ಭಾರತದ ಪ್ರಧಾನ ಮಂತ್ರಿಯ ಮಯನ್ಮಾರ್ ಭೇಟಿಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಭಾರತ-ಮಯನ್ಮಾರ್ ಜಂಟಿ ಹೇಳಿಕೆ

September 06th, 10:26 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೈನಾದ ಕ್ಸಿಮೆನ್ ನಲ್ಲಿ 2017ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಭೇಟಿಯು ಎರಡು ದೇಶಗಳ ನಾಯಕರ ನಡುವಿನ ನಿರಂತರ ಉನ್ನತ ಮಟ್ಟದ ದ್ವಿಪಕ್ಷೀಯ ಸಂಬಂಧಗಳ ಭಾಗವಾಗಿದೆ

ಭಗನ್ ನಲ್ಲಿ ಆನಂದ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ

September 06th, 04:26 pm

೧೨ನೇ ಶತಮಾನದಲ್ಲಿ ನಿರ್ಮಾಣ ಮಾಡಲಾದ ಬುದ್ಧನ ದೇವಾಲಯ ಇದಾಗಿದೆ. ಇಡೀ ಭಗನ್ ವಲಯದಲ್ಲಿ ಇದು ಎರಡನೇ ಅತಿ ದೊಡ್ಡ ದೇವಾಲಯ ಆಗಿದೆ. ಕಳೆದ ವರ್ಷ ಸಂಭವಿಸಿದ ಭೂಕಂಪದಲ್ಲಿ ಹಾನಿಗೊಳಗಾಗಿದ್ದ ಈ ದೇವಾಲಯದ ಪುನರ್ ನಿರ್ಮಾಣ, ವಾಸ್ತು ಸಂರಕ್ಷಣೆ ಮತ್ತು ರಾಸಾಯನಿಕ ಸಂರಕ್ಷಣೆ ಕಾರ್ಯವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮಾಡಿದೆ.

ಮ್ಯಾನ್ಮಾರ್ ದೇಶದ ಕೌನ್ಸಿಲರೊಂದಿಗೆ ನೇ ಪೆ ತೋನಲ್ಲಿ ಜಂಟಿ ಮಾಧ್ಯಮ ಹೇಳಿಕೆಯ ವೇಳೆ ಪ್ರಧಾನಮಂತ್ರಿಯವರು ನೀಡಿದ ಹೇಳಿಕೆಯ ಕನ್ನಡ ಪಠ್ಯ

September 06th, 10:37 am

ನಾನು 2014ರಲ್ಲಿ ಆಸಿಯಾನ್ ಶೃಂಗದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದೆ, ಆದಾಗ್ಯೂ, ಇದು ಚಿನ್ನದ ನಾಡು ಮ್ಯಾನ್ಮಾರ್ ಗೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಆದರೆ ನನಗೆ ನೀಡಲಾದ ಆತಿಥ್ಯದಿಂದ ನನಗೆ ತವರು ಮನೆಯಲ್ಲೇ ಇರುವಂತೆ ಭಾಸವಾಗುತ್ತಿದೆ. ನಾನು ಇದಕ್ಕಾಗಿ ಮ್ಯಾನ್ಮಾರ್ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ.