ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ-2023 ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

October 17th, 11:10 am

3ನೇ ಆವೃತ್ತಿಯ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಈ ಹಿಂದೆ ನಾವು 2021ರಲ್ಲಿ ಭೇಟಿಯಾದಾಗ, ಇಡೀ ಜಗತ್ತು ಕೊರೊನಾ ಸೃಷ್ಟಿಸಿದ ಅನಿಶ್ಚಿಯದ ಬಂಧಿಯಾಗಿದ್ದೆವು. ಕೊರೊನಾ ನಂತರದ ಜಗತ್ತು ಹೇಗಿರುತ್ತದೆ ಎಂದು ಯಾರೂ ತಿಳಿದಿರಲಿಲ್ಲ. ಆದರೆ ಇಂದು ಹೊಸ ವಿಶ್ವ ಕ್ರಮವು ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ಈ ವಿಶ್ವ ಕ್ರಮದಲ್ಲಿ ಇಡೀ ಜಗತ್ತು ಹೊಸ ಆಶಯಗಳೊಂದಿಗೆ ಭಾರತದತ್ತ ನೋಡುತ್ತಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿಶ್ವದಲ್ಲಿ ಭಾರತದ ಆರ್ಥಿಕತೆಯು ನಿರಂತರವಾಗಿ ಬಲಗೊಳ್ಳುತ್ತಿದೆ. ಭಾರತವು ವಿಶ್ವದ ಅಗ್ರ 3 ಆರ್ಥಿಕ ಶಕ್ತಿಗಳಲ್ಲಿ ಒಂದಾಗುವ ದಿನ ದೂರವಿಲ್ಲ. ಜಗತ್ತಿನ ಗರಿಷ್ಠ ವ್ಯಾಪಾರವು ಸಮುದ್ರ ಮಾರ್ಗಗಳ ಮೂಲಕ ನಡೆಯುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಕೊರೊನಾ ನಂತರದ ಜಗತ್ತಿನಲ್ಲಿ, ಇಂದು ಜಗತ್ತಿಗೆ ವಿಶ್ವಾಸಾರ್ಹ ಮತ್ತು ಸ್ಥಿಹೊಂದಾಣಿಕೆಯ ಪೂರೈಕೆ ಸರಪಳಿಗಳ ಅಗತ್ಯವಿದೆ. ಆದ್ದರಿಂದಲೇ ಜಾಗತಿಕ ಸಾಗರ ಇಂಡಿಯಾ ಶೃಂಗಸಭೆಯ ಈ ಆವೃತ್ತಿಯು ಹೆಚ್ಚು ಪ್ರಸ್ತುತವಾಗಿದೆ ಮತ್ತು ಮಹತ್ವಪೂರ್ಣದ್ದಾಗಿದೆ.

​​​​​​​ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023; ಪ್ರಧಾನಿ ಉದ್ಘಾಟನೆ

October 17th, 10:44 am

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿಂದು “ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023”ರ 3ನೇ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಯ ನೀಲನಕ್ಷೆಯಾದ ‘ಅಮೃತ ಕಾಲದ ಮುನ್ನೋಟ 2047’ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಿದರು. ಈ ಭವಿಷ್ಯದ ಯೋಜನೆಗಳಿಗೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ನೀಲನಕ್ಷೆ ಅನಾವರಣಗೊಳಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ 'ಅಮೃತ ಕಾಲದ ಮುನ್ನೋಟ 2047'ರೊಂದಿಗೆ ರೂಪಿಸಲಾದ ಸುಮಾರು 23,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ದೇಶದ ಸಾಗರ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಈ ಶೃಂಗಸಭೆಯು ಅತ್ಯುತ್ತಮ ವೇದಿಕೆ ಒದಗಿಸುತ್ತದೆ.

ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಅಕ್ಟೋಬರ್ 23ರಂದು ಸಂವಾದ ನಡೆಸಲಿರುವ ಪ್ರಧಾನಮಂತ್ರಿ

October 22nd, 02:39 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಅಕ್ಟೋಬರ್ 23ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಆತ್ಮನಿರ್ಭರ ಭಾರತ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂವಾದದ ನಂತರ ಪ್ರಧಾನಮಂತ್ರಿಯವರು ಭಾಗವಹಿಸಿದ್ದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋಮೊಬೈಲ್ ಮತ್ತು ಡ್ರೋನ್ ಉದ್ಯಮಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿ ಎಲ್ ಐ) ಯೋಜನೆಗೆ ಸರ್ಕಾರದ ಅನುಮೋದನೆ

September 15th, 04:34 pm

'ಆತ್ಮನಿರ್ಭರ ಭಾರತ' ದ ಕಡೆಗೆ ಪ್ರಮುಖ ಹೆಜ್ಜೆಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಆಟೋಮೊಬೈಲ್ ಮತ್ತು ಡ್ರೋನ್ ಉದ್ಯಮಕ್ಕೆ 26,058 ಕೋಟಿ ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿಎಲ್‌ಐ) ಯೋಜನೆಯನ್ನು ಅನುಮೋದಿಸಿದೆ. ಆಟೋ ವಲಯದ ಪಿಎಲ್‌ಐ ಯೋಜನೆಯು ಹೆಚ್ಚಿನ ಮೌಲ್ಯದ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ವಾಹನಗಳು ಮತ್ತು ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತದೆ. ಇದು ಉನ್ನತ ತಂತ್ರಜ್ಞಾನ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ವಾಹನಗಳ ತಯಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಮನ್ ಕಿ ಬಾತ್' ಸಕಾರಾತ್ಮಕತೆ ಮತ್ತು ಸೂಕ್ಷ್ಮತೆಯನ್ನು ಹೊಂದಿದೆ. ಇದು ಸಾಮೂಹಿಕ ಪಾತ್ರವನ್ನು ಹೊಂದಿದೆ:ಪ್ರಧಾನಿ ಮೋದಿ

July 25th, 09:44 am

ಮನ್ ಕಿ ಬಾತ್ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ತುಕಡಿಯೊಂದಿಗೆ ನಡೆಸಿದ ಸಂವಾದವನ್ನು ನೆನಪಿಸಿಕೊಂಡರು ಮತ್ತು ದೇಶವಾಸಿಗಳು ಅವರನ್ನು ಬೆಂಬಲಿಸುವಂತೆ ಕರೆ ನೀಡಿದರು . ಅಮೃತ್ ಮಹೋತ್ಸವ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು ವಿಶೇಷ ವೆಬ್‌ಸೈಟ್ ಬಗ್ಗೆ ಪ್ರಸ್ತಾಪಿಸಿದರು, ಅಲ್ಲಿ ದೇಶಾದ್ಯಂತದ ನಾಗರಿಕರು ತಮ್ಮದೇ ಗೀತೆಯಲ್ಲಿ ರಾಷ್ಟ್ರಗೀತೆ ದಾಖಲಿಸಬಹುದು. ಅವರು ದೇಶದಾದ್ಯಂತ ಹಲವಾರು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು, ನೀರಿನ ಸಂರಕ್ಷಣೆಯ ಮಹತ್ವವನ್ನು ಮತ್ತು ಹೆಚ್ಚಿನದನ್ನು ಎತ್ತಿ ತೋರಿಸಿದರು!

ಭಾರತೀಯ ಕ್ರಿಕೆಟ್ ತಂಡದ ಸಾಧನೆ ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ಸಂದೇಶ: ಪ್ರಧಾನಿ ನರೇಂದ್ರ ಮೋದಿ

January 22nd, 01:43 pm

ಯುವ ಸಮುದಾಯದ ಇಂದಿನ ಕ್ರಿಯೆ, ಪ್ರತಿಕ್ರಿಯೆಯಂತಹ ಸಹಜ ಮನೋಪ್ರವೃತ್ತಿ ಆತ್ಮನಿರ್ಭರ್ ಭಾರತ್ ನ ಬಹುದೊಡ್ಡ ರೂಪಾಂತರವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

For the first time since independence street vendors are getting affordable loans: PM

October 27th, 10:35 am

PM Narendra Modi interacted with beneficiaries of PM SVANIDHI Yojana from Uttar Pradesh through video conferencing. The Prime Minister said for the first time since independence street vendors are getting unsecured affordable loans. He said the maximum applications of urban street vendors have come from UP.

PM Modi interacts with beneficiaries of PM SVANidhi Scheme from Uttar Pradesh

October 27th, 10:34 am

PM Narendra Modi interacted with beneficiaries of PM SVANIDHI Yojana from Uttar Pradesh through video conferencing. The Prime Minister said for the first time since independence street vendors are getting unsecured affordable loans. He said the maximum applications of urban street vendors have come from UP.

ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪ್ರಧಾನಮಂತ್ರಿಯವರ ಸಂವಾದದ ಕನ್ನಡ ರೂಪಾಂತರ

September 09th, 11:01 am

ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರೇ, ಮಧ್ಯಪ್ರದೇಶ ಮುಖ್ಯಮಂತ್ರಿ ಸೋದರ ಶಿವರಾಜ್ ಅವರೇ, ರಾಜ್ಯ ಸಚಿವ ಸಂಪುಟದ ಇತರ ಸದಸ್ಯರೇ ಆಡಳಿತಕ್ಕೆ ಸೇರಿದ ಇತರ ಸದಸ್ಯರೇ, ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಎಲ್ಲ ಫಲಾನುಭವಿಗಳೇ ಮತ್ತು ಮಧ್ಯಪ್ರದೇಶ ಮತ್ತು ಮಧ್ಯಪ್ರದೇಶದ ಹೊರಗಿನಿಂದ ಇದರಲ್ಲ ಪಾಲ್ಗೊಂಡಿರುವ ನನ್ನ ಪ್ರೀತಿಯ ಸೋದರ ಮತ್ತು ಸೋದರಿಯರೇ..

ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ‘ಸ್ವನಿಧಿ ಸಂವಾದ’ ನಡೆಸಿದ ಪ್ರಧಾನಿ

September 09th, 11:00 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸ್ವನಿಧಿ ಸಂವಾದ ನಡೆಸಿದರು. ಭಾರತ ಸರ್ಕಾರ, ಕೋವಿಡ್ 19ರಿಂದ ಬಾಧಿತರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯ ಪುನಾರಂಭಿಸಲು ನೆರವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು 2020ರ ಜೂನ್ 1ರಂದು ಆರಂಭಿಸಿದೆ. 4.5 ಲಕ್ಷ ಬೀದಿ ಬದಿ ವ್ಯಾಪಾರಿಗಳು ಮಧ್ಯಪ್ರದೇಶದಲ್ಲಿ ನೋಂದಾಯಿಸಿಕೊಂಡಿದ್ದು, ಸುಮಾರು 1.4 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಅನುಮೋದಿಸಿ ಒಟ್ಟು 140 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮತ್ತೆ ಪುಟಿದೆದ್ದ ಬೀದಿ ಬದಿ ವ್ಯಾಪಾರಿಗಳ ಪ್ರಯತ್ನ ಮತ್ತು ಆತ್ಮ ವಿಶ್ವಾಸ, ದೃಢತೆ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.