ಮಹಾರಾಷ್ಟ್ರದ ಮರೋಲ್ ನಲ್ಲಿ ಅಲ್ಜಾಮಿಯಾ-ಟುಸ್-ಸೈಫಿಯಾದ ಹೊಸ ಕ್ಯಾಂಪಸ್ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 10th, 08:27 pm
ಪೂಜ್ಯ ಸೈದ್ನಾ ಮುಫದ್ದಲ್ ಜೀ, ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೀ, ಉಪ ಮುಖ್ಯಮಂತ್ರಿ ದೇವೇಂದ್ರ ಜೀ ಮತ್ತು ಈ ಸಮಾರಂಭದಲ್ಲಿ ಹಾಜರಿರುವ ಇತರ ಎಲ್ಲ ಗಣ್ಯರೇ !ಮುಂಬೈಯಲ್ಲಿ ಅಲ್ಜಮಿಯಾ-ತುಸ್-ಸೈಫಿಯಾ ಶಿಕ್ಷಣ ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು
February 10th, 04:45 pm
ಮುಂಬೈನ ಮರೋಲ್ ನಲ್ಲಿರುವ ಅಲ್ಜಮಿಯಾ-ತುಸ್-ಸೈಫಿಯಾ (ದಿ ಸೈಫೀ ಅಕಾಡೆಮಿ) ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಅಲ್ಜಮಿಯಾ-ತುಸ್-ಸೈಫಿಯಾ ದಾವೂದಿ ಬೊಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದೆ. ಪರಮಪೂಜ್ಯ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯು ಸಮುದಾಯದ ಕಲಿಕಾ ಸಂಪ್ರದಾಯಗಳು, ವ್ಯವಸ್ಥೆಗಳು ಮತ್ತು ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.