18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 91 ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಅನುವಾದ

April 28th, 10:50 am

ʻಪದ್ಮ ಪ್ರಶಸ್ತಿʼಗಳನ್ನು ಪಡೆದ ಅನೇಕ ವ್ಯಕ್ತಿಗಳು ಇಂದಿನ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಇದ್ದಾರೆ. ನಾನು ಅವರನ್ನು ಗೌರವಯುತವಾಗಿ ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ. ʻಆಲ್ ಇಂಡಿಯಾ ರೇಡಿಯೋʼದ ʻಎಫ್ಎಂʼ ಸೇವೆಯ ವಿಸ್ತರಣೆಯು ʻಆಲ್ ಇಂಡಿಯಾ ಎಫ್ಎಂʼ ಆಗುವತ್ತ ಒಂದು ದೊಡ್ಡ ಮತ್ತು ಪ್ರಮುಖ ಹೆಜ್ಜೆಯಾಗಿದೆ. ʻಆಲ್ ಇಂಡಿಯಾ ರೇಡಿಯೋʼದ 91 ʻಎಫ್ಎಂʼ ಟ್ರಾನ್ಸ್‌ಮಿಟರ್‌ಗಳ ಉದ್ಘಾಟನೆಯು ದೇಶದ 85 ಜಿಲ್ಲೆಗಳ ಎರಡು ಕೋಟಿ ಜನರಿಗೆ ಉಡುಗೊರೆ ಇದ್ದಂತೆ . ಒಂದು ರೀತಿಯಲ್ಲಿ, ಈ ಕಾರ್ಯಕ್ರಮವು ಭಾರತದ ವೈವಿಧ್ಯತೆ ಮತ್ತು ವಿಭಿನ್ನ ವರ್ಣಗಳ ನೋಟವನ್ನು ಸಹ ಹೊಂದಿದೆ. ʻಎಫ್‌ಎಂʼ ಸೇವೆಯ ವಿಸ್ತರಣೆಯಿಂದ ಪ್ರಯೋಜನ ಪಡೆಯಲಿರುವ 85 ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳು ಸಹ ಸೇರಿವೆ. ಈ ಸಾಧನೆಗಾಗಿ ನಾನು ʻಆಲ್ ಇಂಡಿಯಾ ರೇಡಿಯೋʼ ಅನ್ನು ಅಭಿನಂದಿಸುತ್ತೇನೆ. ಇದು ಈಶಾನ್ಯದ ನಮ್ಮ ಸಹೋದರ ಸಹೋದರಿಯರಿಗೆ ಮತ್ತು ನಮ್ಮ ಯುವ ಸ್ನೇಹಿತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ಹೊಸ ಸೇವೆಗಾಗಿ ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.

ದೇಶದಲ್ಲಿ ಎಫ್‌ ಎಂ ರೇಡಿಯೋ ಪ್ರಸಾರವನ್ನು ಹೆಚ್ಚಿಸಲು 91 ಹೊಸ 100 ವ್ಯಾಟ್ ಎಫ್‌.ಎಂ ಟ್ರಾನ್ಸ್‌ಮಿಟರ್‌ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು

April 28th, 10:30 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 91 ಹೊಸ 100 ವ್ಯಾಟ್ ರೇಡಿಯೋ ಟ್ರಾನ್ಸ್‌ಮಿಟರ್‌ಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಉದ್ಘಾಟನೆಯು ದೇಶದ ರೇಡಿಯೋ ಸಂಪರ್ಕವನ್ನು ಮತ್ತಷ್ಟು ಉತ್ತೇಜನ ನೀಡಲಿದೆ.