ಕಾರ್ಯಕಾರ್ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
December 07th, 05:52 pm
ಕಾರ್ಯಕಾರ್(ಕಾರ್ಯಕರ್ತರು) ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ನಾನು ಭಗವಾನ್ ಸ್ವಾಮಿನಾರಾಯಣ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಇಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರ 103ನೇ ಜನ್ಮದಿನ ಆಚರಿಸಲಾಗುತ್ತಿದೆ, ಅವರಿಗೂ ಸಹ ನಾನು ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ, ಏಕೆಂದರೆ ಅವರು ದೈವಿಕ ಗುರು ಹರಿ ಪ್ರಗತ್ ಬ್ರಹ್ಮನ ಮೂರ್ತರೂಪವಾಗಿದ್ದರು. ಭಗವಾನ್ ಸ್ವಾಮಿನಾರಾಯಣ ಅವರ ಬೋಧನೆಗಳು ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ಅವರ ಸಂಕಲ್ಪಗಳು ಮತ್ತು ನಿರ್ಣಯಗಳು ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಅವರ ಅವಿರತ ಪ್ರಯತ್ನ ಮತ್ತು ಸಮರ್ಪಣೆಯ ಮೂಲಕ ಇಂದು ಸಾಕಾರಗೊಳ್ಳುತ್ತಿವೆ. 1 ಲಕ್ಷ ಸ್ವಯಂಸೇವಕರು, ಯುವಕರು ಮತ್ತು ಮಕ್ಕಳನ್ನು ಒಳಗೊಂಡ ಈ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಬೀಜ, ಮರ ಮತ್ತು ಹಣ್ಣುಗಳ ಸಾರವನ್ನು ಸುಂದರವಾಗಿ ಪ್ರತಿನಿಧಿಸುತ್ತಿದೆ. ನಾನು ನಿಮ್ಮ ನಡುವೆ ದೈಹಿಕವಾಗಿ ಇರಲು ಸಾಧ್ಯವಾಗದಿದ್ದರೂ, ಈ ಘಟನೆಯ ಚೈತನ್ಯ ಮತ್ತು ಶಕ್ತಿಯನ್ನು ನನ್ನ ಹೃದಯದಲ್ಲಿ ಆಳವಾಗಿ ಅನುಭವಿಸುತ್ತೇನೆ. ಇಂತಹ ಭವ್ಯವಾದ ಮತ್ತು ದಿವ್ಯವಾದ ಆಚರಣೆಯನ್ನು ಆಯೋಜಿಸಿದ್ದಕ್ಕಾಗಿ ಪರಮ ಪೂಜ್ಯ ಗುರು ಹರಿ ಮಹಂತ್ ಸ್ವಾಮಿ ಮಹಾರಾಜ್ ಮತ್ತು ಎಲ್ಲಾ ಪೂಜ್ಯ ಸಾಧು ಸಂತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಅವರಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.ಅಹಮದಾಬಾದ್‌ನಲ್ಲಿ ಕಾರ್ಯಕರ್ತರ ಸುವರ್ಣ ಮಹೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
December 07th, 05:40 pm
ಅಹಮದಾಬಾದ್‌ನಲ್ಲಿ ಆಯೋಜಿತವಾಗಿದ್ದ ಕಾರ್ಯಕರ್ತರ ಸುವರ್ಣ ಮಹೋತ್ಸವವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಉದ್ದೇಶಿಸಿ ಭಾಷಣ ಮಾಡಿದರು. ಪರಮಪೂಜ್ಯ ಗುರು ಹರಿ ಮಹಂತ ಸ್ವಾಮಿ ಮಹಾರಾಜ್, ಪೂಜ್ಯ ಸಾಧು ಸಂತರು ಮತ್ತು ಸತ್ಸಂಗಿ ಕುಟುಂಬದ ಸದಸ್ಯರು ಮತ್ತು ಇತರೆ ಗಣ್ಯರು ಮತ್ತು ಪ್ರತಿನಿಧಿಗಳನ್ನು ಅವರು ಸ್ವಾಗತಿಸಿದರು. ಕಾರ್ಯಕರ್ತರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮೋದಿ ಅವರು ಭಗವಾನ್ ಸ್ವಾಮಿ ನಾರಾಯಣರ ಪಾದಗಳಿಗೆ ನಮಸ್ಕರಿಸಿ, ಇಂದು ಪ್ರಮುಖ್ ಸ್ವಾಮಿ ಮಹಾರಾಜರ 103ನೇ ಜನ್ಮದಿನವೂ ಆಗಿದೆ. ಭಗವಾನ್ ಸ್ವಾಮಿ ನಾರಾಯಣರ ಬೋಧನೆಗಳು, ಪ್ರಮುಖ ಸ್ವಾಮಿ ಮಹಾರಾಜರ ಸಂಕಲ್ಪಗಳು ಪರಮ ಪೂಜ್ಯ ಗುರು ಹರಿಮಹಂತ ಸ್ವಾಮಿ ಮಹಾರಾಜರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಇಂದು ಫಲ ನೀಡುತ್ತಿವೆ. ಯುವಕರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸುಮಾರು 1 ಲಕ್ಷ ಕಾರ್ಯಕರ್ತರು ಸೇರಿದಂತೆ ಇಂತಹ ಬೃಹತ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು ಸಂತಸ ತಂದಿದೆ. ಸ್ಥಳದಲ್ಲಿ ದೈಹಿಕವಾಗಿ ಇಲ್ಲದಿದ್ದರೂ, ಈ ಕಾರ್ಯಕ್ರಮದ ಶಕ್ತಿಯನ್ನು ಅನುಭವಿಸಬಹುದಾಗಿದೆ. ಮಹಾರಥೋತ್ಸವದಲ್ಲಿ ಭಾಗಿಯಾಗಿರುವ ಪರಮಪೂಜ್ಯ ಗುರು ಹರಿಮಹಾಂತ ಸ್ವಾಮಿ ಮಹಾರಾಜರು, ಸಕಲ ಸಾಧು ಸಂತರಿಗೆ ಅವರು ಶುಭ ಕೋರಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಅಬುಧಾಬಿ ಯುವರಾಜರ ಸ್ವಾಗತ
September 09th, 08:40 pm
ನವದೆಹಲಿಯಲ್ಲಿಂದು ಅಬುಧಾಬಿ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಉಭಯ ನಾಯಕರು ವಿವಿಧ ವಿಷಯಗಳ ಕುರಿತು ಫಲಪ್ರದ ಮಾತುಕತೆ ನಡೆಸಿದರು.ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಭಾರತ ಭೇಟಿ (ಸೆಪ್ಟೆಂಬರ್ 9-10, 2024)
September 09th, 07:03 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಅಬುಧಾಬಿಯ ಯುವರಾಜ ಗೌರವಾನ್ವಿತ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2024 ಸೆಪ್ಟೆಂಬರ್ 9-10ರ ವರೆಗೆ ಅಧಿಕೃತ ಭಾರತ ಭೇಟಿಯಲ್ಲಿದ್ದಾರೆ. ಯುವರಾಜ ಶೇಖ್ ಖಲೀದ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ನಿನ್ನೆ ದೆಹಲಿಗೆ ಆಗಮಿಸಿದ ಅವರನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಬರಮಾಡಿಕೊಂಡರು, ನಂತರ ಅವರಿಗೆ ವಿಧ್ಯುಕ್ತ ಗೌರವ ವಂದನೆ ನೀಡಲಾಯಿತು. ಅವರ ಜೊತೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಮತ್ತು ದೊಡ್ಡ ಉದ್ಯಮ ದಿಗ್ಗಜರ ನಿಯೋಗ ಆಗಮಿಸಿದೆ.ಫಲಿತಾಂಶಗಳ ಪಟ್ಟಿ ಪಟ್ಟಿ: ಭಾರತಕ್ಕೆ ಅಧಿಕೃತ ಭೇಟಿ ನೀಡಿದ ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್
September 09th, 07:03 pm
ಎಮಿರೇಟ್ಸ್ ನ್ಯೂಕ್ಲಿಯರ್ ಎನರ್ಜಿ ಕಂಪನಿ (ಇಎನ್ಇಸಿ) ಮತ್ತು ನ್ಯೂಕ್ಲಿಯರ್ ಪವರ್ ಕೋಆಪರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ ಪಿಸಿಐಎಲ್) ನಡುವೆ ಬರಾಕಾ ಪರಮಾಣು ವಿದ್ಯುತ್ ಸ್ಥಾವರ ಕಾರ್ಯಾಚರಣೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಿಳಿವಳಿಕಾ ಒಪ್ಪಂದ.ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಶ್ರೀ ಕಲ್ಕಿ ಧಾಮ್ ನ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
February 19th, 11:00 am
ಎಲ್ಲಾ ಸಂತರು ತಮ್ಮ ಸ್ಥಾನಗಳನ್ನು ತೆಗೆದುಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಉತ್ತರ ಪ್ರದೇಶದ ಶಕ್ತಿಯುತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಕಲ್ಕಿ ಧಾಮದ ಮುಖ್ಯಸ್ಥ ಪೂಜ್ಯ ಶ್ರೀ ಅವಧೇಶಾನಂದ ಗಿರಿ ಜೀ, ಆಚಾರ್ಯ ಪ್ರಮೋದ್ ಕೃಷ್ಣಂ ಜೀ, ಪೂಜ್ಯ ಸ್ವಾಮಿ ಕೈಲಾಸಾನಂದ ಬ್ರಹ್ಮಚಾರಿ ಜೀ, ಪೂಜ್ಯ ಸದ್ಗುರು ಶ್ರೀ ಋತೇಶ್ವರ್ ಜೀ, ಭಾರತದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗೌರವಾನ್ವಿತ ಸಂತರು ಮತ್ತು ನನ್ನ ಪ್ರೀತಿಯ ಶ್ರದ್ಧಾವಂತ ಸಹೋದರ ಸಹೋದರಿಯರೇ!ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಪ್ರಧಾನಮಂತ್ರಿಯವರಿಂದ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ
February 19th, 10:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಶಂಕುಸ್ಥಾಪನೆ ಮಾಡಿದರು. ಪ್ರಧಾನಮಂತ್ರಿಯವರು ಶ್ರೀ ಕಲ್ಕಿ ಧಾಮ ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿದರು. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಅಧ್ಯಕ್ಷರಾಗಿರುವ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ವತಿಯಿಂದ ಶ್ರೀ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಹಲವಾರು ಸಂತರು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸುತ್ತಿರುವರು.ಯುಎಇಯ ಅಬುಧಾಬಿಯಲ್ಲಿ ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
February 14th, 07:16 pm
ಶ್ರೀ ಸ್ವಾಮಿ ನಾರಾಯಣ್ ಜೈ ದೇವ್, ಗೌರವಾನ್ವಿತ ಶೇಖ್ ನಹ್ಯಾನ್ ಅಲ್ ಮುಬಾರಕ್, ಗೌರವಾನ್ವಿತ ಮಹಂತ್ ಸ್ವಾಮಿ ಜೀ ಮಹಾರಾಜ್, ಭಾರತ, ಯುಎಇ ಮತ್ತು ವಿಶ್ವದಾದ್ಯಂತದ ವಿವಿಧ ದೇಶಗಳ ಗೌರವಾನ್ವಿತ ಅತಿಥಿಗಳು ಮತ್ತು ವಿಶ್ವದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನನ್ನ ಸಹೋದರ ಸಹೋದರಿಯರೇ!PM Modi inaugurates BAPS Hindu Mandir in Abu Dhabi, UAE
February 14th, 06:51 pm
Prime Minister Narendra Modi inaugurated the BAPS Hindu Mandir in Abu Dhabi, UAE. The PM along with the Mukhya Mahant of BAPS Hindu Mandir performed all the rituals. The PM termed the Hindu Mandir in Abu Dhabi as a symbol of shared heritage of humanity.ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಡೆದ ʻಅಹ್ಲನ್ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ
February 13th, 11:19 pm
ಇಂದು, ನೀವು ಅಬುಧಾಬಿಯಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ವಿವಿಧ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ನೀವು ಬಂದಿದ್ದೀರಿ, ಆದರೆ ಎಲ್ಲರ ಹೃದಯಗಳು ಪರಸ್ಪರ ಬೆಸೆದುಕೊಂಡಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಮಿಡಿತವು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿʼ! ಪ್ರತಿ ಉಸಿರು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹ ಚಿರಾಯುವಾಗಲಿ! ಪ್ರತಿಯೊಂದು ಧ್ವನಿಯೂ ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿ! ನಾವು ಈ ಕ್ಷಣವನ್ನು ಪೂರ್ಣವಾಗಿ ಬದುಕಬೇಕು. ಇಂದು, ನಾವು ಜೀವಮಾನವಿಡೀ ನಮ್ಮೊಂದಿಗೆ ಉಳಿಯುವ ನೆನಪುಗಳನ್ನು ಸಂಗ್ರಹಿಸಬೇಕಾಗಿದೆ - ಜೀವಮಾನವಿಡೀ ನನ್ನೊಂದಿಗೆ ಉಳಿಯುವ ನೆನಪುಗಳು...ಯು.ಎ.ಇ.ಯಲ್ಲಿ ನಡೆದ ಭಾರತೀಯ ಸಮುದಾಯದ -''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಸಂವಾದ
February 13th, 08:30 pm
ಯು.ಎ.ಇ.ಯಲ್ಲಿನ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಆಯೋಜಿಸಿದ ''ಅಹ್ಲಾನ್ ಮೋದಿ'' ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಯು.ಎ.ಇ.ಯ 7 ಎಮಿರೇಟ್ಸ್ ನಾದ್ಯಂತ ಭಾರತೀಯ ಅನಿವಾಸಿ ಸಮುದಾಯ (ಡಯಾಸ್ಪೊರಾ) ಬೃಹತ್ ಪ್ರಮಾಣದಲ್ಲಿ ಭಾಗವಹಿಸುವಿಕೆ ಮತ್ತು ಎಲ್ಲಾ ಸಮುದಾಯಗಳ ಭಾರತೀಯರನ್ನು ''ಅಹ್ಲಾನ್ ಮೋದಿ'' ಕಾರ್ಯಕ್ರಮ ಒಳಗೊಂಡಿತ್ತು. ಯು.ಎ.ಇ.ಯ ಪ್ರಜೆಗಳಾದ ಅರಬಿ(ಎಮಿರಾಟಿ)ಗಳು ಸಹ ಪ್ರೇಕ್ಷಕರಾಗಿ ಒಳಗೊಂಡಿದ್ದರು.PM Modi arrives in Abu Dhabi, UAE
February 13th, 05:47 pm
Prime Minister Narendra Modi arrived in Abu Dhabi, UAE. He was warmly received by UAE President HH Mohamed bin Zayed Al Nahyan at the airport.Prime Minister’s meeting with President of the UAE
February 13th, 05:33 pm
Prime Minister Narendra Modi arrived in Abu Dhabi on an official visit to the UAE. In a special and warm gesture, he was received at the airport by the President of the UAE His Highness Sheikh Mohamed bin Zayed Al Nahyan, and thereafter, accorded a ceremonial welcome. The two leaders held one-on-one and delegation level talks. They reviewed the bilateral partnership and discussed new areas of cooperation.ಯು.ಎ.ಇ. ಮತ್ತು ಕತಾರ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿಯವರು ನೀಡಿದ ನಿರ್ಗಮನ ಹೇಳಿಕೆ
February 13th, 10:46 am
ನಾನು ಫೆಬ್ರವರಿ 13-14 , 2024 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮತ್ತು ಫೆಬ್ರವರಿ 14-15, 2024 ರವರೆಗೆ ಕತಾರ್ ಗೆ ಅಧಿಕೃತ ಭೇಟಿಗಾಗಿ ಪ್ರಯಾಣಿಸುತ್ತಿದ್ದೇನೆ. ಇದು ಯು.ಎ.ಇ.ಗೆ ನನ್ನ ಏಳನೇ ಭೇಟಿಯಾಗಿದೆ ಮತ್ತು 2014 ರಿಂದ ಈ ತನಕ ಕತಾರ್ ಗೆ ನನ್ನ ಎರಡನೇ ಭೇಟಿಯಾಗಿದೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯುಎಇ ಭೇಟಿಯ ಸಂದರ್ಭದಲ್ಲಿ ಭಾರತ-ಯುಎಇ ಜಂಟಿ ಹೇಳಿಕೆ
July 15th, 06:31 pm
ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಮಾತುಕತೆ ನಡೆಸಿದರು.ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಡಾ. ಸುಲ್ತಾನ್ ಅಲ್ ಜಾಬರ್ ಅವರೊಂದಿಗೆ ಸಭೆ ನಡೆಸಿದ ಪ್ರಧಾನಮಂತ್ರಿ
July 15th, 05:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಹವಾಮಾನ ಬದಲಾವಣೆಯ ಸಮಾವೇಶ (ಸಿಒಪಿ28) ಇದರ ನಿಯೋಜಿತ ಅಧ್ಯಕ್ಷ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ ಗ್ರೂಪ್ ಸಂಸ್ಥೆಯ ಸಿಇಒ ಡಾ. ಸುಲ್ತಾನ್ ಅಲ್ ಜಾಬರ್ ಅವರನ್ನು ಭೇಟಿಯಾದರು.PM Modi arrived in Abu Dhabi, UAE
July 15th, 11:58 am
PM Modi arrived in Abu Dhabi, UAE. He was warmly received by the Crown Prince, HH Sheikh Khaled bin Mohamed bin Zayed Al Nahyan. PM Modi will hold talks with the President of UAE and Ruler HH Sheikh Mohamed bin Zayed Al Nahyan.ಫ್ರಾನ್ಸ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಪೂರ್ವ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿ
July 13th, 06:02 am
ಈ ವರ್ಷ ಉಭಯ ರಾಷ್ಟ್ರಗಳ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತಿದೆ. ಆಳವಾದ ನಂಬಿಕೆ ಮತ್ತು ಬದ್ಧತೆಯಿಂದ ಬೇರೂರಿರುವ ನಮ್ಮ ಎರಡು ದೇಶಗಳು ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ನೀಲಿ ಆರ್ಥಿಕತೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಸಂಸ್ಕೃತಿ ಮತ್ತು ಜನರೊಂದಿಗೆ ಜನರ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತಿವೆ. ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆಯೂ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.ಫ್ರಾನ್ಸ್ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಪೂರ್ವ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿ
July 13th, 06:00 am
ನನ್ನ ಸ್ನೇಹಿತ, ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಅಧಿಕೃತ ಭೇಟಿಗಾಗಿ ಜುಲೈ 13-14ರ ವರೆಗೆ ಫ್ರಾನ್ಸ್‌ಗೆ ಪ್ರಯಾಣಿಸುತ್ತಿದ್ದೇನೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷರು ಹಾಗೂ ಅಬುಧಾಬಿಯ ಆಡಳಿತಗಾರ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಡುವೆ ಸಭೆ
June 28th, 09:11 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮ್ಯೂನಿಚ್‌ನಿಂದ ಹಿಂದಿರುಗಿದ ನಂತರ ಅಬುಧಾಬಿಯಲ್ಲಿ ಕೆಲಕಾಲ ತಂಗಿದರು. ಪ್ರಧಾನಮಂತ್ರಿಯವರು ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಘನತೆವೆತ್ತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದರು. 2019ರ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿಯವರು ಅಬುಧಾಬಿಗೆ ಭೇಟಿ ನೀಡಿದ ಬಳಿಕ ಉಭಯ ನಾಯಕರ ನಡುವೆ ನಡೆದ ಮೊದಲ ವೈಯಕ್ತಿಕ ಭೇಟಿ ಇದಾಗಿದೆ.