ಮಹಾನ್ ದಿಗ್ಗಜ ರಾಜ್ ಕಪೂರ್ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು

December 14th, 11:17 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಚಲನಚಿತ್ರ ಲೋಕದ ಮಹಾನ್ ದಿಗ್ಗಜ ಶ್ರೀ ರಾಜ್ ಕಪೂರ್ ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರನ್ನು ದೂರದೃಷ್ಟಿಯ ಚಲನಚಿತ್ರ ನಿರ್ಮಾಪಕ, ನಟ ಮತ್ತು ಚಿರ ನಿರಂತರ ಶೋಮ್ಯಾನ್ ಎಂದು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಶ್ರೀ ರಾಜ್ ಕಪೂರ್ ಅವರು ಕೇವಲ ಚಲನಚಿತ್ರ ನಿರ್ಮಾಪಕರಲ್ಲ ಬದಲಾಗಿ ಭಾರತೀಯ ಸಿನಿಮಾವನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರು, ಚಲನಚಿತ್ರ ನಿರ್ಮಾಪಕರು ಮತ್ತು ನಟರ ಹಲವು ತಲೆಮಾರುಗಳು ಅವರಿಂದ ಬಹಳಷ್ಟು ಕಲಿಯಬಹುದಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು.

ತಿರು ದೆಹಲಿ ಗಣೇಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

November 10th, 05:48 pm

ಪ್ರಸಿದ್ಧ ಚಿತ್ರನಟ ತಿರು ದೆಹಲಿ ಗಣೇಶ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಅತುಲ್ಯ ನಟನಾ ಕೌಶಲ್ಯದಿಂದ ಆಶೀರ್ವದಿಸಲ್ಪಟ್ಟ ತಿರು ಗಣೇಶ್ ಅವರು, ತಾನು ನಟಿಸಿದ ಪ್ರತಿ ಪಾತ್ರಕ್ಕೂ ಮಹತ್ವ ತುಂಬಿದ್ದಾರೆ ಮತ್ತು ಪೀಳಿಗೆಯ ಪ್ರೇಕ್ಷಕರೊಂದಿಗೆ ಉತ್ತಮ ಸಂಪರ್ಕ ಸಾಧಿಸುವ ಅವರ ಸಾಮರ್ಥ್ಯಕ್ಕಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.