ಪ್ರಧಾನಮಂತ್ರಿಯವರಿಂದ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನಿಯವರ ಭೇಟಿ

November 21st, 09:37 am

ಅಭಿವೃದ್ಧಿ ಹೊಂದುತ್ತಿರುವ ಕಿರು ದ್ವೀಪ ರಾಷ್ಟ್ರಗಳು (ಎಸ್ ಐ ಡಿ ಎಸ್) ಗಾಗಿ ಸಾಮರ್ಥ್ಯ ನಿರ್ಮಾಣ ಹಾಗೂ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಕುರಿತು ಉಭಯ ನಾಯಕರು ಚರ್ಚಿಸಿದರು. ಭಾರತ- ಕ್ಯಾರಿಕಾಮ್ ಪಾಲುದಾರಿಕೆಯನ್ನು ಬಲಪಡಿಸಲು ಪ್ರಧಾನಮಂತ್ರಿಗಳ ಏಳು ಅಂಶಗಳ ಯೋಜನೆಯನ್ನು ಪ್ರಧಾನಿ ಬ್ರೌನ್ ಶ್ಲಾಘಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲವನ್ನು ಅವರು ಪುನರುಚ್ಚರಿಸಿದರು.