ದೆಹಲಿಯ ಕೆಂಪು ಕೋಟೆಯಲ್ಲಿ ಇಂಡಿಯಾ ಆರ್ಟ್, ಆರ್ಕಿಟೆಕ್ಚರ್ ಮತ್ತು ಡಿಸೈನ್ ಬಿನಾಲೆ 2023 ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅನುವಾದ
December 08th, 06:00 pm
ಕೆಂಪು ಕೋಟೆಯ ಈ ಅಂಗಳವು ಸ್ವತಃ ಐತಿಹಾಸಿಕವಾಗಿದೆ. ಈ ಕೋಟೆ ಕೇವಲ ಕಟ್ಟಡವಲ್ಲ; ಇದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ಹಲವಾರು ತಲೆಮಾರುಗಳು ಕಳೆದಿವೆ, ಆದರೆ ಕೆಂಪು ಕೋಟೆಯು ಸ್ಥಿರ ಮತ್ತು ಅಳಿಸಲಾಗದು. ಈ ವಿಶ್ವ ಪರಂಪರೆಯ ತಾಣವಾದ ಕೆಂಪು ಕೋಟೆಗೆ ನಿಮ್ಮೆಲ್ಲರನ್ನೂ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ.ದೆಹಲಿಯ ಕೆಂಪು ಕೋಟೆಯಲ್ಲಿ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ ಅಥವಾ ಉತ್ಸವ-2023 ಉದ್ಘಾಟಿಸಿದ ಪ್ರಧಾನ ಮಂತ್ರಿ
December 08th, 05:15 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿಂದು ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ದ್ವೈವಾರ್ಷಿಕ ವಸ್ತುಪ್ರದರ್ಶನ(ಐಎಎಡಿಬಿ) ಅಥವಾ ಉತ್ಸವ-2023 ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ 'ಆತ್ಮನಿರ್ಭರ್ ಭಾರತ್ ಸೆಂಟರ್ ಫಾರ್ ಡಿಸೈನ್' ಮತ್ತು ವಿದ್ಯಾರ್ಥಿಗಳ ವಸ್ತುಪ್ರದರ್ಶನ-ಸಮುನ್ನತಿಯನ್ನು ಸಹ ಉದ್ಘಾಟಿಸಿದರು. ಕಾರ್ಯಕ್ರಮದ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು. ನಂತರ ಅವರು ವಸ್ತುಪ್ರದರ್ಶನ ವೀಕ್ಷಿಸಿದರು. ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ವಸ್ತುಪ್ರದರ್ಶನ((ಐಎಎಡಿಬಿ)ವು ದೆಹಲಿಯ ಸಾಂಸ್ಕೃತಿಕ ಸ್ಥಳಕ್ಕೆ ಪೀಠಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರದರ್ಶನ 2023 ಅನ್ನು ಡಿಸೆಂಬರ್ 8 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ
December 07th, 02:13 pm
ಕೆಂಪು ಕೋಟೆಯಲ್ಲಿ ನಡೆಯುತ್ತಿರುವ ಮೊದಲ ಭಾರತೀಯ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸ ಪ್ರದರ್ಶನ (ಐಎಎಡಿಬಿ) 2023 ಅನ್ನು 2023 ರ ಡಿಸೆಂಬರ್ 8 ರಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಕೆಂಪು ಕೋಟೆಯಲ್ಲಿ ಆತ್ಮನಿರ್ಭರ ಭಾರತ ವಿನ್ಯಾಸ ಕೇಂದ್ರವನ್ನು ಮತ್ತು ವಿದ್ಯಾರ್ಥಿಗಳಿಗಾಗಿ “ಸಮುನ್ನತಿ” ಎಂಬ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.