ಅಹಿಂಸಾ ಯಾತ್ರಾ ಸಂಪನ್ನತಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ರೂಪಾಂತರ
March 27th, 02:31 pm
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರೇ, ಪೂಜ್ಯ ಸಂತರು ಮತ್ತು ಸನ್ಯಾಸಿಗಳೇ ಹಾಗೂ ಉಪಸ್ಥಿತರಿರುವ ಎಲ್ಲಾ ಭಕ್ತರೇ ನಿಮಗೆಲ್ಲರಿಗೂ ಶುಭಾಶಯಗಳು. ನಮ್ಮ ದೇಶ ಭಾರತ ಸಾವಿರಾರು ವರ್ಷಗಳಿಂದ ಮುನಿಗಳು, ಸಂತರು, ಋಷಿಗಳು, ಆಚಾರ್ಯರ ಮಹಾನ್ ಪರಂಪರೆಯ ನಾಡಾಗಿದೆ. ಕಾಲಘಟ್ಟದ ದ್ವೇಷದಿಂದ ಉಂಟಾದ ಅನೇಕ ಸವಾಲುಗಳ ನಡುವೆಯೂ ಈ ಸಂಪ್ರದಾಯವು ಪ್ರವರ್ಧಮಾನಕ್ಕೆ ಬಂದಿದೆ. ಇಲ್ಲಿ, ಆಚಾರ್ಯರು ನಮಗೆ '‘चरैवेति-चरैवेति’ (ಸದಾ ಚಲಿಸುತ್ತಲೇ ಇರಿ, ಚಲಿಸುತ್ತಲೇ ಇರಿ) ಎಂಬ ಮಂತ್ರವನ್ನು ನಮಗೆ ನೀಡಿದ್ದಾರೆ; ಶ್ವೇತಾಂಬರ-ತೇರಾಪಂಥದವರು '‘चरैवेति-चरैवेति’ ಮತ್ತು ಶಾಶ್ವತ ಚಲನಶೀಲತೆಯ ಮಹಾನ್ ಪರಂಪರೆಗೆ ಹೊಸ ಔನ್ನತ್ಯ ನೀಡಿದ್ದಾರೆ. ಆಚಾರ್ಯ ಭಿಕ್ಕು 'ಆಲಸ್ಯವನ್ನು ನಿವಾರಿಸು' ವುದನ್ನು ತನ್ನ ಆಧ್ಯಾತ್ಮಿಕ ಸಂಕಲ್ಪವಾಗಿ ಮಾಡಿಕೊಂಡಿದ್ದರು.ಅಹಿಂಸಾ ಯಾತ್ರಾ ಸಂಪನ್ನತಾ ಸಮಾರೋಪ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಭಾಷಣ
March 27th, 02:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ವೇತಾಂಬರ ತೇರಾಪಂಥ್‌ನ ಅಹಿಂಸಾ ಯಾತ್ರೆ ಸಂಪನ್ನತಾ ಸಮರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ ತಮ್ಮ ಸಂದೇಶ ನೀಡಿದರು.