ್ತುಗಳನ್ನು ಮರಳಿಸಿದ ಅಮೆರಿಕಾ

September 22nd, 12:11 pm

ನಿಕಟ ದ್ವಿಪಕ್ಷೀಯ ಸಂಬಂಧಗಳಿಗೆ ಅನುಗುಣವಾಗಿ ಮತ್ತು ಹೆಚ್ಚಿನ ಸಾಂಸ್ಕೃತಿಕ ತಿಳಿವಳಿಕೆಯನ್ನು ಬೆಳೆಸಲು, ಅಮೆರಿಕಾದ ವಿದೇಶಾಂಗ ಇಲಾಖೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಮತ್ತು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿಯಲ್ಲಿ ಬರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 2024ರ ಜುಲೈನಲ್ಲಿ ಸಾಂಸ್ಕೃತಿಕ ಆಸ್ತಿ ಒಪ್ಪಂದಕ್ಕೆ ಸಹಿ ಹಾಕಿವೆ. 2023ರ ಜೂನ್ ನಲ್ಲಿ ಅಧ್ಯಕ್ಷ ಜೈ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯ ನಂತರ ನೀಡಿದ ಜಂಟಿ ಹೇಳಿಕೆಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಸಹಕಾರ ವೃದ್ಧಿಸುವ ಬದ್ಧತೆಗಳನ್ನು ಘೋಷಿಸಲಾಗಿತ್ತು.

ಅಮೆರಿಕದಿಂದ 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಸ್ವದೇಶಕ್ಕೆ ತರಲಿರುವ ಪ್ರಧಾನಮಂತ್ರಿ

September 25th, 09:16 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ವೇಳೆ 157 ಪ್ರಾಚೀನ ಕಲಾಕೃತಿಗಳು ಮತ್ತು ವಸ್ತುಗಳನ್ನು ಹಸ್ತಾಂತರಿಸಲಾಯಿತು. ಭಾರತಕ್ಕೆ ತನ್ನ ಪ್ರಾಚೀನ ಕೃತಿಗಳನ್ನು ಮರಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಅಮೆರಿಕಾಕ್ಕೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬೈಡನ್ ಅವರು ಸಾಂಸ್ಕೃತಿಕ ವಸ್ತುಗಳ ಕಳವು, ಅಕ್ರಮ ವ್ಯಾಪಾರ ಮತ್ತು ಕಳ್ಳ ಸಾಗಣೆ ನಿಗ್ರಹಕ್ಕೆ ತಮ್ಮ ಪ್ರಯತ್ನಗಳ ಬಲವರ್ಧನೆಗೆ ಬದ್ಧರಾಗಿದ್ದಾರೆ.