ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ – ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ 2024 ರಲ್ಲಿ ಉದ್ಯಮ ದಿಗ್ಗಜರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಶ್ಲಾಘನೆ

October 15th, 02:23 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ – ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆ (ITU-WTSA) 2024 ರ ಸಂದರ್ಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ನ 8 ನೇ ಆವೃತ್ತಿಯನ್ನು ಉದ್ಘಾಟಿಸಿದರು. ಡಬ್ಲ್ಯು ಟಿ ಎಸ್ ಎ ಎಂಬುದು ಡಿಜಿಟಲ್ ತಂತ್ರಜ್ಞಾನಗಳಿಗಾಗಿನ ವಿಶ್ವ ಸಂಸ್ಥೆಯ ಏಜೆನ್ಸಿಯಾದ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಪ್ರಮಾಣೀಕರಣ ಕಾರ್ಯಕ್ಕಾಗಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಆಡಳಿತ ಸಮ್ಮೇಳನವಾಗಿದೆ. ಇದೇ ಮೊದಲ ಬಾರಿಗೆ ಐಟಿಯು – ಡಬ್ಲ್ಯುಟಿಎಸ್ಎ ಅನ್ನು ಭಾರತ ಮತ್ತು ಏಷ್ಯಾ-ಪೆಸಿಫಿಕ್ನಲ್ಲಿ ಆಯೋಜಿಸಲಾಗಿದೆ. ಇದು ದೂರಸಂಪರ್ಕ, ಡಿಜಿಟಲ್ ಮತ್ತು ಐಸಿಟಿ ವಲಯಗಳನ್ನು ಪ್ರತಿನಿಧಿಸುತ್ತಿರುವ 190 ಕ್ಕೂ ಹೆಚ್ಚು ದೇಶಗಳ 3,000 ಕ್ಕೂ ಹೆಚ್ಚು ಉದ್ಯಮ ನಾಯಕರು, ನೀತಿ-ನಿರೂಪಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಟ್ಟುಗೂಡಿಸಿರುವ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿದೆ.

ಆದಿತ್ಯ ಬಿರ್ಲಾ ಬಳಗದ ಸುವರ್ಣ ಮಹೋತ್ಸವ ಆಚರಣೆ ವೇಳೆ ಪ್ರಧಾನಮಂತ್ರಿ ಮಾಡಿದ ಭಾಷಣದ ಪಠ್ಯ

November 03rd, 11:08 am

ಥೈಲ್ಯಾಂಡ್ ನ ಈ ಸುವರ್ಣ ಭೂಮಿಯಲ್ಲಿ ನಾವು ಸುವರ್ಣ ಜಯಂತಿ ಅಥವಾ ಆದಿತ್ಯಾ ಬಿರ್ಲಾ ಬಳಗದ ಸುವರ್ಣ ಮಹೋತ್ಸವ ಆಚರಣೆಗೆ ಇಲ್ಲಿ ಸೇರಿದ್ದೇವೆ. ಇದೊಂದು ನಿಜವಾಗಿಯೂ ವಿಶೇಷ ಸಂದರ್ಭ. ನಾನು ಆದಿತ್ಯ ಬಿರ್ಲಾ ಬಳಗದ ತಂಡವನ್ನು ಅಭಿನಂದಿಸುತ್ತೇನೆ. ನಾವು ಈಗಷ್ಟೇ ಶ್ರೀ ಕುಮಾರ ಮಂಗಲಂ ಬಿರ್ಲಾ ಅವರು ಥೈಲ್ಯಾಂಡ್ ನಲ್ಲಿ ಮಾಡುತ್ತಿರುವ ಮಹತ್ವದ ಶ್ಲಾಘನೀಯ ಕಾರ್ಯವನ್ನು ಕೇಳಿದ್ದೇವೆ, ಅದರಿಂದ ಈ ದೇಶದಲ್ಲಿ ಹಲವರಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ ಮತ್ತು ಅವರು ಶ್ರೇಯೋಭಿವೃದ್ಧಿ ಹೊಂದುತ್ತಿದ್ದಾರೆ.

ಥಾಯ್ ಲ್ಯಾಂಡ್ ನ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಮುಖ್ಯಾಂಶಗಳು

November 03rd, 10:32 am

ಥಾಯ್ ಲ್ಯಾಂಡ್ ನ ಸ್ವರ್ಣ ಭೂಮಿಯಲ್ಲಿ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಆಚರಣೆಗಾಗಿ ನಾವೆಲ್ಲರೂ ಸೇರಿದ್ದೇವೆ.

ಥಾಯ್ ಲ್ಯಾಂಡ್ ನಲ್ಲಿ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿ

November 03rd, 07:51 am

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಆದಿತ್ಯ ಬಿರ್ಲಾ ಸಮೂಹದ ಥಾಯ್ ಲ್ಯಾಂಡ್ ನಲ್ಲಿನ ಕಾರ್ಯಾಚರಣೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾದರು. ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಶ್ರೀ ಕುಮಾರ ಮಂಗಲಂ ಬಿರ್ಲಾ, ಥಾಯ್ ಲ್ಯಾಂಡ್ ನಲ್ಲಿ ತಮ್ಮ ಸಮೂಹದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.