ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಅವರು ಮಾರಿಷಸ್‌ನಲ್ಲಿ ಜಂಟಿಯಾಗಿ ಸಾಮಾಜಿಕ ವಸತಿ ಘಟಕಗಳ ಯೋಜನೆಯನ್ನು ಉದ್ಘಾಟಿಸಿದರು

January 20th, 06:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಮಂತ್ರಿ ಶ್ರೀ ಪ್ರವಿಂದ್ ಕುಮಾರ್ ಜುಗ್ನೌತ್ ಅವರು ಇಂದು ಮಾರಿಷಸ್‌ನಲ್ಲಿ ಸಾಮಾಜಿಕ ವಸತಿ ಘಟಕಗಳ ಯೋಜನೆಯನ್ನು ಜಂಟಿಯಾಗಿ ಉದ್ಘಾಟಿಸಿದರು. ಭಾರತ ಮತ್ತು ಮಾರಿಷಸ್ ನಡುವಿನ ಸದೃಢ ಅಭಿವೃದ್ಧಿ ಪಾಲುದಾರಿಕೆಯ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ, ಭಾರತದ ಅಭಿವೃದ್ಧಿ ಬೆಂಬಲದ ಭಾಗವಾಗಿ ಇತರೆ ಎರಡು ಯೋಜನೆಗಳಾದ - ಅತ್ಯಾಧುನಿಕ ನಾಗರಿಕ ಸೇವಾ ಕಾಲೇಜು ಸ್ಥಾಪನೆ ಮತ್ತು 8 ಮೆಗಾವ್ಯಾಟ್ ಸೌರ ಪಿವಿ ಫಾರ್ಮ್ ಸ್ಥಾಪನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿತು. ಈ ಸಮಾರಂಭದಲ್ಲಿ ಇಬ್ಬರೂ ಪ್ರಧಾನಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಮಾರಿಷಸ್‌ನಲ್ಲಿ ಅಲ್ಲಿನ ಪಿಎಂಒ ಆವರಣದಲ್ಲಿ ಮಾರಿಷಸ್ ಕ್ಯಾಬಿನೆಟ್ ಸಚಿವರು ಮತ್ತು ಮಾರಿಷಸ್ ಸರಕಾರದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವು ನಡೆಯಿತು.

India and Mauritius are united by history, ancestry, culture, language: PM Modi

January 20th, 04:49 pm

In his remarks, PM Modi said, India and Mauritius are united by history, ancestry, culture, language and the shared waters of the Indian Ocean. Today, our robust development partnership has emerged as a key pillar of our close ties. Mauritius is a prime example of India's approach to development partnership which is based on the needs and priorities of our partners and respects their sovereignty.