
PM Modi expresses happiness over Australian PM’s meet with Indian and PM’s XI cricket teams
November 28th, 07:33 pm
Prime Minister Shri Narendra Modi expressed happiness over Australian Prime Minister Anthony Albanese’s meeting with Indian and PM’s XI cricket teams today. Shri Modi also lauded Indian Cricketers for their great start in the ongoing test match series in Australia.
ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ
November 20th, 08:38 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರು ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ 2ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯನ್ನು ನಡೆಸಿದರು. ಪ್ರಥಮ ವಾರ್ಷಿಕ ಶೃಂಗಸಭೆಯನ್ನು 2023ರ ಮಾರ್ಚ್ 10ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಅವರ ಭಾರತದ ಭೇಟಿಯ ಸಮಯದಲ್ಲಿ ನಡೆಸಲಾಗಿತ್ತು.
ಜಂಟಿ ಹೇಳಿಕೆ: ಭಾರತ-ಆಸ್ಟ್ರೇಲಿಯಾ 2ನೇ ವಾರ್ಷಿಕ ಶೃಂಗಸಭೆ
November 19th, 11:22 pm
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಎಂಪಿ ಅವರು 2024ರ ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ʻಗ್ರೂಪ್ ಆಫ್ 20ʼ (ಜಿ 20) ಶೃಂಗಸಭೆಯ ನೇಪಥ್ಯದಲ್ಲಿ ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಸಿದರು.ಫ್ಯಾಕ್ಟ್ ಶೀಟ್: 2024 ಕ್ವಾಡ್ ಲೀಡರ್ಸ್ ಶೃಂಗಸಭೆ
September 22nd, 12:06 pm
ಸೆಪ್ಟೆಂಬರ್ 21, 2024 ರಂದು, ಅಧ್ಯಕ್ಷ ಶ್ರೀ ಜೋಸೆಫ್ ಆರ್. ಬೈಡನ್, ಜೂನಿಯರ್ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್, ಜಪಾನ್ ನ ಪ್ರಧಾನಮಂತ್ರಿ ಶ್ರೀ ಕಿಶಿದಾ ಫ್ಯೂಮಿಯೊ ಮತ್ತು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್ನ ವಿಲ್ಮಿಂಗ್ಟನ್ನಲ್ಲಿ ನಾಲ್ಕನೇ ಕ್ವಾಡ್ ನಾಯಕರುಗಳ ಶೃಂಗಸಭೆಗಾಗಿ ಸಭೆಸೇರಿದರು.ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ನಾಯಕರಿಂದ ವಿಲ್ಮಿಂಗ್ಟನ್ ಘೋಷಣೆ ಜಂಟಿ ಹೇಳಿಕೆ
September 22nd, 11:51 am
ಇಂದು, ನಾವು-ಆಸ್ಟ್ರೇಲಿಯದ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಕಿಶಿದಾ ಫ್ಯೂಮಿಯೊ ಮತ್ತು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬಿಡೆನ್, ಅವರು ನಾಲ್ಕನೇ ಕ್ವಾಡ್ ನಾಯಕರ ಶೃಂಗಸಭೆ ಸಂದರ್ಭದಲ್ಲಿ ಭೇಟಿಯಾದರು. ವಿಲ್ಮಿಂಗ್ಟನ್‌ನ ಡೆಲವೇರ್‌ನಲ್ಲಿ ಅಧ್ಯಕ್ಷ ಬಿಡೆನ್ ಈ ಸಭೆಯನ್ನು ಆಯೋಜಿಸಿದ್ದರು.ಆಸ್ಟ್ರೇಲಿಯಾ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ಸಭೆ
September 22nd, 07:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಶ್ರೀ ಆಂಥೋನಿ ಅಲ್ಬನೀಸ್ ಅವರು ಅಮೆರಿಕದ ವಿಲ್ಮಿಂಗ್ಟನ್‌ನಲ್ಲಿ 6 ನೇ ಕ್ವಾಡ್ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಭೇಟಿಯಾದರು. 2022 ರ ಮೇ ನಂತರ ಇವರು ಒಂಬತ್ತನೇ ಬಾರಿಗೆ ವೈಯಕ್ತಿಕವಾಗಿ ಸಂವಹನ ನಡೆಸಿದ್ದಾರೆ.ಕ್ವಾಡ್ ನಾಯಕರ ಕ್ಯಾನ್ಸರ್ ಮೂನ್‌ಶಾಟ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
September 22nd, 06:25 am
ಈ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಅಧ್ಯಕ್ಷ ಬೈಡೆನ್ ಅವರನ್ನು ಅಭಿನಂದಿಸುತ್ತೇನೆ. ಇದು ಕೈಗೆಟುಕುವ, ಸುಲಭವಾಗಿ ಲಭ್ಯವಿರುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ನಾವು ಇಂಡೋ-ಪೆಸಿಫಿಕ್‌ಗಾಗಿ ಕ್ವಾಡ್ ಲಸಿಕೆ ಉಪಕ್ರಮ ವನ್ನು ಆರಂಭಿಸಿದ್ದೇವೆ. ಮತ್ತು ಕ್ವಾಡ್ ನಲ್ಲಿ ಗರ್ಭಕಂಠದ ಕ್ಯಾನ್ಸರ್ ನಂತಹ ಸವಾಲನ್ನು ಎದುರಿಸಲು ನಾವು ಒಟ್ಟಾಗಿ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ.ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
September 22nd, 06:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡೆಲವೇರ್ ನ ವಿಲ್ಮಿಂಗ್ಟನ್ ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯ ಸಂದರ್ಭದಲ್ಲಿ ಅದ್ಯಕ್ಷರಾದ ಶ್ರೀ ಜೋಸೆಫ್ ಆರ್ ಬೈಡನ್ ಜೂನಿಯರ್ ಅವರು ಆಯೋಜಿಸಿದ್ದ ಕ್ವಾಡ್ ಕ್ಯಾನ್ಸರ್ ಮೂನ್ ಶಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಡೆಲಾವೇರ್ ನ ವಿಲ್ಮಿಂಗ್ಟನ್ ನಲ್ಲಿ ನಡೆದ ಆರನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು
September 22nd, 05:21 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024ರ ಸೆಪ್ಟೆಂಬರ್ 21ರಂದು ಡೆಲಾವೇರ್ ನ ವಿಲ್ಮಿಂಗ್ಟನ್ ನಲ್ಲಿ ನಡೆದ ಆರನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಮೆರಿಕದ ಅಧ್ಯಕ್ಷ ಘನತೆವೆತ್ತ ಶ್ರೀ ಜೋಸೆಫ್ ಆರ್. ಬೈಡನ್, ಆಸ್ಟ್ರೇಲಿಯಾದ ಕಿರಿಯ ಪ್ರಧಾನಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಗೌರವಾನ್ವಿತ ಶ್ರೀ ಫ್ಯೂಮಿಯೊ ಕಿಶಿಡಾ ಅವರೂ ಭಾಗವಹಿಸಿದ್ದರು.ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತುಕತೆ
August 26th, 01:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿ ಮತ್ತು ಕ್ವಾಡ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರದ ಬಗ್ಗೆ ಮಾತುಕತೆ ನಡೆಸಿದರು.ಆಸ್ಟ್ರೇಲಿಯಾದ ಪ್ರಧಾನಿಯವರಿಂದ ಅಭಿನಂದನಾ ಕರೆ ಸ್ವೀಕರಿಸಿದ ಪ್ರಧಾನಮಂತ್ರಿ
June 06th, 01:16 pm
ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಅಲ್ಬನೇಸ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನಾ ದೂರವಾಣಿ ಕರೆ ಸ್ವೀಕರಿಸಿದರು. ಪ್ರಧಾನಿ ಅಲ್ವನೇಸ್ ಅವರ ಶುಭ ಹಾರೈಕೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದರು.ಆಸ್ಟ್ರೇಲಿಯದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ
May 24th, 10:03 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಡ್ಮಿರಾಲ್ಟಿ ಹೌಸ್‌ನಲ್ಲಿ ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿ ಹೇಳಿಕೆಯ ಇಂಗ್ಲೀಷ್ ಅನುವಾದ
May 24th, 06:41 am
ನನ್ನ ಆಸ್ಟ್ರೇಲಿಯಾ ಭೇಟಿಯ ಸಂದರ್ಭದಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯ ಮತ್ತು ಗೌರವಕ್ಕಾಗಿ ನಾನು ಆಸ್ಟ್ರೇಲಿಯದ ಜನರಿಗೆ ಮತ್ತು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುಸುತ್ತೇನೆ. ನನ್ನ ಸ್ನೇಹಿತರಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಭಾರತಕ್ಕೆ ಭೇಟಿ ನೀಡಿದ ಎರಡು ತಿಂಗಳೊಳಗೆ ನಾನು ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿದ್ದೇನೆ. ಕಳೆದ ಒಂದು ವರ್ಷದಲ್ಲಿ ಇದು ನಮ್ಮ ಆರನೇ ಸಭೆಯಾಗಿದೆ.ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ
May 20th, 05:16 pm
ಇಂದು ಈ ಕ್ವಾಡ್ ಶೃಂಗಸಭೆಯಲ್ಲಿ ಸ್ನೇಹಿತರೊಂದಿಗೆ ಭಾಗವಹಿಸಲು ನನಗೆ ಸಂತೋಷವಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಪ್ರಮುಖ ವೇದಿಕೆಯಾಗಿ ಕ್ವಾಡ್ ಗುಂಪು ತನ್ನನ್ನು ಸ್ಥಾಪಿಸಿಕೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶವು ಜಾಗತಿಕ ವ್ಯಾಪಾರ, ನಾವೀನ್ಯತೆ ಮತ್ತು ಬೆಳವಣಿಗೆಯ ಎಂಜಿನ್ ಎಂಬುದರಲ್ಲಿ ಸಂದೇಹವಿಲ್ಲ. ಇಂಡೋ-ಪೆಸಿಫಿಕ್‌ನ ಭದ್ರತೆ ಮತ್ತು ಯಶಸ್ಸು ಈ ಪ್ರದೇಶಕ್ಕೆ ಮಾತ್ರವಲ್ಲ, ಜಗತ್ತಿಗೆ ಮುಖ್ಯವಾಗಿದೆ ಎಂದು ನಾವು ಸರ್ವಾನುಮತದಿಂದ ಒಪ್ಪುತ್ತೇವೆ. ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ರಚನಾತ್ಮಕ ಕಾರ್ಯಸೂಚಿಯೊಂದಿಗೆ, ನಾವು ಮುಂದೆ ಸಾಗುತ್ತಿದ್ದೇವೆ.ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಭಾಗಿ
May 20th, 05:15 pm
ಈ ಎಲ್ಲಾ ನಾಯಕರು ಇಂಡೋ-ಪೆಸಿಫಿಕ್ ವಲಯದ ಬೆಳವಣಿಗೆಗಳ ಬಗ್ಗೆ ಫಲಪ್ರದ ಸಂವಾದ ನಡೆಸಿದರು, ಇದು ಅವರ ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಕಾರ್ಯತಂತ್ರ ಹಿತಾಸಕ್ತಿಗಳನ್ನು ದೃಢಪಡಿಸಿತು. ಮುಕ್ತ, ನ್ಯಾಯಸಮ್ಮತ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಸಂವಾದ ಅದಾಗಿತ್ತು. ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳ ಶಾಂತಿಯುತ ಪರಿಹಾರದ ತತ್ವಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಈ ನಾಯಕರು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ನಾಯಕರು “ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ ಪಾಲುದಾರಿಕೆ - ಕ್ವಾಡ್ ನಾಯಕರ ಮುನ್ನೋಟ ಹೇಳಿಕೆ” ಬಿಡುಗಡೆ ಮಾಡಿದರು, ಇದು ಅವರ ತತ್ವದ ಕಾರ್ಯವಿಧಾನವನ್ನು ಸ್ಪಷ್ಟಪಡಿಸುತ್ತದೆ.ಸಿಡ್ನಿಯಲ್ಲಿ ಮುಂದಿನ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ
April 26th, 06:46 pm
ಮುಂದಿನ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದರು.ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪತ್ರಿಕಾ ಹೇಳಿಕೆಯ ಅನುವಾದ
March 10th, 12:50 pm
ಮೊದಲಿಗೆ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ಆಲ್ಬನೀಸ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಕಳೆದ ವರ್ಷ ಉಭಯ ದೇಶಗಳು ಪ್ರಧಾನಮಂತ್ರಿಗಳ ಮಟ್ಟದ ವಾರ್ಷಿಕ ಶೃಂಗಸಭೆಯನ್ನು ನಡೆಸಲು ನಿರ್ಧರಿಸಿದ್ದವು. ಇದೀಗ ಪ್ರಧಾನಮಂತ್ರಿ ಆಲ್ಬನೀಸ್ ಅವರ ಈ ಭೇಟಿಯಿಂದಾಗಿ ಆ ಸರಣಿ ಇದೀಗ ಆರಂಭವಾಗುತ್ತಿದೆ. ಅವರು ಹೋಲಿ ಹಬ್ಬದ ದಿನ ಭಾರತಕ್ಕೆ ಆಗಮಿಸಿದ್ದಾರೆ ಮತ್ತು ಆನಂತರ ನಾವು ಕೆಲ ಹೊತ್ತು ಕ್ರಿಕೆಟ್ ಮೈದಾನಕ್ಕೆ ಜತೆಯಾಗಿ ತೆರಳಿದ್ದೆವು. ಈ ಬಣ್ಣಗಳು, ಸಂಸ್ಕೃತಿ ಮತ್ತು ಕ್ರಿಕೆಟ್ ನ ಅಚರಣೆಯು ಒಂದು ರೀತಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹದ ಉತ್ಸಾಹ ಮತ್ತು ಉಲ್ಲಾಸದ ಪರಿಪೂರ್ಣ ಸಂಕೇತವಾಗಿದೆ.ಗುಜರಾತ್ ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ನೇ ಸ್ಮರಣಾರ್ಥ ಟೆಸ್ಟ್ ಪಂದ್ಯವನ್ನು ಪ್ರಧಾನಮಂತ್ರಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರು ವೀಕ್ಷಿಸಿದರು
March 09th, 12:01 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರು ಇಂದು ಗುಜರಾತ್ ನ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರಗಿದ ಬಾರ್ಡರ್-ಗವಾಸ್ಕರ್ ಟ್ರೋಫಿಯ 4 ನೇ ಸ್ಮರಣಾರ್ಥ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ವೀಕ್ಷಿಸಿದರು.ಭಾರತದ 74 ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿರುವ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
January 26th, 09:43 pm
ಭಾರತದ 74 ನೇ ಗಣರಾಜ್ಯೋತ್ಸವದ ಶುಭಾಶಯಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಂಡ್-ಆಸ್ ಇಸಿಟಿಎ) ಜಾರಿಗೆ ಬಂದಿರುವುದಕ್ಕೆ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ
December 29th, 06:44 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಂಡ್-ಆಸ್ ಇಸಿಟಿಎ) (IndAus ECTA) ಜಾರಿಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ 'ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ'ಗೆ ಇದು ಐತಿಹಾಸಿಕ ಕ್ಷಣವಾಗಿದೆ ಎಂದು ಶ್ರೀ ಮೋದಿ ಹೇಳಿದರು.