​​​​​​​‘ವಿಕಸಿತ ಭಾರತ - ವಿಕಸಿತ ಗುಜರಾತ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

February 10th, 01:40 pm

ಗುಜರಾತ್ ನ ನನ್ನ ಆತ್ಮೀಯ ಸಹೋದರ ಮತ್ತು ಸಹೋದರಿಯರೇ..! ನೀವೆಲ್ಲಾ ಹೇಗಿದ್ದೀರಿ? ಎಲ್ಲರೂ ಚೆನ್ನಾಗಿದ್ದೀರೆಂದು ಭಾವಿಸಿದ್ದೇನೆ. ಇಂದು ದೊಡ್ಡ ಅಭಿಯಾನ ‘ವಿಕಸಿತ ಭಾರತ-ವಿಕಸಿತ ಗುಜರಾತ್ (ಅಭಿವೃದ್ಧಿ ಹೊಂದಿದ ಭಾರತ- ಅಭಿವೃದ್ಧಿ ಹೊಂದಿದ ಗುಜರಾತ್ ) ಆರಂಭವಾಗುತ್ತಿದೆ. ನನಗೆ ತಿಳಿದಿರುವಂತೆ ಗುಜರಾತ್ ರಾಜ್ತದ ಮೂಲೆ ಮೂಲೆಗಳಿಂದ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳ ಲಕ್ಷಾಂತರ ಜನರು ತಂತ್ರಜ್ಞಾನದ ಸಹಾಯದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. “ವಿಕಸಿತ ಗುಜರಾತ್‘ ಪಯಣದಲ್ಲಿ ಸೇರ್ಪಡೆಯಾಗಿರುವ ಪ್ರತಿಯೊಬ್ಬರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಹಾಗಾಗಿ ನಾನು ನಿಮ್ಮೆಲ್ಲರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ.

​​​​​​​'ವಿಕಸಿತ ಭಾರತ, ವಿಕಸಿತ ಗುಜರಾತ್' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ

February 10th, 01:10 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ವಿಕಸಿತ ಭಾರತ, ವಿಕಸಿತ ಗುಜರಾತ್‌' ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಪ್ರಧಾನ ಮಂತ್ರಿ ಆವಾಸ್ ಯೋಜನೆʼ(ಪಿಎಂಎವೈ) ಮತ್ತು ಇತರ ವಸತಿ ಯೋಜನೆಗಳ ಅಡಿಯಲ್ಲಿ ಗುಜರಾತ್‌ನಾದ್ಯಂತ ನಿರ್ಮಿಸಲಾದ 1.3 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಿದರು ಮತ್ತು ಭೂಮಿ ಪೂಜೆ ನೆರವೇರಿಸಿದರು. ʻಆವಾಸ್ ಯೋಜನೆʼಯ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.

ಬಿಜೆಪಿ ರಾಜಸ್ಥಾನವನ್ನು ದೇಶದ ಪ್ರಬಲ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುತ್ತಿದೆ: ದೌಸಾದಲ್ಲಿ ಪ್ರಧಾನಿ ಮೋದಿ

February 12th, 03:31 pm

ಇಂದು ದೌಸಾದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವನ್ನು ಪ್ರಾರಂಭಿಸಿದ್ದಕ್ಕಾಗಿ ರಾಜಸ್ಥಾನದ ಜನರನ್ನು ಅಭಿನಂದಿಸಿದರು. ಇಂದು, ದೆಹಲಿ-ದೌಸಾ-ಲಾಲ್ಸೋಟ್ ಸ್ಟ್ರೆಚ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ದೇಶದಲ್ಲಿ ನಿರ್ಮಿಸಲಾಗುತ್ತಿರುವ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಅನ್ನು ಇಂದು ಉದ್ಘಾಟಿಸಲಾಗಿದೆ. ಈ ಕಾರಣದಿಂದಾಗಿ, ದೆಹಲಿಯಂತಹ ದೊಡ್ಡ ಮಾರುಕಟ್ಟೆಗೆ ಹಾಲು, ಹಣ್ಣುಗಳು ಮತ್ತು ತರಕಾರಿಗಳನ್ನು ತಲುಪಿಸಲು ಇದು ಅಗ್ಗವಾಗಿದೆ ಮತ್ತು ಸುಲಭವಾಗುತ್ತದೆ.

ರಾಜಸ್ಥಾನದ ದೌಸಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು

February 12th, 03:30 pm

ಇಂದು ದೌಸಾದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಮೊದಲ ಹಂತವನ್ನು ಪ್ರಾರಂಭಿಸಿದ್ದಕ್ಕಾಗಿ ರಾಜಸ್ಥಾನದ ಜನರನ್ನು ಅಭಿನಂದಿಸಿದರು. ಇಂದು, ದೆಹಲಿ-ದೌಸಾ-ಲಾಲ್ಸೋಟ್ ಸ್ಟ್ರೆಚ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ದೇಶದಲ್ಲಿ ನಿರ್ಮಿಸಲಾಗುತ್ತಿರುವ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಅನ್ನು ಇಂದು ಉದ್ಘಾಟಿಸಲಾಗಿದೆ. ಈ ಕಾರಣದಿಂದಾಗಿ, ದೆಹಲಿಯಂತಹ ದೊಡ್ಡ ಮಾರುಕಟ್ಟೆಗೆ ಹಾಲು, ಹಣ್ಣುಗಳು ಮತ್ತು ತರಕಾರಿಗಳನ್ನು ತಲುಪಿಸಲು ಇದು ಅಗ್ಗವಾಗಿದೆ ಮತ್ತು ಸುಲಭವಾಗುತ್ತದೆ.

ಉತ್ತಮ ಸಂಪರ್ಕ ಒದಗಿಸಲು ಮತ್ತು ಚಲನಶೀಲತೆ ಸುಧಾರಿಸಲು ತರಂಗ ಹಿಲ್-ಅಂಬಾಜಿ-ಅಬು ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಂಪುಟ ಅನುಮೋದನೆ

July 13th, 04:15 pm

2798.16 ಕೋಟಿ ರೂ.ಅಂದಾಜು ವೆಚ್ಚದಲ್ಲಿ ರೈಲ್ವೆ ಸಚಿವಾಲಯ ನಿರ್ಮಿಸಲಿರುವ ತರಂಗ ಹಿಲ್-ಅಂಬಾಜಿ-ಅಬು ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ತನ್ನ ಅನುಮೋದನೆ ನೀಡಿದೆ.