ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಗಾಂಡ ಭೇಟಿ ವೇಳೆ ಉಗಾಂಡ ಸಂಸತ್ತನ್ನುದ್ದೇಶಿಸಿ ಮಾಡಿದ ಭಾಷಣ
July 25th, 01:00 pm
ಈ ಘನತೆವೆತ್ತ ಸದನವನ್ನು ಉದ್ದೇಶಿಸಿ ಭಾಷಣ ಮಾಡುವ ಆಹ್ವಾನ ನನಗೆ ಲಭಿಸಿರುವುದು ತುಂಬಾ ಗೌರವ ತಂದಿದೆ. ನನಗೆ ಇತರೆ ಸಂಸತ್ ಗಳಲ್ಲೂ ಭಾಷಣ ಮಾಡುವ ಇಂತಹುದೇ ಅವಕಾಶ ದೊರೆತಿದೆ. ಆದರೆ ಇದು ಅತ್ಯಂತ ವಿಶೇಷದ್ದು. ಭಾರತದ ಪ್ರಧಾನಮಂತ್ರಿ ಒಬ್ಬರಿಗೆ ಮೊದಲ ಬಾರಿಗೆ ಇಂತಹ ಗೌರವ ದೊರೆತಿದೆ. ಇದು ಭಾರತದ 125 ಕೋಟಿ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ನಾನು ಭಾರತದ ಎಲ್ಲ ಜನರ ಹಾರ್ದಿಕ ಶುಭಾಶಯಗಳು ಮತ್ತು ಅವರ ಗೆಳೆತನದ ಶುಭಹಾರೈಕೆಗಳನ್ನು ನನ್ನೊಂದಿಗೆ ತಂದು ಇಲ್ಲಿನ ಸದನದ ಮೂಲಕ ಉಗಾಂಡದ ಎಲ್ಲ ಜನರಿಗೆ ತಿಳಿಸುತ್ತಿದ್ದೇನೆ. ಮೇಡಂ ಸ್ಪೀಕರ್, ನಿಮ್ಮ ಉಪಸ್ಥಿತಿ ನನಗೆ ನಮ್ಮ ಲೋಕಸಭೆಯನ್ನು ನೆನಪು ಮಾಡುತ್ತದೆ, ಕಾರಣ ನಮ್ಮ ದೇಶದಲ್ಲೂ ಲೋಕಸಭೆಯ ಸ್ಪೀಕರ್ ಆಗಿರುವುದು ಓರ್ವ ಮಹಿಳೆ. ನಾನು ಈ ಸಂಸತ್ತಿನಲ್ಲಿ ಬಹು ಸಂಖ್ಯೆಯ ಯುವ ಸದಸ್ಯರನ್ನು ನೋಡುತ್ತಿದ್ದೇನೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಶುಭ ಸಮಾಚಾರವಾಗಿದೆ. ನಾನು ಉಗಾಂಡಾಗೆ ಬಂದಾಗಲೆಲ್ಲ ಇದು 'ಆಫ್ರಿಕಾದ ಮುತ್ತು' ಎಂದು ಪಠಿಸುತ್ತೇನೆ. ಈ ರಾಷ್ಟ್ರ ಸೌಂದರ್ಯದ ಘನಿ. ಇಲ್ಲಿ ಶ್ರೇಷ್ಠ ಸಂಪನ್ಮೂಲವಿದೆ ಮತ್ತು ಶ್ರೀಮಂತ ಪರಂಪರೆಯಿದೆ. ಇಲ್ಲಿನ ನದಿಗಳು ಮತ್ತು ಕೊಳ್ಳಗಳು ಪ್ರಾಂತ್ಯದಾದ್ಯಂತ ನಾಗರಿಕತೆಗಳನ್ನು ಪೋಷಿಸಿವೆ. ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಪ್ರಧಾನಿಯೊಬ್ಬರು ಮತ್ತೊಂದು ಸಾರ್ವಭೌಮತ್ವ ಹೊಂದಿರುವ ರಾಷ್ಟ್ರದ ಸಂಸತ್ತಿನ ಚುನಾಯಿತ ಸದಸ್ಯರನ್ನುದ್ದೇಶಿಸಿ ಮಾತನಾಡುವ ಈ ಅವಕಾಶದ ಹಿಂದಿನ ಇತಿಹಾಸದ ಅರಿವಿದೆ. ನಮ್ಮ ಹಿಂದಿನ ಕಡಲ ಸಂಬಂಧಗಳು, ವಸಾಹತುಷಾಹಿ ಆಡಳಿತದ ಕತ್ತಲೆಯುಗ, ಸ್ವಾತಂತ್ರ್ಯಕ್ಕಾಗಿ ಒಗ್ಗೂಡಿ ಹೋರಾಟ ನಡೆಸಿದ್ದು, ವಿಭಜಿತ ವಿಶ್ವದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ಅನಿಶ್ಚಿತತೆಯ ಮಾರ್ಗದಲ್ಲಿ ನಡೆಯುತ್ತಿರುವುದು, ಹೊಸ ಅವಕಾಶಗಳ ಅನ್ವೇಷಣೆ ಮತ್ತು ನಮ್ಮ ಯುವ ಜನಾಂಗದ ಏಕತೆಯ ಆಶೋತ್ತರಗಳು ಇವೆಲ್ಲ ನಮ್ಮನ್ನು ಬೆಸೆದಿವೆ.PM Modi’s address at Silver Jubilee Celebrations of the Shree Kutchi Leva Patel Samaj in Nairobi
March 30th, 01:21 pm
PM Modi addressed the Silver Jubilee Celebrations of the Shree Kutchi Leva Patel Samaj in Nairobi, Kenya via video conferencing. In his address, the Prime Minister lauded the contribution of Kutchi Leva Patel Community in various welfare activities and the development of East Africa. He also recalled the role of members of Indian community in the Kenya’s freedom movement.ಕೆನ್ಯಾದನೈರೋಬಿಯಶ್ರೀಕಛ್ಛಿಲೆವಾಪಟೇಲ್ಸಮಾಜದಬೆಳ್ಳಿಹಬ್ಬದಮಹೋತ್ಸವಉದ್ದೇಶಿಸಿಪ್ರಧಾನಮಂತ್ರಿಅವರಿಂದವೀಡಿಯೋಕಾನ್ಫ್‍ರೆನ್ಸ್ಮೂಲಕಭಾಷಣ
March 30th, 01:20 pm
ಕೆನ್ಯಾ ರಾಷ್ಟ್ರದನೈರೋಬಿಯಲ್ಲಿರುವ ಶ್ರೀ ಕಛ್ಛಿಲೆವಾಪಟೇಲ್ಸಮಾಜದಬೆಳ್ಳಿಹಬ್ಬದಮಹೋತ್ಸವ ಉದ್ದೇಶಿಸಿಪ್ರಧಾನಮಂತ್ರಿಶ್ರೀ ನರೇಂದ್ರಮೋದಿಅವರು ಇಂದುಮಾತನಾಡಿದರು.PM’s meetings on the sidelines of annual meeting of African Development Bank Group
May 23rd, 01:13 pm
Strengthening India’s ties with Africa, PM Narendra Modi held bilateral talks with several African heads of state. Here are a few pictures."ಭಾರತವು ಅಭಿವೃದ್ಧಿಯ ಎಂಜಿನ್ ಆಗಬೇಕು ಮತ್ತು ಹವಾಮಾನ ಸ್ನೇಹಿ ಅಭಿವೃದ್ಧಿಯ ಉದಾಹರಣೆಯಾಗಿರಬೇಕು: ಪ್ರಧಾನಿ ಮೋದಿ "
May 23rd, 11:30 am
ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕಿನ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಫ್ರಿಕಾ ಜೊತೆಗಿನ ಭಾರತದ ಪ್ರಬಲ ಸಂಬಂಧಗಳನ್ನು ವಿವರಿಸಿದರು. ಆಫ್ರಿಕಾ ಜೊತೆಗಿನ ಭಾರತದ ಪಾಲುದಾರಿಕೆಯು ಆಫ್ರಿಕನ್ ದೇಶಗಳ ಅಗತ್ಯತೆಗಳಿಗೆ ಸ್ಪಂದಿಸುವ ಒಂದು ಸಹಕಾರದ ಮಾದರಿಯನ್ನು ಆಧರಿಸಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ. ಹೊಸ ಭಾರತದ ತನ್ನ ದೃಷ್ಟಿಕೋನದ ಬಗ್ಗೆ ಮಾತನಾಡಿದ ಪ್ರಧಾನಿ , ಭಾರತವು ಬೆಳವಣಿಗೆಯ ಎಂಜಿನ್ ಮತ್ತು ಮುಂಬರುವ ವರ್ಷಗಳಲ್ಲಿ ವಾತಾವರಣ ಸ್ನೇಹಿ ಅಭಿವೃದ್ಧಿಯ ಉದಾಹರಣೆಯಾಗಿರಬೇಕು ಎಂದು ಹೇಳಿದರು.ಪ್ರಧಾನಿ ಇಂದು ಗುಜರಾತ್ ಗೆ ಭೇಟಿ ನೀಡಲಿದ್ದಾರೆ ; ಮಂಗಳವಾರ ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ
May 22nd, 12:18 pm
ಪ್ರಧಾನಿ, ಶ್ರೀ ನರೇಂದ್ರ ಮೋದಿ ಇಂದು ಗುಜರಾತ್ ಗೆ ಎರಡು ದಿನ ಭೇಟಿ ನೀಡಲಿದ್ದಾರೆ. ಇಂದು ಕಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ಹಾಕಲಿದ್ದಾರೆ. ಮಂಗಳವಾರ, ಮೇ 23ರಂದು , ಪ್ರಧಾನ ಮಂತ್ರಿ ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ ವಾರ್ಷಿಕ ಸಭೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.