ಏರೋ ಇಂಡಿಯಾ 2023 ರ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಿ

February 13th, 07:31 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏರೋ ಇಂಡಿಯಾ 2023ರ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ‘ಏರೋ ಇಂಡಿಯಾ 2023’ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

February 13th, 09:40 am

ಇಂದಿನ ಮಹತ್ವಪೂರ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕರ್ನಾಟಕದ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೀ, ನನ್ನ ಹಲವು ಸಂಪುಟ ಸಹೋದ್ಯೋಗಿಗಳು, ವಿದೇಶಗಳ ರಕ್ಷಣಾ ಸಚಿವರು, ಉದ್ಯಮದ ಗೌರವಾನ್ವಿತ ಪ್ರತಿನಿಧಿಗಳು, ಇತರೆ ಗಣ್ಯರು, ಮಹಿಳೆಯರು ಮತ್ತು ಗೌರವಾನ್ವಿತರೆ!

​​​​​​​ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದ 14 ನೇ ಆವೃತ್ತಿಯನ್ನು ಪ್ರಧಾನಮಂತ್ರಿಯವರು ಬೆಂಗಳೂರಿನಲ್ಲಿ ಉದ್ಘಾಟಿಸಿದರು

February 13th, 09:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದ 14 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಏರೋ ಇಂಡಿಯಾ 2023 ರ ಘೋಷವಾಕ್ಯ ಕೋಟ್ಯಂತರ ಅವಕಾಶಗಳಿಗೆ ರನ್‌ ವೇ”. ಸುಮಾರು 100 ವಿದೇಶಿ ಮತ್ತು 700 ಭಾರತೀಯ ಕಂಪನಿಗಳು ಸೇರಿದಂತೆ 800 ರಕ್ಷಣಾ ಕಂಪನಿಗಳ ಜೊತೆಗೆ 80 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಗೆ ಇದು ಸಾಕ್ಷಿಯಾಗಲಿದೆ. ಪ್ರಧಾನಮಂತ್ರಿಯವರ ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ದೃಷ್ಟಿಕೋನಕ್ಕೆ ಅನುಗುಣವಾಗಿ, ಸ್ವದೇಶಿ ಉಪಕರಣಗಳು/ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ವಿದೇಶಿ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುವ ಬಗ್ಗೆ ಈ ಪ್ರದರ್ಶನವು ಗಮನ ಕೇಂದ್ರೀಕರಿಸುತ್ತದೆ.