ನೈಜೀರಿಯಾದಲ್ಲಿ ನಡೆದ ಭಾರತೀಯ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

November 17th, 07:20 pm

ಇಂದು, ನೀವು ನಿಜವಾಗಿಯೂ ಅಬುಜಾದಲ್ಲಿ ಅದ್ಭುತ ವಾತಾವರಣವನ್ನು ಸೃಷ್ಟಿಸಿದ್ದೀರಿ. ನಿನ್ನೆ ಸಂಜೆಯಿಂದ ಎಲ್ಲವನ್ನೂ ನೋಡಿದಾಗ, ನಾನು ಅಬುಜಾದಲ್ಲಿಲ್ಲ ಆದರೆ ಭಾರತದ ನಗರದಲ್ಲಿ ಇದ್ದೇನೆ ಎಂದು ಅನಿಸುತ್ತದೆ. ನಿಮ್ಮಲ್ಲಿ ಅನೇಕರು ಲಾಗೋಸ್, ಕಾನೊ, ಕಡುನಾ ಮತ್ತು ಪೋರ್ಟ್ ಹಾರ್ಕೋರ್ಟ್ ನಿಂದ ಅಬುಜಾಗೆ ಪ್ರಯಾಣಿಸಿದ್ದೀರಿ, ವಿವಿಧ ಸ್ಥಳಗಳಿಂದ ಬಂದಿದ್ದೀರಿ ಮತ್ತು ನಿಮ್ಮ ಮುಖದ ಮೇಲಿನ ಹೊಳಪು, ನೀವು ಹೊರಸೂಸುವ ಶಕ್ತಿ ಮತ್ತು ಉತ್ಸಾಹವು ಇಲ್ಲಿರಲು ನಿಮ್ಮ ಉತ್ಸುಕತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಕೂಡ ನಿಮ್ಮನ್ನು ಭೇಟಿಯಾಗುವ ಈ ಅವಕಾಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯ ನನಗೆ ಅಪಾರ ನಿಧಿಯಾಗಿದೆ. ನಿಮ್ಮ ನಡುವೆ ಇದ್ದು, ನಿಮ್ಮೊಂದಿಗೆ ಸಮಯ ಕಳೆಯುವುದರಿಂದ, ಈ ಕ್ಷಣಗಳು ನನ್ನ ಜೀವಮಾನವಿಡೀ ನೆನಪಿನಲ್ಲಿ ಉಳಿಯುತ್ತವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ನೈಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ

November 17th, 07:15 pm

ಪ್ರಧಾನಮಂತ್ರಿಯಾಗಿ ನೈಜೀರಿಯಾಕ್ಕೆ ಇದು ಅವರ ಮೊದಲ ಭೇಟಿ ಎಂದು ಹೇಳಿದ ಶ್ರೀ ಮೋದಿ, ತಮ್ಮೊಂದಿಗೆ ಕೋಟ್ಯಂತರ ಭಾರತೀಯರ ಶುಭ ಹಾರೈಕೆಗಳನ್ನು ತಂದಿರುವೆನು ಎಂದು ಹೇಳಿದರು. ನೈಜೀರಿಯಾದಲ್ಲಿರುವ ಭಾರತೀಯರ ಪ್ರಗತಿಯ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ ಎಂದು ಅವರು ಹೇಳಿದರು. ಅಧ್ಯಕ್ಷ ಟಿನುಬು ಮತ್ತು ನೈಜೀರಿಯಾದ ಜನರಿಗೆ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ ಅವರು ಎಲ್ಲಾ ವಿನಮ್ರತೆಯೊಂದಿಗೆ ಪ್ರಶಸ್ತಿಯನ್ನು ಕೋಟಿಗಟ್ಟಲೆ ಭಾರತೀಯರಿಗೆ ಅರ್ಪಿಸಿದರು.

ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ: ಯುಎನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ

September 23rd, 09:32 pm

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ 'ಭವಿಷ್ಯದ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದರು. ಅವರು 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಭಾರತದ ಯಶಸ್ಸನ್ನು ಎತ್ತಿ ತೋರಿಸಿದರು, ಜಾಗತಿಕ ದಕ್ಷಿಣದೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಿದರು ಮತ್ತು ಸಮತೋಲಿತ ಟೆಕ್ ನಿಯಮಗಳಿಗೆ ಕರೆ ನೀಡಿದರು. ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಯುಎನ್ ಭದ್ರತಾ ಮಂಡಳಿಯ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

‘ಭವಿಷ್ಯದ ಶೃಂಗಸಭೆ’ಯಲ್ಲಿ ಪ್ರಧಾನಮಂತ್ರಿಯವರ ಭಾಷಣ

September 23rd, 09:12 pm

ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ 'ಭವಿಷ್ಯದ ಶೃಂಗಸಭೆ'ಯನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದರು. ಅವರು 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತುವಲ್ಲಿ ಭಾರತದ ಯಶಸ್ಸನ್ನು ಎತ್ತಿ ತೋರಿಸಿದರು, ಜಾಗತಿಕ ದಕ್ಷಿಣದೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಿದರು ಮತ್ತು ಸಮತೋಲಿತ ಟೆಕ್ ನಿಯಮಗಳಿಗೆ ಕರೆ ನೀಡಿದರು. ಜಾಗತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಯುಎನ್ ಭದ್ರತಾ ಮಂಡಳಿಯ ಸುಧಾರಣೆಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼಯ ನಾಯಕರ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಉದ್ಘಾಟನಾ ಭಾಷಣದ ಇಂಗ್ಲಿಷ್‌ ಅವತರಿಣಿಕೆ

August 17th, 10:00 am

ಭಾರತದ 140 ಕೋಟಿ ಭಾರತೀಯರ ಪರವಾಗಿ ತಮ್ಮೆಲ್ಲರಿಗೂ ʼಜಾಗತಿಕ ದಕ್ಷಿಣ ಶೃಂಗಸಭೆಯ ಮೂರನೇ ಧ್ವನಿʼ ಸಮ್ಮೇಳನಕ್ಕೆ (3ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ) ಆತ್ಮೀಯ ಸ್ವಾಗತ. ಕಳೆದ ಎರಡು ಶೃಂಗಸಭೆಗಳಲ್ಲಿ, ನಿಮ್ಮಲ್ಲಿ ಹಲವರೊಂದಿಗೆ ನಿಕಟವಾಗಿ ಕಾರ್ಯನಿವಹಿಸುವ ಅವಕಾಶ ನನಗೆ ಒದಗಿ ಬಂದಿತ್ತು. ಈ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ತರುವಾಯ ಮತ್ತೊಮ್ಮೆ ಈ ವೇದಿಕೆಯಲ್ಲಿ ನಿಮ್ಮೆಲ್ಲರೊಂದಿಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ.

ಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ - ಕಾಮನ್ ವೆಲ್ತ್ ಅಟಾರ್ನಿ ಮತ್ತು ಸಾಲಿಸಿಟರ್ ಜನರಲ್ ಗಳ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

February 03rd, 11:00 am

ಈ ಸಮ್ಮೇಳನವನ್ನು ಉದ್ಘಾಟಿಸುತ್ತಿರುವುದು ಸಂತಸದ ಸಂಗತಿ. ಪ್ರಪಂಚದಾದ್ಯಂತದ ಪ್ರಮುಖ ಕಾನೂನು ಮನಸ್ಸುಗಳು ಇಲ್ಲಿವೆ ಎಂದು ನನಗೆ ಸಂತೋಷವಾಗಿದೆ. ಒಂದು ಕೋಟ್ಯಂತರ ಭಾರತೀಯರ ಪರವಾಗಿ, ನಾನು ನಮ್ಮ ಎಲ್ಲಾ ಅಂತಾರಾಷ್ಟ್ರೀಯ ಅತಿಥಿಗಳನ್ನು ಸ್ವಾಗತಿಸುತ್ತೇನೆ. ವಿಸ್ಮಯಕಾರಿಯಾದ ಇಂಡಿಯಾವನ್ನು ಪೂರ್ಣವಾಗಿ ಅನುಭವಿಸುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ.

​​​​​​​ʻಸಿಎಲ್ಇಎ- ಕಾಮನ್ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್‌ ಜನರಲ್‌ಗಳ ಸಮ್ಮೇಳನ-2024’ ಉದ್ಘಾಟಿಸಿದ ಪ್ರಧಾನಿ

February 03rd, 10:34 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ʻಕಾಮನ್ ವೆಲ್ತ್ ಕಾನೂನು ಶಿಕ್ಷಣ ಸಂಘ(ಸಿಎಲ್‌ಇಎ) - ಕಾಮನ್ ವೆಲ್ತ್ ಅಟಾರ್ನಿಗಳು ಮತ್ತು ಸಾಲಿಸಿಟರ್‌ ಜನರಲ್‌ಗಳ ಸಮ್ಮೇಳನ (ಸಿಎಎಸ್‌ಜಿಸಿ)-2024ʼ ಅನ್ನು ಉದ್ಘಾಟಿಸಿದರು. ನ್ಯಾಯ ವಿತರಣೆಯಲ್ಲಿ ಗಡಿಯಾಚೆಗಿನ ಸವಾಲುಗಳು ಎಂಬುದು ಸಮ್ಮೇಳನದ ವಿಷಯವಸ್ತುವಾಗಿತ್ತು. ನ್ಯಾಯಾಂಗ ಪರಿವರ್ತನೆ ಮತ್ತು ಕಾನೂನು ಅಭ್ಯಾಸದ ನೈತಿಕ ಆಯಾಮ; ಕಾರ್ಯಾಂಗದ ಉತ್ತರದಾಯಿತ್ವ; ಮತ್ತು ಆಧುನಿಕ-ದಿನದ ಕಾನೂನು ಶಿಕ್ಷಣದ ಮರುಪರಿಶೀಲನೆ ಸೇರಿದಂತೆ ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ಈ ಸಮ್ಮೇಳನ ವೇದಿಕೆಯಾಗಲಿದೆ.

2ನೇ ʻಜಾಗತಿಕ ದಕ್ಷಿಣದ ಧ್ವನಿʼ (ವಾಯ್ಸ್ ಆಫ್ ಗ್ಲೋಬಲ್ ಸೌತ್‌) ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣದ ಕನ್ನಡ ಅನುವಾದ

November 17th, 04:03 pm

140 ಕೋಟಿ ಭಾರತೀಯರ ಪರವಾಗಿ, 2ನೇ ʻಜಾಗತಿಕ ದಕ್ಷಿಣದ ಧ್ವನಿʼ(ವಾಯ್ಸ್‌ ಆಫ್‌ ಗ್ಲೋಬಲ್‌ ಸೌತ್‌) ಶೃಂಗಸಭೆಯ ಉದ್ಘಾಟನಾ ಅಧಿವೇಶನಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ʻಜಾಗತಿಕ ದಕ್ಷಿಣದ ಧ್ವನಿʼಯು 21ನೇ ಶತಮಾನದ ಬದಲಾಗುತ್ತಿರುವ ವಿಶ್ವದ ಅತ್ಯಂತ ವಿಶಿಷ್ಟ ವೇದಿಕೆಯಾಗಿದೆ. ಭೌಗೋಳಿಕವಾಗಿ, ಜಾಗತಿಕ ದಕ್ಷಿಣವು ಯಾವಾಗಲೂ ಅಸ್ತಿತ್ವದಲ್ಲಿದೆ. ಆದರೆ ಇದು ಮೊದಲ ಬಾರಿಗೆ ಈ ರೀತಿಯ ಧ್ವನಿಯನ್ನು ಪಡೆಯುತ್ತಿದೆ. ಮತ್ತು ಇದು ನಮ್ಮೆಲ್ಲರ ಜಂಟಿ ಪ್ರಯತ್ನದಿಂದ ಸಾಧ್ಯವಾಗಿದೆ. ನಾವು 100ಕ್ಕೂ ಹೆಚ್ಚು ವಿಭಿನ್ನ ದೇಶಗಳು, ಆದರೆ ನಾವು ಒಂದೇ ರೀತಿಯ ಆಸಕ್ತಿಗಳು ಮತ್ತು ಸಮಾನ ಆದ್ಯತೆಗಳನ್ನು ಹೊಂದಿದ್ದೇವೆ.