ಸ್ವಚ್ಛ ಭಾರತ್ ಮಿಷನ್ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 2 ರಂದು ಸ್ವಚ್ಛ ಭಾರತ್ ದಿವಸ್ 2024 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಭಾಗವಹಿಸಲಿದ್ದಾರೆ
September 30th, 08:59 pm
ಸ್ವಚ್ಛತೆಗಾಗಿ ಅತ್ಯಂತ ಮಹತ್ವದ ಸಾಮೂಹಿಕ ಆಂದೋಲನಗಳಲ್ಲಿ ಒಂದಾದ ಸ್ವಚ್ಛ ಭಾರತ ಮಿಷನ್ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 2, 2024ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ 155 ನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ದಿವಸ 2024 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಮಧ್ಯಪ್ರದೇಶದ ಝಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
February 11th, 07:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಜಬುವಾದಲ್ಲಿ ಸುಮಾರು 7300 ಕೋಟಿ ರೂಪಾಯಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. ಇಂದಿನ ಈ ಅಭಿವೃದ್ಧಿ ಯೋಜನೆಗಳು ಈ ಪ್ರದೇಶದಲ್ಲಿರುವ ಗಮನಾರ್ಹ ಸಂಖ್ಯೆಯ ಬುಡಕಟ್ಟು ಜನತೆಗೆ ಪ್ರಯೋಜನ ಒದಗಿಸುತ್ತವೆ, ನೀರು ಸರಬರಾಜು ಮತ್ತು ಕುಡಿಯುವ ನೀರು ಪೂರೈಕೆಯನ್ನು ಬಲಪಡಿಸುತ್ತವೆ. ಜೊತೆಗೆ, ಮಧ್ಯಪ್ರದೇಶದಲ್ಲಿ ರಸ್ತೆ, ರೈಲು, ವಿದ್ಯುತ್ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತವೆ. ಪ್ರಧಾನಮಂತ್ರಿಯವರು ʻವಿಶೇಷವಾಗಿ ಹಿಂದುಳಿದ ಬುಡಕಟ್ಟು ಜನಾಂಗʼದ ಸುಮಾರು 2 ಲಕ್ಷ ಮಹಿಳಾ ಫಲಾನುಭವಿಗಳಿಗೆ ʻಆಧಾರ್ ಅನುದಾನʼದ ಮಾಸಿಕ ಕಂತನ್ನು ವಿತರಿಸಿದರು, ʻಸ್ವಾಮಿತ್ವʼ ಯೋಜನೆಯ ಫಲಾನುಭವಿಗಳಿಗೆ 1.75 ಲಕ್ಷ ಹಕ್ಕುಪತ್ರಗಳನ್ನು ವಿತರಿಸಿದರು ಹಾಗೂ ʻಪ್ರಧಾನ ಮಂತ್ರಿ ಆದರ್ಶ ಗ್ರಾಮʼ ಯೋಜನೆಯಡಿ 559 ಗ್ರಾಮಗಳಿಗೆ 55.9 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದರು.ಫೆಬ್ರವರಿ 11 ರಂದು ಪ್ರಧಾನಮಂತ್ರಿಯವರು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ
February 09th, 05:25 pm
ಪ್ರಧಾನಮಂತ್ರಿಯವರು ಕೈಗೊಂಡ ಅನೇಕ ಉಪಕ್ರಮಗಳಿಗೆ ಅಂತ್ಯೋದಯ ದೃಷ್ಟಿಕೋನವು ಮಾರ್ಗದರ್ಶಿಯಾಗಿದೆ. ಸ್ವಾತಂತ್ರ್ಯದ ಹಲವಾರು ದಶಕಗಳ ನಂತರವೂ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಪ್ರಮುಖ ವಿಭಾಗಗಳಿಗೆ, ಬುಡಕಟ್ಟು ಸಮುದಾಯಕ್ಕೆ ಅಭಿವೃದ್ಧಿಯ ಪ್ರಯೋಜನಗಳು ತಲುಪುವುದನ್ನು ಖಾತ್ರಿಪಡಿಸುವುದು ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಅನುಗುಣವಾಗಿ, ಈ ಪ್ರದೇಶದ ಗಮನಾರ್ಹ ಬುಡಕಟ್ಟು ಜನಸಂಖ್ಯೆಗೆ ಅನುಕೂಲವಾಗುವಂತಹ ಬಹು ಉಪಕ್ರಮಗಳನ್ನು ಪ್ರಧಾನಮಂತ್ರಿ ಸಮರ್ಪಿಸಲಿದ್ದಾರೆ ಮತ್ತು ಅಡಿಪಾಯ ಹಾಕಲಿದ್ದಾರೆ.India’s GDP Soars: A Win For PM Modi’s GDP plus Welfare
December 01st, 09:12 pm
Exceeding all expectations and predictions, India's Gross Domestic Product (GDP) has demonstrated a remarkable annual growth of 7.6% in the second quarter of FY2024. Building on a strong first-quarter growth of 7.8%, the second quarter has outperformed projections with a growth rate of 7.6%. A significant contributor to this growth has been the government's capital expenditure, reaching Rs. 4.91 trillion (or $58.98 billion) in the first half of the fiscal year, surpassing the previous year's figure of Rs. 3.43 trillion.'Ease of Justice' is important in Amrit Yatra of the country: PM Modi
July 30th, 10:01 am
PM Modi addressed the inaugural session of the First All India District Legal Services Authorities Meet. The Prime Minister said, This is the time of Azadi Ka Amrit Kaal. This is the time for the resolutions that will take the country to new heights in the next 25 years. Like Ease of Doing Business and Ease of Living, Ease of Justice is equally important in this Amrit Yatra of the country.PM addresses inaugural session of First All India District Legal Services Authorities Meet
July 30th, 10:00 am
PM Modi addressed the inaugural session of the First All India District Legal Services Authorities Meet. The Prime Minister said, This is the time of Azadi Ka Amrit Kaal. This is the time for the resolutions that will take the country to new heights in the next 25 years. Like Ease of Doing Business and Ease of Living, Ease of Justice is equally important in this Amrit Yatra of the country.ಲಕ್ನೋದಲ್ಲಿ ಎಕ್ಸ್ಪೋ ಮತ್ತು ಆಜಾ಼ದಿ@75 ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
October 05th, 10:31 am
ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ಲಕ್ನೋದ ಸಂಸದ ಮತ್ತು ನಮ್ಮ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜೀ, ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಮಹೇಂದ್ರ ನಾಥ ಪಾಂಡೇ ಜೀ, ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ್ ಮೌರ್ಯಾ ಜೀ, ಶ್ರೀ ದಿನೇಶ ಶರ್ಮಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಕೌಶಲ್ ಕಿಶೋರ್ ಜೀ, ರಾಜ್ಯ ಸರಕಾರದ ಸಚಿವರೇ, ಸಂಸದರೇ, ಶಾಸಕರೇ, ದೇಶದ ವಿವಿಧ ಭಾಗಗಳ ಎಲ್ಲಾ ಗೌರವಾನ್ವಿತ ಸಚಿವರೇ, ಇತರ ಎಲ್ಲಾ ಗಣ್ಯರೇ ಮತ್ತು ಉತ್ತರ ಪ್ರದೇಶದ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ,ಲಕ್ನೋದಲ್ಲಿ ‘ಆಜಾದಿ@75- ನವ ನಗರ ಭಾರತ: ನಗರ ಚಿತ್ರಣದಲ್ಲಿ ಪರಿವರ್ತನೆ’ ಕುರಿತ ಸಮ್ಮೇಳನ ಮತ್ತು ಎಕ್ಸ್‌ಪೋ ಉದ್ಘಾಟಿಸಿದ ಪ್ರಧಾನಮಂತ್ರಿ
October 05th, 10:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಲಕ್ನೋದಲ್ಲಿ ‘ಆಜಾದಿ@75-ಹೊಸ ನಗರ ಭಾರತ: ನಗರ ಚಿತ್ರಣದ ಪರಿವರ್ತನೆ’ಸಮ್ಮೇಳನ ಮತ್ತು ಎಕ್ಸ್‌ಪೋವನ್ನು ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಹರ್ದೀಪ್ ಪುರಿ, ಶ್ರೀ ಮಹೇಂದ್ರ ನಾಥ್ ಪಾಂಡೆ, ಶ್ರೀ ಕೌಶಲ್ ಕಿಶೋರ್, ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.ಸ್ವಾತಂತ್ರ್ಯ@75 ನಗರಗಳ ನವ ಭಾರತ: ಬದಲಾಗುತ್ತಿರುವ ನಗರಗಳ ಚಿತ್ರಣ ಸಮ್ಮೇಳನ ಮತ್ತು ಮೇಳ ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ
October 04th, 06:52 pm
ಸ್ವಾತಂತ್ರ್ಯ@75 ನಗರಗಳ ನವ ಭಾರತ: ಬದಲಾಗುತ್ತಿರುವ ನಗರಗಳ ಚಿತ್ರಣ ಸಮ್ಮೇಳನ ಮತ್ತು ಮೇಳವನ್ನು ಉತ್ತರಪ್ರದೇಶದ ಲಖನೌನಗರದಲ್ಲಿರುವ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಅ.5ರಂದು ಬೆಳಗ್ಗೆ 10ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸುವರು.ಡಿಜಿಟಲ್ ಇಂಡಿಯಾ ಅಭಿಯಾನದ 6 ನೇ ವಾರ್ಷಿಕೋತ್ಸವದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.
July 01st, 11:01 am
ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ರವಿಶಂಕರ ಪ್ರಸಾದ್ ಜೀ, ಶ್ರೀ ಸಂಜಯ್ ಧೋತ್ರೇ ಜೀ, ನನ್ನೆಲ್ಲಾ ಸಹೋದ್ಯೋಗಿಗಳೇ, ಡಿಜಿಟಲ್ ಇಂಡಿಯಾದ ವಿವಿಧ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿರುವ, ಸಹೋದರರೇ ಮತ್ತು ಸಹೋದರಿಯರೇ!. ಡಿಜಿಟಲ್ ಆಂದೋಲನದ ಆರು ವರ್ಷ ಪೂರ್ಣಗೊಳಿಸಿರುವುದಕ್ಕೆ ನಿಮಗೆಲ್ಲಾ ಅಭಿನಂದನೆಗಳು!.ಡಿಜಿಟಲ್ ಇಂಡಿಯಾ' ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ
July 01st, 11:00 am
ಪ್ರಧಾನಮಂತ್ರಿ ಶ್ರೀ ನರೇದ್ರ ಮೋದಿ ಅವರು ಇಂದು 'ಡಿಜಿಟಲ್ ಇಂಡಿಯಾ' ಅಭಿಯಾನವು ಆರು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ 'ಡಿಜಿಟಲ್ ಇಂಡಿಯಾ'ದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ರವಿ ಶಂಕರ್ ಪ್ರಸಾದ್ ಮತ್ತು ಶಿಕ್ಷಣ ಖಾತೆ ಸಹಾಯಕ ಸಚಿವ ಶ್ರೀ ಸಂಜಯ್ ಶಾಮರಾವ್ ಧೋತ್ರೆ ಉಪಸ್ಥಿತರಿದ್ದರು.ಕೇರಳದಲ್ಲಿ ಹಲವು ಪ್ರಮುಖ ಇಂಧನ ಮತ್ತು ನಗರ ಮೂಲಸೌಕರ್ಯ ವಲಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ವೇಳೆ ಪ್ರಧಾನಮಂತ್ರಿ ಅವರ ಭಾಷಣ
February 19th, 04:31 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದಲ್ಲಿ ಪುಗಲೂರು – ತ್ರಿಶೂರ್ ವಿದ್ಯುತ್ ಪ್ರಸರಣಾ ಯೋಜನೆ, ಕಾಸರಗೋಡು ಸೌರಶಕ್ತಿ ಘಟಕ ಮತ್ತು ಅರುವಿಕ್ಕರದಲ್ಲಿ ನೀರು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಅಲ್ಲದೆ, ಅವರು ಕಾರ್ಯಕ್ರಮದ ವೇಳೆ ತಿರುವನಂತಪುರಂನಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಹಾಗೂ ಸ್ಮಾರ್ಟ್ ರಸ್ತೆ ಯೋಜನೆಗೆ ಚಾಲನೆ ನೀಡಿದರು.ಪ್ರಧಾನಮಂತ್ರಿ ಅವರಿಂದ ಕೇರಳದಲ್ಲಿ ಇಂಧನ ಮತ್ತು ನಗರ ಮೂಲಸೌಕರ್ಯ ವಲಯದ ಪ್ರಮುಖ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
February 19th, 04:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇರಳದಲ್ಲಿ ಪುಗಲೂರು – ತ್ರಿಶೂರ್ ವಿದ್ಯುತ್ ಪ್ರಸರಣಾ ಯೋಜನೆ, ಕಾಸರಗೋಡು ಸೌರಶಕ್ತಿ ಘಟಕ ಮತ್ತು ಅರುವಿಕ್ಕರದಲ್ಲಿ ನೀರು ಸಂಸ್ಕರಣಾ ಘಟಕವನ್ನು ಉದ್ಘಾಟಿಸಿದರು. ಅಲ್ಲದೆ, ಅವರು ಕಾರ್ಯಕ್ರಮದ ವೇಳೆ ತಿರುವನಂತಪುರಂನಲ್ಲಿ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ಹಾಗೂ ಸ್ಮಾರ್ಟ್ ರಸ್ತೆ ಯೋಜನೆಗೆ ಚಾಲನೆ ನೀಡಿದರು.ಬಿಹಾರದಲ್ಲಿ ಬಹುಪಯೋಗಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ
September 15th, 12:01 pm
ಬಿಹಾರದ ರಾಜ್ಯಪಾಲರಾದ ಶ್ರೀ ಪಗು ಚೌವ್ಹಾಣ್ , ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್, ನನ್ನ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರದೀಪ್ ಸಿಂಗ್ ಪುರಿ, ಶ್ರೀ ರವಿಶಂಕರ್ ಪ್ರಸಾದ್, ಕೇಂದ್ರ ಮತ್ತು ರಾಜ್ಯ ಸಚಿವ ಸಂಪುಟದ ಎಲ್ಲ ಸದಸ್ಯರೇ, ಎಲ್ಲ ಸಂಸದರು, ಶಾಸಕರು ಮತ್ತು ನನ್ನ ನೆಚ್ಚಿನ ಮಿತ್ರರೇಬಿಹಾರದಲ್ಲಿ ‘ನಮಾಮಿ ಗಂಗೆ’ ಮತ್ತು ‘ಅಮೃತ್’ ನಡಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ
September 15th, 12:00 pm
ಬಿಹಾರದಲ್ಲಿ 'ನಮಾಮಿ ಗಂಗೆ' ಮತ್ತು 'ಅಮೃತ್' ಯೋಜನೆ ಅಡಿಯಲ್ಲಿ ವಿವಿಧ ಯೋಜನೆಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇಂದು ಉದ್ಘಾಟನೆಯಾದ ನಾಲ್ಕು ಯೋಜನೆಗಳಲ್ಲಿ ಪಾಟ್ನಾ ನಗರದ ಬ್ಯೂರ್ ಮತ್ತು ಕರಮ್–ಲೀಚಕ್‌ನಲ್ಲಿನ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು 'ಅಮೃತ್' ಯೋಜನೆಯಡಿ ಸಿವಾನ್ ಮತ್ತು ಛಾಪ್ರಾದಲ್ಲಿ ನೀರು–ಸಂಬಂಧಿತ ಯೋಜನೆಗಳು ಸೇರಿವೆ. ಇದಲ್ಲದೆ, ಮುಂಗೇರ್ ಮತ್ತು ಜಮಾಲ್‌ಪುರದ ನೀರು ಸರಬರಾಜು ಯೋಜನೆಗಳಿಗೆ ಮತ್ತು ನಮಾಮಿ ಗಂಗೆ ಅಡಿಯಲ್ಲಿ ಮುಜಾಫರ್ಪುರದ ನದಿ ತಟದ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಿಲಾನ್ಯಾಸ ನೆರವೇರಿಸಲಾಯಿತು.ಸೆಪ್ಟೆಂಬರ್ 15 ರಂದು ಬಿಹಾರದಲ್ಲಿ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಏಳು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ
September 14th, 02:45 pm
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಏಳು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಪೈಕಿ ನಾಲ್ಕು ಯೋಜನೆಗಳು ನೀರು ಸರಬರಾಜಿಗೆ ಸಂಬಂಧಿಸಿವೆ, ಎರಡು ಒಳಚರಂಡಿ ಸಂಸ್ಕರಣೆಗೆ ಮತ್ತು ಒಂದು ನದಿ ತಟದ ಅಭಿವೃದ್ಧಿಗೆ ಸಂಬಂಧಿಸಿದೆ. ಈ ಯೋಜನೆಗಳ ಒಟ್ಟು ವೆಚ್ಚ 541 ಕೋಟಿ ರೂ. ಈ ಯೋಜನೆಗಳ ಅನುಷ್ಠಾನವನ್ನು ಬಿಹಾರದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯಡಿ BUIDCO ಕೈಗೆತ್ತಿಕೊಂಡಿದೆ. ಈ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ಕೂಡ ಉಪಸ್ಥಿತರಿರುತ್ತಾರೆ.ನಿಮ್ಮ ಹೃದಯದಲ್ಲಿ ಉರಿಯುತ್ತಿರುವ ಬೆಂಕಿಯ ಹಾಗೆಯೇ ನನ್ನ ಎದೆಯಲ್ಲಿ ಕೂಡ ಅದೇ ಬೆಂಕಿ ಉರಿಯುತ್ತಿದೆ , ಪುಲ್ವಾಮಾದಲ್ಲಿ ಭಯೋತ್ಪಾದನೆ ದಾಳಿ ಬಗ್ಗೆ ಪ್ರಧಾನಿ ಮೋದಿ
February 17th, 12:20 pm
ಬಿಹಾರದ ಬರೌನಿ ಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಅಡಿಪಾಯ ಹಾಕಿದ ಪ್ರಧಾನಿ ನರೇಂದ್ರ ಮೋದಿ. ಪಾಟ್ನಾ ಮೆಟ್ರೋ ರೈಲು ಯೋಜನೆ ಮತ್ತು ಬರೌನಿಯ ಅಮೋನಿಯಾ-ಯೂರಿಯಾ ಸಂಕೀರ್ಣದ ನಿರ್ಮಾಣ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾದ ಪ್ರಮುಖ ಯೋಜನೆಗಳು. ಎನ್ಡಿಎ ಸರ್ಕಾರದ ಅಭಿವೃದ್ಧಿ ಎರಡು ಸಮಾನಾಂತರ ರೇಖೆಗಳ ಮೇಲೆ ನಡೆಯುತ್ತಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಈಗ 70 ವರ್ಷಗಳಿಂದ ಪಡೆದುಕೊಳ್ಳಲು ಕಷ್ಟಪಡುತ್ತಿರುವ ಸಮಾಜದ ಆ ವಿಭಾಗಗಳನ್ನು ಎತ್ತಿ ಹಿಡಿಯುವುದು ಎನ್ಡಿಎ ಸರ್ಕಾರದ ಉದ್ದೇಶವಾಗಿದೆ.ಬಿಹಾರಕ್ಕೆ ರೂ. 33,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಿದ ಪ್ರಧಾನ ಮಂತ್ರಿಗಳು, ಪೂರ್ವ ಭಾರತ ಮತ್ತು ಬಿಹಾರದ ಅಭಿವೃದ್ಧಿಗೆ ಆದ್ಯತೆ ಎಂದರು
February 17th, 12:19 pm
ಬಿಹಾರದಲ್ಲಿ ಮೂಲಭೂತ ಸೌಕರ್ಯ, ಸಂಪರ್ಕ, ಇಂಧನ, ಭಧ್ರತೆ ಮತ್ತು ಆರೋಗ್ಯ ಸೇವೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂ. 33,000 ಕೋಟಿ ಮೌಲ್ಯದ ಯೋಜನೆಗಳನ್ನು ಇಂದು ಬರೌನಿಯಲ್ಲಿ ಅನಾವರಣಗೊಳಿಸಿದರು. ಬಿಹಾರದ ರಾಜ್ಯಪಾಲರಾದ, ಲಾಲ್ಜೀ ಟಂಡನ್, ಮುಖ್ಯ ಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯ ಮಂತ್ರಿ ಸುಶೀಲ್ ಮೋದಿ, ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಪ್ರಧಾನ ಮಂತ್ರಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ನಾಳೆ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿರುವ ಪ್ರಧಾನ ಮಂತ್ರಿಗಳು
February 15th, 04:06 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16 2019 ರಂದು ಮಹಾರಾಷ್ಟ್ರದ ಯಾವತ್ಮಾಲ್ ಮತ್ತು ಧುಲೆ ಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆಸೂರತ್ ನಲ್ಲಿ ಪ್ರಧಾನ ಮಂತ್ರಿಯವರು ಇಂದು
January 30th, 01:30 pm
ಇಂದು ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿಯವರು ಸೂರತ್ ಗೆ ಭೇಟಿ ನೀಡಿದರು. ಅವರು ಸೂರತ್ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ವಿಸ್ತರಣೆಗೆ ಅಡಿಪಾಯ ಹಾಕಿದರು, ಇದು ಸೂರತ್ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಕ್ಕೆ ಉತ್ತಮ ಸಂಪರ್ಕ ಮತ್ತು ಸಮೃದ್ಧಿಯನ್ನು ಒದಗಿಸಲಿದೆ.